ಪುತ್ತೂರು ಹುಲಿವೇಷ ತಂಡದ ನಾಯಕನ ಬರ್ಬರ ಹತ್ಯೆ!! ಕರಾವಳಿಯ ಹೆಸರಾಂತ ಹುಲಿಯನ್ನೆ ಕೊಂದ ಹಂತಕರು!!

ಪುತ್ತೂರು ತಾಲೂಕಿನ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ನೆಹರೂ ನಗರ ಜಂಕ್ಷನ್‌ನಲ್ಲಿ ಆತನನ್ನು ಎಲ್ಲೆಂದರಲ್ಲಿ ಅಟ್ಟಾಡಿಸಿಕೊಂಡು ಹೋಗಿ ಕೊಚ್ಚಿ ಕೊಲೆಮಾಡಲಾಗಿದೆ. ಅಕ್ಷಯ್ ಪುತ್ತೂರಿನಲ್ಲಿ ಇರುವುದನ್ನು ಖಾತ್ರಿ ಮಾಡಿಕೊಂಡ ಹಂತಕರ ಗ್ಯಾಂಗ್ ದೀಡಿರ್ ಹತಾರಗಳಿಂದ ದಾಳಿಮಾಡಿ ಮುಂದಾಗಿದೆ ಅ ಸಮಯದಲ್ಲಿ ಅಕ್ಷಯ್ ಕಲ್ಲೇಗ ಹಂತಕರಿಂದ ತಪ್ಪಿಸಿಕೊಳ್ಳಲು ಎಲ್ಲೆಂದರಲ್ಲಿ ಓಡಿದ್ದಾನೆ ಅದರೂ ಆತನನ್ನು ಬಿಡಿದ ಹಂತಕರ ಗ್ಯಾಂಗ್ ಬೆನ್ನಿಗೆ ಬಿದ್ದು ಓಡಿ ಆತನನ್ನು….

ಪುತ್ತೂರು ಹುಲಿವೇಷ ತಂಡದ ನಾಯಕನ ಬರ್ಬರ ಹತ್ಯೆ!!

news.ashwasurya.in

CRIME NEWS

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಹುಲಿವೇಷ ತಂಡಗಳಲ್ಲಿ ಒಂದಾದ ಪುತ್ತೂರಿನ ಕಲ್ಲೇಗ ಟೈಗರ್ಸ್ ತಂಡದ ನಾಯಕನನ್ನು ಹಂತಕರು ಲಾಂಗು ಮಚ್ಚುಗಳಿಂದ ಮನಬಂದಂತೆ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ನಿನ್ನೆ ರಾತ್ರಿ ಪುತ್ತೂರಿನಲ್ಲಿ ನೆಡೆದಿದೆ.
ಕಲ್ಲೇಗ ಟೈಗರ್ಸ್‌ ತಂಡದ ನಾಯಕ ಅಕ್ಷಯ್ ಕಲ್ಲೇಗ (26) ನನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ನೆಹರೂ ನಗರ ಜಂಕ್ಷನ್‌ನಲ್ಲಿ ಆತನನ್ನು ಎಲ್ಲೆಂದರಲ್ಲಿ ಅಟ್ಟಾಡಿಸಿಕೊಂಡು ಹೋಗಿ ಕೊಚ್ಚಿ ಕೊಲೆಮಾಡಲಾಗಿದೆ. ಅಕ್ಷಯ್ ಪುತ್ತೂರಿನಲ್ಲಿ ಇರುವುದನ್ನು ಖಾತ್ರಿ ಮಾಡಿಕೊಂಡ ಹಂತಕರ ಗ್ಯಾಂಗ್ ದೀಡಿರ್ ಹತಾರಗಳಿಂದ ದಾಳಿಮಾಡಿ ಮುಂದಾಗಿದೆ ಅ ಸಮಯದಲ್ಲಿ ಅಕ್ಷಯ್ ಕಲ್ಲೇಗ ಹಂತಕರಿಂದ ತಪ್ಪಿಸಿಕೊಳ್ಳಲು ಎಲ್ಲೆಂದರಲ್ಲಿ ಓಡಿದ್ದಾನೆ ಅದರೂ ಆತನನ್ನು ಬಿಡಿದ ಹಂತಕರ ಗ್ಯಾಂಗ್ ಬೆನ್ನಿಗೆ ಬಿದ್ದು ಓಡಿ ಆತನನ್ನು ಕೊಂದು ಮುಗಿಸಿದ್ದಾರೆ.
ಪುತ್ತೂರಿನ ಕಲ್ಲೇಗ ಟೈಗರ್ ( ಹುಲಿವೇಷ ತಂಡ‌) ತಂಡದ ನಾಯಕನಾಗಿದ್ದ ಅಕ್ಷಯ್ ಕಲ್ಲೇಗನನ್ನು ತಲ್ವಾರ್ ನಿಂದ ಕೊಚ್ಚಿ ಕೊಲೆ ಮಾಡಿದ ಬೆನ್ನಲ್ಲೇ ಆರೋಪಿಗಳಾದ ಬನ್ನೂರು ನಿವಾಸಿ ಮನೀಷ್ ಮತ್ತು ಚೇತು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ಮತ್ತೋರ್ವ ಆರೋಪಿ ತಲೆಮಲೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಕೊಲೆಗೆ ಕಾರಣವೇನು?

ಮೂಲಗಳ ಪ್ರಕಾರ ಎರಡು ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತ ವಿಚಾರದಲ್ಲಿ ಗಲಾಟೆ ಆರಂಭವಾಗಿದ್ದು, ರಾಜಿ ಸಂಧಾನದಲ್ಲಿ ಎರಡು ಸಾವಿರ ರೂಪಾಯಿ ನೀಡುವ ವಿಚಾರದಲ್ಲಿ ಮಾತುಕತೆ ವಿಕೋಪಕ್ಕೆ ಹೋಗಿದೆ. ಮಾತುಕತೆ ವಿಕೋಪಕ್ಕೆ ಹೋಗುತ್ತಿದ್ದಂತೆ ಖಾಸಗಿ ಬಸ್ ಚಾಲಕ ಚೇತು ಎಂಬಾತನ ಬೆಂಬಲಿಗನಿಗೆ ಹಾಗೂ ಅಕ್ಷಯ್ ನಡುವೆ ತೀವ್ರ ವಾಗ್ವಾದ ಉಂಟಾಗಿದ್ದು, ಕೊನೆಗೆ ಅಕ್ಷಯ್ ಕಲ್ಲೇಗನನ್ನು ಮೂರಕ್ಕೂ ಅಧಿಕ ಮಂದಿಯ ತಂಡ ಅಟ್ಟಾಡಿಸಿಕೊಂಡು ಹೋಗಿ ತಲ್ವಾರ್ ನಿಂದ ಮನಸೊಇಚ್ಚೆ ದಾಳಿ ನಡೆಸಿ ಹತ್ಯೆಮಾಡಿದ್ದಾರೆ.
ಇನ್ನೂ ಅಕ್ಷಯ್ ಕಲ್ಲೇಗನ ಹತ್ಯೆಗೆ ಬೇರೆ ಬೇರೆ ಕಾರಣಗಳು ಇರಬಹುದ ಎನ್ನುವ ಬಗ್ಗೆ ಸಂಶಯವಿದ್ದು ಈ ಹಾದಿಯಲ್ಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅಕ್ಷಯ್‌ನ ಮೃತದೇಹ ಪೆಟ್ರೋಲ್ ಬಂಕ್ ಬಳಿಯ ಪೊದೆಯೊಂದರಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಇತ್ತ ತನ್ನ ಮಗ ಹತ್ಯೆಯಾದ ಸುದ್ದಿ ತಿಳಿಯುತ್ತಿದ್ದಂತೆ ಮೃತನ ತಂದೆ ದಿಕ್ಕೇ ತೋಚದಂತೆ ಕುಸಿದು ಬಿದ್ದಿದ್ದಾರೆ. ಮಗನ ಮೃತದೇಹವನ್ನು ನೋಡಿ ಅಕ್ಷಯ್ ಎಂದು ದುಃಖಿತರಾಗಿ ಅಳುತ್ತಿರುವುದನ್ನು ನೋಡಿ ನೆರೆದವರ ಕಣ್ಣಂಚಿನಲ್ಲು ನೀರು ಇಣುಕಿದೆ.

ದಕ್ಷಿಣ ಕನ್ನಡ ಜಿಲ್ಲೆ ಒಂದರಲ್ಲೇ ಅಲ್ಲದೆ ರಾಜ್ಯಾದ್ಯಂತ ಹುಲಿ ಕುಣಿತದಲ್ಲಿ ಕಲ್ಲೇಗ ಟೈಗರ್ಸ್ ತಂಡ ಬಾರಿ ಹೆಸರು ಮಾಡಿದೆ. ಈ ತಂಡದ ನೇತೃತ್ವ ವಹಿಸಿಕೊಂಡಿದ್ದ ಅಕ್ಷಯ್ ಕಳೆದ ವರ್ಷದ ಬಿಗ್‌ಬಾಸ್‌ ಶೋನಲ್ಲಿ ರೂಪೇಶ್ ಶೆಟ್ಟಿ ಮನವಿ ಮೇರೆಗೆ ಕಲ್ಲೇಗ ಟೈಗರ್ಸ್ ತಂಡವನ್ನು ಕರೆಸಿಕೊಂಡು ಹುಲಿವೇಷ ನೃತ್ಯವನ್ನು ಮಾಡಿಸಿದ್ದರು ಬಿಗ್ ಬಾಸ್

ಹುಲಿವೇಷದಲ್ಲಿ ಕಲ್ಲೇಗ ಟೈಗರ್ಸ್ ತಂಡದ ನಾಯಕನಾಗಿ ಜವಬ್ದಾರಿ ವಹಿಸಿಕೊಂಡಿದ್ದ ಅಕ್ಷಯ್ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಕೊಲೆ ಮಾಡಿದ ಹಂತಕರಲ್ಲಿ ಇಬ್ಬರು ಠಾಣೆಗೆ ಹೋಗಿ ಶರಣಾಗಿದ್ದರೆ ಈ ಹತ್ಯೆ ಪ್ರಕರಣಕ್ಕೆ ಸಂಭಂದಿಸಿದಂತೆ ತಲೆಮರೆಸಿಕೊಂಡಿರುವವರ ಬಂಧನಕ್ಕಾಗೆ ಪೋಲಿಸರು ಭಲೇ ಬಿಸಿದ್ದಾರೆ

ಸುಧೀರ್ ವಿಧಾತ ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!