Headlines

ರಾಮನಗರ: ಸಾಧ್ಯವಾದರೆ ನನ್ನನ್ನು ಕ್ಷಮಿಸು ಬಿಡೆ ಅಮ್ಮ.! ಈ ದೇಹ ಮಣ್ಣಾಗಲಿ…ಎಂದು ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆಗೆ ಶರಣು.!

ಅಶ್ವಸೂರ್ಯ/ರಾಮನಗರ :ಪ್ರೀತಿ ಹೆಸರಿನಲ್ಲಿ ಅಮಾಯಕ ಹೆಣ್ಣು ಮಕ್ಕಳ ಬದುಕು ಇತ್ತೀಚಿನ ದಿನಗಳಲ್ಲಿ ಛಿದ್ರವಾಗುತ್ತಿದೆ.ಇದಕ್ಕೆ ಪೂರಕ ಎಂಬಂತೆ ರಾಮನಗರದಲ್ಲಿ ಘಟನೆಯೊಂದು ನಡೆದು ಹೋಗಿದೆ.! ಪ್ರೀತಿ ಹೆಸರಲ್ಲಿ ಸಲುಗೆಯಿಂದ ವರ್ತಿಸಿ, ನಂತರ ಆಕೆಯ ಖಾಸಗಿ ಫೋಟೋಗಳನ್ನು ತೋರಿಸಿ, ಹೆದರಿಸಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ ಹಿನ್ನಲೆ ಯುವತಿಯೊಬ್ಬಳು ಡೆತ್​​ನೋಟ್​​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ವರದಿಯಾಗಿದೆ.! ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ ವಿಭೂತಿಕೆರೆ ಗ್ರಾಮದ ಯುವತಿ 22 ವರ್ಷದ ವರ್ಷಿಣಿ ಎಂಬ ಯುವತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತುಮಕೂರಿನ ಕುಣಿಗಲ್ ಮೂಲದ ಅಭಿ ಎಂಬಾತನ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.
ವರ್ಷಿಣಿ ಮೈಸೂರಿನ ಖಾಸಗಿ ಕಾಲೇಜಿನಲ್ಲಿ MSC ವ್ಯಾಸಂಗ ಮಾಡುತ್ತಿದ್ದಳು. ಸಾಯುವ ಮುನ್ನ ವರ್ಷಿಣಿ ಡೆತ್ ನೋಟ್ ಬರೆದಿಟ್ಟು ಅಭಿ ದೇವರದೊಡ್ಡಿ ವಿರುದ್ಧ ಆರೋಪ ಮಾಡಿದ್ದಾಳೆ. ಅಮ್ಮ ಸಾಧ್ಯವಾದರೆ ನನ್ನ ಕ್ಷಮಿಸು. ಅವನನ್ನು ನಂಬಿ ಮೋಸ ಹೋದೆ,

ಪ್ರೀತಿಸಿದ ಯುವಕ ಲೈಂಗಿಕವಾಗಿ ಬಳಿಸಿಕೊಂಡು ಬಳಿಕ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ನೇಣಿಗೆ ಶರಣಾದ ಘಟನೆ ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ನಡೆದಿದೆ. ನೇಣಿಗೆ ಶರಣಾದ ಯುವತಿಯನ್ನು ವರ್ಷಿಣಿ (22) ಎಂದು ಗುರುತಿಸಲಾಗಿದೆ. ಯುವತಿ ಡೆತ್ ನೋಟ್ ಬರೆದಿಟ್ಟು, ಬಾನುವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಳೆದ ಎರಡು ವರ್ಷಗಳಿಂದ ವರ್ಷಿಣಿ ಹಾಗೂ ಯುವಕ ಪರಸ್ಪರ ಪ್ರೀತಿಸುತ್ತಿದ್ದರಂತೆ. ಆತ ಆಕೆಯ ಮನಸ್ಸೊ ಇಚ್ಚೆ ಬಳಸಿಕೊಂಡು ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಸಾಯುವ ಮುನ್ನ ಯುವತಿ ಬರೆದ ಡೆತ್ ನೋಟ್‌ನಲ್ಲಿ ನನ್ನ ಸಾವಿಗೆ ದೇವರದೊಡ್ಡಿ ಗ್ರಾಮದ ಅಭಿ ಎಂಬ ಯುವಕ ಕಾರಣ ಎಂದು ಬರೆದಿದ್ದಾಳೆ. ಅಭಿ ಪ್ರೀತಿ ಹೆಸರಲ್ಲಿ ಮೋಸ ಮಾಡಿದ್ದಾನೆ. ನನ್ನನ್ನು ಬ್ಲಾಕ್‌ಮೇಲ್ ಮಾಡಿ ಪ್ರಗ್ನೆಂಟ್ ಮಾಡಿ ಬಳಿಕ ಗರ್ಭಪಾತ ಮಾಡಿಸಿದ್ದ‌. ಹಣ ಹಾಗೂ ಚಿನ್ನದ ಉಂಗುರ ಪಡೆದು ವಂಚಿಸಿದ್ದಾನೆ. ಈಗ ಮತ್ತೆ ಕಿರುಕುಳ ನೀಡುತಿದ್ದಾನೆ. ನನ್ನ ಸಾವಿಗೆ ಕಾರಣನಾದ ಅಭಿಯನ್ನು ಸುಮ್ಮನೆ ಬಿಡಬೇಡಿ. ನನ್ನ ಹಾಗೆ ಮತ್ತೆ ಯಾರಿಗೂ ಮೋಸ ಆಗಬಾರದು ಎಂದು ಬರೆದಿದ್ದಾಳಂತೆ.

ನನ್ನ ಕೆಲ ಖಾಸಗಿ ಫೋಟೋಗಳನ್ನು ತೋರಿಸಿ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸಿದ, ಫೋಟೋಗಳನ್ನು ಡಿಲೀಟ್​ ಮಾಡೋದಾಗಿ ಆತ ಹೇಳಿದ್ದರಿಂದ ಆತನ ಜೊತೆ ದೇಹ ಹಂಚಿಕೊಂಡೆ, ಪರಿಣಾಮ ಗರ್ಭಿಣಿ ಆದೆ. ಆತನೇ ಕರೆದುಕೊಂಡು ಹೋಗಿ ಗರ್ಭಪಾತವನ್ನೂ ಮಾಡಿಸಿದ್ದನು. ಈಗ ಬದುಕುವ ಆಸೆ ಇಲ್ಲ. ಅದಕ್ಕಾಗಿ ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದೇನೆ. ಅಮ್ಮ ಸಾಧ್ಯವಾದರೆ ನನ್ನನ್ನು ಕ್ಷಮಿಸು ಎಂದು ವರ್ಷಿಣಿ ಡೆಟ್ ನೋಟ್ ನಲ್ಲಿ ಬರೆದಿದ್ದಾಳೆ.

Leave a Reply

Your email address will not be published. Required fields are marked *

Optimized by Optimole
error: Content is protected !!