CRIME NEWS: ಕೋಲಾರದಲ್ಲಿ 17 ವರ್ಷದ ಬಾಲಕನ ಕೊಲೆ ಕೇಸ್ ಪ್ರಕರಣ 8 ಮಂದಿ ಆರೋಪಿಗಳ ಬಂಧನ. ಮೂರು ಮಂದಿ ಪೋಲಿಸರು ಸಸ್ಪೇಂಡ್!

CRIME NEWS: ಕೋಲಾರದಲ್ಲಿ 17 ವರ್ಷದ ಬಾಲಕನ ಕೊಲೆ ಕೇಸ್ ಪ್ರಕರಣ 8 ಮಂದಿ ಆರೋಪಿಗಳ ಬಂಧನ. ಮೂರು ಮಂದಿ ಪೋಲಿಸರು ಸಸ್ಪೇಂಡ್!!

ಕೋಲಾರ ಜಿಲ್ಲೆಯ ಪೆಚ್ಚಮನಹಳ್ಳಿ ಬಡಾವಣೆಯಲ್ಲಿ ನವೆಂಬರ್ 3 ರಂದು ನಡೆದ ಹದಿನೇಳು ವರ್ಷ ವಯಸ್ಸಿನ ಹುಡುಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿಯನ್ನು ಕೋಲಾರ ನಗರ ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ದಿಲೀಪ್ ಅಲಿಯಾಸ್ ಶೈನ್ ಸೇರಿದಂತೆ ಎಲ್ಲಾ ಎಂಟು ಆರೋಪಿಗಳು ಬಾಲಾಪರಾಧಿಗಳು. ಪ್ರಕರಣದ ಇನ್ನೋರ್ವ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳು ಕೊಲೆಮಾಡಿದ ನಂತರ ತಮಿಳುನಾಡಿಗೆ ಓಡಿ ಹೋಗಿದ್ದಾರು. ಕೋಲಾರ ನಗರ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳು ಹೆಡೆಮುರಿ ಕಟ್ಟಲು ತನಿಖೆ ಚುರುಕುಗೊಳಿಸಿದ್ದರು. ಈಗ ಹಂತಕರ ಪೈಕಿ ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಅವರು ಘಟನಾ ಸ್ಥಳದಿಂದ ಸುಳಿವು ಸಂಗ್ರಹಿಸಲು ವಿಫಲವಾದ ಆರೋಪದ ಮೇಲೆ ಹೆಡ್ ಕಾನ್ ಸ್ಟೇಬಲ್ ಮುನಿರಾಜು, ಕಾನ್ ಸ್ಟೇಬಲ್ ಗಳಾದ ವಿಷ್ಣು ಮತ್ತು ಶಿವ ಅವರನ್ನು ಅಮಾನತುಗೊಳಿಸಿದ್ದಾರೆ . ಪ್ರಕರಣದ ಪ್ರಮುಖ ಆರೋಪಿ ದಿಲೀಪ್ ಅಲಿಯಾಸ್ ಶೈನ್ ಪೊಲೀಸ್ ಅಧಿಕಾರಿಯ ಮಗ ಎಂದು ಹೇಳಲಾಗಿದೆ.
ಕೋಲಾರ ಜಿಲ್ಲೆಯ ವೀರಾಂಜನೇಯ ನಗರದ ನಿವಾಸಿ ಕಾರ್ತಿಕ್ ಸಿಂಗ್ (17) ಎಂಬ ಯುವಕನ ಮೇಲೆ ದಿಲೀಪ್ ಮತ್ತು ಆತನ ಸ್ನೇಹಿತರು ಹಳೆ ದ್ವೇಷದ ಹಿನ್ನೆಲೆಯಲ್ಲಿ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ.
ಕೊಲೆಯ ನಂತರ ದಿಲೀಪ್ ಕಾರ್ತಿಕ್ ಮೇಲೆ ಹಲ್ಲೆ ನಡೆಸಿ ಬೆತ್ತಲೆಗೊಳಿಸುವಂತೆ ಒತ್ತಾಯಿಸುವ ಹಳೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಲು ಪ್ರಾರಂಭಿಸಿದವು. ಹಲ್ಲೆ ಘಟನೆಯ ನಂತರ, ದಿಲೀಪ್ ಅವರನ್ನು ಪೊಲೀಸ್ ಠಾಣೆಗೆ ಕರೆಸಲಾಯಿತು. ಅವನಿಗೆ ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದ್ದರು ಈ ಹಿಂದೆ.  ನಂತರಕೋಲಾರ ಜಿಲ್ಲೆಯ ವೀರಾಂಜನೇಯ ನಗರದ ನಿವಾಸಿ ಕಾರ್ತಿಕ್ ಸಿಂಗ್ (17) ಎಂಬ ಯುವಕನ ಮೇಲೆ ದಿಲೀಪ್ ಮತ್ತು ಆತನ ಸ್ನೇಹಿತರು ಹಳೆ ದ್ವೇಷದ ಹಿನ್ನೆಲೆಯಲ್ಲಿ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಬಾಲಕನ ಮೃತದೇಹದ ಮೇಲೆ S ಮತ್ತು R ಎಂಬ ಅಕ್ಷರವನ್ನು ಹರಿತವಾದ ಆಯುಧದಿಂದ ಬರೆದು ವಿಕೃತಿ ಮೆರೆದ ಹಂತಕರು!!
ಅ ಸಮಯದಲ್ಲಿ ಮೃತ ಬಾಲಕ ನೋವಿನಿಂದ ನರಳುತ್ತಾ ಇದ್ದರೆ ಹಂತಕರು ಅತ ನರಳುವ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದರಂತೆ‌.

ತನಿಖೆ ವೇಳೆ ಹಂತಕರ ಬಾಲಕನ ಮೇಲೆ ತೋರಿದ ಹಲವು ವಿಕೃತ ಕೆಲಸಗಳು ಬೆಳಕಿಗೆ ಬಂದಿವೆ. ಬಾಲಕ ಕಾರ್ತಿಕ್ ದೇಹಕ್ಕೆ ಬರ್ಬರವಾಗಿ ಇರಿದ ಹಂತಕರು. ಚಾಕುವಿನಿಂದ ಆತನ ದೇಹದ ಮೇಲೆ‌ ಎಲ್ಲೆಂದರಲ್ಲಿ ಕಲ್ಲಿನ ಮೇಲೆ ಕೆತ್ತುವಂತೆ ಆತನ ದೇಹದ ಮೇಲು ಎಸ್ ಮತ್ತು ಆರ್ ಎಂದು ಬರೆದು ಬಾಲಕ ಕಾರ್ತಿಕ್ ಸಿಂಗ್ ಕೊಲೆ ನಂತರವೂ ಹಂತಕರು ಪೈಶಾಚಿಕತೆಯನ್ನು ತೋರಿದ್ದಾರೆ.
ಇನ್ನೂ ಆರು ಮಂದಿ ಹಂತಕರ ಪೈಕಿ ಮೂವರನ್ನು ಬಂಧಿಸಲಾಗಿದೆ.

ಎಸ್ ಮತ್ತು ಆರ್ ಅಂದರೆ ಏನು?

ಕಾರ್ತಿಕ್ ಸಿಂಗ್ ಮುಖ, ಕತ್ತು, ಎದೆ ಭಾಗದ ಮೇಲೆ S ಎಂದು ಹಂತಕರು ಚಾಕುವಿನಲ್ಲೇ ಬರೆದಿದ್ದಾರೆ. ಇನ್ನೂ ಆತನ ಎದೆಯ ಮೇಲೆ ಒಂದು ಬಾರಿ R ಎಂದು ಬರೆಯಲಾಗಿದೆ. ಕಾರ್ತಿಕ್ ಸಿಂಗ್ ಸಾವನ್ನಪ್ಪಿದ ನಂತರ ಈ ಅಕ್ಷರಗಳನ್ನು ಬರೆದಿರುವ ಮಾಹಿತಿ ಸಿಕ್ಕಿದೆ. ಅಂದಹಾಗೆ ಕೊಲೆಯ ಪ್ರಮುಖ ಆರೋಪಿಗಳಾದ ದಿಲೀಪ್ ಅಲಿಯಾಸ್ ಶೈನು ಹಾಗೂ ರಿಷಿಕ್ ಎನ್ನುವರ ಹೆಸರಿನ ಮೊದಲ ಅಕ್ಷರಗಳನ್ನು ಬರೆದಿರುವ ಶಂಕೆ ಇದೆ.

ಕೊಲೆ ಮಾಡಿ ನಂತರ ಬಾಲಕನ ತಂದೆಗೆ ಕಾಲ್!

ನವೆಂಬರ್ 3 ರಂದು ಕೋಲಾರ ನಗರದ ಪೇಟೆಚಾಮನಹಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ಬಾಲಕ ಕಾರ್ತಿಕ್‌ ಸಿಂಗ್‌ನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕಾರ್ತಿಕ್ ಸಿಂಗ್ ಕೊಲೆಗೈದು ಹಂತಕ ಶೈನು ಆ್ಯಂಡ್ ಗ್ಯಾಂಗ್ ಕಾರ್ತಿಕ್ ತಂದೆ ಅರುಣ್ ಸಿಂಗ್‌ಗೆ ಕರೆ ಮಾಡಿ ನಾಟಕ ಮಾಡಿದ್ದಾರೆ. ಅಂಕಲ್ ನಿಮ್ಮ ಮಗನಿಗೆ ಯಾರೋ ಹೊಡೆದು ಹಾಕಿದ್ದಾರೆ
ಅಂಕಲ್ ಸ್ಕೂಲ್ ಕಾಂಪೌಂಡ್‌ನಲ್ಲಿ ಬಿದ್ದಿದ್ದಾನೆ ನಿಮ್ಮ ಮಗ ಎಂದು ಫೋನ್ ಕರೆ ಮಾಡಿದ್ದರು ಎನ್ನಲಾಗಿದೆ. ಫೋನ್ ಕಾಲ್ ಬಂದ ಬಳಿಕ ಹಂತಕರು ಹೇಳಿದ ಸ್ಥಳಕ್ಕೆ ಹೋಗಿ ನೋಡಿದ ಬಾಲಕನ ತಂದೆಗೆ ಹೃದಯವೆ ಚೂರಾಗಿದೆ. ಮಗ ಬಿದ್ದಿಲ್ಲ ಶವವಾಗಿ ನೆತ್ತರ ಮಡುವಿನಲ್ಲಿ ಈ ಲೋಕದ ಪರಿವೆ ಇಲ್ಲದೆ ಉಸಿರು ಚೆಲ್ಲಿ ಮುದುಡಿ ಬಿದ್ದಿದ್ದಾನೆ.!!

ಈ ಹತ್ಯೆ ಮಾಡಿದ ಹಂತಕರ ಮುಂದಿನ ನಡೆ?

ಬಾಲಕನ ಕೊಲೆ ಮಾಡಿದ ಹಂತಕರ ತಂಡದ ನೀಚರು ಅವರವರ ಮನೆಗೆ ಹೋಗಿ ಊಟ ಮಾಡಿ ಎಸ್ಕೇಪ್ ಆಗಿದ್ದಾರೆ!
ಈ ಕೇಸ್‌ಗೆ ಸಂಬಂಧಿಸಿದಂತೆ ತ್ವರಿತ ಕಾರ್ಯಚರಣೆ ಕೈಗೊಂಡ ಪೋಲಿಸರ ತಂಡ ಈಗಾಗಲೇ ಪ್ರಮುಖ ಇಬ್ಬರು ಆರೋಪಿಗಳನ್ನು ಸೇರಿದಂತೆ ಏಳು ಮಂದಿಯನ್ನ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.
ಆದರೆ ಮುದ್ದಾದ ಮಗನನ್ನು ಕಳೆದುಕೊಂಡ ಹೆತ್ತವರ ಅಕ್ರಂದನ ಮುಗಿಲು ಮುಟ್ಟಿತ್ತು. ಇನ್ನೂ ಬಾಳಿ ಬದುಕಬೇಕಾಗಿದ್ದ ಬಾಲಕ ಕಾರ್ತಿಕ್ ಸಿಂಗ್ ಎನು ತಪ್ಪು ಮಾಡದೆ ಸರಿಯಾಗಿ ಕಣ್ಣು ಬಿಡುವ ಮೊದಲೇ
ಹಂತಕರ ಲಾಂಗಿನೇಟಿಗೆ ಕಣ್ಣು ಮುಚ್ಚಿದ್ದಾನೆ!! ಭೂಗತ ಲೋಕದಲ್ಲಿ ಡಾನ್ ಆಗಿ ಮರೆಯ ಬೇಕುನ್ನುವ ದುಷ್ಟ ಆಲೋಚನೆಯಿಂದ ಅಮಾಯಕ ಬಾಲಕನ ಜೀವ ತೇಗದ ಹಂತಕರ ಗ್ಯಾಂಗ್ ಸರಿಯಾಗಿ ದುನಿಯಾ ನೋಡುವ ಮೊದಲೇ ಹಸಿ ನೆತ್ತರ ಕಲೆ ಅಂಟಿಸಿಕೊಂಡು ಜೈಲು ಪಾಲಾಗಿದ್ದಾರೆ.
ಇಂದು ಕ್ರೈಮ್ ರೇಂಜ್ ಮುಗಿಲು‌ ಮುಟ್ಟಿದೆ ಸರಿಯಾಗಿ ಮೀಸೆ ಬಾರದ ಹುಡುಗರ ಕೈಯಲ್ಲೂ ಗಾಂಜಾ ಹೋಗೆ ಆಡುತ್ತಿದೆ ಇವರ ನೆತ್ತಿಗೇರಿದ ನಶೆಯ ಕಿಕ್ಕು ಕ್ರೈಮ್ ಮಾಡುವಂತೆ ಪ್ರಚೋದಿಸುತ್ತಿದೆ. ಇವೆಲ್ಲವನ್ನೂ ಮಟ್ಟಹಾಕಬೇಕಾದ ಪೋಲಿಸ್ ಇಲಾಖೆ ತನ್ನ ಗಟ್ಟಿತನವನ್ನು ಮರೆತಿದಿಯಾ? ಎನ್ನುವಂತೆ ಭಾಸವಾಗುತ್ತಿದೆ.

17 ವರ್ಷದ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ನಗರ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.

ಕರ್ತವ್ಯ ಲೋಪ ಹಾಗೂ ಮಾಹಿತಿ ಕಲೆಹಾಕುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಎಎಸ್ಐ ಮುನಿರಾಜು, ಕಾನ್ ಸ್ಟೇಬಲ್ ಗಳಾದ ವಿಷ್ಣು, ಶಿವ ಅವರನ್ನು ಅಮಾನತು ಮಾಡಿ ಕೋಲಾರ ಎಸ್ಪಿ ನಾರಾಯಣ್ ಆದೇಶ ಹೊರಡಿಸಿದ್ದಾರೆ.

ಬಾಲಕನಿಗೆ ಕಿರುಕುಳ ನೀಡಿ ಬರ್ಬರವಾಗಿ ಹತ್ಯೆ

17 ವರ್ಷದ ಬಾಲಕನಿಗೆ ಕಿರುಕುಳ ನೀಡಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರದ ವೀರಾಂಜನೇಯ ನಗರದ ನಿವಾಸಿ ಅರುಣ್ ಸಿಂಗ್ ಅವರ ಪುತ್ರ ಕಾರ್ತಿಕ್ ಸಿಂಗ್ (17) ನನ್ನು ನಗರದ ಪೇಟೆಚಾಮನಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿ ಹತ್ಯೆ ಮಾಡಲಾಗಿತ್ತು. ಪ್ರಥಮ ಪಿಯುಸಿ ಓದುತ್ತಿದ್ದ ಬಾಲಕನ ಬಟ್ಟೆ ಬಿಚ್ಚಿಸಿದ ಹಂತಕರು ಮನಸೋ ಇಚ್ಚೆ ಕಿರುಕುಳ ನೀಡಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ!!. ಕಿರುಕುಳ ನೀಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಪ್ರಕರಣ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಸುಧೀರ್ ವಿಧಾತ , ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!