ದಂಡುಪಾಳ್ಯ ಗ್ಯಾಂಗಿನ ಅಟ್ಯಾಕ್ ಮಾದರಿಯಲ್ಲೆ ಕೊಲೆಯಾದ್ರಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಖಡಕ್ ಅಧಿಕಾರಿ ಪ್ರತಿಮಾ!?

ಬೆಂಗಳೂರಿನಲ್ಲಿ ಕತ್ತು ಸೀಳಿ ಭೂ ಮತ್ತು ಗಣಿಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ಅವರನ್ನು ಬರ್ಬರವಾಗಿ ಹತ್ಯೆಮಾಡಲಾಗಿದೆ.

ಚಾಕುವಿನಿಂದ ದಂಡುಪಾಳ್ಯದ ರೀತಿಯಲ್ಲಿ ಕತ್ತು ಸೀಳಿ ಭೂ ಮತ್ತು ಗಣಿಗಾರಿಕೆ ಇಲಾಖೆಯ ಉಪ ನಿರ್ದೇಶಕಿಯನ್ನು ಅವರ ಮನೆಯಲ್ಲೆ ಬರ್ಬರ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸರ್ಕಾರಿ ಅಧಿಕಾರಿಯಾಗಿದ್ದ ಪ್ರತಿಮಾ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯಲ್ಲಿ (Department of Mines and Geology) ಉಪ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತೀರ್ಥಹಳ್ಳಿ ಮೂಲದವರಾಗಿದ್ದ ಪ್ರತಿಮಾ ಸುಬ್ರಹ್ಮಣ್ಯಪುರದ ಗೋಕುಲ ಅಪಾರ್ಟ್‌ಮೆಂಟ್‌ನಲ್ಲಿ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಒಬ್ಬರೆ ವಾಸವಾಗಿದ್ದರು!!.

ಹತ್ಯೆಯಾದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕಿ ಪ್ರತಿಮಾ

ದಂಡುಪಾಳ್ಯ ಗ್ಯಾಂಗಿನ ಅಟ್ಯಾಕ್ ಮಾದರಿಯಲ್ಲೆ ಕೊಲೆಯಾದ್ರಾ ಸರ್ಕಾರಿ ಅಧಿಕಾರಿ ಪ್ರತಿಮಾ?

ಬೆಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ
ಅಧಿಕಾರಿ ಉಪ ನಿರ್ದೆಶಕಿ ಪ್ರತಿಮಾ ಅವರನ್ನು ದಂಡುಪಾಳ್ಯ ಗ್ಯಾಂಗ್‌ ಮಾದರಿಯಲ್ಲೆ ಬಾಗಿಲು ತೆರೆದಾಕ್ಷಣ ಕತ್ತಿಗೆಗೆ ಹಗ್ಗಹಾಕಿ ಮಿಸುಕಾಡದಂತೆ ಬಲವಾಗಿ ಗಿರಿದು ಕತ್ತು ಸೀಳಿ ಕೊಲೆ ಮಾಡಲಾಗಿದೆ. 

ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಪ್ರತಿಮಾ ಖಡಕ್ ಅಧಿಕಾರಿಯಾಗಿದ್ದರು ಅಕ್ರಮದ ಗಣಿ ದಂಧೆಕೋರರನ್ನು ಮಟ್ಟಹಾಕುವಲ್ಲಿ ದಿಟ್ಟತನ ತೋರುತ್ತಿದ್ದ ಪ್ರತಿಮಾ ಕೊಲೆಯಾದ ಸ್ಥಳದಲ್ಲಿ ಸೂಕ್ಷ್ಮವಾಗಿ ಪರಿಶೀಲಿಸಿ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ ಪೊಲೀಸರು. ಕೆಲವು ಮಾಹಿತಿಯನ್ನೂ ಬಿಚ್ಚಿಟ್ಟಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಪ್ರತಿಮಾ ಕೊಲೆಯಾದ ಪ್ರಕರಣವನ್ನು ಗಮನಿಸಿದರೆ ಕೊಲೆ ಆರೋಪಿ ಯಾರೆನ್ನುವುದು ತಿಳಿಯದಿದ್ದರೂ ಈ ಹತ್ಯೆ ದಂಡುಪಾಳ್ಯ ಗ್ಯಾಂಗಿನವರ ಮಾದರಿಯಲ್ಲೆ ನೆಡೆದಿದೆ. ಮೊದಲೆ ಮನೆಯಲ್ಲಿ‌ ಪ್ರತಿಮಾ ಒಬ್ಬರೆ ಇರುತ್ತಾರೆ ಎನ್ನುವುದನ್ನು ಪಕ್ಕಾ ಮಾಡಿಕೊಂಡಿದ್ದಾರೆ. ಅವರು ಮನೆಯ ಒಳ ಹೋಗುತ್ತಿದ್ದ ಹಾಗೆ ಯಾರೋ ಬಲವಾಗಿ ಬಾಗಿಲು ಮುಚ್ಚಿದ್ದಾರೆ. ಏಕಾಏಕಿ ಅವರ ಕುತ್ತಿಗೆಯನ್ನು ಹಗ್ಗದಿಂದಲೋ ಇನ್ಯಾವುದೋ ವಸ್ತುವಿನಿಂದ ಬಲವಾಗಿ ಗಿರಿದು ಪ್ರಜ್ಞೆ ತಪ್ಪಿದ ನಂತರ ಅವರ ಕತ್ತನ್ನು ಚಾಕುವಿನಿಂದ ಸೀಳಿರಬಹುದು? ಇನ್ನೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕಿಯಾಗಿ ಸರ್ಕಾರಿ ಸೇವೆಯಲ್ಲಿದ್ದರು ಬೆಂಗಳೂರಿನ ಸುಬ್ರಹ್ಮಣ್ಯಪುರ ನಗರದಲ್ಲಿರುವ ಅಪಾರ್ಟ್ ಮೆಂಟ್ ನ ಮನೆಯಲ್ಲಿ ಒಬ್ಬಂಟಿಯಾಗಿ ಜೀವನ ಮಾಡುತ್ತಿರುವುದನ್ನೇ ಗಮನಿಸಿದ ಹಂತಕರು ಕೊಲೆ ಮಾಡಿದ್ದಾರಾ? ಎಂಬ ಅನುಮಾನ ಕಾಡುತ್ತಿದೆ.
ಕಛೇರಿಯಿಂದ ಬಂದ ಪ್ರತಿಮಾ ಮನೆಯ ಒಳಹೋದ ನಂತರ ನಡೆದ್ದದ್ದೇನು ಎನ್ನುವುದು ಮಾತ್ರ‌ ನಿಗೂಢವಾಗಿದೆ!? 
ಪ್ರತಿಮಾಳನ್ನು ಕೊಲೆ ಮಾಡುವುದಕ್ಕೆ ಹಂತಕ ಮನೆಯ ಬಳಿಯೇ ಕಾದು ಕುಳಿತಿದ್ದಾನೆ  ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಪ್ರತಿಮಾ ಮನೆಗೆ ಬಂದಿದ್ದಾರೆ. ಕಾರಿನ ಚಾಲಕ ಪ್ರತಿಮಾರನ್ನು ಮನೆಯ ಬಳಿ ಬಿಟ್ಟು, ಅಲ್ಲಿಂದ ಬೈಕ್‌ನಲ್ಲಿ ಮನೆಗೆ ಹೋಗಲು ಮುಂದಾಗಿದ್ದಾನೆ. ಈ ವೇಳೆ ಕಾರು ಚಾಲಕನಿಗೆ ಪ್ರತಿಮಾ ಮಳೆ ಜೋರಾಗಿ ಬರ್ತಿದೆ ಹೇಗೆ ಹೋಗ್ತೀಯಾ? ಎಂದು ಕೇಳಿದ್ದಾರೆ. ನಾನು ರೈನ್ ಕೋಟ್ ತಂದಿದ್ದೇನೆ, ಹೀಗಾಗಿ ಮಳೆ ಬಂದರೂ ಪರವಾಗಿಲ್ಲ ಮನೆಗೆ ಹೋಗ್ತೇನೆ ಮೇಡಂ ಎಂದು ಅಲ್ಲಿಂದ ಬೈಕ್‌ನಲ್ಲಿ ತೆರಳಿದ್ದಾನೆ ಚಾಲಕ

ನಂತರ ಪ್ರತಿಮಾ ಎಂದಿನಂತೆ ಮೊದಲನೆ ಮಹಡಿಯಲ್ಲಿದ್ದ ತಮ್ಮ ಮನೆಗೆ ತೆರಳಿ ಬಾಗಿಲೆಗೆ ಹಾಕಿದ್ದ ಬೀಗವನ್ನು ತೆರಯಲು ಮುಂದಾಗಿದ್ದಾರೆ. ಮನೆಯ ಭದ್ರತೆಗಾಗಿ ಮುಂಬಾಲಿಗೆ ಹಾಕಿದ್ದ ಕಬ್ಬಿಣದ ಬಾಗಿಲು ತೆರೆದು ನಂತರ ಮುಖ್ಯ ಬಾಗಿಲನ್ನು ತೆರೆದು ಮನೆಯೊಳಗೆ ಕಾಲಿಟ್ಟಿದ್ದಾರೆ. ಪ್ರತಿಮಾ ಅವರು ಮನೆಯೊಳಗೆ ಒಂದು ಹೆಜ್ಜೆ ಇಡುತ್ತಿದ್ದಂತೆಯೇ ಹಿಂದಿನಿಂದ ಬಂದ ಆಗಂತುಕ ಅವರ ಕುತ್ತಿಗೆಗೆ ಹಗ್ಗಹಾಕಿ ಬಲವಾಗಿ ಬಿಗಿದಿದ್ದಾನೆ. ಜೊತೆಗೆ, ಒಂದು ಕೈಯಲ್ಲಿ ಚೀರಾಡಲು ಆಗದಂತೆ ಬಾಯಿಯನ್ನೂ ಮುಚ್ಚಿರ ಬಹುದು.ನಂತರ
ಅವರ ಕುತ್ತನ್ನು ಸೀಳಿದ್ದಾರೆ ಹಂತಕರು ಪ್ರತಿಮಾ ಅವರ ಕುತ್ತಿಗೆಗೆ ಹಗ್ಗವನ್ನು ಸುತ್ತಿ ಬಿಗಿಯುತ್ತಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿರಲು ಬಹುದು? ಅವರನ್ನು ಕೊಲೆ ಮಾಡುವ ಉದ್ದೇಶದಿಂದಲೇ ಬಂದಿದ್ದ ಹಂತಕ ದಂಡುಪಾಳ್ಯ ಸಿನಿಮಾ ಮಾದರಿಯಲ್ಲಿ ಪ್ರತಿಮಾ ಅವರ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ವಿಕೃತಿ ಮೆರೆದಿದ್ದಾನೆ. ಹೀಗೆ ಆಗಿರಬಹುದು ಏನ್ನುವುದಕ್ಕೆ ಕಾರಣವಿದೆ ಎಂದಿನಂತೆ ಪ್ರತಿಮಾ ಅವರು ಕಚೇರಿಗೆ ತೆಗೆದುಕೊಂಡು ಹೋಗಿ ವಾಪಸ್‌ ತಂದಿದ್ದ ಊಟದ ಬ್ಯಾಗ್‌ ಹಾಗೂ ಅವರು ಬಳಸುತ್ತಿದ್ದ ಕನ್ನಡಕ ಕೂಡ ಬಾಗಿಲ ಬಳಿಯೇ ಬಿದ್ದಿದೆಯಂತೆ!! 
ಖಡಕ್ ಸರ್ಕಾರಿ ಅಧಿಕಾರಿಯಾಗಿದ್ದ ಪ್ರತಿಮಾರನ್ನು ಕೊಲೆ ಮಾಡಿರುವುದನ್ನು ಗಮನಿಸಿದರೆ ಇದು ವೈಯಕ್ತಿಕ ದ್ವೇಷದಿಂದಲೇ ಕೊಲೆ ಮಾಡಿರುವ ಅನುಮಾನ ಕಾಡತ್ತದೆ? ಈ ಹತ್ಯೆಯ ಹಿಂದೆ ಅಕ್ರಮ ಗಣಿಗಾರಿಕೆಯ ದಂಧೆಕೋರರು ಹಂತಕನ ಬೆನ್ನಿಗಿರುವ ಶಂಕೆ ವ್ಯಕ್ತವಾಗುತ್ತಿದೆ. ಆದರೆ, ಕೊಲೆಗಾರ ಯಾರು ಎಂಬುದರ ಬಗ್ಗೆ ಮಾಹಿತಿಯನ್ನು ಕಲೆಹಾಕಲು ಪೊಲೀಸರು ವಿವಿಧ ಆಯಾಮಗಳ ತನಿಖೆ ನೆಡೆಸುತ್ತಿದ್ದಾರೆ. ಜೊತೆಗೆ, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನೂ ರಚಿಸಲಾಗಿದೆ. ಈಗ ಪ್ರತಿಮಾ ಅವರ ಫೋನ್‌ ಸ್ವಿಚ್‌ ಆಫ್‌ ಆಗಿದ್ದು ಲಾಕ್ ಕೂಡ ಆಗಿದೆಯಂತೆ ಇನ್ನಷ್ಟು ಮಾಹಿತಿ ಕಲೆಹಾಕಲು ಅವರ ಮೊಬೈಲ್ ರಿಟ್ರಿವ್ ಮಾಡಲು ಪೊಲೀಸರು ಮುಂದಾಗಿದ್ದಾರೆ. ಇನ್ನೂ ಹತ್ಯೆಯಾದ ಫ್ಲಾಟ್ ನ ಸುತ್ತದ ಸ್ಥಳದಲ್ಲಿ ಟವರ್ ಲೋಕೆಷನ್ ಮೊಬೈಲ್‌ ಕಾರ್ಯನಿರ್ವಹಿಸಿದ ಸಂಖ್ಯೆಗಳು ಹಾಗೂ ಸಿಸಿಟಿವಿಯ ದೃಶ್ಯಗಳನ್ನು ಆಧರಿಸಿ ಕೊಲೆ ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಸುಧೀರ್ ವಿಧಾತ ,ಶಿವಮೊಗ್ಗ

9483165999

Leave a Reply

Your email address will not be published. Required fields are marked *

Optimized by Optimole
error: Content is protected !!