ಬೆಂಗಳೂರು : ಡಿಸೆಂಬರ್11 ರಂದು ತೆರೆಗೆ ಬರಲಿರುವ “ಡೆವಿಲ್” ಸಿನಿಮಾದ ಬಗ್ಗೆ ನಟಿ ರಮ್ಯಾ ಎನಂದ್ರು.?

news.ashwasurya.in
ಅಶ್ವಸೂರ್ಯ/ಬೆಂಗಳೂರು :
ಚಾಲೆಜಿಂಗ್ಸ್ಟಾರ್ ದರ್ಶನ್ ಅಭಿನಯದ ಬಹುನೀಕ್ಷಿತ ಸಿನಿಮಾ “ಡೆವಿಲ್” ಡಿಸೆಂಬರ್ 11ರಂದು ರಾಜ್ಯದಂತ ತೆರೆಗೆ ಬರಲಿದೆ. ಈ ಸಿನಿಮಾಕ್ಕೆ ಸ್ಯಾಂಡಲ್ವುಡ್ ಕ್ವೀನ್ ಮೋಹಕ ನಟಿ ರಮ್ಯಾ ಶುಭಕೋರಿದ್ದಾರೆ. ದರ್ಶನ್ ಅಭಿಮಾನಿಗಳು ಕೆಲವು ತಿಂಗಳ ಹಿಂದೆ ರಮ್ಯಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೀಳುಮಟ್ಟದಲ್ಲಿ ತೇಜೋವಧೆ ಮಾಡಿದ್ದಾರೆ..ಆದರೂ ಇದೆಲವನ್ನೂ ಮರೆತು ನಟಿ ರಮ್ಯಾ ಅವರು ದರ್ಶನ್ ಅಭಿನಯದ ಡೆವಿಲ್ ಸಿನಿಮಾಕ್ಕೆ ಶುಭಕೋರಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ವಿಚಾರವಾಗಿ ಮೊದಲಿನಿಂದಲೂ ರಮ್ಯಾ ನ್ಯಾಯಾದ ಪರ ನಿಂತಿದ್ದಾರೆ..ಯಾರೇ ಆಗಿದ್ದರೂ ಸರಿ ಕೊಲೆ ಮಾಡಿದ ತಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದು ಧ್ವನಿ ಎತ್ತಿದ್ದರರು ಅದು ಸರಿಯು ಹೌದು.ಈ ಒಂದು ಹೇಳಿಕೆ ದರ್ಶನ್ ಫ್ಯಾನ್ಸ್ ರಮ್ಯಾ ವಿರುದ್ಧ ತಿರುಗಿ ಬಿದ್ದಿದ್ದರು.ಸೋಶಿಯಲ್ ಮೀಡಿಯಾ ಕಮೆಂಟ್ ಬಾಕ್ಸ್ನಲ್ಲಿ ಅತ್ಯಂತ ಕೀಳುಮಟ್ಟದಲ್ಲಿ ತೇಜೋವಧೆ ಮಾಡಲಾಗಿತ್ತು.ಈ ಬಗ್ಗೆ ರಮ್ಯಾ ಎಲ್ಲೂ ಕುಗ್ಗದೆ ಗಟ್ಟಿಯಾಗೇ ತನ್ನ ಪರ ತಾನೇ ನಿಂತು ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರು ನೀಡುವ ಮೂಲಕ ಜೈಲಿಗೆ ಕಳುಹಿಸಿ ತಕ್ಕ ಪಾಠ ಕಲಿಸಿದ್ದರು.. ರಮ್ಯಾ ತಪ್ಪಿನ ಪರ ಧ್ವನಿ ಎತ್ತುತಲೆ ಬಂದಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರರಿಗೆ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು ಬಲವಾದ ಸಂದೇಶವನ್ನು ರವಾನಿಸುತ್ತದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಒಂದು ವಿಚಾರ ಹೇಳಲು ಬಯಸುತ್ತೇನೆ. ಸರಿಯಾದ ರೀತಿಯಲ್ಲಿ ನಡೆಯಿರಿ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿ. ನ್ಯಾಯ ಸಿಗುವುದು ತಡವಾಗಬಹುದು ಮತ್ತು ಕಠಿಣ ಎನಿಸಬಹುದು ಎಂದು ರಮ್ಯಾ ಪೋಸ್ಟ್ ಮಾಡಿದರು.

ಈ ವಿಚಾರಕ್ಕೆ ನಟಿ ರಮ್ಯಾ ಹಾಗೂ ದರ್ಶನ್ ಫ್ಯಾನ್ಸ್ ವಾರ್ ತಾರಕಕ್ಕೇರಿತ್ತು. ಈ ವೇಳೆ ನೇರವಾಗಿ ದರ್ಶನ್ ಬಗ್ಗೆ ನಟಿ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದರು. ತಮ್ಮ ಅಭಿಮಾನಿಗಳಿಗೆ ದರ್ಶನ್ ಬುದ್ದಿ ಹೇಳಬೇಕು ಎಂದಿದ್ದರು.ಈಗ ದರ್ಶನ್ ಅವರು ಜೈಲಿನಲ್ಲಿರುವಾಗಲೆ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ..ರಮ್ಯಾ ಇದೆಲ್ಲಾವನ್ನು ಮರೆತು ಡೆವಿಲ್ ಸಿನಿಮಾ ಬಗ್ಗೆ ಮಾತನಾಡಿ ದರ್ಶನ್ ಅಭಿನಯದ ಡೆವಿಲ್ ಸಿನಿಮಾಕ್ಕೆ ಒಳ್ಳೆಯದಾಗಲಿ ಅಂತಾ ಶುಭ ಕೋರುವ ಮೂಲಕ ಮತ್ತೆ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ..ಕನ್ನಡ ಸಿನಿಮಾ ಮೇಲಿನ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ…


