ಸೆಂಚುರಿ ಸ್ಟಾರ್ ನಟ ಶಿವರಾಜ್ ಕುಮಾರ್ ಅವರಿಗೆ ಅನಾರೋಗ್ಯ!!

ನಟ ಶಿವರಾಜ್ ಕುಮಾರ್ ಅವರಿಗೆ ಅನಾರೋಗ್ಯ!

ಬೆಂಗಳೂರು: _ಹ್ಯಾಟ್ರಿಕ್ ಹೀರೊ ನಟ ಶಿವರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಇದೀಗ ಶಿವಣ್ಷ ಚೇತರಿಸಿಕೊಳ್ಳುತ್ತಿದ್ದಾರೆ.

ಶಿವಣ್ಣ ಜ್ವರ, ಸುಸ್ತಿನಿಂದ ಸಾಕಷ್ಟು ಬಳಲಿದ್ದರು. ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಜ್ವರ ತೀವ್ರವಾಗಿದ್ದರಿಂದ ನಗರದ ವೈದೇಹಿ ಆಸ್ಪತ್ರೆಗೆ ಹೋಗಿ ತಜ್ಞ ವೈದ್ಯರಿಂದ ತಪಾಸಣೆಗೊಳಗಾಗಿದ್ದಾರೆಜೊತೆಗೆ ಸಾಮಾನ್ಯ ತಪಾಸಣೆಗೂ ಒಳಗಾಗಿದ್ದಾರೆ ಚಿಕಿತ್ಸೆ ಬಳಿಕ ಆರೋಗ್ಯ ಸ್ವಲ್ಪ ಸುಧಾರಿಸಿದೆ ಎಂದು ತಿಳಿದುಬಂದಿದೆ.

ಇದೀಗ ಶಿವಣ್ಣನಿಗೆ ಮನೆಯಲ್ಲಿಯೇ ಚಿಕಿತ್ಸೆ.ಅತಿಯಾದ ಓಡಾಟದಿಂದಾಗಿ ಶಿವಣ್ಣ ಸುಸ್ತಾಗಿದ್ದು, ಸಾಮಾನ್ಯ ಜ್ವರವೆನ್ನಲಾಗಿದೆ. ಸದ್ಯಕ್ಕೆ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

*******************************************

10 ಸಾವಿರ ಲಂಚಕ್ಕೆ ಕೈ ಚಾಚಿದ ಡಿಡಿಪಿಐ ಲೋಕಾಯುಕ್ತರ ಬಲೆಗೆ ಬಿದ್ದ.

10 ಸಾವಿರ ಲಂಚಕ್ಕೆ ಕೈ ಚಾಚಿದ ಡಿಡಿಪಿಐ ಲೋಕಾಯುಕ್ತರ ಬಲೆಗೆ ಬಿದ್ದ.!

ಚಿಕ್ಕಮಗಳೂರು: ಸರ್ಕಾರಿ ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಗೆ ಅನುಮೋದನೆ ನೀಡಲು ಗುತ್ತಿಗೆದಾರರೊಬ್ಬರಿಗೆ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು 4 ಸಾವಿರ ರೂಪಾಯಿ ಪಡೆಯುವಾಗ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ರಂಗನಾಥಸ್ವಾಮಿ ಮತ್ತು ದ್ವಿತೀಯ ದರ್ಜೆ ಸಹಾಯಕ ಅಸ್ರಾರ್ ಅಹಮ್ಮದ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಶೌಚಾಲಯ ನಿರ್ಮಾಣ ಯೋಜನೆಗೆ ಮೂಡಿಗೆರೆ ತಾಲ್ಲೂಕಿನ ಹೆಸ್ಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲಿಬೈಲು ಮತ್ತು ಕಡೆಮಡ್ಕಲ್ ಗ್ರಾಮದ ಸರ್ಕಾರಿ ಶಾಲೆಗಳು ಆಯ್ಕೆಯಾಗಿದ್ದವು. ಅವುಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವುದು ಬಾಕಿ ಇತ್ತು.
ಅನುಮೋದನೆ ಪಡೆಯಲು ಕಚೇರಿಗೆ ಅಲೆದಾಡಿದ್ದ ಗುತ್ತಿಗೆದಾರ ಅಬುಬಕರ್ ಅವರ ಮಗ ಸಲಾವುದ್ದೀನ್ ನೀಡಿದ ದೂರು ಆಧರಿಸಿದ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಲಂಚದ ಹಣ ಸಮೇತ ಇಬ್ಬರನ್ನು ಕೆಡವಿಕೊಂಡಿದ್ದಾರೆ.
ಕಚೇರಿಯ ಗುಮಾಸ್ತ ಅಸ್ರಾರ್ ಅಹಮ್ಮದ್ ಅವರಿಗೆ ಪತ್ರ ನೀಡಲು ಉಪನಿರ್ದೇಶಕರು ತಿಳಿಸಿದ್ದರು. ಅದರಂತೆ ಅವರನ್ನು ಸಂಪರ್ಕಿಸಿದಾಗ ಅವರು ಸ್ವೀಕರಿಸಿರಲ್ಲ. ₹1 ಸಾವಿರ ಲಂಚ ನೀಡಿದ ಬಳಿಕ ಸ್ವೀಕೃತಿ ಪತ್ರ ನೀಡಿದರು. ಅನುಮೋದನೆ ನೀಡಲು 10 ಸಾವಿರ ರೂಪಾಯಿ ಲಂಚ ನೀಡಬೇಕಾಗುತ್ತದೆ ಎಂದು ತಿಳಿಸಿದ್ದರು. ಅದೆಲ್ಲವನ್ನೂ ರೆಕಾರ್ಡ್ ಮಾಡಿಕೊಂಡು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದೇನೆ’ ಎಂದು ದೂರುದಾರ ತಿಳಿಸಿದ್ದಾರೆ.

ಸುಧೀರ್ ವಿಧಾತ ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!