ತೆರೆಗೆ ಹಣ ನೀಡುವಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಮಲತಾಯಿ ಧೋರಣೆ,ಪ್ರತಿಭಟನೆಗೆ ಇಳಿದ NSUI ಕಾರ್ಯಕರ್ತರು: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೇಂದ್ರ ಅವರ ಮನೆಗೆ ಮುತ್ತಿಗೆ

ತೆರೆಗೆ ಹಣ ನೀಡುವಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಮಲತಾಯಿ ಧೋರಣೆ,ಪ್ರತಿಭಟನೆಗೆ ಇಳಿದ NSUI ಕಾರ್ಯಕರ್ತರು: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೇಂದ್ರ ಅವರ ಮನೆಗೆ ಮುತ್ತಿಗೆ

ಪ್ರತಿಭಟನೆ ನಿರತ ಶಿವಮೊಗ್ಗ ಜಿಲ್ಲಾ NSUI ಕಾರ್ಯಕರ್ತರು

ರಾಜ್ಯಕ್ಕೆ ನೀಡಬೇಕಾದ 187000 ಕೋಟಿ ತೆರಿಗೆ ಹಣವನ್ನು ನೀಡದೇ ಇರುವ ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧ ಇಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಅವರ ಮನೆಗೆ NSUI ವತಿಯಿಂದ ಮುತ್ತಿಗೆ. ಕಾರ್ಯಕರ್ತರ ಬಂಧನ

ಕರ್ನಾಟಕದ ಮೇಲೆ ಆರ್ಥಿಕ ದೌರ್ಜನ್ಯ ಎಸಗಿರುವ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ 1 ಲಕ್ಷದ 87 ಸಾವಿರ ಕೋಟಿ ತೆರಿಗೆ ಹಣ ಕೊಡಲು ಆಗ್ರಹ

ಕೇಂದ್ರ ಸರ್ಕಾರ ರಾಜ್ಯಕ್ಕೆ ಮೊದಲಿನಿಂದಲೂ ಮಲತಾಯಿಧೋರಣೆ ತೋರುತ್ತಿದ್ದು, ಕರ್ನಾಟಕ ಮತ್ತು ಕನ್ನಡಿಗರ ಮೇಲೆ ಆರ್ಥಿಕ ದೌರ್ಜನ್ಯ ಎಸಗುತ್ತಿದ್ದು, ಇದನ್ನು ಜಿಲ್ಲಾ ಎನ್.ಎಸ್.ಯು.ಐ. ತೀವ್ರವಾಗಿ ಖಂಡಿಸುತ್ತದೆ.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 2017-18 ರಿಂದ ಜಿ.ಎಸ್.ಟಿ. ತೆರಿಗೆ ಹಣ ಕೊಡದೇ ದೌರ್ಜನ್ಯ ಎಸಗುತ್ತಿದೆ. ಈವರೆಗೂ ರಾಜ್ಯಕ್ಕೆ1ಲಕ್ಷದ 87 ಸಾವಿರ ಕೋಟಿ ಜಿ.ಎಸ್.ಟಿ. ತೆರಿಗೆ ಹಣ ಕೊಡಬೇಕಿದ್ದು, ಇದನ್ನು ಕೊಡದೇ ದೌರ್ಜನ್ಯ ವೆಸಗಿದೆ. ಬರಪರಿಹಾರಕ್ಕೆ ರಾಜ್ಯಸರ್ಕಾರ 18,177ಕೋಟಿ ರೂ. ಬೇಡಿಕೆ ಸಲ್ಲಿಸಿದ್ದರೂ ಈ ವರೆಗೂ ಬಿಡಿಗಾಸು ಸಹ ನೀಡಿಲ್ಲ.ತೆರಿಗೆ ಪಾಲಿನಲ್ಲಿ ತಾರತಮ್ಯ ಅನುಸರಿಸುತ್ತಿದ್ದು, ಶೇ.4.77ರಿಂದ ಶೇ.3.64ಕ್ಕೆ ಇಳಿಸಿದೆ. ಇದರಿಂದ ರಾಜ್ಯಕ್ಕೆ 62,098 ಕೋಟಿ ನಷ್ಟವಾಗಿದೆ.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಜ್ಯ ಸರ್ಕಾರ 2023-24ನೇ ಸಾಲಿನಲ್ಲಿ ಘೋಷಿಸಿದ್ದು, ಯೋಜನೆಗೆ 5,300 ಕೋಟಿ ವೆಚ್ಚವಾಗಲಿದ್ದು, ಕೇಂದ್ರ ಸರ್ಕಾರ ಒಂದು ರೂಪಾಯಿಯ ಅನುದಾವನ್ನೂ ನೀಡಿರುವುದಿಲ್ಲ. 15ನೇ ಹಣಕಾಸು ಆಯೋಗವು ರಾಜ್ಯಕ್ಕೆ 5,495 ಕೋಟಿ ರೂ.ವಿಶೇಷ ಅನುದಾನ ನೀಡುವಂತೆ ಶಿಫಾರಸ್ಸು ಮಾಡಿದ್ದರೂ ಈ ವರೆಗೂ ಬಿಡಿಗಾಸು ಸಹ ಕೊಟ್ಟಿರುವುದಿಲ್ಲ. ಸಹಭಾಗಿತ್ವ ಯೋಜನೆಗೆ 2021-22ನೇ ಸಾಲಿನಲ್ಲಿ 20 ಸಾವಿರ ಕೋಟಿ ಇದ್ದದ್ದನ್ನು 2022-23ನೇ ಸಾಲಿನಲ್ಲಿ 13 ಸಾವಿರ ಕೋಟಿ ರೂ.ಗಳಿಗೆ ಕಡಿತಗೊಳಿಸಿದೆ. ಏಮ್ಸ್ ಮಹದಾಯಿ ಯೋಜನೆಗೆ ಮನ್ನಣೆ ನೀಡದೇ ಕನಸಾಗೇ ಉಳಿಯುವಂತೆ ಮಾಡಿದೆ.


ಇದೆಲ್ಲವೂ ಕೇಂದ್ರ ಸರ್ಕಾರ ಕನ್ನಡಿಗರಿಗೆ ಕರ್ನಾಟಕಕ್ಕೆ ಎಸಗುತ್ತಿರುವ ಅರ್ಥಿಕ ದೌರ್ಜನ್ಯವಾಗಿದ್ದು, ರಾಜ್ಯದ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯಕ್ಕೆ ಸಲ್ಲಬೇಕಾದ ತೆರಿಗೆ ಹಣವನ್ನು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗೆ ಹಂಚಿಕೆ ಮಾಡುವ ಮೂಲಕ ರಾಜ್ಯಕ್ಕೆ ಅನ್ಯಾಯ ಎಸಗುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ತನ್ನ ನೀತಿ ಬದಲಾಯಿಸಬೇಕು. ರಾಜ್ಯಕ್ಕೆ ಬರಬೇಕಾದ 1 ಲಕ್ಷದ 87 ಸಾವಿರ ಕೋಟಿ ತೆರಿಗೆ ಹಣವನ್ನು ಕೂಡಲೇ ನೀಡಬೇಕು. ಇಲ್ಲವಾದಲ್ಲಿ ಇಂದು ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಎನ್.ಎಸ್.ಯು.ಐ ನ ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೋಲಿಸರು ಬಂದಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಬಿ ಎ ರಮೇಶ್ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಪಾಷ, ನೂರುಲ್ಲಾ, ಯುವ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್, ಯುವ ಮುಖಂಡ ಮಧುಸೂದನ್, ಶಿವು ಸೂಡೂರು,ಅಕ್ಬರ್, ಗಿರೀಶ್ NSUI ನ ಜಿಲ್ಲಾಧ್ಯಕ್ಷ ವಿಜಯ್, ರವಿ ಕಾಟಿಕೆರೆ, ಹರ್ಷಿತ್ ಗೌಡ, ಧನರಾಜ್, ಗೌತಮ್, ರವಿ, ಚಂದ್ರ ಜಿ ರಾವ್, ಟ್ರೋಫಿಕ್, ಅಬ್ದುಲ್, ವರುಣ್ ವಿ ಪಂಡಿತ್, ಉಲ್ಲಾಸ್ ದೀಪು ಸಾಗರ್ ಸೃಜನ ಸಾಗರ ತೇಜು ಇವರ ಜೋತೆಯಲ್ಲಿ ಇನ್ನೂ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!