ಪ್ರಖರ್ ಆಟಕ್ಕೆ ಬೆಚ್ಚಿಬಿದ್ದ ಮುಂಬಯಿ,ನಿರಾಯಾಸವಾಗಿ ಕೂಚ್ ಬಿಹಾರ್ ಟ್ರೋಫಿ ಗೆದ್ದ ಕರ್ನಾಟಕ

ಶಿವಮೊಗ್ಗ ನಗರದ ನವುಲೆ ಕ್ರೀಡಾಂಗಣದಲ್ಲಿ ಪೈನಲ್ ಗೆದ್ದ ಕರ್ನಾಟಕದ ತಂಡದ ಜೋತೆಯಲ್ಲಿ ಮಾಜಿ ಸ್ಪೀಕರ್ ಹಿರಿಯ ರಾಜಕಾರಣಿ ಡಿ ಹೆಚ್ ಶಂಕರ್ ಮೂರ್ತಿ

ಪ್ರಖರ್ ಆಟಕ್ಕೆ ಬೆಚ್ಚಿಬಿದ್ದ ಮುಂಬಯಿ, ಕೂಚ್ ಬಿಹಾರ್ ಟ್ರೋಫಿ ಗೆದ್ದ ಕರ್ನಾಟಕ

SUDHIR VIDHATA

News.Ashwasurya.in

ಶಿವಮೊಗ್ಗ ಜ,16: ಕರ್ನಾಟಕದ 19 ವರ್ಷದೊಳಗಿನವರ ತಂಡವು ಇದೇ ಮೊದಲ ಬಾರಿಗೆ ಕೂಚ್ ಬಿಹಾರ್ ಟ್ರೋಫಿ ಗೆದ್ದು ಬಿಗಿದೆ. ಸಂಕ್ರಾಂತಿಯ ಹಬ್ಬದ ದಿನದಂದೆ ನವುಲೆಯ KSCA ಕ್ರೀಡಾಂಗಣದಲ್ಲಿ ಸಂಭ್ರಮದ ಮುಗಿಲು ಮುಟ್ಟಿತ್ತು.
ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮುಂಬಯಿ ತಂಡದ ಎದುರು ನಡೆದ ಫೈನಲ್‌ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡದ  ಆರಂಭಿಕ ಬ್ಯಾಟರ್ ಪ್ರಖರ್ ಚತುರ್ವೇದಿ ಅಜೇಯ 404 ರನ್ ಗಳಿಸಿ ಊ ಹಿಂದೆ ಇದ್ದ ಯುವರಾಜ್ ಸಿಂಗ್ ದಾಖಲೆಯನ್ನು ಮುರಿದು ಹಾಕಿದರು. 
ಈ ಟೂರ್ನಿಯ 79 ವರ್ಷಗಳ ಇತಿಹಾಸ ದಲ್ಲಿ ಕರ್ನಾಟಕ ತಂಡವು ಮೊದಲ ಬಾರಿ ಚಾಂಪಿಯನ್ ಆಯಿತು. 
ಡ್ರಾ ಆದ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿದ್ದ ಆತಿಥೇಯರು ಪ್ರಶಸ್ತಿ ಮುಡಿಗೇರಿಸಿಕೊಂಡರು. 510 ರನ್‌ಗಳ ಮುನ್ನಡೆಯ ದಾಖಲೆಯನ್ನೂ ಬರೆಯಿತು.

ಪ್ರಖರ್‌ ಒಟ್ಟು 638 ಎಸೆತಗಳನ್ನು ಎದುರಿಸಿ 46 ಬೌಂಡರಿ ಹಾಗೂ ಮೂರು ಸಿಕ್ಸರ್ ಹೊಡೆದು ಅಜೇಯ 404 ರನ್ ದಾಖಲಿಸಿದರು,ಇವರ ಅದ್ಭುತ ಆಟದ ನೆರವಿನಿಂದ ಕರ್ನಾಟಕ ತಂಡವು  8 ವಿಕೆಟ್‌ಗಳ ನಷ್ಟಕ್ಕೆ 890 ರನ್‌ಗಳ ದಾಖಲೆಯ ಮೊತ್ತವನ್ನು ಪೇರಿಸಿತು. ಚಹಾ ವಿರಾಮಕ್ಕೆ ಮುನ್ನ ತನೀಶ್‌ ಮೆಹರ್‌ ಬೌಲಿಂಗ್‌ನಲ್ಲಿ ಸತತ 3 ಬೌಂಡರಿ ಬಾರಿ ಸಿದ ಪ್ರಖರ್ 400ರ ಗಡಿ ದಾಟಿದರು.


ಕರ್ನಾಟಕ ತಂಡಕ್ಕೆ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಹಾಗೂ ಮಾಜಿ ಸಚಿವ ಡಿ.ಎಚ್‌. ಶಂಕರಮೂರ್ತಿ ₹ 30 ಲಕ್ಷ ಚೆಕ್ ಹಾಗೂ ಟ್ರೋಫಿ ವಿತರಿಸಿದರು. ರನ್ನರ್‌ ಅಪ್ ಮುಂಬೈ ತಂಡ ₹ 15 ಲಕ್ಷ ಚೆಕ್, ಟ್ರೋಫಿ ಪಡೆಯಿತು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಮುಂಬೈ: 113.5 ಓವರ್‌ಗಳಲ್ಲಿ 380.

ಕರ್ನಾಟಕ: 223 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 890 (ಪ್ರಖರ್ ಚತುರ್ವೇದಿ ಔಟಾಗದೆ 404, ಎಸ್‌.ಯು. ಕಾರ್ತಿಕ್ 50, ಹರ್ಷಿಲ್ ಧರ್ಮಾನಿ 169, ಕೆ.ಪಿ. ಕಾರ್ತಿಕೇಯ 72, ಹಾರ್ದಿಕ್ ರಾಜ್ 51, ಎನ್. ಸಮರ್ಥ್ ಔಟಗದೆ 55)

ಫಲಿತಾಂಶ: ಪಂದ್ಯ ಡ್ರಾ. ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಿದ ಕರ್ನಾಟಕ ಚಾಂಪಿಯನ್.

Leave a Reply

Your email address will not be published. Required fields are marked *

Optimized by Optimole
error: Content is protected !!