ನಮ್ಮ ಸೇವ ಅವಧಿಯಲ್ಲಿ ನೆಡೆದಂತ ಅಭಿವೃದ್ಧಿ ಕಾರ್ಯಗಳು, ಮತ್ತೊಮ್ಮೆ ನಿಮ್ಮ ಸೇವೆಗೆ ನಮನ್ನು ಗೆಲ್ಲಿಸಿ
ಸಮುದಾಯ ಭವನ ಹಾಗೂ ನೂತನ ಕಟ್ಟಡ ಅಭಿವೃದ್ಧಿ
ಬಹು ಮುಖ್ಯವಾಗಿ ಹಿಂದೆ ಸಂಘದಿಂದ ನಿರ್ಮಿಸಲಾಗಿದ್ದ ಹಳೆಯ ವಿದ್ಯಾರ್ಥಿ ನಿಲಯದ ನವೀಕರಣ ಮಾಡಲು ಕಾರ್ಯಯೋಜನೆಯನ್ನು ರೂಪಿಸಿದ್ದೆವು. ಆದರೆ ಆ ಯೋಜನೆ ಸ್ಥಗಿತಗೊಳಿಸಿ, ನೂತನವಾಗಿ ಸುಸಜ್ಜಿತವಾದ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲು ಸಂಕಲ್ಪ ಮಾಡಿ, ಸಮಾಜ ಬಾಂಧವರ ಆಶಯದಂತೆ, ಅವರ ಸಹಕಾರ ಮತ್ತು ಸಹಾಯದಿಂದ ನೂತನ ವಿದ್ಯಾರ್ಥಿ ನಿಲಯ ನಿರ್ಮಾಣ ಕಾರ್ಯವನ್ನು ಮಾಡಿದ್ದೇವೆ.
ವಿದ್ಯಾರ್ಥಿ ನಿಲಯಕ್ಕೆ ಅಗತ್ಯವಾದ ಸುಸಜ್ಜಿತವಾದ ಕೊಠಡಿಗಳು, ಸಮುದಾಯ ಭವನಕ್ಕೆ ಅಗತ್ಯವಾದ ಅತಿಥಿ ಗೃಹ ನಿರ್ಮಾಣ, ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಸುಮಾರು ಮೂರು ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ನೀಲಿ ನಕ್ಷೆ ರೂಪಿಸಲಾಗಿತ್ತು. ಈ ಯೋಜನೆಯಂತೆ ಸುಮಾರು ಒಂದೂವರೆ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ ನೆಲ ಮಹಡಿಯಲ್ಲಿ ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಹತ್ತು ಕೊಠಡಿಗಳನ್ನು ನಿರ್ಮಾಣ ಮಾಡಿದ್ದೇವೆ. ಸಮುದಾಯದ ಭವನದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ ಮತ್ತು ಸಮುದಾಯ ಭವನದಲ್ಲಿ ಅಗತ್ಯವಾದ ಅತಿಥಿ ಗೃಹ ನಿರ್ಮಾಣ ಮಾಡಬೇಕಾಗಿದೆ.
ವಿದ್ಯಾರ್ಥಿಗಳಿಗೆ ಸುಸಜ್ಜಿತ ಹಾಸ್ಟೆಲ್ ನಿರ್ಮಾಣ
ನೂತನ ವಿದ್ಯಾರ್ಥಿ ನಿಲಯ ( ಹಾಸ್ಟೆಲ್ ) ನಿರ್ಮಾಣ ಮಾಡಲಾಗಿದ್ದು, ಈ ವಿದ್ಯಾರ್ಥಿ ನಿಲಯದಲ್ಲಿ ಈಡಿಗ ಸಮುದಾಯದ ಮೂವತ್ತು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಒದಗಿಸಲಾಗಿದೆ. ಸುಮಾರು 1 ಕೋಟಿ ರೂಪಾಯಿ ಹಣವನ್ನು ಎಲ್ಲರ ಪ್ರಯತ್ನದಿಂದ ಸರ್ಕಾರದಿಂದ ತಂದಿದ್ದೇವೆ.
ಮತ್ತೊಂದು ನಿವೇಶನ ಮಂಜೂರಾತಿ
ವಿದ್ಯಾರ್ಥಿ ನಿಲಯಕ್ಕೆ ಹೊಂದಿಕೊಂಡಂತೆ ಇರುವ 100×100 ಅಳತೆಯ ಖಾಲಿ ನಿವೇಶನವನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಳ್ಳಲಾಗಿದೆ. ಈ ನಿವೇಶನ ಮಂಜೂರಾತಿ ಕೆಲಸವು ಸವಾಲಿನ ಕೆಲಸವಾಗಿತ್ತು. ಆಡಳಿತ ಮಂಡಳಿ ಮತ್ತು ಸಮಾಜದ ಹಿರಿಯರ ಅವಿರತ ಪ್ರಯತ್ನದಿಂದ ಈ ಕೆಲಸ ಕೂಡ ಸಾಧ್ಯವಾಗಿದೆ.
ಬಂಗಾರಪ್ಪ, ಪುನೀತ್ ರಾಜ್‌ಕುಮಾರ್ ಪುತ್ಥಳಿ ನಿರ್ಮಾಣ
ನಮ್ಮ ಈಡಿಗ ಸಮಾಜದ ಹೆಮ್ಮೆಯ ಪುತ್ರ ನಟ ದಿವಂಗತ ಪುನೀತ್ ರಾಜ್‍ಕುಮಾರ್ ಮತ್ತು ರಾಜ್ಯದ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳು ನಮ್ಮ ಸಮಾಜದ ಪ್ರಭಾವಿ ನಾಯಕರಾಗಿದ್ದ ದಿವಂಗತ ಎಸ್. ಬಂಗಾರಪ್ಪ ನವರ ಪುತ್ಥಳಿಯನ್ನು ತೀರ್ಥಹಳ್ಳಿ ಪಟ್ಟಣದ ಯಾವುದಾದರೊಂದು ವೃತ್ತದಲ್ಲಿ ನಿರ್ಮಾಣ ಮಾಡಲು ಕಾರ್ಯಯೋಜನೆಯನ್ನು ರೂಪಿಸಲಾಗಿತ್ತು. ಆದರೆ ಸ್ಥಳಾವಕಾಶ ದೊರೆಯದ ಕಾರಣ ವಿದ್ಯಾರ್ಥಿ ನಿಲಯದ ಮುಂಭಾಗದಲ್ಲಿಯೆ ಎಸ್. ಬಂಗಾರಪ್ಪ ಮತ್ತು ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿ ಅನಾವರಣ ಮಾಡಲಾಗಿದೆ.
ಶಿಕ್ಷಣ ಸಂಸ್ಥೆ ಆರಂಭಿಸುವ ಗುರಿ
ಇದೀಗ ಈಡಿಗ ಸಮುದಾಯಕ್ಕೆ ಮತ್ತೊಂದು ಸಂತಸದ ಸುದ್ದಿ ಎಂಬಂತೆ 100×100 ಅಡಿ ನಿವೇಶನ ಮಂಜೂರಾತಿಯಾಗಿದ್ದು, ಸಮಾಜದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಶೈಕ್ಷಣಿಕ ಸಂಸ್ಥೆಯನ್ನು ಪ್ರಾರಂಭಿಸುವ ಉದ್ದೇಶ ಹೊಂದಲಾಗಿದೆ.
ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ತರಬೇತಿ
ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುತ್ತಿದೆ. ನಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ,ನಮ್ಮ ಯುವ ಸಮುದಾಯಕ್ಕೆ ಕೆ.ಎ.ಎಸ್., ಐ.ಎ.ಎಸ್., ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೊಡಿಸಲಾಗುವುದು.
ಸಮುದಾಯದ ಪರ ದನಿಯಾಗಿ ಕೆಲಸ
ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ತೀರ್ಥಹಳ್ಳಿ ತಾಲ್ಲೂಕಿನ ಆರ್ಯ ಈಡಿಗರ ಸಂಘವು ಸಮಾಜದ ವಿಚಾರದಲ್ಲಿ ಅದರ ಧ್ವನಿಯಾಗಿ ಕೆಲಸವನ್ನು ಮಾಡಿದೆ. ಸಿಗಂದೂರು ಚೌಡೇಶ್ವರಿ ದೇವಳದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ, ಅಲ್ಲಿನ ಆಡಳಿತ ಮಂಡಳಿಗೆ ಕಿರುಕುಳ ನೀಡುವುದರ ವಿರುದ್ಧ ಸಮಾಜ ಬಾಂಧವರನ್ನು ಒಗ್ಗೂಡಿಸಿ, ಆರ್ಯ ಈಡಿಗರ ಸಂಘದ ನೇತೃತ್ವದಲ್ಲಿ ಸಿಗಂದೂರು ಉಳಿಸಿ ಎಂಬ ಘೋಷಣೆಯೊಂದಿಗೆ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಇದಲ್ಲದೆ ಅನೇಕ ವಿಷಯಗಳಲ್ಲಿ ಸಮುದಾಯದ ದನಿಯಾಗಿ ಕೆಲಸ ಮಾಡಿದ್ದೇವೆ.
ಈಡಿಗ ಸಮುದಾಯದ ಸಂಘಟನೆ
ಕಳೆದ ವರ್ಷ ಬೆಂಗಳೂರಿನ ಆರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ ಆರ್ಯ ಈಡಿಗರ ಬೃಹತ್ ರಾಜ್ಯ ಸಮ್ಮೇಳನಕ್ಕೆ ಬೆಂಬಲ ಸೂಚಿಸಿ, ತಾಲ್ಲೂಕಿನಿಂದ ಸಮಾಜ ಭಾಂದವರನ್ನು ಸಮ್ಮೇಳನಕ್ಕೆ ಕರೆದೊಯ್ಯುವ ಕೆಲಸದಲ್ಲಿ ಸಕ್ರಿಯವಾಗಿ ಸಂಘವು ಪಾಲ್ಗೊಂಡಿತ್ತು. ಇವೆಲ್ಲವೂ ಕೆಲವು ನೆನಪು ಮಾಡುವ ಕಾರ್ಯಕ್ರಮವಾಗಿದ್ದು ಮುಂದಸಮಾಜಮುಖಿ ಕೆಲಸ ಮುಂದುವರೆಸುವ ಆಶಯ ನಮ್ಮದಾಗಿದೆ.
ಮುಂದಿನ ಯೋಜನೆಗಳು
- ಮುಂದಿನ ದಿನಗಳಲ್ಲಿ ಸಮುದಾಯ ಭವನವನ್ನು ನವೀಕರಣ ಮಾಡಿ, ಆಧುನೀಕರಿಸುವ ಉದ್ದೇಶ ಹೊಂದಿದೆ.
- ಸಮುದಾಯದ ಭವನದಲ್ಲಿ ಸುಸಜ್ಜಿತವಾದ ಅತಿಥಿಗೃಹ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ.
- ಸಂಘಕ್ಕೆ ಮಂಜೂರಾದ ನಿವೇಶನದಲ್ಲಿ ಶಿಕ್ಷಣ ಸಂಸ್ಥೆ ನಿರ್ಮಿಸಲು ಚಿಂತನೆ ನಡೆಸಲಾಗಿದೆ.
- ಸಮಾಜದ ಮಕ್ಕಳಿಗೆ ಕೌಶಲ್ಯ ತರಬೇತಿ ಶಿಬಿರಗಳನ್ನು ಏರ್ಪಡಿಸಲು ಉದ್ದೇಶಿಸಲಾಗಿದೆ.
ಈಡಿಗರ ಅಭಿವೃದ್ಧಿ ನಿಗಮದ ಯೋಜನೆಗಳು ಸೇರಿ ಸರ್ಕಾರದ ಸೌಲಭ್ಯಗಳನ್ನು ಸಮುದಾಯದ ಮನೆ ಮನೆಗೆ ತಲುಪಿಸಲು ಮಾಹಿತಿ ಕೇಂದ್ರ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ.
ಕಳೆದ ಆಡಳಿತ ಮಂಡಳಿಯ ಅವಧಿಯಲ್ಲಿ ಸಮಾಜ ಬಾಂಧವರ ಆಶಯದಂತೆ ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲೂ ಸಮಾಜದ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಲು ಬದ್ಧರಾಗಿ ಮುಂಬರುವ ಚುನಾವಣೆಯಲ್ಲಿ ಒಂದು ತಂಡವಾಗಿ ಸ್ಪರ್ಧಿಸಿದ್ದೇವೆ. ಈ ತಂಡದಲ್ಲಿ ನಮ್ಮೊಂದಿಗೆ ಹೊಸಬರೂ ಕೂಡ ಇದ್ದಾರೆ.
1. ಎಂ.ಜಿ. ರಾಮಚಂದ್ರ ಮಟ್ಟಿನಮನೆ
2. ಮುಡುಬ ರಾಘವೇಂದ್ರ
3. ಎ.ಎಸ್. ಮಹೇಶ್ ನಾಯ್
4. ಎಂ.ಸಿ. ಮೋಹನ ಅತ್ತಿಗದ್ದೆ,
5. ಸುರೇಶ್ ಕಲ್ಲುಕೊಪ್ಪ
ಈ ಬಾರಿ ಕೂಡ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಸಮುದಾಯದ ಸೇವೆ ಮಾಡಲು ಅವಕಾಶವನ್ನು ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸುವ ತಮ್ಮ ಸೇವಾಕಾಂಕ್ಷಿಗಳು.
ಮತದಾನದ ದಿನಾಂಕ
ಜನವರಿ 28 ಭಾನುವಾರ, ಸಮಯ : ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ರವರೆಗೆ ಸ್ಥಳ : ಈಡಿಗ ಸಮುದಾಯ ಭವನ, ಕೋಳಿಕಾಲುಗುಡ್ಡ, ತೀರ್ಥಹಳ್ಳಿ,
ಸಮುದಾಯದವರಲ್ಲಿ ವಿನಂತಿ
ಸಮಾಜದ ಕೆಲವು ವಿರೋಧಿಗಳು ಹಾಲಿ ಸಂಘದ ವಿರುದ್ಧವಾಗಿ ಅಪಪ್ರಚಾರ ಮಾಡುತ್ತಿದ್ದು ಅಂತಹ ಯಾವುದೇ ಅಪಪ್ರಚಾರಕ್ಕೆ ಸಮುದಾಯದವರು ಕಿವಿಗೊಡದೆ ಹಾಲಿ ಸಂಘದ ಕೆಲಸ ಕಾರ್ಯವನ್ನು ಗಮನಿಸಿ ಮುಂದೆಯು ಸಮುದಾಯದ ಇನ್ನಷ್ಟು ಅಭಿವೃದ್ಧಿ ಕೆಲಸವನ್ನು ಮಾಡಲು ನಮ್ಮೊಂದಿಗೆ ಕೈ ಜೋಡಿಸಿ ಈ ಚುನಾವಣೆಯಲ್ಲಿ ನನ್ನನ್ನು ನಮ್ಮ ತಂಡವನ್ನು ಗೆಲ್ಲಿಸಿಕೊಂಡು ಬರುವ ದೊಡ್ಡ ಜವಬ್ದಾರಿ ಸಮುದಾಯದವರ ಮೇಲಿದೆ
ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ
ಎಂ ಜೆ ರಾಮಚಂದ್ರ
ಅಧ್ಯಕ್ಷರು
ಆರ್ಯ ಈಡಿಗರ ಸಂಘ
ತೀರ್ಥಹಳ್ಳಿ
———————————————–—
ತೀರ್ಥಹಳ್ಳಿ ತಾಲ್ಲೂಕು 2024ರ ಆರ್ಯ ಈಡಿಗ ಸಂಘದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಯಾದವರು
ತೀರ್ಥಹಳ್ಳಿ ಆರ್ಯ ಈಡಿಗ ಸಂಘದ 2024 ರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಆಗುಂಬೆ ಹೋಬಳಿಯ ವೆಂಕಟೇಶ್ ಸಿ ಜೆ ಚಪ್ಪನಕೋಡಿಗೆ, ಗುರುಮೂರ್ತಿ ಮೇಕೇರಿ,ವಿನಯ್ ಕಣಗಲು,ಇವರುಗಳು ತೀರ್ಥಹಳ್ಳಿ ಆರ್ಯ ಈಡಿಗ ಸಂಘಕ್ಕೆ 2024 ರ ಚುನಾವಣೆಯಲ್ಲಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ, ಆಯ್ಕೆ ಯಾಗಲು ಸಹಕರಿಸಿದ ಸಮುದಾಯದ ಹಿರಿಯರಿಗೂ ಮತ್ತು ಆಗುಂಬೆ ಹೋಬಳಿಯ ಎಲ್ಲಾ ಈಡಿಗ ಸಮುದಾಯದವರಿಗೂ ಎಲ್ಲಾ ಮಿತ್ರರಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ.
ವೆಂಕಟೇಶ್ ಸಿ ಜಿ , ಚಪ್ಪನಕೋಡಿಗೆ
ಗುರುಮೂರ್ತಿ , ಮೇಕೇರಿ
ವಿನಯ್ , ಕಣಗಲು