ಚಿನ್ನದ ಪದಕದ ಜೋತೆಗೆ ಪ್ರಶಸ್ತಿ ಪಡೆಯುತ್ತಿರುವ ರಾಜಿಮೋನ್ ಮೀಠಲ್
ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಶಿವಮೊಗ್ಗದ ಹೆಮ್ಮೆಯ ಹಿರಿಯ ಅಥ್ಲೆಟಿಕ್ಸ್ ರಾಜಿಮೋನ್ ಮೀಠಲ್ ( ಬಂಗಾರದ ಮನುಷ್ಯ ) ಗೆ ಚಿನ್ನದ ಪದಕ
ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಶಿವಮೊಗ್ಗದ ಹೆಮ್ಮೆಯ ಹಿರಿಯ ಅಥ್ಲೆಟಿಕ್ಸ್ ರಾಜಿಮೋನ್ ಮೀಠಲ್ ( ಬಂಗಾರದ ಮನುಷ್ಯ ) ಗೆ ಚಿನ್ನದ ಪದಕ
ಬಂಗಾರದ ಮನುಷ್ಯನಿಗೆ ಒಲಿದ ಬಂಗಾರದ ಪದಕ
ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಶಿವಮೊಗ್ಗದ ಬಂಗಾರದ ಮನುಷ್ಯ ರಾಜಿಮೋನ್ ಮೀಠಲ್ ಅವರಿಗೆ 110 ಮೀಟರ್ ಹರ್ಡಲ್ಸ್‌ನಲ್ಲಿ ಬಂಗಾರದ ಪದಕ ಮುಡಿಗೆರಿದೆ. ಇನ್ನೂ 4×100 ಮೀಟರ್ ಪುರುಷರ ರಿಲೇಯಲ್ಲಿ ಬೆಳ್ಳಿ, 4 x 100 ಮಿಶ್ರ ರಿಲೇಯಲ್ಲಿ ಕಂಚಿನ ಪದಕವನ್ನು ರಾಜಿಮೋನ್ ಮೀಠಲ್ ತಮ್ಮ ಮುಡಿಗೆರಿಸಿಕೊಂಡಿದ್ದಾರೆ ಎಂದು ಹೇಳಲು ಹೆಮ್ಮೆಪಡಬೇಕಿದೆ.
ಗೆಳೆಯ ರಾಜಿಮೋನ್ ಮೀಠಲ್ ತನ್ನ ವಿಧ್ಯಾರ್ಥಿ ಜೀವನದಲ್ಲೆ ಒಬ್ಬ ಒಳ್ಳೆಯ ಅಥ್ಲೆಟಿಕ್ ಆಗಿ ರೂಪುಗೊಂಡಂತವರು ತನ್ನ ನಿರಂತರ ಶ್ರಮದಿಂದಲೆ ಜಿಲ್ಲಾ ರಾಜ್ಯ ಮತ್ತು ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ಗುರುತಿಸುವಂತೆ ಮಾಡಿದ ಶಿವಮೊಗ್ಗದ ಹೆಮ್ಮೆಯ ಕ್ರೀಡಾಪಟು ಈತ ನನ್ನ ಆತ್ಮೀಯ ಸಹೋದರ ಮಿತ್ರನಾಗಿದ್ದು ನಮ್ಮದೆ ರಾಜ್ಯಕಂಡ ಹೆಮ್ಮೆಯ ಟೆನ್ನಿಸ್ ಬಾಲ್ ಕ್ರಿಕೆಟ್ ತಂಡ ಭಾರತ್ ಕ್ರಿಕೆಟ್ ಕ್ಲಬ್ ನಲ್ಲೂ ಆಡಿದಂತಹ ಕ್ರೀಡಾಪಟು ಒಬ್ಬ ಉತ್ತಮ ಬೌಲರ್ ಆಗಿದ್ದರು. ಇವತ್ತಿಗೂ ಸಹ ರಾಜ್ಯ ಮತ್ತು ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದ ಹಿರಿಯರ ಅಥ್ಲೆಟಿಕ್ಸ್ ನಲ್ಲಿ ರಾಜಿಮೋನ್ ಮೀಠಲ್ ತಮ್ಮ ಕ್ರೀಡಾ ಶಕ್ತಿಯನ್ನು ಪ್ರದರ್ಶಿಸಿ ಒಂದಲ್ಲ ಒಂದು ಪದಕಕ್ಕೆ ನಿರಂತರವಾಗಿ ಕೊರಳೊಡ್ಡುತ್ತಾ ಶಿವಮೊಗ್ಗ ನಗರಕ್ಕೆ ಹೆಮ್ಮೆ ತರುತ್ತಿದ್ದಾರೆ. ಗೆಳೆಯ ರಾಜಿಮೋನ್ ಮೀಠಲ್ ಹಿರಿಯರ ಅಥ್ಲೆಟಿಕ್ಸ್ ನಲ್ಲಿ ರಾಜ್ಯ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಪದಕಗಳನ್ನು ತನ್ನ ಮುಡಿಗೆರಿಸಿಕೊಳ್ಳಲಿ ಎಂದು ಹಾರೈಸುತ್ತಾ….
3 ಕೆಜಿ ಚಿನ್ನವನ್ನು ಮೈಮೇಲೆ ಧರಿಸಿರುವ ಅಥ್ಲೆಟಿಕ್ಸ್ ಶಿವಮೊಗ್ಗದ ರಾಜಿಮೋನ್ ಮೀಠಲ್!!
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ನಗರದ ಹಿರಿಯ ಅಥ್ಲೆಟ್ ರಾಜಿಮೋನ್ ಅವರು ಹಿರಿಯರ ಕ್ಷೇತ್ರ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಎಲ್ಲಾ ವಿಭಾಗದಲ್ಲೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ರಾಜಿಮೋನ್ ನಿತ್ಯ ಸಾಮಾನ್ಯ ಬದುಕಿನಲ್ಲಿ 3.5 ಕೆಜಿಯಷ್ಟು ಚಿನ್ನದ ಆಭರಣವನ್ನು ತನ್ನ ಮೈಮೇಲೆ ಹಾಕಿಕೊಂಡು ಒಡಾಡುವಂತವರು. ಈ ಒಂದು ಫ್ಯಾಷನ್ ನಿಂದಲೆ ಈತ ಹೊದಲ್ಲಿ ಬಂದಲ್ಲಿ ಪ್ರೇಕ್ಷಕರ ದಂಡು ಇವರ ಬೆನ್ನಿಗೆ ಬಿದ್ದಿರುತ್ತದೆ. ಎಲ್ಲೆ ಹೊದರು ರಾಜಿಮೋನ್ ಮೀಠಲ್ ಪ್ರೇಕ್ಷಕರ ಕೇಂದ್ರ ಬಿಂದುವಾಗಿರುತ್ತಾರೆ ಅವರನ್ನು ಮನಸೂರೆಗೊಳ್ಳಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಇತ್ತೀಚೆಗೆ ತಮಿಳುನಾಡಿನ ತಿರುನಲ್ವೇಲಿಯಲ್ಲಿ ನೆಡೆದ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ತಾನು ಬಂಗಾರದ ಪದಕ ಗೆದ್ದು ಜೋತೆಗೆ ಬಂಗಾರದ ಮನುಷ್ಯನಾಗಿ ಮೋಡಿಮಾಡಿದ್ದರು. ಇದೇ ರೀತಿ ಚಂಡೀಗಢದ ಕಿರ್ಪಾಲ್ ಸಿಂಗ್ ಎಂಬ 92 ವರ್ಷದ ಅಥ್ಲೀಟ್ 100 ಮೀಟರ್ ವಾಕಿಂಗ್ ಬೌಟ್ ನಲ್ಲಿ ಭಾಗವಹಿಸಿದ್ದರು. ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಲು ವಯಸ್ಸು ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿದ್ದರು.