ಕಂಪನಿಗಳು ತಮ್ಮ CSR ನಿಧಿಯನ್ನು ನಮ್ಮ ರಾಜ್ಯದೊಳಗೆ ವಿನಿಯೋಗ ಮಾಡಬೇಕು. ಕೂಡಲೇ ಸರ್ಕಾರ ಸೂಕ್ತ ಕಾನೂನು ರಚನೆ ಮಾಡಬೇಕು : ಐಡಿಯಲ್ ಗೋಪಿ.
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಸಿಎಸ್ಆರ್ (CSR) ನಿಧಿ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ
ಕಾರ್ಪೊರೇಟ್ ಸಂಸ್ಥೆ ಗಳು ಮತ್ತು ಕಂಪನಿ ಗಳು ತಮ್ಮ CSR ನಿಧಿಯನ್ನು ನಮ್ಮ ರಾಜ್ಯದೊಳಗೆ ವಿನಿಯೋಗ ಮಾಡಬೇಕು ಕೂಡಲೇ ಸರ್ಕಾರ ಸೂಕ್ತ ಕಾನೂನು ರಚನೆ ಮಾಡಬೇಕು.

ಕಾರಣ ವಿದೇಶಿ ಮತ್ತು ಹೊರರಾಜ್ಯದ ಕಂಪನಿ ಗಳು ತಮ್ಮ ವ್ಯಾಪಾರ ವಹಿವಾಟು ಗಳನ್ನು ರಾಜ್ಯದಲ್ಲಿ ಮಾಡುತ್ತಿದ್ದಾರೆ ಅವರು ತಮಗೆ ಬರುವ ವಾರ್ಷಿಕ ನಿವ್ವಳ ಲಾಭಂಶದಲ್ಲಿ 2% ಹಣವನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಮೂಲಕ ರಾಜ್ಯದ ಹಿತ ಕಾಪಾಡುವಲ್ಲಿ ವಿಫಲ ವಾಗಿದ್ದಾರೆ.
ಕೆಲ ಕಂಪನಿ ಗಳು ತಮಗೆ ಇಷ್ಟ ಬಂದಂತೆ ಹೊರ ರಾಜ್ಯಕ್ಕೆ ತಮ್ಮ ಇಚ್ಛೆ ಅನುಸಾರ ಖರ್ಚು ಮಾಡುತ್ತಿರುವುದು ಸರ್ಕಾರ ಗಮನಿಸಿ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು
ಈ ನಿಧಿ ಯನ್ನು ಸಮರ್ಪಕ ವಾಗಿ ರಾಜ್ಯದ ಶಿಕ್ಷಣ ಹಸಿವು ಬಡತನ ನಿರ್ಮೂಲನೆ ಕೊಳಗೇರಿ ಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಮಾಡಲು ಸಂಸ್ಥೆ ಗಳಿಗೆ ಸೂಚನೆ ನೀಡಬೇಕೆಂದು ಈ ಮೂಲಕ ಸೂಕ್ತ ವಾದ ಕಾಯ್ದೆಯನ್ನು ತರಬೇಕೆಂದು ಆಗ್ರಹಿಸುತ್ತೇನೆ.
- ಐಡಿಯಲ್ ಗೋಪಿ, ಮಾಜಿ ಅಧ್ಯಕ್ಷರು
ಹಣಕಾಸು ಕಂದಾಯ ತೆರಿಗೆ ನಿರ್ವಹಣೆ
ಸ್ಥಾಯಿ ಸಮಿತಿ. ಮಹಾನಗರಪಾಲಿಕೆ
ಶಿವಮೊಗ್ಗ.
---------------

ಸಿಎಸ್ಆರ್ (CSR) ನಿಧಿ ಎಂದರೆ
ಸಿಎಸ್ಆರ್ (CSR) ನಿಧಿ ಎಂದರೆ ಒಂದು ಕಂಪನಿಯು ಸಾಮಾಜಿಕ ಮತ್ತು ಪರಿಸರ ಜವಾಬ್ದಾರಿಗಳನ್ನು ಪೂರೈಸಲು ಮೀಸಲಿಟ್ಟಿರುವ ಹಣಕಾಸು ಸಂಪನ್ಮೂಲವಾಗಿದೆ. ಭಾರತದಲ್ಲಿ, ಕಂಪನಿಗಳ ಕಾಯಿದೆ, 2013 ರ ಪ್ರಕಾರ ಒಂದು ನಿರ್ದಿಷ್ಟ ಹಣಕಾಸಿನ ಮಿತಿ (₹500 ಕೋಟಿ ನಿವ್ವಳ ಮೌಲ್ಯ ಅಥವಾ ₹1,000 ಕೋಟಿ ವಹಿವಾಟು ಅಥವಾ ₹5 ಕೋಟಿ ನಿವ್ವಳ ಲಾಭ) ಮೀರಿದ ಕಂಪನಿಗಳು ತಮ್ಮ ಸರಾಸರಿ ನಿವ್ವಳ ಲಾಭದ ಕನಿಷ್ಠ ಶೇ. 2ರಷ್ಟನ್ನು ಈ ನಿಧಿಯಿಂದ ಸಾಮಾಜಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸಬೇಕು.
ಸಿಎಸ್ಆರ್ ನಿಧಿಯ ಮುಖ್ಯ ಅಂಶಗಳು:
• ಕಾನೂನು ಅನ್ವಯ: ಭಾರತದಲ್ಲಿ, ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 135 ರ ಅಡಿಯಲ್ಲಿ CSR ಅನ್ನು ಕಡ್ಡಾಯಗೊಳಿಸಲಾಗಿದೆ.
• ಅರ್ಹತಾ ಮಾನದಂಡ: ಈ ಕಾಯಿದೆಯ ಅನ್ವಯಕ್ಕೆ ಬರುವ ಕಂಪನಿಗಳು ನಿರ್ದಿಷ್ಟ ನಿವ್ವಳ ಮೌಲ್ಯ, ವಹಿವಾಟು ಅಥವಾ ನಿವ್ವಳ ಲಾಭವನ್ನು ಹೊಂದಿರಬೇಕು.
• ನಿಧಿ ಹಂಚಿಕೆ: ಕಂಪನಿಗಳು ತಮ್ಮ ಮೂರು ವರ್ಷಗಳ ಸರಾಸರಿ ನಿವ್ವಳ ಲಾಭದ ಕನಿಷ್ಠ ಶೇ. 2 ರಷ್ಟು ಮೊತ್ತವನ್ನು
• CSR ಚಟುವಟಿಕೆಗಳಿಗೆ ಖರ್ಚು ಮಾಡಬೇಕು.
CSR ಚಟುವಟಿಕೆಗಳು: ಈ ನಿಧಿಯನ್ನು ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಗ್ರಾಮೀಣಾಭಿವೃದ್ಧಿ ಮುಂತಾದ ವಿವಿಧ ಸಾಮಾಜಿಕ ಕಾರ್ಯಕ್ರಮಗಳಿಗೆ ಬಳಸಬಹುದು. ಈ ಚಟುವಟಿಕೆಗಳನ್ನು ಕಂಪನಿಗಳ ಕಾಯಿದೆಯ ವೇಳಾಪಟ್ಟಿ VII ರ ಅಡಿಯಲ್ಲಿ ನಿರ್ದಿಷ್ಟಪಡಿಸಲಾಗಿದೆ.
• ಪರಿಣಾಮ: CSR ನಿಧಿಯ ಬಳಕೆ ಕಂಪನಿಗಳ ಬ್ರ್ಯಾಂಡ್ ಇಮೇಜ್ ಅನ್ನು ಸುಧಾರಿಸುವುದಲ್ಲದೆ, ಸಮಾಜ ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಸಹಾಯ ಮಾಡುತ್ತದೆ.


