42 ಅಕ್ರಮ ಮೊಬೈಲ್ ಸಿಮ್ ಗಳೊಂದಿಗೆ ರಾಜಧಾನಿ ಬೆಂಗಳೂರಿಗೆ ಹೊರಟ ಖತರ್ನಾಕ್ ಯುವಕರು ಅಂದರ್

42 ಅಕ್ರಮ ಮೊಬೈಲ್ ಸಿಮ್ ಗಳೊಂದಿಗೆ ರಾಜಧಾನಿ ಬೆಂಗಳೂರಿಗೆ ಹೊರಟ ಯುವಕರು ಅಂದರ್!

News.Ashwasurya.in

CRIME NEWS

SUDHIR VIDHATA

ಬೆಳ್ತಂಗಡಿ ಕಳೆದ ಎರಡು ದಿನಗಳ ಹಿಂದೆ ನಿಗೂಢವಾಗಿ ಅಕ್ರಮ ಸಿಮ್ ಸಾಗಾಟ ಮಾಡುತ್ತಿದ್ದ ಯುವಕರ ತಂಡದ ವಂಚನೆ ಸಿದ್ಧವಾಗಿದ್ದ ಜಾಲವನ್ನು ಧರ್ಮಸ್ಥಳ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ವಂಚಕರನ್ನು ಬಂಧಿಸುವಲ್ಲಿಯು ಯಶಸ್ವಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಹೊರಟಿದ್ದ ಐದುಮಂದಿ ಯುವಕರ ತಂಡವನ್ನು ಸೆರೆಹಿಡಿದಿರುವ ಘಟನೆ ನಡೆದಿದೆ. ಯುವಕರ ತಂಡ ಅನುಮಾನಸ್ಪದ ರೀತಿಯಲ್ಲಿ ನಡೆದು ಕೊಂಡ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ಅವರನ್ನು ವಿಚಾರಣೆಗೆ ಪಡೆದು ಐದು ಮಂದಿಯನ್ನು ವಶಕ್ಕೆ ಪಡೆದು ತೀವ್ರ ತನಿಖೆನೆಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಐವರಿದ್ದ ಯುವಕ ತಂಡ 42 ಅಕ್ರಮ ಸಿಮ್​ಗಳನ್ನು ಬೆಂಗಳೂರಿಗೆ ಸಾಗಿಸುತ್ತಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ ಕಳೆದ ಫೆಬ್ರವರಿ 1 ರಂದು ನೆರಿಯ ಗ್ರಾಮದಲ್ಲಿ ಯುವಕರನ್ನು ಬಂಧಿಸಿ ಅವರ ಬಳಿ ಇದ್ದ ಅಕ್ರಮ ಸಿಮ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೋಲಿಸರ ಕಾರ್ಯಚರಣೆಯಲ್ಲಿ ಬಂಧಿತರಾದ ಯುವಕರು ರಮೀಝ್ (20), ಅಕ್ಬರ್ ಅಲಿ (24), ಮೊಹಮ್ಮದ್ ಮುಸ್ತಫಾ (22) ಮೊಹಮ್ಮದ್ ಸಾಧಿಕ್ (27) ಬಂಧಿತ ಆರೋಪಿಯಾಗಿದ್ದು, ಇವರ ಜೊತೆ 17 ವರ್ಷದ ಅಪ್ರಾಪ್ತ ಬಾಲಕನೂ ಕೂಡ ಒಳಗೊಂಡಿದ್ದಾನೆ. ಆರೋಪಿ ಅಕ್ಬರ್​ ಅಲಿ ದುಬೈನಲ್ಲಿ ಇದ್ದಾಗ ಬೇರೆಯವರ ಹೆಸರಿನಲ್ಲಿ ನಕಲಿ ದಾಖಲೆ ಕೊಟ್ಟು ಸಿಮ್​ ಖರೀದಿ ಮಾಡಿದ್ದ. ಎರಡು ವರ್ಷಗಳ ಕಾಲ ದುಬೈನಲ್ಲಿದ್ದ ಈತ ನಾಲ್ಕು ತಿಂಗಳ ಹಿಂದೆ ಊರಿಗೆ ಮರಳಿದ್ದ. ವಿದೇಶದ ನಂಟು ಇರುವುದರಿಂದ ಪೊಲೀಸರು ತೀವ್ರ ವಿಚಾರಣೆಗೆ ಅವನನ್ನು ಒಳಪಡಿಸಿದ್ದಾರೆ.!
ಅಕ್ಬರ್ ಆಲಿ ಸ್ನೇಹಿತ ಮೊಹಮ್ಮದ್ ಮುಸ್ತಫಾನಿಗೆ ಸಿಮ್‌ ಖರೀದಿಸಲು ಸೂಚಿಸಿದ್ದ. ಮುಸ್ತಫಾ ತನ್ನ ಸ್ನೇಹಿತ ರಮೀಝ್ ಮತ್ತು ಮೊಹಮ್ಮದ್ ಸಾಧಿಕ್‌ ಸಿಮ್‌ ಸಂಗ್ರಹಿಸುವಂತೆ ಹೇಳಿದ್ದ. ಅದರಂತೆ ಇಬ್ಬರು ಎಷ್ಟು ಸಿಮ್ ಕಾರ್ಡ್ ಬೇಕು ಅಷ್ಟನ್ನು ತಮ್ಮ ಅತ್ಮೀಯರಿಂದ ಕಮಿಷನ್ ಕೊಡಿಸಿ ಸಿಮ್‌ ಖರೀದಿಸಿ ನಂತರ ಸಿಮ್ ಗಳನ್ನು ಮುಸ್ತಫಾನಿಗೆ ಕೊಡುತ್ತಿದ್ದರು. ನಂತರ ಅಕ್ಬರ್ ಆಲಿ ಹೇಳಿದಂತೆ ಸಿಮ್ ಕಾರ್ಡ್‌ಗಳನ್ನು ಮೊಹಮ್ಮದ್ ಮುಸ್ತಫಾ ಪಡೆದುಕೊಂಡು ಬೆಂಗಳೂರಿನ ಕೆಲವು ವ್ಯಕ್ತಿಗಳಿಗೆ ಖಾಸಗಿ ಬಸ್ ಮೂಲಕ ಕಳುಹಿಸುವ ಕೆಲಸ ಮಾಡುತ್ತಿದ್ದ. ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ಈ ಎಲ್ಲಾ ವಿಚಾರಗಳು ಬೆಳಕಿಗೆ ಬಂದಿದ್ದು ಇನ್ನಷ್ಟು ಮಾಹಿತಿ ಬಂಧಿತರಿಂದ ಕಲೆ ಹಾಕಬೇಕಿದೆ. ಈ ಸಿಮ್ ಗಳು ಯಾವ ಕಾರಣಕ್ಕೆ ಬಳಸುತ್ತಿದ್ದರು ಎನ್ನುವುದು ಮುಖ್ಯವಾಗಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!