ಶಿವಮೊಗ್ಗ: ಆರು ವರ್ಷದ ಪ್ರೀತಿ,! ಪ್ರೇಮ,!ಕಾಮ,!?ಮುಂದೆ ನೆಡೆದದ್ದು ಮಾತ್ರ ಘೋರ ದುರಂತ,! ಪ್ರೀತಿಸಿದವಳನ್ನೆ ನಡು ರಸ್ತೆಯಲ್ಲಿ ಇರಿದ ಪಾಗಲ್ ಪ್ರೇಮಿ!!
News.Ashwasurya.in
ಕಳೆದ ಆರು ವರ್ಷಗಳಿಂದ ಪ್ರೀತಿ ಮಾಡುತ್ರಿದ್ದ ಹುಚ್ಚು ಪ್ರಿಯಕರನೊಬ್ಬ ತಾನು ಪ್ರೀತಿಸಿದ ಹುಡುಗಿ ಬೇರೊಬ್ಬನನ್ನು ಮದುವೆ ಆಗುತ್ತಾಳೆಂಬ ವಿಷಯ ತಿಳಿದು ರೊಚ್ಚಿಗೆದ್ದ ಈತ ತನ್ನ ಪ್ರೇಯಸಿಯನ್ನು ಜನನಿಬಿಡ ಪ್ರದೇಶಕ್ಕೆ ಕರೆದೊಯ್ದು ಚಾಕು ಇರಿದ ಪ್ರಕರಣವೊಂದು ಶಿವಮೊಗ್ಗದಲ್ಲಿ ನಡೆದು ಹೋಗಿದೆ,!
ತಾನು ಪ್ರೀತಿ ಮಾಡುತ್ತಿದ್ದ ಯುವತಿಯನ್ನು ನಂಬಿಸಿ ಜನ ನಿಬಿಡ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ ಪಾಗಲ್ ಪ್ರೇಮಿ ಜಗಳ ತೆಗೆದಿದ್ದಾನೆ, ನೀನು ನನ್ನನ್ನು ಬಿಟ್ಟು ಬೇರೆಯವನ ಜೋತೆಯಲ್ಲಿ ಮದುವೆ ಆಗುತ್ತಿದ್ದೀಯಾ ಎಂದು ಗಲಾಟೆಮಾಡುತ್ತಲೆ ಆಕೆಯ ಮೇಲೆ ಜೋತೆಯಲ್ಲಿ ತಂದಿದ್ದ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದಾನೆ. ಈ ದುರಂತವೊಂದು ಶಿವಮೊಗ್ಗ ನಗರದ ಹೃದಯ ಭಾಗವಾಗಿರುವ ಜನನಿಬಿಡ ಪ್ರದೇಶ ಶಿವಪ್ಪ ನಾಯಕ ಸರ್ಕಲ್ ಹತ್ತಿರ ನಡೆದಿದೆ.
ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿಯ ಗ್ರಾಮದ ವಾಸಿಗಳಾದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರಂತೆ!? ಯುವಕ ಚೇತನ್ ಶಿವಮೊಗ್ಗ ಆಟೋ ಕಾಂಪ್ಲೆಕ್ಸ್ ನಲ್ಲಿ ವರ್ಕ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದಾನೆ.ಈತ ತನ್ನ ಪ್ರೇಯಸಿಗೆ ಚಾಕು ಇರಿದು ಓಡಿ ಹೋಗುತ್ತಿದ್ದ ವೇಳೆ ಸಾರ್ವಜನಿಕರು ಆತನನ್ನು ಹಿಡಿದು ರುಬ್ಬಿದ್ದಾರೆ.ನಂತರ ಪೊಲೀಸರಿಗೆ ಆತನನ್ನು ಒಪ್ಪಿಸಿದ್ದಾರೆ. ಚಾಕು ಇರಿತದಿಂದ ಗಾಯಗೊಂಡ ಯುವತಿ ಅಂಬಿಕಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಸಾರ್ವಜನಿಕರಿಂದ ಒದೆ ತಿಂದ ಯುವಕ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾನೆಂದು ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಭಂದಿಸಿದಂತೆ ಪೊಲೀಸರ ಮುಂದೆ ಹೇಳಿಕೆ ನೀಡಿದ ಆರೋಪಿ ಯುವಕ (ಚೇತನ್) ಕಳೆದ ಆರು ವರ್ಷಗಳಲ್ಲಿ ನಾನು ನನ್ನ ಪ್ರೇಯಸಿ ಅಂಬಿಕಾ ಪರಸ್ಪರ ಪ್ರೀತಿ ಮಾಡುತ್ತಿದ್ದೆವು. ಕಳೆದೊಂದು ವರ್ಷದಿಂದ ನಮ್ಮ ಮಧ್ಯೆ ಮನಸ್ತಾಪ ಇತ್ತು. ಇತ್ತೀಚಿಗೆ ಆಕೆಗೆ ಬೇರೆ ಕಡೆ ಮದುವೆ ಮಾಡಲು ಅವರ ಮನೆಯವರು ನಿರ್ಧಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವಳು ನನ್ನಿಂದ ದೂರವಾಗುತ್ತಾಳೆ ಎಂದು ಇಬ್ಬರು ಬದುಕುವುದು ಬೇಡವೆಂದು ಈತ ನಿರ್ಧಾರ ಮಾಡಿರಬೇಕು, ಈ ಕಾರಣದಿಂದಲೇ ಮೂರು ಚಾಕು ತೆಗೆದುಕೊಂಡು ಹೋಗಿದ್ದನಂತೆ, ಒಂದು ಚಾಕುವಿನಿಂದ ಆಕೆಯನ್ನು ಇರಿದಾಗ ಮಿಸ್ ಆದರೆ ಮತ್ತೊಂದು ಚಾಕುವಿನಿಂದ ಇರಿಯುವುದು ಅವನ ಉದ್ದೇಶವಾಗಿತ್ತಂತೆ!? ನಂತರ ಮೂರನೇ ಚಾಕುವಿನಿಂದ ಇವನು ಇರಿದುಕೊಂಡು ಸಾಯಬೇಕು ಎಂದುಕೊಂಡಿದ್ದನಂತೆ!? ಎಂದು ಯುವಕನ ಹೇಳಿಕೆ ನೀಡಿದ್ದಾನೆ. ಈ ಘಟನೆ ಕುರಿತಂತೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಮುಂದುವರೆದಿದೆ