ಮೇಲುಕೋಟೆ ಶಿಕ್ಷಕಿ ದೀಪಿಕಾ ಹತ್ಯೆ ಪ್ರಕರಣ: ಕೊನೆಗೂ ಹಂತಕ ಆರೇಸ್ಟ್! ಅಕ್ಕ ಅಕ್ಕ ಎನ್ನುತ್ತಲೆ ಶವದ ಪೆಟ್ಟಿಗೆಗೆ ಮೊಳೆ ಹೊಡೆದ ನೀಚ..

ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಹಂತಕನ ವಿಚಾರಣೆ ಮಾಡಲಾಗುತ್ತಿದ್ದು ಇನ್ನಷ್ಟು ಸತ್ಯಗಳು ಹೊರ ಬರಬೇಕಿದೆ, ಈಗಾಗಲೇ ದೀಪಿಕಾ ಹತ್ಯೆಯನ್ನು ನಾನೆ ಮಾಡಿರುವುದಾಗಿ ಎಂದು ಒಪ್ಪಿಕೊಂಡಿದ್ದಾನೆ.ಈತ ಆಕೆಯನ್ನು ಹತ್ಯೆಮಾಡಿದ ನಂತರವು ಎರಡು ದಿನ ಗ್ರಾಮದಲ್ಲೆ ಇದ್ದ. ಈ ಪ್ರಕರಣದ ದಿಕ್ಕನ್ನು ತಪ್ಪಿಸಲು ಸಾಕಷ್ಟು ನಾಟಕವಾಡಿದ್ದನಂತೆ! ಕೊಲೆಯಾದ ಮಾರನೇ ದಿನ ದೀಪಿಕಾಳ ತಂದೆಗೆ ತಾನೇ ಕರೆ ಮಾಡಿದ್ದಾನೆ, ಅಪ್ಪಾಜಿ ದೀಪಿಕಾ ಅಕ್ಕಾ ಸಿಕ್ಕಿದ್ರಾ’ ಎಂದು ವಿಚಾರಿಸಿದ್ದಾನೆ, ಮೃತ ದೀಪಿಕಾಳನ್ನ ಅಕ್ಕ ಅಂತ ಕರೆದ್ರೇ ಆಕೆಯ ತಂದೆಯನ್ನ ಅಪ್ಪಾಜಿ ಎನ್ನುತ್ತಿದ್ದ ಹಂತಕ ದೊಡ್ಡ ಡ್ರಾಮ ಆರ್ಟಿಸ್ಟ್ ಗಿಂತಲು ಮಹಾನ್ ನಟ, ತನ್ನ ಮೇಲೆ ಅನುಮಾನ ಬಾರದಂತೆ ದೀಪಿಕಾಳ ಬಗ್ಗೆ ವಿಚಾರಿಸುವ ಪರಿಯೆ ಹಾಗಿತಂತೆ. ಆದರೆ ಯಾವಾಗ ದೀಪಿಕಾಳ ಶವ ಪತ್ತೆಯಾಗ್ತಿದ್ದಂತೆ ಹಂತಕ ಹೆದರಿ ಊರು ಬಿಟ್ಟಿದ್ದ. ಶವ ಹೂತಿಟ್ಟಿದ್ದರಿಂದ ಸಿಗೋದಿಲ್ಲ ಅಂದುಕೊಂಡಿದ್ದ ಆರೋಪಿ, ಶವ ಸಿಕ್ಕ ನಂತರ ಪರಾರಿ ಆಗಿ ಈಗ ಪೋಲಿಸರ ಬಂಧಿಯಾಗಿದ್ದಾನೆ.

ಮೇಲುಕೋಟೆ ಶಿಕ್ಷಕಿ ದೀಪಿಕಾ ಹತ್ಯೆ ಪ್ರಕರಣ: ಕೊನೆಗೂ ಹಂತಕ ಅರೆಸ್ಟ್!

News.Ashwasurya.in

CRIME NEWS

✍️SUDHIR VIDHATA

ಮಂಡ್ಯ: ಇಲ್ಲಿನ ಮೇಲುಕೋಟೆಯ ಶಾಲಾ ಶಿಕ್ಷಕಿ ದೀಪಿಕಾ ನಾಪತ್ತೆ ಹಾಗೂ ಕೊಲೆ ಪ್ರಕರಣ ಬೆಳಕಿಗೆ ಬಂದ 30 ಗಂಟೆಯಲ್ಲೇ ಪೊಲೀಸರು ಹಂತಕನ ಬೆನ್ನಿಗೆ ಬಿದ್ದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೀಪಿಕಾಳನ್ನ ಕೊಲೆಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ನಿತೀಶ್‌ನನ್ನು ಪೊಲೀಸರು ತಮ್ಮ ಖೆಡ್ಡಕ್ಕೆ ಕೆಡವಿಕೊಂಡು ಬಂಧಿಸಿದ್ದಾರೆ.

ಮೇಲುಕೋಟೆ ಬೆಟ್ಟದ ತಪ್ಪಲಲ್ಲಿರುವ ಮಾಣಿಕ್ಯನಹಳ್ಳಿ ಗ್ರಾಮದ ದೀಪಿಕಾಳನ್ನು (28) ಅದೇ ಗ್ರಾಮದ ನಿತೀಶ್ ಕೊಲೆ ಮಾಡಿ ಆಕೆಯ ಶವವನ್ನು ಹೂತು ಹಾಕಿದ್ದ. ಶನಿವಾರ ಮಧ್ಯಾಹ್ನ ಶಾಲೆಯಿಂದ ತೆರಳಿದ್ದ ದೀಪಿಕಾ ನಿಗೂಢವಾಗಿ ನಾಪತ್ತೆಯಾಗಿದ್ದುಳು!! ಅಂದು ಸಂಜೆ ಬೆಟ್ಟದ ಹಿಂಭಾಗದ ರಸ್ತೆ ಸಮೀಪ ದೀಪಿಕಾ ಸ್ಕೂಟರ್ ಪತ್ತೆಯಾಗಿತ್ತು. ಅಲ್ಲದೆ ದೀಪಿಕಾಳನ್ನು ಎಳೆದಾಡುತ್ತಿದ್ದ ದೃಶ್ಯವನ್ನು ಬೆಟ್ಟದ ಮೇಲಿನಿಂದ ಪ್ರವಾಸಿಗರೊಬ್ಬರು ವೀಡಿಯೋ ಮಾಡಿದ್ದರು. ಇದಾದ ನಂತರ ಮೇಲುಕೋಟೆ ಠಾಣೆಗೆ ದೀಪಿಕಾ ಪೋಷಕರು ನಾಪತ್ತೆ ದೂರು ನೀಡಿದ್ದರು. ಸೋಮವಾರ ಸಂಜೆ ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಶವ ಪತ್ತೆಯಾಗಿತ್ತು.
ಎರಡು ದಿನದ ನಂತರ
 ಕಾಣೆಯಾಗಿದ್ದ ದೀಪಿಕಾಳ ಶವ ಪತ್ತೆಯಾಗುತ್ತಿದ್ದಂತೆ ಹಂತಕ ನಿತೀಶ್ ಹೆದರಿ ಊರುಬಿಟ್ಟಿದ್ದ! ಪೋಲಿಸರಿಗೆ ಇತನ ಮೇಲೆ ಅನುಮಾನ ಬರಲು ಪ್ರಬಲ ಕಾರಣವು‌ಇತ್ತು. ದೀಪಿಕಾಗೆ ಕೊನೆಯದಾಗಿ ಈತನೇ ಫೋನ್ ಕಾಲ್ ಮಾಡಿದ್ದ. ನಿತೀಶ್ ಕೊಲೆಗಾರ ಎಂದು ದೀಪಿಕಾ ಪತಿ ಲೋಕೇಶ್ ಆರೋಪ ಮಾಡಿದ್ದರು. ಈ ಅನುಮಾನದಿಂದ ನಾಪತ್ತೆಯಾಗಿದ್ದ ನಿತೀಶ್‌ನನ್ನು ಪೊಲೀಸರು ಹುಡುಕಾಟ ನಡೆಸಿದ್ದರು. ಇದೀಗ ನಿತೀಶ್‌ನನ್ನು ಬಂಧಿಸಿ ಪೊಲೀಸರು ಠಾಣೆಗೆ ಕರೆತಂದಿದ್ದಾರೆ. ಇಂದು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಪಡೆಯಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಹಂತಕನ ಬಾಯಿಂದ ಸಾಕಷ್ಟು ಸತ್ಯವನ್ನು ಹೊರ ಕಕ್ಕಿಸಬೇಕಿದೆ,ಈ ಹತ್ಯೆಗೆ‌ಕಾರಣವೇನು, ಹಣಕ್ಕಾಗಿ ನೆಡೆಯಿತಾ ಅಥವಾ ಓನ್ ವೇ ಕುರುಡು ಪ್ರೀತಿಗೆ ಹಂತಕ ಅಮಾಯಕ ಯುವತಿಯ ನೆತ್ತರು ಹರಿಸಿರಬಹುದಾ? ಹತ್ಯೆ ಮಾಡುವ ಮೊದಲು ಹಂತಕ ಆಕೆಯ ಮೇಲೆ ಆತ್ಯಚಾರ ಮಾಡಿದ್ದಾನ? ಅಕ್ಕ ಅಕ್ಕ ಎನ್ನುತ್ತಲೆ ಆಕೆಯ ಶವದ ಪೆಟ್ಟಿಗೆಗೆ ಮೊಳೆ ಹೊಡೆದ ನೀಚನಿಗೆ ಸರಿಯಾದ ಶಿಕ್ಷೆ ಆಗಬೇಕಿದೆ ಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ

Leave a Reply

Your email address will not be published. Required fields are marked *

Optimized by Optimole
error: Content is protected !!