ಉತ್ತರ ಪ್ರದೇಶದಲ್ಲಿ ಲೇಡಿ ಸಿಂಗಂಮ್ ಎಂದೇ ಪ್ರಖ್ಯಾತರಾಗಿರುವ ಡಿಎಸ್ಪಿ ಶ್ರೇಷ್ಠಾ ಠಾಕೂರ್ ಅವರ ಕೆಲಸಗಳು ಜನರು ಮೆಚ್ಚುವಂಥದ್ದು. ಆದರೆ ಅವರ ವೈಯಕ್ತಿಕ ಜೀವನದಲ್ಲಿ ಮದುವೆಯಾಗಿ ಮೋಸ ಹೋಗಿದ್ದು ಮಾತ್ರ ದುರಂತವೆ ಹೌದು!?.2012ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಶ್ರೇಷ್ಠಾ ಠಾಕೂರ್ ಅವರು 2018 ರಲ್ಲಿ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ವರನ ಬೇಟೆಗೆ ಇಳಿದಾಗ ಸೈಟ್ ನಲ್ಲಿ ಭೇಟಿಯಾದವನೆ ಫ್ರಾಡ್ ರೋಹಿತ್ ರಾಜ್ ಎಂಬ ವ್ಯಕ್ತಿ ಪರಿಚಯವಾದ ಆತ ಕೂಡ ಐಆರ್ಎಸ್ಅಧಿಕಾರಿ ಎಂದು ಹೇಳಿಕೊಂಡಿದ್ದನಂತೆ ನಂತರ ಮನೆಯವರ ಒಪ್ಪಿಗೆ ಮೇರೆಗೆ ಇಬ್ಬರು ವಿವಾಹವಾಗಿದ್ದರು.
ಶ್ರೇಷ್ಠಾ ಅವರಿಗೆ ರೋಹಿತ್ ರಾಜ್ ರಾಂಚಿಯಲ್ಲಿ ಡೆಪ್ಯುಟಿ ಕಮಿಷನರ್ ಆಗಿ ಪೋಸ್ಟ್ ಮಾಡಲಾದ 2008-ಬ್ಯಾಚ್ IRS ಅಧಿಕಾರಿ ಎಂದು ಸುಳ್ಳು ಹೇಳಿದ್ದ.
ಮದುವೆಯ ಬಳಿಕ ಹಲವು ವಿಷಯಗಳು ಬಯಲಾದವು. ಆತ ಐಆರ್‌ಎಸ್ ಅಧಿಕಾರಿ ಅನ್ನುವುದೇ ಸುಳ್ಳು ಎಂಬುದು ಗೊತ್ತಾಗಿತ್ತು. ವಿಷಯದ ಗಂಭೀರತೆಯನ್ನು ಅರ್ಥಮಾಡಿಕೊಂಡ ಮಹಿಳಾ ಡಿಎಸ್ಪಿ ತನ್ನ ದಾಂಪತ್ಯವನ್ನು ಉಳಿಸಿಕೊಳ್ಳುವ ಸಲುವಾಗಿ ಮೌನಕ್ಕೆ ಶರಣಾಗಿದ್ದು ಸುಮ್ಮನಿದ್ದರು.
ಕೊನೆಗೆ ಆತ ಹೆಂಡತಿಯ ಹೆಸರಿನಲ್ಲಿ ವಂಚನೆ ಮಾಡಲು ಶುರು ಮಾಡಿದ್ದ, ಇದರಿಂದ ಬೇಸತ್ತು ಶ್ರೇಷ್ಠಾ ಠಾಕೂರ್ ಮದುವೆಯಾಗಿ ಎರಡು ವರ್ಷಗಳ ಬಳಿಕ ರೋಹಿತ್ ರಾಜ್ಗೆ ವಿಚ್ಛೇದನ ನೀಡಿದ್ದರು. ಆದರೂ ಸಮಸ್ಯೆ ಬಗೆಹರಿದಿರಲಿಲ್ಲ, ಆತ ವಂಚನೆಯನ್ನು ಮುಂದುವರೆಸಿದ್ದ ಹೀಗಾಗಿ ಅನಿವಾರ್ಯವಾಗಿ ಅವರು ಘಾಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣದ ತನಿಖೆಯನ್ನು ಪೋಲಿಸರು ಆರಂಭಿಸಿದ್ದಾರೆ.
ಐಆರ್‌ಎಸ್ ಅಧಿಕಾರಿ ಎಂದು ನಂಬಿ ಮದುವೆಯಾದ ಐಪಿಎಸ್ ಅಧಿಕಾರಿ ಲೇಡಿ ಸಿಂಗಂಮ್ ಖ್ಯಾತಿಯ ಶ್ರೇಷ್ಠಾ ಠಾಕೂರ್.!! ಮುಂದೆನಾಯ್ತು?..
2012ರ ಬ್ಯಾಚ್‌ನ ಪಿಪಿಎಸ್ ಅಧಿಕಾರಿ ಮತ್ತು ಪ್ರಸ್ತುತ ಶಾಮ್ಲಿ ಜಿಲ್ಲೆಯಲ್ಲಿ ಸಿಒ ಆಗಿ ನೇಮಕಗೊಂಡಿರುವ ಲೇಡಿ ಸಿಗಂಮ್ ಖ್ಯಾತಿಯ ಶ್ರೇಷ್ಠಾ ಠಾಕೂರ್, ತನ್ನ ಮಾಜಿ ಪತಿ ರೋಹಿತ್ ರಾಜ್ ಸಿಂಗ್ ಸುಳ್ಳು ಹೇಳಿ ಮದುವೆಯಾಗಿದ್ದಲ್ಲದೆ, ಪೊಲೀಸ್ ಉದ್ಯೋಗದ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದಾನೆ ಎಂದು ಹೇಳಿದ್ದಾರೆ. ಮತ್ತು ಅವರಿಂದ ಹಣವನ್ನು ಸಂಗ್ರಹಿಸುತ್ತಿದ್ದಾನೆ ದೂರಿದ್ದಾರೆ.
ಉತ್ತರ ಪ್ರದೇಶ ಪೊಲೀಸರಿಗೆ ಮಹಿಳಾ ಡೆಪ್ಯುಟಿ ಪೋಲಿಸ್ ಉಪ ಅಧೀಕ್ಷಕರಾದ ಶ್ರೇಷ್ಠಾ ಠಾಕೂರ್ ಐಪಿಎಸ್ ಗಾಜಿಯಾಬಾದ್‌ನಲ್ಲಿ ದೂರು ದಾಖಲಿಸಿದ್ದು, ತನ್ನ ಮಾಜಿ ಪತಿ ಐಆರ್‌ಎಸ್ ಅಧಿಕಾರಿ ಎಂದು ನನ್ನನ್ನು ನಂಬುವಂತೆ ಮಾಡಿ ಮದುವೆಯಾಗಿ ಹಲವು ಲಕ್ಷ ರೂಪಾಯಿಗಳನ್ನು ವಂಚಿಸಿದ್ದಾರೆ” ಆತ ಐಆರ್‌ಎಸ್ ಅಧಿಕಾರಿ ಎನ್ನುವುದು ಸುಳ್ಳು (ನಕಲಿ) ಎಂದು ಆರೋಪಿಸಿದ್ದಾರೆ.
ಲೇಡಿ ಸಿಂಗಂಮ್ ಶ್ರೇಷ್ಠಾ ಠಾಕೂರ್ ಮಾಜಿ ಪತಿಯ ವಿರುದ್ಧ ದೂರು ದಾಖಲಿಸುತ್ತಿದ್ದಂತೆ ಗಾಜಿಯಾಬಾದ್ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಜೈಲಿಗೆ ಕಳುಹಿಸಿದ್ದಾರೆ.
2012ರ ಬ್ಯಾಚ್‌ನ ಪಿಪಿಎಸ್ ಅಧಿಕಾರಿ ಮತ್ತು ಪ್ರಸ್ತುತ ಶಾಮ್ಲಿ ಜಿಲ್ಲೆಯಲ್ಲಿ ಸಿಒ ಆಗಿ ನಿಯೋಜನೆಗೊಂಡಿರುವ ಶ್ರೇಷ್ಠಾ ಠಾಕೂರ್, ತನ್ನ ಮಾಜಿ ಪತಿ ರೋಹಿತ್ ರಾಜ್ ಸಿಂಗ್ ಸುಳ್ಳು ಹೇಳಿ ಮದುವೆಯಾಗಿದ್ದಲ್ಲದೆ, ಪೊಲೀಸ್ ಉದ್ಯೋಗದ ಹೆಸರಿನಲ್ಲಿ ಜನರನ್ನು ವಂಚಿಸಿ ವಸೂಲಿ ಮಾಡಿದ್ದಾನೆ ಎಂದು ಹೇಳಿದ್ದಾರೆ. ಅವರಿಂದ ಲಕ್ಷಾಂತರ ರೂಪಾಯಿ ಹಣವನ್ನು ಪಡೆದಿದ್ದಾನೆ.ನಾನು ಲಕ್ನೋದಲ್ಲಿ ಪ್ಲಾಟ್ ಖರೀದಿಸಲು ಠೇವಣಿ ಇಡಲಾಗಿದ್ದ 15 ಲಕ್ಷ ರೂಗಳನ್ನು ಆತ ನಕಲಿ ಸಹಿ ಮೂಲಕ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
2018 ರಲ್ಲಿ ಮ್ಯಾಟ್ರಿಮೋನಿಯಲ್ ಸೈಟ್ ( ವಧು ವರರ ಅನ್ವೇಷಣೆಯ ಸಾಮಾಜಿಕ ಜಾಲತಾಣದ ವೇದಿಕೆ ) ಮೂಲಕ ಆ ವ್ಯಕ್ತಿಯೊಂದಿಗೆ ಪರಿಚಯವಾಗಿ ಆತ ಕೂಡ ಐಆರ್‌ಎಸ್ ಅಧಿಕಾರಿ ಎಂದು ನಂಬಿ ವಿವಾಹವಾಗಿದ್ದೆ ಎಂದು ಠಾಕೂರ್ ಹೇಳಿದ್ದಾರೆ.
ರೋಹಿತ್ ರಾಜ್ ಸಿಂಗ್ ತನ್ನನ್ನು ತಾನು 2008 ರ ಬ್ಯಾಚ್ IRS ಅಧಿಕಾರಿ, ಡೆಪ್ಯೂಟಿ ಕಮಿಷನರ್ ಎಂದು ಬಣ್ಣಿಸಿಕೊಂಡಿದ್ದಾನೆ ಆತನ ಪ್ರೋಫೈಲ್ ನಲ್ಲೂ ಅದನ್ನೇ ದಾಖಲಿಸಿಕೊಂಡಿದ್ದ ಮತ್ತು ರಾಂಚಿಯಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಹೇಳಿದ್ದ…!! ಆ ನಂತರ ಆತನ ಬಂಡವಾಳ ಬಯಲಾಗಿ ಸತ್ಯ ತಿಳಿದಿದ್ದರೂ ಶ್ರೇಷ್ಠಾ ಠಾಕೂರ್ ವೈವಾಹಿಕ ಸಂಬಂಧವನ್ನೂ ಹಾಳು ಮಾಡಿಕೊಳ್ಳಲು ಇಷ್ಟಪಡದೆ ಮತ್ತು ರೋಹಿತ್ ಮತ್ತು ಅವರ ಕುಟುಂಬದ ಎಲ್ಲಾ ಹಣಕಾಸಿನ ಬೇಡಿಕೆಗಳನ್ನು ಪೂರೈಸಿದ್ದರು. ಮತ್ತು 2018 ರಲ್ಲಿ ಸಾಲವನ್ನು ಪಡೆದರು. ಅವರ ಸ್ವಂತ ಸಂಬಳದ ಅಧಾರದ ಮೇಲೆ ಮತ್ತು ಆ ಹಣವನ್ನು ರೋಹಿತ್‌ನ ತಂದೆಯ ಖಾತೆಗೆ ವರ್ಗಾಯಿಸಿದ್ದರು”ಎಂದು ಠಾಕೂರ್ ದೂರನ್ನು ದಾಖಲಿಸಿದ್ದಾರೆ.
ರೋಹಿತ್‌ನನ್ನು ಸಂಪೂರ್ಣವಾಗಿ ಬೆಂಬಲಿಸಿದ ನಂತರವೂ ಅವನ ನಡವಳಿಕೆಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ ಮತ್ತು ನನ್ನ ಪೊಲೀಸ್ ಅಧಿಕಾರವನ್ನು ಮತ್ತು ಹೆಸರನ್ನು ಬಳಸಿಕೊಂಡು ಅನೇಕ ಜನರನ್ನು ದಾರಿತಪ್ಪಿಸುವ ಮತ್ತು ಮೋಸ ಮಾಡುವ ಮೂಲಕ ಅವನು ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಲು ಮುಂದಾಗಿದ್ದ. ಈ ವಿಚಾರವಾಗಿ ರೋಹಿತ್ ಮತ್ತು ಆತನ ಮನೆಯವರೊಂದಿಗೆ ಮಾತನಾಡಿದ ನಂತರ ರೋಹಿತ್ ಮತ್ತು ಆತನ ಮನೆಯವರು ನನಗೆ ಕಿರುಕುಳ ನೀಡಲಾರಂಭಿಸಿದರು. ನನಗೆ ರೋಹಿತ್ ರಾಜ್ ಸಿಂಗ್ ಥಳಿಸಿದ್ದಾರೆ ಮತ್ತು ನನ್ನ ಮಗುವಿಗೆ ಜೀವ ಬೆದರಿಕೆ ಹಾಕಿದ್ದಾರೆ.
ರೋಹಿತ್ ತನ್ನ ತಂದೆ ಮತ್ತು ಸಹೋದರನೊಂದಿಗೆ ನಕಲಿ ಸಹಿ ಮತ್ತು ಎಟಿಎಂ ಕಾರ್ಡ್‌ಗಳನ್ನು ದುರುಪಯೋಗಪಡಿಸಿಕೊಂಡು ಅವರ ಖಾತೆಗೆ 15 ಲಕ್ಷ ರೂಪಾಯಿಗಳನ್ನು ವಂಚನೆಯಿಂದ ವರ್ಗಾಯಿಸಿದ್ದಾರೆ ಎಂದು ಅಧಿಕಾರಿ ಆರೋಪಿಸಿದ್ದಾರೆ, ಅವರು ಲಕ್ನೋದಲ್ಲಿ ಪ್ಲಾಟ್ ಖರೀದಿಸಲು ಈ ಹಣವನ್ನು ಉಪಯೋಗಿಸಿದ್ದಾರೆ.
“ಈ ಎಲ್ಲ ವಿಷಯಗಳಿಂದ ಬೇಸತ್ತು ನಾನು ಮೂರು ವರ್ಷಗಳ ಹಿಂದೆ ರೋಹಿತ್ ರಾಜ್ ಸಿಂಗ್ ಅವರಿಂದ ವಿಚ್ಛೇದನ ಪಡೆದೆ. ಆದರೆ ನನ್ನ ಹೆಸರನ್ನು ದುರುಪಯೋಗಪಡಿಸಿಕೊಳ್ಳಲು,
ರಾಂಚಿ ಮತ್ತು ಬಿಹಾರದ ನಂತರ, ಅವರು ಗಾಜಿಯಾಬಾದ್‌ನ ಕೌಶಂಬಿಯಲ್ಲಿ ಹೊಸ ನೆಲೆಯನ್ನು ಮಾಡಿಕೊಂಡಿದ್ದರು. ಅವರು ಜನರನ್ನು ವಂಚಿಸಲು ಪ್ರಾರಂಭಿಸಿದ್ದರು. ಎರಡು ವರ್ಷಗಳ ಹಿಂದೆ ನಾನು ಬೇರೆಯವರ ಜೋತೆಗೆ ಮತ್ತೆ ಮದುವೆಯಾಗಿದ್ದೆ ನನಗೆ ಒಂದು ಚಿಕ್ಕ ಮಗುವಿದೆ.ಅ ಮಗುವಿನ ಫೋಟೋವನ್ನು ದುರುಪಯೋಗಪಡಿಸಿಕೊಂಡು ಆತ ನಕಲಿ ಫೇಸ್‌ಬುಕ್ ಐಡಿಯನ್ನು ಸೃಷ್ಟಿಸಿದ್ದಾನೆ…” ಎಂದು ಹೇಳಿದ್ದಾರೆ ಶ್ರೇಷ್ಠಾ ಠಾಕೂರ್.
ಈ ಹಿನ್ನಲೆಯಲ್ಲಿ ಶ್ರೇಷ್ಠಾ ಠಾಕೂರ್ ಅವರ ಮಾಜಿ ಪತಿ ರೋಹಿತ್ ಸಿಂಗ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಇಂದ್ರಪುರಂನ ಎಸಿಪಿ ಸ್ವತಂತ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.