ಹೊಸನಗರದಲ್ಲಿ ರಾಜ್ಯಮಟ್ಟದ ಕೃಷಿ ಮೇಳ

ಹೊಸನಗರದಲ್ಲಿ ರಾಜ್ಯಮಟ್ಟದ ಕೃಷಿ ಮೇಳ

ಜೆಸಿಐ ಹೊಸನಗರ ಡೈಮಂಡ್ ಮತ್ತು ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಹಯಯೋಗದಲ್ಲಿ ದಿನಾಂಕ 12-01-2024ರ ಶುಕ್ರವಾರ ದಿಂದ ದಿನಾಂಕ 14-01-2024ರ ಭಾನುವಾರದವರೆಗೆ ಮೂರು ದಿನಗಳ ಕಾಲ ಹೊಸನಗರ ನೆಹರೂ ಮೈದಾನದಲ್ಲಿ ರಾಜ್ಯಮಟ್ಟದ ಕೃಷಿ ಮೇಳ ನಡೆಯಲಿದ್ದು ದಿನಾಂಕ 12-01-2024 ರ ಶುಕ್ರವಾರ ಸಂಜೆ 5:00 ಗಂಟೆಗೆ ಕೃಷಿ ಮೇಳದ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟಕರಾಗಿ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಧು.ಎಸ್ ಬಂಗಾರಪ್ಪನವರು ನೆರವೇರಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಆ‌ರ್.ಎಂ. ಮಂಜುನಾಥ್ ಗೌಡರು ವಹಿಸಲಿದ್ದು ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಇವರು ಪ್ರಗತಿಪರ ಕೃಷಿಕರಿಗೆ ಸನ್ಮಾನಿಸಲಿದ್ದಾರೆ. ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಅರಗ ಜ್ಞಾನೇಂದ್ರರವರು ನಿವೃತ್ತ ಸೈನಿಕರಿಗೆ ಸನ್ಮಾನಿಸಲಿದ್ದಾರೆ. ಸಮಾರಂಭದ ಮುಖ್ಯ ಅತಿಥಿಗಳಾಗಿ ಡಾಕ್ಟರ್ ಆರ್. ಸಿ .ಜಗದೀಶ್ ಸನ್ಮಾನ್ಯ ಕುಲಪತಿಗಳು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ, ಸುಧೀರ್ ಜಿ.ಎನ್. ನಿರ್ದೇಶಕರು ಡಿಸಿಸಿ ಬ್ಯಾಂಕ್, ಡಿ.ಆ‌ರ್ ವಿನಯಕುಮಾ‌ರ್ ಅಧ್ಯಕ್ಷರು ತುಂಗಾ ಅಡಿಕೆ ಮಾರಾಟ ಸೌಹಾರ್ದ ಸಹಕಾರ ನಿಯಮಿತ ಹೊಸನಗರ, ಕೆ.ವಿ. ಕೃಷ್ಣಮೂರ್ತಿ ನಿರ್ದೇಶಕರು MAMCOS ಶಿವಮೊಗ್ಗ, ಎಂ.ಎಂ. ಪರಮೇಶ್ ನಿರ್ದೇಶಕರು ಡಿಸಿಸಿ ಬ್ಯಾಂಕ್ ಶಿವಮೊಗ್ಗ ವಿದ್ಯಾಧರ ಹೆಚ್. ಎನ್. ನಿರ್ದೇಶಕರು ಶಿವಮೊಗ್ಗ ಹಾಲು ಒಕ್ಕೂಟಜಿ. ವಾಸುದೇವ ವ್ಯವಸ್ಥಾಪಕ ನಿರ್ದೇಶಕರು, ಡಿ ಆರ್ ಸಿ ಎಸ್ ಶಿವಮೊಗ್ಗ ಸಿ. ವಿ. ಚಂದ್ರಶೇಖ‌ರ್ ಪ್ರಥಮ ದರ್ಜೆ ಗುತ್ತಿಗೆದಾರರು ನಗರ, ರಾಜೇಶ್ ಕೀಳಂಬಿ ವ್ಯವಸ್ಥಾಪಕ ನಿರ್ದೇಶಕರು ಕೀಳಂಬಿ ಮೀಡಿಯಾ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ರವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ನಂತರ ನಗೆ ಹಬ್ಬ ಗಂಗಾವತಿ ಪ್ರಾಣೇಶ್ ತಂಡದವರಿಂದ ಆಯೋಜಿಸಲಾಗಿದೆ.

ದಿನಾಂಕ 13-01-2024ರ ಶನಿವಾರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರಲ್ಲಿ ಸಂಜೆ ಐದು ಗಂಟೆಗೆ ನೆಹರು ಮೈದಾನದಲ್ಲಿ ಶಾಖಾಹಾರಿ ಚಲನಚಿತ್ರದ ಸಾಂಗ್ ರಿಲೀಸ್, ಟೀಮ್ ಆತ್ರೇಯ ಅವರಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ, ಈ ಕಾರ್ಯಕ್ರಮದ ಚಾಲನೆಯನ್ನು ಬಿ.ವೈ. ರಾಘವೇಂದ್ರ ಸನ್ಮಾನ್ಯ ಸಂಸದರು ಶಿವಮೊಗ್ಗ ನೆರೆವೇರಿಸಲಿದ್ದು,ಮುಖ್ಯ ಅತಿಥಿಗಳಾಗಿ ಹೆಚ್.ಹಾಲಪ್ಪ ಹರತಾಳು ಮಾಜಿ ಸಚಿವರು ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷರು ಭಾಗವಹಿಸಲಿದ್ದಾರೆ.

ದಿನಾಂಕ 14-01-2024ರ ಭಾನುವಾರ ಬೆಳಿಗ್ಗೆ 10.30 ಕ್ಕೆ ಕೃಷಿ ವಿಚಾರಗೋಷ್ಠಿ ನಡೆಯಲಿದ್ದು ವಿಷಯ, ಅಡಿಕೆಯಲ್ಲಿ ಅಂತರ್ ಬೆಳೆ ಮತ್ತು ಅಡಿಕೆ ಎಲೆಚುಕ್ಕಿರೋಗ ನಿರ್ವಹಣೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ವಿಜ್ಞಾನಿಗಳು ಭಾಗವಹಿಸಿ ನೆರವೇರಿಸಲಿದ್ದಾರೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಜೆಸಿ ಮಧುಸೂದನ್ ನಾವಡ ಅಧ್ಯಕ್ಷರು ಹೊಸನಗರ ಜೆಸಿಐ ಡೈಮಂಡ್, ಅರವಿಂದ್ ಎಸ್ ಕಾರ್ಯದರ್ಶಿ ಮತ್ತು ನಿಯೋಜಿತ ಅಧ್ಯಕ್ಷರು ಜೆಸಿಐ ಹೊಸನಗರ ಡೈಮಂಡ್, ಜೆಸಿ ಸಂದೀಪ್, ಎಚ್ ಕಾರ್ಯಕ್ರಮ ನಿರ್ದೇಶಕರು ಮತ್ತು ಜೆಸಿ ವಿನಾಯಕ ಕರಬ ಕಾರ್ಯಕ್ರಮ ನಿರ್ದೇಶಕರು ಮತ್ತು ಸರ್ವ ಸದಸ್ಯರು ಹೊಸನಗರ ಜೆಸಿಐ ಡೈಮೆಂಡ್ ರವರು ಸಾರ್ವಜನಿಕರನ್ನು ಆಹ್ವಾನಿಸುತ್ತಾರೆ ಮತ್ತು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಲು ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!