ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಹೊಸವರ್ಷದ ಶುಭಾಶಯ ಕೋರಿದ ಆರ್ ಎಮ್ ಮಂಜುನಾಥ್ ಗೌಡ

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾದ ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಆರ್ ಎಮ್ ಮಂಜುನಾಥ್ ಗೌಡ

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಹೊಸವರ್ಷದ ಶುಭಾಶಯ ಕೋರಿದ ಆರ್ ಎಮ್ ಮಂಜುನಾಥ್ ಗೌಡರು

ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕಿನ ಅಧ್ಯಕ್ಷರು, ಕೆಪಿಸಿಸಿಯ ಮುಖಂಡರಾದ ಆರ್ ಎಮ್ ಮಂಜುನಾಥ್ ಗೌಡರು ಕರ್ನಾಟಕ ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿಗಳು ಕೆಪಿಸಿಸಿಯ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಹೊಸವರ್ಷದ ಶುಭಾಶಯವನ್ನು ಕೋರಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನೂತನ ಕ್ಯಾಲೆಂಡರ್ ಹಾಗೂ ಡೈರಿಯನ್ನು ನೀಡಿ ಡಿಕೆಶಿ ಅವರ ಮುಂದಿನ ರಾಜಕೀಯದ ಜೀವನ ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ ಎಂದು ಶುಭಹಾರೈಸಿದ್ದಾರೆ.

ಈ ಸಂಧರ್ಭದಲ್ಲಿ ಕಾಂಗ್ರೆಸ್ ಯುವ ನಾಯಕನಾದ ಸುಕೇಶ್ ಕೊಣಂದೂರು ಉಪಸ್ಥಿತಿ ಇದ್ದರು

————————————–

ಬಾಕ್ಸ್ ಆಫೀಸ್ ಸುಲ್ತಾನ್: ಡಿ ಬಾಸ್ ದರ್ಶನ್ “ಕಾಟೇರ” ಚಿತ್ರ ಸ್ಯಾಂಡಲ್ ವುಡ್ ದಾಖಲೆ ಕಲೆಕ್ಷನ್‌

‘ಬಾಕ್ಸ್ ಆಫೀಸ್ ಸುಲ್ತಾನ್’:ಡಿ ಬಾಸ್ ದರ್ಶನ್ ‘ಕಾಟೇರ’ ಚಿತ್ರ ದಾಖಲೆ ಕಲೆಕ್ಷನ್

News.Ashwasurya.in

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಚಲನಚಿತ್ರ ಬಿಡುಗಡೆಯಾದಲ್ಲೆಲ್ಲ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕನ್ನಡ ಚಿತ್ರರಂಗದಲ್ಲೇ ಮೊಟ್ಟ ಮೊದಲ ಬಾರಿಗೆ ಮೂರು ದಿನಗಳಲ್ಲಿ 75 ಕೋಟಿ ರೂ. ಕ್ಲಬ್ ಸೇರಿದ ಮೊದಲ ನಾನ್ ಪ್ಯಾನ್ ಇಂಡಿಯಾ ಸಿನಿಮಾ ‘ಕಾಟೇರ’ ಚಿತ್ರ ದಾಖಲೆ ನಿರ್ಮಿಸಿದೆ.


ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಂಡ ‘ಕಾಟೇರ’ ಹಿಂದಿನ ಚಿತ್ರಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಗಳನ್ನೆಲ್ಲಾ ಧೂಳಿಪಟ ಮಾಡುತ್ತಿದೆ. ರಾಜ್ಯದೆಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಯಶಸ್ಸಿಗೆ ಕಾರಣರಾದ ಅಭಿಮಾನಿಗಳು, ಸಿನಿರಸಿಕರಿಗೆ ಚಿತ್ರತಂಡ ಕೃತಜ್ಞತೆ ಸಲ್ಲಿಸಿದೆ.
ಮೊದಲ ದಿನವೇ 20 ಕೋಟಿ ರೂ. ಕಲೆಕ್ಷನ್ ಮಾಡಿದ್ದ ‘ಕಾಟೇರ’ ಎರಡನೇ ದಿನ 17.13 ಕೋಟಿ ರೂ., ಮೂರನೇ ದಿನ 20 ಕೋಟಿ ರೂ., 4ನೇ ದಿನ 19 ಕೋಟಿ ರೂ. ಗಳಿಕೆ ಕಂಡಿದೆ. ಚಿತ್ರದಲ್ಲಿ ದರ್ಶನ್ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕನ್ನಡ ಚಿತ್ರರಂಗದಲ್ಲೇ ಮೊಟ್ಟ ಮೊದಲ ಬಾರಿಗೆ ಮೂರು ದಿನಗಳಲ್ಲಿ 75 ಕೋಟಿ ಕ್ಲಬ್ ಸೇರಿದ ಮೊದಲ ನಾನ್ ಪ್ಯಾನ್ ಇಂಡಿಯಾ ಸಿನಿಮಾ ನಮ್ಮ ಕಾಟೇರ. ನಿಮ್ಮ ಸಹಕಾರ & ಬೆಂಬಲದೊಂದಿಗೆ ಹೊಸ ದಾಖಲೆ ನಿರ್ಮಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ನಿಮ್ಮೆಲ್ಲರ ಸಹಕಾರಕ್ಕೆ ಚಿತ್ರ ತಂಡ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!