ರೈಲ್ವೇ ನಿಲ್ದಾಣದಲ್ಲಿ ಸಿಕ್ಕ ಪೆಟ್ಟಿಗೆಗಳಿಗೆ ಮೇಜರ್ ಟ್ವಿಸ್ಟ್; ಪೆಟ್ಟಿಗೆಯಲ್ಲಿ ಇದ್ದದ್ದು ಬಾಂಬ್ ಅಲ್ಲ, ಕೋಟಿ ಹಣದ ರೂಪದ ಉಪ್ಪು!!

ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟನೆ

2021 ನೇ ಇಸವಿಯಲ್ಲಿ ಇದೆ ರೀತಿಯ ಘಟನೆಯೊಂದು ತಿಪಟೂರಿನಲ್ಲಿ ನೆಡೆದಿತ್ತು ( 11/10/2021 ರಲ್ಲಿ )

ರೈಲ್ವೇ ನಿಲ್ದಾಣದಲ್ಲಿ ಸಿಕ್ಕ ಪೆಟ್ಟಿಗೆಗಳಿಗೆ ಮೇಜರ್ ಟ್ವಿಸ್ಟ್; ಪೆಟ್ಟಿಗೆಯಲ್ಲಿ ಇದ್ದದ್ದು ಬಾಂಬ್ ಅಲ್ಲ, ಕೋಟಿ ಹಣದ ರೂಪದ ಉಪ್ಪು!!

ಶಿವಮೊಗ್ಗ: ಇಲ್ಲಿನ ರೈಲ್ವೇ ನಿಲ್ದಾಣದಲ್ಲಿ ಇತ್ತೀಚೆಗೆ ಅನುಮಾನಾಸ್ಪದವಾಗಿ ಎರಡು ಪೆಟ್ಟಿಗೆಗಳು ಪತ್ತೆಯಾಗಿದ್ದವು ಈ ವಿಚಾರ ಕೇಳಿದ ಶಿವಮೊಗ್ಗ ನಗರದ ಜನತೆ‌ ಬೆಚ್ಚಿಬಿದ್ದಿದ್ದರು ಈ ಪ್ರಕರಣಕ್ಕೆ ಸಂಭಂದಿಸಿದಂತೆ ಮೇಜರ್ ಟ್ವಿಸ್ಟ್ ದೊರೆತಿದ್ದೆ!?

ಈ ಪ್ರಕರಣದ ರೂವಾರಿಗಳಾದ ಇಬ್ಬರು ನಟೋರಿಯಸ್ ವ್ಯಕ್ತಿಗಳು ಹಣ ಕೊಡಿಸುತ್ತೇವೆಂದು ನಂಬಿಸಿ ಮಾಡಿದ ಕೃತ್ಯ ಇದೆಂದು ಇದೀಗ ಬೆಳಕಿಗೆ ಬಂದಿದೆ.

ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೊನ್ನೆ ದಿನ ರೈಲ್ವೆ ನಿಲ್ದಾಣದಲ್ಲಿ ಎರಡು ಪೆಟ್ಟಿಗೆ ಸಿಕ್ಕಿತ್ತು.  ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಪೋಲಿಸರ ತಂಡ ತನಿಖೆಯನ್ನು ಚುರುಕುಗೊಳಿಸಿ ಘಟನೆಗೆ ಸಂಬಂಧಿಸಿದಂತೆ ಜಬಿವುಲ್ಲ ಹಾಗೂ ಬಾಬಾ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಈ ಇಬ್ಬರು ಆರೋಪಿತರು ಕಡಿಮೆ ಬಡ್ಡಿದರದಲ್ಲಿ ಹಣ ಕೊಡಿಸುತ್ತೇವೆಂದು ನಂಬಿಸುತ್ತಿದ್ದರಂತೆ.
ಜಬಿವುಲ್ಲಾ ಮತ್ತು ಬಾಬಾ ಗೋವಾದ ರಾಜೇಶ್ ಜಾಧವ್ ಮತ್ತು ತಿಪಟೂರಿನ ಗಿರೀಶ್ ಎಂಬವರಿಗೆ ದುಡ್ಡು ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದಾರೆ. ಜೋತೆಗೆ ವಂಚಿತರಿಂದ ಬ್ಲಾಂಕ್ ಚೆಕ್ ಗಳನ್ನು ಸಹ ಪಡೆದುಕೊಂಡಿದ್ದ ಆರೋಪಿಗಳು ಒಂದೊಂದು ಪೆಟ್ಟಿಗೆಯಲ್ಲಿ ಒಂದೊಂದು ಕೋಟಿ ಹಣ ಇರಿಸಿದ್ದಾಗಿ ನಂಬಿಸಿದ್ದರಂತೆ.!! ಗೋವಾಕ್ಕೆ ನಾವು ಬರಲು ಕಷ್ಟವಾಗುತ್ತದೆ, ನೀವೇ ಶಿವಮೊಗ್ಗಕ್ಕೆ ಬನ್ನಿ ಎಂದು ರಾಜೇಶ್ ಜಾದವ್ ನನ್ನು ಕರೆಸಿದ್ದಾರೆ. ಗೀರಿಶ್ ಹಾಗೂ ರಾಜೇಶ್ ಜಾದವ್ ಶಿವಮೊಗ್ಗ ರೈಲು ನಿಲ್ದಾಣಕ್ಕೆ ಬರುವುದು ತಡವಾಗಿದಕ್ಕೆ ಪೆಟ್ಟಿಗೆಗಳನ್ನು ನಿಲ್ದಾಣದಲ್ಲೆ ಇಟ್ಟು ಹೋಗಿದ್ದಾರೆ.

ಸ್ಟೀಲ್ ಪೆಟ್ಟಿಗೆಯಲ್ಲಿ ಉಪ್ಪು ಹಾಕಿಟ್ಟು ಎರಡು ಕೋಟಿ ಹಣ ಇದೆ ಎಂದು ನಂಬಿಸಿಲು ಮುಂದಾಗಿದ್ದರು. ಪೆಟ್ಟಿಗೆಗೆ ಸುತ್ತಲು ಗೋಣಿ ಚೀಲವನ್ನು ಮುಳುಬಾಗಿಲಿನಲ್ಲಿ ಖರೀದಿಸಿದ್ದಾರೆ.
ಈ ಪ್ರಕರಣದಲ್ಲಿ ಬಾಬಾ ಎ1 ಆರೋಪಿ‌ ಆಗಿದ್ದಾನೆ. 2021ರಲ್ಲಿ ತಿಪಟೂರಿನಲ್ಲಿ ಡಾಕ್ಟರ್ ಒಬ್ಬರಿಗೆ ಇದೆ ರೀತಿ ಮೋಸ ಮಾಡಿದ್ದಾರೆ ಈ ವಂಚಕರು ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಸುಧೀರ್ ವಿಧಾತ ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!