ಹಂತಕನಿಂದ ಬರ್ಬರವಾಗಿ ಹತ್ಯೆಯಾದವರು
ಘಟನೆ ನೆಡದ ಮನೆಯನ್ನು ಪರಿಶಿಲಿಸುತ್ತಿರುವ ಪೋಲಿಸರ ತಂಡ
ತಾಯಿ ಮುದ್ದಾದ ಮೂವರು ಮಕ್ಕಳನ್ನು ಇರಿದು ಕೊಂದ ದುಷ್ಕರ್ಮಿ : ಓರ್ವ ಮಹಿಳೆಗೆ ಗಂಭೀರ ಗಾಯ
news.ashwasurya.in
ಉಡುಪಿ: ಹಾಡಹಗಲೇ ತಾಯಿ ಮತ್ತು ಆಕೆಯ ಮೂವರು ಮಕ್ಕಳನ್ನು ಬರ್ಬರವಾಗಿ ಕೊಲೆಮಾಡಿದ ಪ್ರಕರಣವೊಂದು ಮಲ್ಪೆ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ನೆಡೆದಿದೆ.!! ಇಲ್ಲಿಯ ನೇಜಾರು-ಕೆಮ್ಮಣ್ಣು ರಸ್ತೆಯಲ್ಲಿರುವ ತೃಪ್ತಿ ಲೇ ಔಟಿನ ಮನೆಯೊಂದರಲ್ಲಿ ನವೆಂಬರ್12ರ ಬೆಳಗ್ಗೆ 9 ಗಂಟೆಯ ಅಸುಪಾಸಿಗೆ ಈ ಘನಘೋರ ಕೃತ್ಯ ನಡೆದಿದೆ. ಈ ಬರ್ಬರ ಹತ್ಯೆಯ ಸುದ್ದಿ ಕೇಳಿ ಸಂಪೂರ್ಣ ಕರಾವಳಿಯೆ ಬೆಚ್ಚಿ ಬಿದ್ದಿದೆ.ಮಲ್ಪೆಯ
ನೇಜಾರು ತೃಪ್ತಿ ಲೇಔಟಿನಲ್ಲಿರುವ ದೂರದ ದುಬೈನಲ್ಲಿರುವ ನೂರ್ ಮುಹಮ್ಮದ್ ಎಂಬವರ ಪತ್ನಿ ಹಸೀನಾ (48) ಹಾಗೂ ಅವರ ಪುತ್ರಿಯರಾದ ಆಫ್ನಾನ್ (23) ಮತ್ತು ಅಯ್ನಾಝ್ (21) ಹಾಗೂ ಮತ್ತೊಬ್ಬ ಪುತ್ರ ಅಸೀಮ್(13) ದುಷ್ಕರ್ಮಿಯ ಕೈಯಿಂದ ಕೊಲೆಯಾದವರು.ಇನ್ನೂ ಹಂತಕನ ಕೈಯಿಂದ ಇರಿತಕ್ಕೆ ಒಳಗಾಗಿದ್ದರು ಸಾವು ಬದುಕಿನೊಡನೆ ಆಸ್ಪತ್ರೆಗೆ ಹಾಸಿಗೆಯ ಮೇಲೆ ಎದೆ ಉಸಿರು ಬಿಡುತ್ತಿರುವ ಹಸೀನಾರ ಅತ್ತೆ ಹಾಜಿರಾ(70) ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊದಲೆ ಸ್ಕೆಚ್ ಹಾಕಿಕೊಂಡಿದ್ದ ಹಂತಕ ಎಲ್ಲವನ್ನೂ ಅಂದುಕೊಂಡಂತೆ
ಮಾಸ್ಕ್ ಧರಿಸಿಕೊಂಡು ಆಟೊ ರಿಕ್ಷಾ ಒಂದರಲ್ಲಿ ಹಸಿನಾ ಅವರ ಮನೆಯ ಬಳಿಗೆ ದುಷ್ಕರ್ಮಿ ಬಂದಿದ್ದಾನೆ ಬಂದವನು ಸೀದಾ ಮನೆಯೊಳಗೆ ಪ್ರವೇಶಿಸಿ ಮನೆಯಲ್ಲಿ ಇದ್ದವರನ್ನೇಲ್ಲ ಒಬ್ಬೊಬ್ಬರನ್ನಾಗಿ ಒಂದೇ ರೀತಿಯಲ್ಲಿ ಚೂರಿಯಿಂದ ಇರಿದು ಹತ್ಯೆಗೈದು ಮಂತೊಂದು ಆಟೋದಲ್ಲಿ ಕಣ್ಮರೆಯಾಗಿದ್ದಾನೆ.
ಹಂತಕನ ಕೃತ್ಯದಿಂದ ಅಡುಗೆಕೋಣೆಯ ಸಮೀಪ ಹಸೀನಾ, ಬೆಡ್ ರೂಮಿನಲ್ಲಿ ಆಫ್ನಾನ್, ಬಾತ್ ರೂಮಿನ ಬಳಿ ಅಯ್ನಾಝ್, ಹಾಲ್ನಲ್ಲಿ ಅಸೀಮ್ ಮೃತದೇಹವು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಮನೆಯೊಳಗೆ ಬೊಬ್ಬೆ ಕೇಳಿ ಅಲ್ಲೇ ಪಕ್ಕದಲ್ಲಿರುವ ಹಸೀನಾರ ಅಣ್ಣನ ಮಗಳು ಓಡಿ ಬಂದಿದ್ದು ಅಷ್ಟೋತ್ತಿಗಾಗಲೆ ಹಂತಕ ಅಲ್ಲಿಂದ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.
ಇವರದು ಸುಂದರ ಕುಟುಂಬ
ನೂರ್ ಮುಹಮ್ಮದ್ ಹೈಕಾಡಿ ಮೂಲದವರಾಗಿದ್ದರೆ, ಹಸೀನಾ ಕೂಡ ಅಲ್ಲೆ ಹತ್ತಿರದ ಕೋಡಿ ಬೆಂಗ್ರೆಯವರು. ಗಂಡ ಹೆಂಡತಿ ಕಳೆದ 15 ವರ್ಷಗಳ ಹಿಂದೆ ನೇಜಾರು – ಕೆಮ್ಮಣ್ಣು ರಸ್ತೆಯ ತೃಪ್ತಿ ಲೇಔಟ್ನಲ್ಲಿ ಜಾಗ ಖರೀದಿಸಿ ಮನೆ ನಿರ್ಮಿಸಿಕೊಂಡು ವಾಸವಾಗಿದ್ದರು. ನೂರ್ ಮುಹಮ್ಮದ್ ಕಳೆದ 35 ವರ್ಷಗಳಿಂದ ಸೌದಿ ಅರೇಬಿಯದಲ್ಲಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಇವರಿಗೆ ಮುದ್ದಾದ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು. ಇವರಲ್ಲಿ ಆಫ್ನಾನ್ ಮಂಗಳೂರಿನಲ್ಲಿ ಲಾಜಿಸ್ಟಿಕ್ ಆಗಿದ್ದು, ಅಯ್ನಾಝ್ ಮಂಗಳೂರು ಏರ್ ಇಂಡಿಯಾದಲ್ಲಿ ಗಗನ ಸಖಿಯಾಗಿದ್ದರು. ಅಸೀಮ್ ಬ್ರಹ್ಮಾವರ ಜಿಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದನಂತೆ. ಇವರ ಹಿರಿಯ ಪುತ್ರ ಅಸದ್ (25) ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಂಸ್ಥೆಯಲ್ಲಿ ಗ್ರೌಂಡ್ ಸ್ಟಾಫ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಇಡೀ ಕುಟುಂಬ ತಂದೆಯೊಂದಿಗೆ ಸೌದಿಯಲ್ಲಿ ಕೆಲವು ವರ್ಷಗಳ ಕಾಲ ಇದ್ದರಂತೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಕೊಲೆಗಾರ ಹಸಿನಾ ಮನೆಗೆ ಆಟೊದಲ್ಲಿ ಹೋಗಿದ್ದ!!
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸಂತೆಕಟ್ಟೆಯ ರಿಕ್ಷಾ ನಿಲ್ದಾಣದಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿರುವ ಹಸಿನಾ ಮನೆ ಇರುವ ತೃಪ್ತಿ ಲೇಔಟ್ಗೆ ಆಟೊ ರಿಕ್ಷಾ ಒಂದರಲ್ಲಿ ಬಂದ ಹಂತಕ ಕೇವಲ ಹತ್ತರಿಂದ ಹದಿನೈದು ನಿಮಿಷದಲ್ಲಿ ನಾಲ್ಕು ಜನರ ಕೊಲೆ ಗೈದು ಪರಾರಿಯಾಗಿದ್ದಾನೆ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ನಾಲ್ಕು ಜನರ ಜೀವತೆಗೆದು ಕೆಮ್ಮಣ್ಣು- ನೇಜಾರು ರಸ್ತೆಗೆ ಬಂದ ಹಂತಕ ದಾರಿಯಲ್ಲಿ ಹೋಗುವ ಅನಾಮಧೇಯ ಬೈಕೊಂದನ್ನು ನಿಲ್ಲಿಸಿ ಅವರಿಂದ ಡ್ರಾಪ್ ತೆಗೆದುಕೊಂಡು ಸಂತೆಕಟ್ಟೆಗೆ ಹೋಗಿದ್ದಾನೆ. ಅಲ್ಲಿಂದ ಮತ್ತೊಂದು ರಿಕ್ಷಾದಲ್ಲಿ ಉಡುಪಿಯ ಕರಾವಳಿ ಬೈಪಾಸ್ ಬಂದಿದ್ದಾನೆ. ಅಲ್ಲಿಂದ ಸಿದಾ ಉಡುಪಿ ಕಡೆಗೆ ಹೋಗಿ ನಂತರ ರಾಷ್ಟ್ರೀಯ ಹೆದ್ದಾರಿ ಕಡೆ ತೆರಳಿರುವುದು ಕೇಲವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆಯಂತೆ. ಹಂತಕ ಮಾಸ್ಕ್ ದರಿಸಿದ್ದಾನೆ ಬೆನ್ನ ಹಿಂದೆ ಬ್ಯಾಗ್ ಹಾಕಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಯಾವ ಕಾರಣಕ್ಕೆ ಈ ನಾಲ್ವರನ್ನು ಹತ್ಯೆ ಮಾಡಲಾಗಿದೆ ಎನ್ನುವುದು ಮಾತ್ತ ಇನ್ನೂ ನಿಗೂಢವಾಗಿದೆ. ಈ ನಡುವೆ ಹಣಕಾಸಿನ ವಿಚಾರ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ ಪೊಲೀಸ್ ತನಿಖೆಯಿಂದಷ್ಟೇ ನೈಜ ಕಾರಣ ಬಯಲಿಗೆ ಬರಬೇಕಾಗಿದೆ.
ತಂದೆ ನೂರ್ ಮುಹಮ್ಮದ್ ಪುತ್ರ ಅಸದ್ ಮನೆಯವರನ್ನು ಕಳೆದುಕೊಂಡ ದುಃಖದಲ್ಲಿ
ನಾಲ್ವರ ಬರ್ಬರ ಹತ್ಯಾ ಪ್ರಕರಣ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಆಫ್ನಾನ್ ಮತ್ತು ಅಯ್ನಾಝ್ ಒಂದೇ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದರು. ರಜೆಯ ಹಿನ್ನೆಲೆಯಲ್ಲಿ ಇವರು ಶನಿವಾರ ರಾತ್ರಿ ಮಂಗಳೂರಿನಿಂದ ಮನೆಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಅಯ್ನಾಝ್ ಕೆಲ ತಿಂಗಳ ಹಿಂದೆಯಷ್ಟೇ ಗಗನಸಖಿ ಕೆಲಸಕ್ಕೆ ಸೇರಿಕೊಂಡಿದ್ದರು.ಎಂದು ಮೂಲಗಳು ತಿಳಿಸಿವೆ.
ಘಟನ ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಪರಿಶೀಲನೆ ನಡೆಸಿದರು. ಬಳಿಕ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು, ಮಂಗಳೂರು ಮತ್ತು ಮಣಿಪಾಲ ಕೆಎಂಸಿಯ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಆಗಮಿಸಿ ತನಿಖೆ ನಡೆಸಿದೆ. ಸ್ಥಳದಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ದಲಿಂಗಪ್ಪ, ಡಿವೈಎಸ್ಪಿ ಕೆ.ಪಿ.ದಿನಕರ್, ಪ್ರಕರಣದ ತನಿಖಾಧಿಕಾರಿ ಮಲ್ಪೆ ವೃತ್ತ ನಿರೀಕ್ಷಕ ಮಂಜುನಾಥ್, ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಮೊದಲಾದವರು ಹಾಜರಿದ್ದರು.
ನಾಲ್ವರಹತ್ಯೆಯ ಹಿನ್ನೆಲೆಯಲ್ಲಿ ಪೊಲೀಸರು ಬೆಳಗ್ಗೆ 10 ಗಂಟೆರ ಸುಮಾರಿಗೆ ಮೃತದೇಹಗಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸಾಗಿಸಿ ರಾತ್ರಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಬೆಂಗಳೂರಿನಲ್ಲಿದ್ದ ಮಗ ಅಸದ್ ಮಣಿಪಾಲ ಆಸ್ಪತ್ರೆಗೆ ಆಗಮಿಸಿದ್ದರು. ನೂರು ಮುಹಮ್ಮದ್ ಸೌದಿಯಿಂದ ಉಡುಪಿಗೆ ಆಗಮಿಸಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಇನ್ನೂ ಈ ಪ್ರಕರಣದ ತನಿಖೆಗೆ ಮುಂದಾಗಿರುವ ಉಡುಪಿ ಜಿಲ್ಲಾ ಪೋಲಿಸ್ ಇಲಾಖೆಯ ಅಧೀಕ್ಷಕರು
ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಪೊಲೀಸ್ ವಿಶೇಷ ತಂಡಗಳನ್ನು ರಚಿಸಲಾಗಿದ್ದು ಈ ತಂಡಗಳು ಈಗಾಗಲೇ ತನಿಖೆ ಕೈಗೊಂಡಿದ್ದು ಶೀಘ್ರದಲ್ಲೇ ಹಂತಕನ ಜಾಡು ಹಿಡಿದು ಬಂದಿಸುವ ತಯಾರಿ ಮಾಡಿಕೊಂಡಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದ್ದು, ಶೀಘ್ರವೇ ಆರೋಪಿಯನ್ನು ಪತ್ತೆ ಮಾಡಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದರು. ಈ ಕೃತ್ಯವು ಕಳ್ಳತನದ ಉದ್ದೇಶದಿಂದ ನಡೆದಂತೆ ಕಾಣುತ್ತಿಲ್ಲ. ಪ್ರಾಥಮಿಕ ತನಿಖೆಯ ವೇಳೆ ಮನೆಯಿಂದ ಚಿನ್ನಾಭರಣ ಸೇರಿದಂತೆ ಯಾವುದೇ ವಸ್ತು ಕಳವಾಗಿರುವುದು ಕಂಡುಬಂದಿಲ್ಲ. ದುಷ್ಕರ್ಮಿ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಎಸ್ಪಿ ಮಾಹಿತಿ ನೀಡಿದರು.
ಹಂತಕ ಕನ್ನಡ ಮಾತನಾಡುತ್ತಿದ್ದ ರಿಕ್ಷಾ ಚಾಲಕನಿಂದ ಮಾಹಿತಿ
ಬೆಳಗ್ಗೆ 8:30ರ ಸುಮಾರಿಗೆ ಮಾಸ್ಕ್ ಧರಿಸಿದ್ದ ವ್ಯಕ್ತಿಯೊಬ್ಬ ರಿಕ್ಷಾ ನಿಲ್ದಾಣಕ್ಕೆ ಬಂದು ತೃಪ್ತಿ ಲೇಔಟ್ ಬಿಡುವಂತೆ ತಿಳಿಸಿದ. ಅದರಂತೆ ಆತನನ್ನು ರಿಕ್ಷಾದಲ್ಲಿ ಬಾಡಿಗೆಗೆ ಕರೆದು ಹೋಗಿದ್ದೆ. ಅಲ್ಲಿ ದಾರಿ ತಪ್ಪಿ ನಾನು ಸ್ವಲ್ಪ ಮುಂದೆ ಹೋದೆ. ಆಗ ಆ ವ್ಯಕ್ತಿಯೇ ದಾರಿಯನ್ನು ತೋರಿಸಿ ಮನೆಯ ಎದುರೇ ಬಿಡುವಂತೆ ಹೇಳಿ ನನ್ನನ್ನು ಕಳುಹಿಸಿದ ಎಂದು ಸಂತೆಕಟ್ಟೆಯ ರಿಕ್ಷಾ ಚಾಲಕ ಶ್ಯಾಮ್ ನೇಜಾರು ಮಾಹಿತಿ ನೀಡಿದ್ದಾರೆ.
ಸುಮಾರು 20 ನಿಮಿಷಗಳ ಬಳಿಕ ಮತ್ತೆ ರಿಕ್ಷಾ ನಿಲ್ದಾಣಕ್ಕೆ ಆಗಮಿಸಿದ ಅದೇ ವ್ಯಕ್ತಿ, ಸರತಿ ಸಾಲಿನಲ್ಲಿ ನಿಂತ ಎದುರಿನ ರಿಕ್ಷಾದಲ್ಲಿ ಕುಳಿತು ಉಡುಪಿಗೆ ಬಿಡುವಂತೆ ತಿಳಿಸಿದ್ದನು. ಆಗ ನಾನು ಆತನ ಬಳಿ ಹೋಗಿ ‘ನೀವು ಮೊದಲೇ ಹೇಳುತ್ತಿದ್ದರೆ ನಾನು ಅಲ್ಲಿಯೇ ಕಾಯುತ್ತಿದ್ದೆ’ ಎಂದು ತಿಳಿಸಿದೆ. ಅದಕ್ಕೆ ಆತ ಸರಿಯಾದ ಉತ್ತರ ನೀಡಲಿಲ್ಲ. ಬಳಿಕ ಇನ್ನೊಬ್ಬರ ರಿಕ್ಷಾದಲ್ಲಿ ಉಡುಪಿ ಕಡೆ ಹೋಗಿದ್ದಾನೆ’ ಎಂದು ಶ್ಯಾಮ್ ತಿಳಿಸಿದರು. ಇನ್ನೊಬ್ಬರ ರಿಕ್ಷಾದಲ್ಲಿ ಉಡುಪಿಗೆ ಹೋಗುವಾಗ ಆತ ತುಂಬಾ ವೇಗವಾಗಿ ಹೋಗುವಂತೆಯೂ ತಿಳಿಸಿದ್ದಾನೆ. ತುಂಬಾ ಬಿಳಿಯಾಗಿದ್ದ ಆತ, ಮುಖಕ್ಕೆ ಮಾಸ್ಕ್ ಹಾಕಿದ್ದ! ಬೆಂಗಳೂರು ಶೈಲಿಯಲ್ಲಿ ಕನ್ನಡದಲ್ಲಿ ಮಾತನಾಡುತ್ತಿದ್ದ. ಬೆನ್ನಿನಲ್ಲಿ ಬ್ಯಾಗ್ ಇತ್ತು. ಆತ ಧರಿಸಿದ್ದ ಶರ್ಟ್ನಿಂದ ನಿಲ್ದಾಣದಲ್ಲಿ ಆತನನ್ನು ಗುರುತು ಹಿಡಿದೆ ಎಂದು ಅವರು ಹೇಳಿದರು.
ಶೌಚಾಲಯದಲ್ಲಿ ಬಾಗಿಲು ಹಾಕಿಕೊಂಡು ಜೀವ ಉಳಿಸಿಕೊಂಡ ಹಾಜಿರಾ!
ನಾಲ್ವರ ಬರ್ಬರ ಹತ್ಯೆ ಸಂದರ್ಭ ಮನೆಯಲ್ಲಿದ್ದ ಮೃತ ಹಸೀನಾರ ಅತ್ತೆ ( 70 )ವರ್ಷದ ಹಾಜಿರಾ ಹಂತಕನ ಆಕ್ರಮಣದಿಂದ ತಪ್ಪಿಸಿಕೊಂಡು ಶೌಚಾಲಯದೊಳಗೆ ತೆರಳಿ ಬಾಗಿಲು ಹಾಕಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಹಂತಕನ ಜೊತೆ ಕೊಲೆಯಾದವರೆಲ್ಲ ಸಾಕಷ್ಟು ಹೋರಾಡಿರುವ ಕುರುಹುಗಳು ಕಂಡುಬಂದಿವೆ. ಇದೇ ವೇಳೆ ಆತ ಹಾಜಿರಾ ಅವರ ಹೊಟ್ಟೆಯ ಭಾಗಕ್ಕೂ ಹರಿತವಾದ ಆಯುಧದಿಂದ ಇರಿದಿದ್ದನು. ಗಾಯಗೊಂಡ ಅವರು ದುಷ್ಕರ್ಮಿಯ ಕೈಯಿಂದ ತಪ್ಪಿಸಿಕೊಂಡು ಮನೆಯ ಶೌಚಾಲಯದೊಳಗೆ ತೆರಳಿ ಬಾಗಿಲು ಮುಚ್ಚಿ ಚಿಲಕ ಹಾಕಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯೊಳಗೆ ತನಿಖೆ ನಡೆಸುತ್ತಿದ್ದ ವೇಳೆ ಒಳಗಡೆಯಿಂದ ಬಾಗಿಲು ಮುಚ್ಚಿರುವ ಶೌಚಾಲಯವನ್ನು ಗಮನಿಸಿದ್ದಾರೆ. ಈ ವೇಳೆ ಬಾಗಿಲು ತೆರೆಯುವಂತೆ ಪೊಲೀಸರು ಮನವಿ ಮಾಡಿದಾಗ ಹೆದರಿದ್ದ ಹಾಜಿರಾ ಬಾಗಿಲು ತೆರೆಯಲು ಧೈರ್ಯ ತೋರಲಿಲ್ಲ. ಕೊನೆಗೆ ಬಾಗಿಲು ಮುರಿದು ಹಾಜಿರಾರನ್ನು ರಕ್ಷಿಸಿದ ಪೊಲೀಸರು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹೊಟ್ಟೆಯ ಎಡಭಾಗಕ್ಕೆ ಇರಿತಕ್ಕೊಳಗಾಗಿರುವ ಹಾಜಿರಾ ತೀವ್ರವಾಗಿ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೀಪಾವಳಿ ಹಿನ್ನಲೆ ಶಾಲೆಗೆ ರಜೆಯಿದ್ದ ಕಾರಣ ಅಸೀಮ್ ಹತ್ಯೆಯಾದ ದಿನ ಬೆಳಗ್ಗೆ ಎದ್ದು ಮನೆಯ ಎದುರಿನ ರಸ್ತೆಯಲ್ಲಿ ತನ್ನ ನೆರೆಮನೆಯ ಸಂಬಂಧಿಕರ ಮಕ್ಕಳು ಹಾಗೂ ಸ್ನೇಹಿತರ ಜೊತೆ ಸೈಕಲ್ನಲ್ಲಿ ಆಟ ಆಡುತ್ತಿದ್ದನು. ಈ ವೇಳೆ ಮನೆಯೊಳಗೆ ಬೊಬ್ಬೆ ಕೇಳಿತ್ತೆನ್ನಲಾಗಿದೆ. ಆಗ ಆತ ಮನೆಯಂಗಳದಲ್ಲೇ ಸೈಕಲ್ ತೊರೆದು ಒಳಗೆ ಓಡಿದ್ದಾನೆ ಎಂದು ತಿಳಿದು ಬಂದಿದೆ. ಒಳಗೆ ಮೂವರನ್ನು ಹತ್ಯೆಗೈದು ಬರುತ್ತಿದ್ದ ಹಂತಕ, ಹಾಲ್ನಲ್ಲಿ ಒಳಗೆ ಬರುತ್ತಿದ್ದ ಆಸೀಮ್ನನ್ನು ಹಿಡಿದು, ಎದೆ ಹಾಗೂ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದೂರವಾಣಿ ಮೂಲಕ ಗೃಹ ಸಚಿವರಿಂದ ನೊಂದ ಕುಟುಂಬದವರಿಗೆ ಸಾಂತ್ವನ.ಆರೋಪಿಯನ್ನು ಶೀಘ್ರವೇ ಬಂಧಿಸುವುದಾಗಿ ಭರವಸೆ .
ತಾಯಿ, ಮಕ್ಕಳ ಹತ್ಯೆ ಪ್ರಕರಣದ ಆರೋಪಿಯನ್ನು ಎರಡು ದಿನಗಳಲ್ಲಿ ಬಂಧಿಸುವುದಾಗಿ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ದೂರವಾಣಿ ಮೂಲಕ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.
ಗೃಹ ಸಚಿವರು ಮನೆ ಯಜಮಾನ ನೂರ್ ಮುಹಮ್ಮದ್ ಜೊತೆ ಇಂದು ದೂರವಾಣಿಯಲ್ಲಿ ಮಾತನಾಡಿದರು. ನೀವು ನಮಗೆ ಕರೆ ಮಾಡಿ ಸಾಂತ್ವಾನ ಹಾಗೂ ಭರವಸೆ ನೀಡಿದಕ್ಕೆ ನಿಮಗೆ ಕೃತಜ್ಞತೆಗಳು. ಈ ಪ್ರಕರಣವನ್ನು ಅತೀ ಶೀಘ್ರವಾಗಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಬೇಕು ಎಂದು ನೂರ್ ಮುಹಮ್ಮದ್ ಗೃಹ ಸಚಿವರಲ್ಲಿ ಮನವಿ ಮಾಡಿದ್ದಾರೆ.
ತಾಯಿ, ಮಕ್ಕಳ ಬರ್ಬರ ಹತ್ಯರ ; ಸ್ಥಳಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸ್ಪೀಕರ್ ಯು.ಟಿ. ಖಾದರ್
ಉಡುಪಿ ಜಿಲ್ಲೆಯ ಸಂತೆಕಟ್ಟೆ ನೇಜಾರು ಎಂಬಲ್ಲಿ ಒಂದೇ ಕುಟುಂಬದ ನಾಲ್ವರನ್ನು ದುಷ್ಕರ್ಮಿಯೋರ್ವ ಬರ್ಬರವಾಗಿ ಹತ್ಯೆಗೈದ ಘಟನೆಯಿಂದ ಇಡೀ ರಾಜ್ಯ ಬೆಚ್ಚಿ ಬಿದ್ದಿದ್ದು, ಸ್ಥಳಕ್ಕೆ ತೆರಳಿದ ಸ್ಪೀಕರ್ ಯು.ಟಿ. ಖಾದರ್ ಅವರು ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತುಕತೆ ನಡೆಸಿದ್ದು, ಆದಷ್ಟು ಬೇಗನೇ ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕೆಂದು ಸೂಚನೆ ನೀಡಿದ್ದೇನೆ ಎಂದು ಯು.ಟಿ. ಖಾದರ್ ಅವರು ಮಾಹಿತಿ ನೀಡಿದರು.
ಸುಧೀರ್ ವಿಧಾತ , ಶಿವಮೊಗ್ಗ
9483165999