ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ಬರ್ಬರ ಹತ್ಯೆ ಪ್ರಕರಣ, ಆರೋಪಿ ಬಂಧನ,ಹಂತಕ ಪ್ರತಿಮಾರ ಕಾರು ಚಾಲಕ!? ದ್ವೇಷಕ್ಕೆ ಬಲಿಯಾದ್ರ ಪ್ರತಿಮಾ?
ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಜಿ ಕಾರು ಚಾಲಕನಿಂದ ಪ್ರತಿಮಾ ಕೊಲೆಯಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಪೋಲಿಸರು ತನಿಖೆಯನ್ನು ಚುರುಕು ಗೊಳಿಸಿದ್ದಾರೆ.
ಬೆಂಗಳೂರು (ನ.6): ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ವೇಳೆ ಕೊಲೆ ಮಾಡಿದ್ದು ಒಬ್ಬನೇ ಎಂಬುದು ಬಯಲಿಗೆ ಬಂದಿದ್ದು, ಪ್ರತಿಮಾರ ಮಾಜಿ ಕಾರು ಚಾಲಕ ಕಿರಣ್ ಎಂಬಾತನೆ ಪ್ರತಿಮಾ ಅವರನ್ನು ಕೊಲೆ ಮಾಡಿದ್ದಾನೆ ಎಂಬುದು ಬಹಿರಂಗವಾಗಿದೆ.
ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರತಿಮಾ ಮತ್ತು ಕಿರಣ್ ನಡುವೆ ಭಿನ್ನಾಭಿಪ್ರಾಯ ಬಂದಿದ್ದು ಈ ಕಾರಣದಿಂದಲೇ ಒಂದು ವಾರದ ಹಿಂದೆ ಚಾಲಕ ಕಿರಣ್ ನನ್ನು ಪ್ರತಿಮಾ ಕೆಲಸದಿಂದ ತೆಗೆದು ಹಾಕಿದ್ದರಂತೆ! ತನ್ನನ್ನು ಕೆಲಸದಿಂದ ತೆಗೆದ ಹಿನ್ನಲೆಯಲ್ಲಿ ಪ್ರತಿಮಾ ಮೇಲೆ ಕಿರಣ್ ನಂಜು ಕಾರುತಲಿದ್ದನಂತೆ. ತನ್ನನ್ನು ಅವಮಾನಿಸಿದ ಪ್ರತಿಮಾರನ್ನು ಮುಗಿಸುವ ಮಟ್ಟಕ್ಕೆ ಆತ ಯೋಚಿಸಿದಂತೆ ಕಾಣುತ್ತದೆ. ನೆಡೆದು ಹೋದ ಈ ಘಟನೆಯನ್ನು ನೋಡಿದರೆ. ಎಲ್ಲವನ್ನೂ ತಲೆ ತುಂಬಿಸಿಕೊಂಡಿದ್ದ ಕಿರಣ್ ಸೈಲೆಂಟಾಗಿ ಪ್ರತಿಮಾ ಮನೆಗೆ ಬರುವುದನ್ನು ಕಾದು ಕುಳಿತು ಕೊಲೆ ಮಾಡಿ ತೆರಳಿದ್ದಾನೆ, ಸದ್ಯ ಇತನ ಬಂಧನವಾಗಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಇತನ ವಿಚಾರಣೆಯ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಲು ಪೊಲೀಸರು ಸಿದ್ದತೆ ನಡೆಸಿಕೊಂಡಿದ್ದಾರೆ
ಪ್ರತಿಮಾ ಕೊಲೆಗೆ ಕೌಟುಂಬಿಕ ಕಾರಣವೆಂದು ಕೆಲವರು, ಅಕ್ರಮ ಕಲ್ಲು ಗಣಿಗಾರಿಕೆ ಕಡಿವಾಣಹಾಕಿದ್ದು ಕಾರಣವೆಂದು ಕೆಲವರು, ಕಾರು ಚಾಲಕನನ್ನು ಸೇವೆಯಿಂದ ಬಿಡುಗಡೆ ಮಾಡಿದ್ದು ಕಾರಣವೆಂದು ಸುದ್ದಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಆಯಾಮಗಳಲ್ಲಿ ಪೋಲಿಸರು ತನಿಖೆ ನಡೆಸಿದ್ದರು. ಈಗಾಗಲೇ ಮೂರ್ನಾಲ್ಕು ಜನರ ಬಂಧನವಾಗಿದೆ ಈ ಹತ್ಯೆ ಚಾಲಕ ಕಿರಣ್ ದ್ವೇಷದ ಹಿನ್ನಲೆಯಲ್ಲಿ ಈ ಮಟ್ಟಕ್ಕೆ ಕೊಲೆಮಾಡಲು ಸಾಧ್ಯವಾ ಎನ್ನುವ ಅನುಮಾನ ಕಾಡುತ್ತಿದೆ. ಈ ಹತ್ಯೆಗೆ ಅಕ್ರಮ ಗಣಿಧನಿಗಳ ಕೈವಾಡ ಇರಬಹುದಾ? ಎನ್ನುವುದನ್ನು ಇಲ್ಲಿ ತಳ್ಳಿ ಹಾಕುವಂತಿಲ್ಲ. ಬಂಧನ ಆಗಿರವ ಆರೋಪಿ ಪ್ರತಿಮಾ ಅವರ ಕಾರು ಚಾಲಕನಾಗಿದ್ದ ಕಾರಣ ಸಾಕಷ್ಟು ವಿಷಯಗಳು ಆತನಿಗೆ ತಿಳಿದಿರುತ್ತದೆ ಮತ್ತು ಅಕ್ರಮ ಗಣಿ ದಂಧೆಕೋರರನ್ಮು ಹತ್ತಿರದಿಂದ ನೋಡಿರುತ್ತಾನೆ ಹೀಗಾಗಿ ಖಡಕ್ ಅಧಿಕಾರಿಯಾಗಿದ್ದ ಪ್ರತಿಮಾರಿಗೆ ಸಾಕಷ್ಟು ಅಕ್ರಮ ದಂಧೆಕೋರರನ್ನು ಮಟ್ಟ ಹಾಕಿದ್ದ ಹಿನ್ನಲೆಯಲ್ಲಿ ವೈರತ್ವ ಕೂಡ ಇತ್ತು ಎನ್ನುವುದು ಬಲವಾಗಿ ಕೇಳಿ ಬಂದಿದೆ. ಇಲಾಖೆಯಲ್ಲಿ ಒಳ್ಳೆಯ, ದಕ್ಷ, ಪ್ರಾಮಾಣಿಕ ಅಧಿಕಾರಿಯೆಂಬ ಹೆಸರು ಪಡೆದಿದ್ದ ಪ್ರತಿಮಾರಿಗೆ ವಿರುದ್ಧ ಕೆಲವು ಮಂದಿ ದಂಧೆಕೋರರು ಮಚ್ಚು ಮಸಿಯುತ್ತಿದ್ದರಂತೆ. ಈ ಹತ್ಯೆ ಯಾವ ಕಾರಣಕ್ಕೆ ನೆಡೆದಿದೆ ಎನ್ನುವುದು ಬಹಿರಂಗವಾಗಬೇಕು. ಈಗಾಗಲೇ ಪೋಲಿಸರು ತನಿಖೆಯನ್ನು ಚುರುಕುಗೊಳಿಸಿದ್ದು.ಬಂಧಿತನಿಂದ ಹತ್ಯೆ ಹಿಂದಿನ ಅಷ್ಟು ಸತ್ಯವನ್ನು ಕಕ್ಕಿಸಿದ್ದಾರೆ. ಈ ಪ್ರಕರಣಕ್ಕೆ ಸಂಭಂದಿಸಿದಂತೆ ಪೋಲಿಸರು ಇನ್ನಷ್ಟು ಮಂದಿಯನ್ನು ಬಂಧಿಸಿ ಠಾಣೆಗೆ ಕರೆತರುವ ಸಾಧ್ಯತೆ ಇದೆ.
ಸುಧೀರ್ ವಿಧಾತ ,ಶಿವಮೊಗ್ಗ