ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಯ ಕರ್ತವ್ಯ ಲೋಪ, ಪಂಚಾಯತಿ ವತಿಯಿಂದ ಅಳವಡಿಸಿದ ಫ್ಲಕ್ಸ್ ನಲ್ಲಿ ಶಿಷ್ಟಾಚಾರ ಉಲ್ಲಂಘನೆ, ಉಸ್ತುವಾರಿ ಸಚಿವರ ಮತ್ತು ಮುಖ್ಯ ಮಂತ್ರಿ ಹಾಗೂ ಉಪ ಮುಖ್ಯಗಳ ಭಾವಚಿತ್ರಕ್ಕೆ ಸ್ಥಳವಿಲ್ಲ!!

ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಯ ಉದ್ಧಟತನ. ಪಂಚಾಯತಿ ವತಿಯಿಂದ ಅಳವಡಿಸಿದ ಫ್ಲಕ್ಸ್ ನಲ್ಲಿ ಉಸ್ತುವಾರಿ ಸಚಿವರ ಮತ್ತು ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಗಳ ಭಾವಚಿತ್ರಕ್ಕೂ ಸ್ಥಳವಿಲ್ಲ!!

ತೀರ್ಥಹಳ್ಳಿ ಪಟ್ಟಣ ಪಂಚಾಯತಿ ವತಿಯಿಂದ ತೀರ್ಥಹಳ್ಳಿಯ ಪ್ರಸಿದ್ಧ ಎಳ್ಳಮಾವಾಸ್ಯೆ ಮತ್ತು ಮಕರಸಂಕ್ರಾಂತಿ ಹಬ್ಬಕ್ಕೆ ಸಮಸ್ತ ಜನತೆಗೆ ಶುಭಾಶಯವನ್ನು ಕೋರಿ ತೀರ್ಥಹಳ್ಳಿ ಪಟ್ಟಣದಲ್ಲಿ ಪಟ್ಟಣ ಪಂಚಾಯತಿ ವತಿಯಿಂದ ನಗರದ ಮುಖ್ಯ ರಸ್ತೆಯಲ್ಲಿ ಫ್ಲಕ್ಸ್ ಅನ್ನು ಹಾಕಲಾಗಿದ್ದು ಶಿಷ್ಟಾಚಾರದ ( protocol ) ನಿಯಮದಂತೆ
ಪ್ರಮುಖವಾಗಿ ಈ ಫ್ಲಕ್ಸ್ ನಲ್ಲಿ ಹಾಕಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿರವರ ಭಾವಚಿತ್ರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಭಾವಚಿತ್ರಗಳನ್ನು ಹಾಕದೆ ಶಿಷ್ಟಾಚಾರವನ್ನು ಉಲ್ಲಂಘನೆ ಮಾಡಿದ್ದು ಎದ್ದುಕಾಣುತ್ತಿದೆ.

ತೀರ್ಥಹಳ್ಳಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಕುರಿಯಾಕೋಸ್ ಕರ್ತವ್ಯ ಲೋಪ ಎಸಗಿದ್ದು
ಇಂತಹ ಅಧಿಕಾರಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾ ಕಾಂಗ್ರೆಸ್ ಒತ್ತಾಯ ಮಾಡಿದೆ. ಈ ಕೂಡಲೇ ಮಾಡಿದ ತಪ್ಪನ್ನು ಅರಿತು ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ರಾಜ್ಯ ಸರ್ಕಾರದ ಗೌರವಾನ್ವಿತ ಮುಖ್ಯ ಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳ ಭಾವಚಿತ್ರವನ್ನು ಅಳವಡಿಸಿ ಫ್ಲಕ್ಸ್ಅನ್ನು ಹಾಕಬೇಕೆಂದು ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ. ತಪ್ಪನ್ನು ಎಸಗಿರುವ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಜರಗಿಸುವಂತೆ ಜಿಲ್ಲಾ ಕಾಂಗ್ರೆಸ್ ಪಾರ್ಟಿ ಒತ್ತಾಯ ಮಾಡಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!