CRIME NEWS : ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರತಿಮಾ ಕೊಲೆ ಪ್ರಕರಣ: ಆರೋಪಿ ಕಿರಣ್ 15 ದಿನ ಪೊಲೀಸ್ ಕಸ್ಟಡಿಗೆ
ಬೆಂಗಳೂರು : ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಿರಣ್ ನನ್ನು 15 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಇಂದು ವಿಚಾರಣೆ ನಡೆಸಿದ 2 ನೇ ಎಸಿಎಂಎಂ ಕೋರ್ಟ್ ಆರೋಪಿ ಕಿರಣ್ ನನ್ನು 15 ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕಲ್ಲಸಂದ್ರದಲ್ಲಿರುವ ಅವರ ನಿವಾಸದಲ್ಲಿ ಭಾನುವಾರ ಬೆಳಿಗ್ಗೆ 8.30 ರ ಸುಮಾರಿಗೆ ಕತ್ತು ಸೀಳಿದ ಸ್ಥಿತಿಯಲ್ಲಿ ಪ್ರತಿಮಾ ಕೆ.ಎಸ್ (45) ಅವರ ಶವ ಪತ್ತೆಯಾಗಿತ್ತು.
ಪ್ರತಿಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಾಜಿ ಕಾರು ಚಾಲಕ ಕಿರಣ್ ನನ್ನು ಪೊಲೀಸರು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದರು. ಕೆಲಸದಿಂದ ತೆಗೆದುಹಾಕಿದ್ದಕ್ಕೆ ಅಧಿಕಾರಿ ಪ್ರತಿಮಾರನ್ನು ಕೊಲೆ ಮಾಡಿದ್ದೇನೆ ಎಂದು ಬಂಧಿತ ಆರೋಪಿ ಮಾಜಿ ಕಾರು ಚಾಲಕ ಕಿರಣ್ ತಪ್ಪೊಪ್ಪಿಕೊಂಡಿದ್ದನು.ಈತ ನಾಲ್ಕು ವರ್ಷದಿಂದ ಗುತ್ತಿಗೆ ಆಧಾರದಲ್ಲಿ ಪ್ರತಿಮಾ ಅವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದನಂತೆ. ನಂತರ ಈತ ಇತ್ತೀಚೆಗೆ ಕಾರು ಅಪಘಾತ ಮಾಡಿದ್ದನಂತೆ.ಕೆಲವೊಂದು ಮಾಹಿತಿಯನ್ನು ಅಕ್ರಮ ಗಣಿ ದಂಧೆಕೋರರಿಗೆ ತಿಳಿಸಿತ್ತಿದ್ದನಂತೆ ಇದರಿಂದ ಬೆಸತ್ತ ಪ್ರತಿಮಾ ಇತನಿಗೆ ಗೇಟ್ ಪಾಸ್ ನೀಡಿದ್ದರು.ಅದರೆ ಈತ ಪೋಲಿಸರ ಬಳಿ ಪ್ರತಿಮಾ ನನಗೆ ವಿನಾಕಾರಣ ಬೈಯುತ್ತಿದ್ದರು. ಕೆಲಸ ಬಿಟ್ಟು ಹೋಗುವಂತೆ ಹೇಳುತ್ತಿದ್ದರು ಎಂದಿದ್ದಾನೆ.ಈ ಕಾರಣಕ್ಕಾಗಿಯೇ ಈ ಹತ್ಯೆ ಮಾಡಿದ್ದೇನೆ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.
ಇಂದು ಬೆಳಿಗ್ಗೆ ತೀರ್ಥಹಳ್ಳಿಗೆ ಪ್ರತಿಮಾ ಅವರ ಪಾರ್ಥಿವ ಶವವನ್ನು ತರಲಾಯಿತು. ಅಂತಿಮ ವಿಧಿವಿಧಾನಗಳನ್ನು ಮಾಡಿ ಪ್ರತಿಮಾ ಅವರ ಪಾರ್ಥಿವ ಶವಕ್ಕೆ ಅವರ ಮಗ ಅಗ್ನಿ ಸ್ಪರ್ಶಮಾಡಿದ್ದಾನೆ.
ಕಾರ್ನಾಟಕದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಖಡಕ್ ಅಧಿಕಾರಿಯೊಬ್ಬರ ಅಂತ್ಯವಾಗಿದೆ. ಅದರಲ್ಲೂ ಅಕ್ರಮ ಗಣಿ ದಂಧೆಕೋರರಿಗೆ ಸಿಂಹಸ್ವಪ್ನವಾಗಿದ್ದ ಪ್ರತಿಮಾ ಒಬ್ಬ ಕಿರಾತಕನ ಕೈಯಿಂದ ಸಾವಿಗೆ ಶರಣಾಗಿ ಇಹಲೋಕ ತ್ಯಜಿಸಿದ್ದಾರೆ.ಇವರ ಸಾವಿನಿಂದ ಕೋಟ್ಯಾಂತರ ಮನಸ್ಸುಗಳು ನೊಂದರೆ ಒಂದಷ್ಟು ಅಕ್ರಮ ಗಣಿ ದಂಧೆಕೋರರು ಮಾತ್ರ ಮೆತ್ತಗೆ ಕೆಕೆ ಹಾಕಿದ್ದಾರೆ.
ಇತ್ತೀಚೆಗಂತು ಸಾಕಷ್ಟು ಮಂದಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಅಕ್ರಮ ದಂಧೆಕೋರರ ಜೋತೆಗೆ ಕೈಜೋಡಿಸಿ ದಂಧೆಕೋರರು ಕೊಟ್ಟ ಅಕ್ರಮ ಹಣದಲ್ಲಿ ನಿತ್ಯ ಮಿಂದೆಳುತ್ತಿದ್ದಾರೆ.ಅದರಲ್ಲೂ ಕೆಲವರಂತು ದಂಧೆಕೋರರ ಬೆನ್ನಿಗೆ ನಿಂತು ತಾವೇ ಅಕ್ರಮ ಗಣಿಗಾರಿಕೆ ಮಾಡಿಸುತ್ತಿದ್ದಾರೆ. ದಂಧೆಕೋರರ ಹಡಬೆ ಹಣಕ್ಕೆ ಜೊಲ್ಲು ಸೇರಿಸಿಕೊಂಡು ಬದುಕುತ್ತಿದ್ದಾರೆ. ಇಂತವರ ನಡುವೆ ಇರುವ ಒಂದಷ್ಟು ಮಂದಿ ಖಡಕ್ ಅಧಿಕಾರಿಗಳು ತಮ್ಮ ಪ್ರಾಮಾಣಿಕತೆಗೆ ತಮ್ಮ ಜೀವವನ್ನೆ ಬಲಿ ಕೊಡುತ್ತಿದ್ದಾರೆ ಇಂತವರ ಸಾಲಿನಲ್ಲಿ ಪ್ರತಿಮಾ ಕೂಡ ಒಬ್ಬರು ತಮ್ಮ ಖಡಕ್ ಅಧಿಕಾರಿತನದಿಂದಲೆ ಇಂದು ಹಂತಕನೊಬ್ಬನ ಕೈಯಿಂದ ಚಾಕು ಇರಿತಕ್ಕೆ ಒಳಗಾಗಿ ಸಾವಿನ ಮನೆ ಸೇರಿದ್ದಾರೆ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ…..
ಸುದೀರ್ ವಿಧಾತ ,ಶಿವಮೊಗ್ಗ