ಪ್ರೀತಿಸಿ ಮದುವೆಯಾಗಿ ತಿಂಗಳೊಳಗೆ ಬಿಟ್ಟು ಹೋದ ಪತ್ನಿ- ಮನನೊಂದು ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆ…

ಪ್ರೀತಿಸಿ ಮದುವೆಯಾದ ಪ್ರೇಮಿಗಳು. ಮೂರೆ ದಿನಕ್ಕೆ ಪ್ರೀತಿಸಿ ಮದುವೆಯಾದವನಿಗೆ ಕೈಕೊಟ್ಟು ತವರು ಮನೆ ಸೇರಿದ ಪ್ರಿಯತಮೆ! ಪ್ರೀತಿಸಿದವಳ ನೆನಪಲ್ಲೆ ನೇಣಿನ ಕುಣಿಕೆಗೆ ಕೊರಳೊಡ್ಡಿದ ಪ್ರೀಯಕರ. ಯುವಕನ ಸಾವಿನೊಂದಿಗೆ ಅಂತ್ಯವಾದ ದೀರ್ಘಕಾಲದ ಲವ್ ಸ್ಟೋರಿ..ಪ್ರೀತಿ ಪ್ರೀತಿ ಎಂದು ಅಕೆಯ‌ ಬೆನ್ನಿಗೆ ಬಿದ್ದು ಸುಡುಗಾಡು ಸೇರಿದ ಚಿಕ್ಕಮಗಳೂರು ಯುವಕನ ದಾರುಣ ಅಂತ್ಯ.?

ಪ್ರೀತಿಸಿ ಮದುವೆಯಾಗಿ ತಿಂಗಳೊಳಗೆ ಬಿಟ್ಟು ಹೋದ ಪತ್ನಿ- ಮನನೊಂದು ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆ…

News.Ashwasurya.in

✍️SUDHIR VIDHATA

ಚಿಕ್ಕಮಗಳೂರು: ಕೌಟುಂಬಿಕ ಕಲಹದಿಂದಾಗಿ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರನೊಬ್ಬ ಲವ್ವರ್ ಮಾಡಿದ ದ್ರೋಹಕ್ಕೆ ನೊಂದು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಹೊರವಲಯದ ತೇಗೂರು ಗ್ರಾಮದಲ್ಲಿ ನಡೆದಿದೆ.
ಮೃತನನ್ನ ವಿನೋದ್ ರಾಜ್ (24) ಎಂದು ಗುರುತಿಸಲಾಗಿದ್ದು ಮೃತ ಯುವಕ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರನಾಗಿದ್ದ ಎಂದು ತಿಳಿದುಬಂದಿದೆ. ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದು, ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥನಾಗಿದ್ದ ವಿನೋದ್ ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಆತನಿಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ!

ಘಟನೆಗೆ ಕಾರಣವೇನು?

ಮೃತ ಯುವಕ ಅದೇ ಊರಿನ ಯುವತಿಯೊಬ್ಬಳನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಕಳೆದ ಡಿ.10 ರಂದು ಇಬ್ಬರು ಒಂದು ತೀರ್ಮಾನಕ್ಕೆ ಬಂದು ಮನೆಯವರನ್ನು ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದರು!ಆದರೆ ಇಬ್ಬರು ಬೇರೆ ಬೇರೆ ಜಾತಿಯವರಾಗಿದ್ದರು ಪ್ರೀತಿಗೆ ಹುಡುಗನ ಮನೆಯಿಂದ ಯಾವುದೇ ವಿರೋಧವಿರಲಿಲ್ಲ ಆದರೆ ಯುವತಿ ಮನೆಯಿಂದ ಇದಕ್ಕೆ ತೀವ್ರ ವಿರೋಧವಿತ್ತು. ಯುವಕನ ಮನೆಯಲ್ಲಿ ಮಾಂಸ ತಿನ್ನುತ್ತಾರೆ ನಮ್ಮ ಜಾತಿ ಅದಕ್ಕೆ ವಿರೋಧ ದೇವರು ಒಪ್ಪಿಲ್ಲ ಎಡಗಡೆ ಅಪ್ಪಣೆಯಾಗಿದೆ ಎಂದು ಹೇಳಿದ್ದರಂತೆ ಮದುವೆಯ ಮುಂಚೆ!? ಇಷ್ಟಾದರೂ ಯುವತಿ ತನ್ನ ಮನೆಯವರ ಮಾತನ್ನು ತಿರಸ್ಕರಿಸಿ ಪ್ರೀತಿಸಿದ ಯುವಕನನ್ನು ಮದುವೆಯಾಗಿದ್ದಳು.


ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಂಸಾರ ಶುರುಮಾಡುವ ಹೊತ್ತಿಗೆ ಹುಡುಗಿ ಮನೆಯವರ ದೂರಿನ ಅಧಾರದ ಮೇಲೆ ಪೊಲೀಸರು ನವಜೋಡಿಯನ್ನು ಠಾಣೆಗೆ ಕರೆತಂದಿದ್ದಾರೆ. ಯುವತಿಯ ಕುಟುಂಬಸ್ಥರ ದೂರಿನ ಮೇರೆಗೆ ಠಾಣೆಯಲ್ಲಿ ಪಂಚಾಯಿತಿ ನಡೆದಿತ್ತು. ಆಗ ಯುವತಿ ತನ್ನ ತಾಯಿ ಮನೆಗೆ ಹೋಗುವುದಾಗಿ ಹೇಳಿಕೆ ನೀಡಿದ್ದಳು? ಇದು ಒತ್ತಡದ ಹೇಳಿಕೆಯಾಗಿತ್ತಾ ಎನ್ನುವ ಅನುಮಾನ ಹುಡುಗನ ಆತ್ಮಹತ್ಯೆಯ ನಂತರದಲ್ಲಿ ಪ್ರತಿಧ್ವನಿಸುತ್ತಿದೆ ಎಂದು ತಿಳಿದುಬಂದಿದೆ. ಈಕೆ ಮನಾಸರೆ ಪ್ರೀತಿಸಿ ಮನೆಯವರನ್ನು ಧಿಕ್ಕರಿಸಿ ಮದುವೆಯಾ ಮೂರೇ ದಿನಕ್ಕೆ ಗಂಡನನ್ನು ಬಿಟ್ಟು ತಾಯಿ ಜೊತೆ ಹೋಗುವುದಾಗಿ ಹೇಳಿ ಯುವತಿ ಉಲ್ಟಾ ಹೊಡೆದಿದ್ದಾಳೆ!?
ಈ ಘಟನೆಯಾದ ಬಳಿಕ ಯುವಕ ಒಂದು ತಿಂಗಳಿನಿಂದ ಮೌನಕ್ಕೆ ಜಾರಿದ್ದ.ಪ್ರೀತಿಸಿ ಮದುವೆಯಾಗಿ ಕೈ ಕೊಟ್ಟ ಮಡದಿಯ ನೆನೆದು ಕಣ್ಣಿರಿಟ್ಟಿಬಹುದು? ಬಳಿಕ ಇದೇ ನೋವಿನಲ್ಲಿ ಫೆಬ್ರವರಿ 2 ರಂದು ಆತ್ಮಹತ್ಯೆಗೆ ಯತ್ನಿಸಿ ನೇಣು ಹಾಕಿಕೊಂಡಿದ್ದ ವಿನೋದ್ ನನ್ನು ರಕ್ಷಿಸಿ ಕುಟುಂಬಸ್ಥರು ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು.ಇಲ್ಲು ನಾಲ್ಕು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ವಿನೋದ್ ಮೃತಪಟ್ಟಿದ್ದಾನೆ.
ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲಿಸರು ಮದುವೆಯಾಗಿ ಕೈಕೊಟ್ಟ ಯುವತಿಯ ಜೋತೆಗೆ ಆಕೆಯ ಮನೆಯವರ ವಿರುದ್ಧ ದೂರು ದಾಖಲಿಸಿರ ಬಹುದು? ಎಲ್ಲವೂ ಪೋಲಿಸರ ತನಿಖೆಯಿಂದಷ್ಟೆ ಬಯಲಾಗಬೇಕಿದೆ

Leave a Reply

Your email address will not be published. Required fields are marked *

Optimized by Optimole
error: Content is protected !!