
ಶಿವಮೊಗ್ಗ : ಹೆಸರಾಂತ ಸ್ತ್ರಿರೋಗ ತಜ್ಞೆ ಮತ್ತು ಆಕೆಯ ಪುತ್ರನ ದುರಂತ ಅಂತ್ಯ.!ಇಬ್ಬರು ತಮ್ಮದೆ ಮನೆಯಲ್ಲಿ ಶವವಾಗಿ ಪತ್ತೆ.!
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ನಗರದ ಹೆಸರಾಂತ ಸ್ತ್ರಿರೋಗ ತಜ್ಞೆ ಮತ್ತು ಆಕೆಯ ಪುತ್ರ ಆತ್ಮಹತ್ಯೆಗೆ ಶರಣಾಗಿ ದುರಂತ ಅಂತ್ಯ ಕಂಡಿದ್ದಾರೆ. ತಾಯಿ ಮಗ ರಾತ್ರಿ ಜಗಳವಾಡಿದ್ದಾರೆ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.! ತಾಯಿ ಮಗನ ನಡುವೆ ರಾತ್ರಿ ಹಣದ ವಿಚಾರವಾಗಿ ಸಾಕಷ್ಟು ಜಗಳವಾಗಿದೆಯಂತೆ. ಬಳಿಕ ಇಬ್ಬರು ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದಾರೆ. ಬೆಳಗ್ಗೆ ನೋಡಿದಾಗ ಇಬ್ಬರು ಆತ್ಮಹತ್ಯೆಗೆ ಶರಣಾಗಿ ದುರಂತ ಅಂತ್ಯಕಂಡಿರುವುದು ಬೆಳಕಿಗೆ ಬಂದಿದೆ.
ಖ್ಯಾತ ಸ್ತ್ರಿ ರೋಗ ತಜ್ಞೆ ಜಯಶ್ರಿ ಹಾಗೂ ಅವರ ಪುತ್ರ ಆಕಾಶ್ ಸಾವಿಗೆ ಶರಣಾಗಿದ್ದಾರೆ.ತಾಯಿ ಹಾಗೂ ಮಗನ ನಡುವೆ ರಾತ್ರಿ ಹಣದ ವಿಚಾರವಾಗಿ ಮಾತುಕತೆ ನಡೆದಿದೆ, ಮಾತಕತೆ ಜಗಳಕ್ಕೆ ತಿರುಗಿದೆ. ಜಗಳವಾಡಿದ ಬಳಿಕ ತಾಯಿ ಹಾಗೂ ಮಗ ಇಬ್ಬರು ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದಾರೆ, ಸೊಸೆ ಬೇರೊಂದು ಕೋಣೆಯಲ್ಲಿ ಮಲಗಿದ್ದಾರೆ. ಆದರೆ ಬೆಳಗ್ಗೆ ನೋಡಿದಾಗ ಜಯಶ್ರಿ ಹಾಗೂ ಆಕಾಶ್ ದುರಂತ ಅಂತ್ಯಕಂಡಿದ್ದಾರೆ. ಈ ದುರಂತದ ಬಳಿಕ ಇದೇ ಮನೆಯಲ್ಲಿ ಸರಣಿ ದುರಂತದ ಘಟನೆಯಿಂದ ಕುಟುಂಬದ ಸದಸ್ಯರು ಸಾವಿನಮನೆ ಸೇರಿದ್ದಾರೆ.

ಸಾವಿಗೆ ಕಾರಣವೇನು.?
ಶಿವಮೊಗ್ಗ ನಗರದ ಅಶ್ವಥ್ ನಗರ ಬಡಾವಣೆಯಲ್ಲಿ ಈ ಒಂದು ಘಟನೆ ಬೆಳಕಿಗೆಬಂದಿದೆ.ನಗರದ ಹೊಮ್ಮರಡಿ ಆಸ್ಪತ್ರೆಯ ಪ್ರಖ್ಯಾತ ಸ್ತ್ರೀರೋಗ ತಜ್ಞೆ ಜಯಶ್ರೀ (56) ಅವರ ಪುತ್ರ ಆಕಾಶ್ ( 36) ತಮ್ಮ ಬದುಕನ್ನು ತಮ್ಮ ಕೈಯಾರೆ ಅಂತ್ಯಗೊಳಿಸಿಕೊಂಡ ದುರ್ದೈವಿಗಳು. ಜಯಶ್ರಿ ಖ್ಯಾತ ಸ್ತ್ರಿ ರೋಗ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದರು.ಸಾಕಷ್ಟು ಶ್ರೀಮಂತರು ಮತ್ತು ತಮ್ಮ ವೃತ್ತಿಯಿಂದ ಉತ್ತಮ ಆದಾಯವನ್ನೂ ಗಳಿಸುತ್ತಿದ್ದರು. ಆದರೆ ಪುತ್ರ ಆಕಾಶ್ ಹಲವು ಉದ್ಯಮಗಳಲ್ಲಿ ಕೈ ಹಾಕಿ ಸಾಕಷ್ಟು ಹಣವನ್ನು ಕಳೆದುಕೊಂಡಿದ್ದನಂತೆ.! ಇತ್ತೀಚೆಗೆ ರಿಯಲ್ ಎಸ್ಟೇಟ್ ಉದ್ಯಮ ನಡೆಸಲು ಆಕಾಶ್ ಮುಂದಾಗಿದ್ದರು. ಇದಕ್ಕಾಗಿ ತಾಯಿ ಜಯಶ್ರಿ ಬಳಿ 3 ಕೋಟಿ ರೂಪಾಯಿ ಹಣ ಕೇಳಿದ್ದರಂತೆ. ಇದೇ ವಿಚಾರಕ್ಕೆ ತಾಯಿ ಮಗನ ನಡುವೆ ರಾತ್ರಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ.
ತಡರಾತ್ರಿ ವರೆಗೂ ಜಗಳಮಾಡಿ
ಹಣ ನೀಡುವಂತೆ ಆಕಾಶ್ ಪಟ್ಟು ಹಿಡಿದಿದ್ದನಂತೆ. ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಎಂದು ತಾಯಿ ಜಯಶ್ರಿ ಖಡಕ್ ಆಗಿ ಹೇಳಿದ್ದಾರೆ. ಇದೇ ವಿಚಾರದಲ್ಲಿ ಇಬ್ಬರ ಜಗಳ ತಾರಕಕ್ಕೇರಿದೆ. ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ಕನಿಷ್ಠ 3 ಕೋಟಿ ಬೇಕೆ ಬೇಕು ಎಂದು ಆಕಾಶ್ ಪಟ್ಟು ಹಿಡಿದಿದ್ದಾರೆ. ಹೀಗಾಗಿ ತಡ ರಾತ್ರಿವರೆಗೂ ಜಗಳ ಮುಂದುವರಿದಿದೆ. ಇತ್ತ ತಾಯಿ ಮಗನ ಜಗಳದ ನಡುವೆ ಸೊಸೆ ಮೋನಿಕಾ ಮೂಗು ತೂರಿಸಲು ಹೋಗಿಲ್ಲ. ಬೇರೆ ಕೋಣೆಗೆ ಹೋಗಿ ಮಲಗಿದ್ದಾರೆ ಅಕಾಶ್ ಪತ್ನಿ ಮೋನಿಕಾ.!

ತಾಯಿ ಹಾಗೂ ಮಗ ತಡ ರಾತ್ರಿವರೆಗೂ ಜಗಳ ಮಾಡಿ ಬೇರೆ ಬೇರೆ ಕೋಣೆಯಲ್ಲಿ ಮಲಗಿದ್ದಾರೆ. ಇತ್ತ ಅಕಾಶ್ ಪತ್ನಿ ಮೋನಿಕಾ ಬೇರೆ ಕೋಣೆಯಲ್ಲಿ ಮಲಗಿದ್ದಾರೆ. ತಡರಾತ್ರಿ ಅವರಿಬ್ಬರೂ ಜಗಳವಾಡಿ ಪ್ರತ್ಯೇಕ ಕೋಣೆಗಳಲ್ಲಿ ಮಲಗಿದ್ದ ಹಿನ್ನೆಲೆಯಲ್ಲಿ ಸೊಸೆ ಮೋನಿಕ ಗಮನ ಹರಿಸಿರಲಿಲ್ಲ .
ಮಾರನೆ ದಿನ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.
ಬೆಳಗ್ಗೆ ಸೊಸೆ ಮೋನಿಕಾ ಎದ್ದರೂ ಅತ್ತೆ ಜಯಶ್ರಿ ಹಾಗೂ ಗಂಡ ಆಕಾಶ್ ಕುರಿತು ಹೆಚ್ಚಿನ ಗಮನ ಹರಿಸಲು ಹೋಗಿಲ್ಲ. ಮನೆಕೆಲಸದವರರು ಕೋಣೆ ಶುಚಿಗೊಳಿಸುವಾಗ ಘಟನೆ ಬೆಳಕಿಗೆ ಬಂದಿದೆ. ಇಬ್ಬರ ಆತ್ಮಹತ್ಯೆಗೆ ಶರಣಾಗಿದ್ದಾರೆ.ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮೋನಿಕಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತದೇಹವಿರುವ ಕೋಣೆಗಳ ಸ್ಥಳ ಪರಿಶೀಲನೆಮಾಡಿ ನಂತರ ಎರಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿಕೊಟ್ಟು ದೂರು ದಾಖಲಿಸಿಕೊಂಡಿದ್ದಾರೆ.

ಒಂದೇ ಮನೆಯಲ್ಲಿ ನಾಲ್ವರ ದುರಂತ ಅಂತ್ಯ.!
ಜಯಶ್ರಿ ಹಾಗೂ ಆಕಾಶ್ ದುರಂತ ಅಂತ್ಯದ ಬೆನ್ನಲ್ಲೇ ಇದೇ ಮನೆಯಲ್ಲಿ ಕೆಲ ವರ್ಷಗಳ ನಡುವೆ ಇಬ್ಬರು ಬದುಕು ಅಂತ್ಯಗೊಳಿಸಿಕೊಂಡಿದ್ದಾರೆ. ಜಯಶ್ರೀ ಪತಿ ಮಕ್ಕಳ ತಜ್ಞರಾಗಿದ್ದ ಡಾ ನಾಗರಾಜ್ ಹತ್ತು ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದಾರು, ಕಳೆದ ಮೂರು ವರ್ಷಗಳ ಹಿಂದೆ 2022 ನವೆಂಬರ್ 6 ರಂದು ಆಕಾಶ್ ಮೊದಲ ಪತ್ನಿ ನವ್ಯಶ್ರೀ ಕೂಡ ಮದುವೆಯಾದ ಐದೆ ತಿಂಗಳಿಗೆ ಇದೇ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರಂತೆ.! ಇದೀಗ ಒಂದೇ ದಿನ ತಾಯಿ ಹಾಗೂ ಮಗ ಇಬ್ಬರು ಪ್ರತ್ಯೇಕ ಕೋಣೆಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ… ಈ ಘಟನೆಯೊಂದಿಗೆ ಒಟ್ಟು ನಾಲ್ವರು ಇದೇ ಮನೆಯಲ್ಲಿ ದುರಂತ ಅಂತ್ಯಕಂಡಿದ್ದಾರೆ.

ಘಟನೆಗೆಯ ಸುತ್ತ….
ಡಾ. ಜಯಶ್ರೀ ಅವರು ತಮ್ಮ ಮನೆಯ ಕೆಳ ಅಂತಸ್ತಿನಲ್ಲಿ ಪ್ರಾಣ ಕಳೆದುಕೊಂಡಿದ್ದರೆ, ಪುತ್ರ ಆಕಾಶ್ ಮೊದಲ ಮಹಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ತಾಯಿ ಮತ್ತು ಮಗ ಇಬ್ಬರೂ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂಬ ಮಾಹಿತಿಯಿದೆ. ಅದರಲ್ಲಿ ತಮ್ಮ ಹೆಸರಿನಲ್ಲಿದ್ದ ಆಸ್ತಿಯನ್ನು ಸೊಸೆಯ ಹೆಸರಿಗೆ ಬರೆದಿಟ್ಟು ಬಳಿಕ ಈ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೌಟುಂಬಿಕ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ. 15 ತಿಂಗಳ ಹಿಂದೆ ಮೃತ ಆಕಾಶ್ ಅವರ ಮೊದಲ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ಮೇ ತಿಂಗಳಲ್ಲಿ ಆಕಾಶ್ ಅವರಿಗೆ ಎರಡನೇ ಮದುವೆಯಾಗಿತ್ತು.
ಮೂಲಗಳ ಪ್ರಕಾರ, ಆಕಾಶ್ ರಿಯಲ್ ಎಸ್ಟೇಟ್ನಲ್ಲಿ ತಾನು ಹಣ ತೊಡಿಸಬೇಕು ಎಂದು ಅದಕ್ಕಾಗಿ ನನಗೆ ಹಣ ಬೇಕು ಎಂದು ಕೇಳುತ್ತಿದ್ದ ಎನ್ನಲಾಗುತ್ತಿದೆ. ಇದಕ್ಕೋಸ್ಕರನೇ ತಾಯಿ ಮತ್ತು ಮಗನ ಮಧ್ಯೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು. ಇದು ಇತ್ತೀಚಿಗೆ ಮದುವೆಯಾಗಿ ಬಂದ ನವ್ಯಗೆ ಕೂಡ ಮಾಮೂಲಾಗಿತ್ತು. ಆದರೆ ಈ ಜಗಳ ವಿಕೋಪಕ್ಕೆ ಹೋಗಿದ್ದು ಅದು ಈ ಆತ್ಮಹತ್ಯೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಈ ಪ್ರಕರಣದಲ್ಲಿ ಮೊದಲು ಡಾಕ್ಟರ್ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದು ಡೆತ್ ನೋಟ್ ಬರೆದಿಟ್ಟಿದ್ದಾರೆ ಇದನ್ನು ನೋಡಿದ ಮಗ ಆಕಾಶ್ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ ಆದರೆ ಮತ್ತೊಂದು ಮೂಲಗಳ ಪ್ರಕಾರ ಇಬ್ಬರಿಗೂ ಮೊದಲನೇ ಪತ್ನಿಯ ಸಾವಿನ ಭಯ, ಖಿನ್ನತೆ ಕಾಡುತ್ತಿತ್ತು ಎನ್ನಲಾಗುತ್ತಿದೆ. ಮೂಲತಃ ನ್ಯಾಮತಿಯ ನಿವಾಸಿಗಳಾದ ಹೊಮ್ಮರಡಿ ಕುಟುಂಬಕ್ಕೆ ಆಸ್ತಿಗೇನು ಕೊರತೆ ಇರಲಿಲ್ಲ 25 ಎಕರೆ ತೋಟ, ಇರಲು ಮನೆ, ಹೊಮ್ಮರಡಿ ಕಾಂಪ್ಲೆಕ್ಸ್ ಅದರ ಬಾಡಿಗೆ ಹಣ, ಹೊನ್ನಾಳಿಯಲ್ಲಿ ಸೈಟ್ಗಳು ಎಲ್ಲವೂ ಇದ್ದವು ಆದರೆ ಬಹು ಮುಖ್ಯವಾಗಿ ಬೇಕಾಗಿದ್ದ ಮಾನಸಿಕ ನೆಮ್ಮದಿ ಇವರಿಗೆ ಈ ಮನೆಯಲ್ಲಿ ಇರಲಿಲ್ಲ ಅದುವೇ ಈ ಆತ್ಮಹತ್ಯೆಗೆ ಕಾರಣವಾಗಿರಬಹುದು ಎನ್ನಲಾಗಿದೆ….


