

ಬೆಂಗಳೂರು : ಸಂಪುಟ ಪುನಾರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್.! ಅಂದರ್ ಯಾರು.? ಬಾಹರ್ ಯಾರು .?

news.ashwasurya.in
ಅಶ್ವಸೂರ್ಯ/ಬೆಂಗಳೂರು: ಬಿಹಾರದಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿನ ಬೆನ್ನಿಗೆ ಕರ್ನಾಟಕದಲ್ಲಿ ಸಂಪುಟ ಪುನಾರಚನೆಯ ಚರ್ಚೆ ಮುನ್ನಲೆಗೆ ಬಂದಿದೆ. ಸಂಪುಟ ಪುನಾರಚನೆಗೆ ರಾಹುಲ್ ಗಾಂಧಿ ಅಸ್ತು ಎಂದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ 12 ಸಚಿವರನ್ನು ಕೈ ಬಿಟ್ಟು ಖಾಲಿ ಇರುವ 2 ಸ್ಥಾನವನ್ನು ಸೇರಿ ಹೊಸಬರಿಗೆ ಹಂಚಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ 12 ಸಚಿವರ ಕೈ ಬಿಟ್ಟು ಸಂಪುಟ ಪುನಾರಚನೆಗೆ ಸಿದ್ದರಾಮಯ್ಯ ತಯಾರಿ ನಡೆಸಿದ್ದು ಇನ್ನೂ ಇಬ್ಬರೂ ಹೆಚ್ಚಿಗೆ ಸಚಿವರನ್ನು ಕೈಬಿಡುವ ಸಾಧ್ಯತೆ ಕೂಡ ಇದೇ ಎಂದು ತಿಳಿದುಬಂದಿದೆ . ಹೈಕಮಾಂಡ್ ಹೆಚ್ಚಿನ ಸಚಿವರ ಹೆಸರು ಹೇಳಿದರೆ ಮತ್ತಷ್ಟು ಸಚಿವರಿಗೆ ಹೋರಹಾಕುವ ಸಾಧ್ಯತೆಯಿದೆ.
ಕೈ ಬಿಡಬಹುದಾದ ಸಂಭವನೀಯ ಸಚಿವರ ಪಟ್ಟಿ :

ಕೆ.ಹೆಚ್.ಮುನಿಯಪ್ಪ- ಆಹಾರ ಮತ್ತು ನಾಗರೀಕ ಸರಬರಾಜು (ದೇವನಹಳ್ಳಿ)
ದಿನೇಶ್ ಗುಂಡೂರಾವ್- ಆರೋಗ್ಯ ಸಚಿವ (ಗಾಂಧಿನಗರ),
ಹೆಚ್.ಸಿ.ಮಹದೇವಪ್ಪ- ಸಮಾಜ ಕಲ್ಯಾಣ ( ಟಿ.ನರಸೀಪುರ),
ಶರಣಬಸ್ಪ ದರ್ಶನಾಪುರ್- ಸಣ್ಣ ಕೈಗಾರಿಕೆ (ಶಹಾಪುರ್),
ಎನ್.ಎಸ್.ಬೋಸರಾಜು- ಸಣ್ಣ ನೀರಾವರಿ ವಿಜ್ಞಾನ ತಂತ್ರಜ್ಞಾನ (ವಿಧಾನ ಪರಿಷತ್),

ಡಾ.ಎಂ.ಸಿ.ಸುಧಾಕರ- ಉನ್ನತ ಶಿಕ್ಷಣ ಸಚಿವ(ಚಿಂತಾಮಣಿ),
ಶಿವಾನಂದ ಪಾಟೀಲ್- ಸಕ್ಕರೆ ಮತ್ತು ಜವಳಿ(ಬಸವನ ಬಾಗೇವಾಡಿ),
ರಹೀಂಖಾನ್- ಪೌರಾಡಳಿತ(ಬೀದರ್),
ಎಸ್.ಎಸ್.ಮಲ್ಲಿಕಾರ್ಜುನ- ತೋಟಗಾರಿಕೆ ಮತ್ತ ಗಣಿ (ದಾವಣಗೆರೆ),
ಆರ್.ಬಿ.ತಿಮ್ಮಾಪುರ್- ಅಬಕಾರಿ (ಮುದೋಳ),
ಕೆ.ವೆಂಕಟೇಶ್- ಪಶು ಸಂಗೋಪನೆ(ಪಿರಿಯ ಪಟ್ಟಣ),
ಡಿ.ಸುಧಾಕರ್- ಯೋಜನೆ ಮತ್ತು ಸಾಂಖ್ಯಿಕ (ಹಿರಿಯೂರು),
ಸೇರ್ಪಡೆಯಾಗಲಿರುವ ಶಾಸಕರ ಪಟ್ಟಿ.

ಯು.ಟಿ.ಖಾದರ್ – ಸ್ಪೀಕರ್
ಕೆ.ಎನ್.ರಾಜಣ್ಣ – ಮಧುಗಿರಿ ಶಾಸಕ
ಆರ್.ವಿ.ದೇಶಪಾಂಡೆ – ಹಳಿಯಾಳ ಶಾಸಕ
ಬಿ.ಕೆ.ಹರಿಪ್ರಸಾದ್ – ಪರಿಷತ್ ಸದಸ್ಯ
ಎಂ.ಕೃಷ್ಣಪ್ಪ – ವಿಜಯನಗರ ಶಾಸಕ
ತನ್ವೀರ್ಸೇಠ್ – ನರಸಿಂಹರಾಜ ಶಾಸಕ
ಸಲೀಂ ಅಹಮದ್ – ಪರಿಷತ್ ಸದಸ್ಯ
ರಿಜ್ವಾನ್ ಅರ್ಷದ್ – ಶಿವಾಜಿನಗರ ಶಾಸಕ
ಮಾಗಡಿ ಬಾಲಕೃಷ್ಣ – ಮಾಗಡಿ ಶಾಸಕ
ಎನ್.ಎ.ಹ್ಯಾರಿಸ್ – ಶಾಸಕ
ರೂಪಕಲಾ ಶಶಿಧರ್ – ಶಾಸಕಿ
ಶಿವಲಿಂಗೇಗೌಡ – ಅರಸೀಕೆರೆ ಶಾಸಕ
ನರೇಂದ್ರಸ್ವಾಮಿ – ಮಳವಳ್ಳಿ ಶಾಸಕ
ಲಕ್ಷ್ಮಣ ಸವದಿ – ಅಥಣಿ ಶಾಸಕ
ಪ್ರಸಾದ್ ಅಬ್ಬಯ್ಯ – ಹುಬ್ಬಳ್ಳಿ ಧಾರವಾಡ ಪೂರ್ವ ಶಾಸಕ,
ಸಿ.ಎಸ್.ನಾಡಗೌಡ – ಮುದ್ದೇಬಿಹಾಳ ಶಾಸಕ
ಬೇಳೂರು ಗೋಪಾಲಕೃಷ್ಣ – ಸಾಗರ ಶಾಸಕ
ಬಸವರಾಜ ರಾಯರೆಡ್ಡಿ – ಯಲಬುರ್ಗ ಶಾಸಕ
ಬಿ.ಆರ್.ಪಾಟೀಲ್ – ಆಳಂದ ಶಾಸಕ.


