ಬಿಜೆಪಿ ಚುನಾವಣೆಗಾಗಿ ಯುಕ್ತಿಯಿಂದ ಶ್ರೀರಾಮನನ್ನು ಪೂಜಿಸುತ್ತಾರೆ, ನಾವು ಭಕ್ತಿಯಿಂದ ರಾಮನನ್ನು ಪೂಜೆಮಾಡುತ್ತೇವೆ ರಾಮ ನಮ್ಮೆಲ್ಲರ ಆರಾಧ್ಯದೈವ :
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್
ಶಿವಮೊಗ್ಗ: ನಾವು ಭಕ್ತಿಯಿಂದ ಶ್ರೀರಾಮನನ್ನು ಪೂಜಿಸುತ್ತೇವೆ. ಅವರು(ಬಿಜೆಪಿ) ಚುನಾವಣೆಗಾಗಿ ಯುಕ್ತಿಯಿಂದ ಶ್ರೀರಾಮನನ್ನು ಪೂಜಿಸುತ್ತಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಅವರು ಇಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಿವಮೊಗ್ಗ ನಗರದ ಪುರಾಣಪ್ರಸಿದ್ಧ ಕೋಟೆ ಶ್ರೀ ಸೀತಾ ರಾಮ ಆಂಜನೇಯ ದೇವಸ್ಥಾನದಲ್ಲಿ ಶ್ರೀರಾಮನ ಸಹಿತ ಆಂಜನೇಯನಿಗೆ ಮಹಾ ಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಮ ನಮಗೆ ಭಕ್ತಿಯ ಆರಾದಕನಾಗಿದ್ದಾನೆ, ಬಿಜೆಪಿಯವರು ಅವನನ್ನು ಚುನಾವಣೆಯ ಶಕ್ತಿಯನ್ನಾಗಿ ರೂಪಿಸುತ್ತಿದ್ದಾರೆ. ಇದು ಚುನಾವಣೆಯ ಗಿಮಿಕ್ ಹೊರತೂ ರಾಮನ ಬಗ್ಗೆ ನಿಜ ಭಕ್ತಿಯಲ್ಲ ಎಂದರು.
ಪ್ರಧಾನಿ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಸಂಬಂಧಿಸಿದಂತೆ ನಾವೇ ಮಾಡಿದ್ದು ಎಂದು ಹೇಳುತ್ತಾರೆ. ಆದರೆ, ಇದು ನೆಹರೂ ಕಾಲದಲ್ಲಿ ಮತ್ತು ಇಂದಿರಾ ಗಾಂಧಿ ಅವರ ಕಾಲದಲ್ಲಿಯೇ ಈ ಸಂಭಂದಿತ ಕೆಲಸಗಳು ನಡೆದಿತ್ತು. ಟ್ರಸ್ಟ್ ಮೂಲಕ ಸಾರ್ವಜನಿಕರಿಂದ ಚಂದಾ ಎತ್ತಿ ದೇವಾಲಯ ಕಟ್ಟಲಾಗಿದೆ. ಇದು ಕೇಂದ್ರ ಸರ್ಕಾರದಿಂದ ಮಂದಿರವನ್ನು ಕಟ್ಟಿಲ್ಲ. ರಾಮ ಎಲ್ಲರ ಮನದಲ್ಲಿದ್ದಾನೆ. ಆದರೆ, ಬಿಜೆಪಿಯವರು ಇದನ್ನು ದುರುಪಯೋಪಡಿಸಿಕೊಳ್ಳುತ್ತಿದ್ದಾರೆ ಅಷ್ಟೇ. ನಾವೆಲ್ಲರೂ ಹಿಂದೂಗಳು ರಾಮ ನಮ್ಮೆಲ್ಲರ ಆರಾಧ್ಯದೈವ ಎಂದರು ಹೆಚ್ ಎಸ್ ಸುಂದರೇಶ್ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಪ್ರಮುಖರಾದ ಚಂದ್ರಭೂಪಾಲ್, ಎಂ.ಪಿ. ದಿನೇಶ್ ಪಾಟೀಲ್, ಗಿರೀಶ್ ರಾವ್ ಪಿಎನ್., ಎನ್.ಡಿ. ಪ್ರವೀಣ್ ಕುಮಾರ್, ನಾಜೀಮಾ, ಪ್ರೇಮಾ, ಕವಿತಾ ರಾಘವೇಂದ್ರ, ಕವಿತಾ ಎಂ.ಬಿ., ಅರ್ಚನಾ, ಸ್ಟೆಲಾ ಮಾರ್ಟಿನ್ ಮೊದಲಾದವರಿದ್ದರು.