
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಕೊಲೆ ಆರೋಪಿಗಳ ಕಾಲಿಗೆ ಪೋಲಿಸರ ಗುಂಡೇಟು.!


ಮೂರು ದಿನಗಳ ಹಿಂದೆ ಹುಬ್ಬಳ್ಳಿಯ ಮಂಟೂರು ರಸ್ತೆಯ ಬ್ಯಾಳಿ ಪ್ಲಾಟ್ ಬಳಿ, ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಲ್ಲಿಕ್ ಅದಂಬಾಯಿ ಎಂಬುವವರನ್ನು ಸೆಟ್ಲಮೆಂಟ್ ಗ್ಯಾಂಗ್ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಡಿಗೇರಿ ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಆದರೆ ಬಂಧಿತ ಆರೋಪಿಗಳನ್ನ ಉಳಿದ ಆರೋಪಿಗಳನ್ನು ತೋರಿಸಲು ಘಟನಾ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾಗ, ಮುಖ್ಯ ಆರೋಪಿಗಳಾದ ಬಾಲರಾಜ್ ಅಲಿಯಾಸ್ ಬಂಗಾರ ಬಾಲ್ಯಾ ಮತ್ತು ಮಹಮ್ಮದ್ ಶೇಖ್ ಅವರು ಪೊಲೀಸರ ಮೇಲೆ ಕಲ್ಲು ತೂರಾಡಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಈ ಸಂದರ್ಭದಲ್ಲಿ ಬೆಂಡಿಗೇರಿ ಠಾಣಾ ಇನ್ಸ್ಪೆಕ್ಟರ್ ಎಸ್.ಆರ್ ನಾಯ್ಕ ಮತ್ತು ಅವರ ತಂಡ ಇಬ್ಬರು ಪ್ರಮುಖ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದೆ….

ಶಿವಮೊಗ್ಗ /ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮುಂಜಾನೆಯೆ ಪೋಲಿಸರ ಗುಂಡು ಮೊರೆದಿದೆ.! ಇಬ್ಬರು ಕೊಲೆ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಎಸ್ಕೇಪ್ ಆಗಲು ಮುಂದಾದಾಗ ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯ ಪೊಲೀಸರು ಇಬ್ಬರ ಕಾಲಿಗೂ ಗುಂಡು ತೂರಿಸಿದ್ದಾರೆ.ಇಬ್ಬರೂ ನಟೋರಿಯಸ್ಗಳ ಕಾಲಿಗೂ ಗುಂಡು ತೂರಿಸಿದ ಪೊಲೀಸರು ಕ್ರಿಮಿನಲ್ಗಳಿಗೆ ಬಾಲಬಿಚ್ಚಿದರೆ ನಿಮಗೂ ಇದೆ ಗತಿ ಎನ್ನುವ ಮೇಸೆಜ್ ರವಾನಿಸಿದ್ದಾರೆ. ಈ ಘಟನೆ ಭಾನುವಾರ ಹುಬ್ಬಳ್ಳಿಯಲ್ಲಿ ನಡೆದಿದೆ.
ಮಲ್ಲಿಕ್ ಜಾನ್ ಕೊಲೆಯ ಪ್ರಮುಖ ಆರೋಪಿಗಳಾದ ಬಾಲರಾಜ್ ಅಲಿಯಾಸ್ ಬಂಗಾರ ಬಾಲ್ಯ ಮತ್ತು ಮಹ್ಮದ್ ಶೇಖ್ ಎಂಬುವರೇ ಗುಂಡೇಟು ತಿಂದ ಕೊಲೆ ಆರೋಪಿಗಳಳಾಗಿದ್ದಾರೆ.

ಗುಂಡೇಟು ಬಿದ್ದ ಇಬ್ಬರು ಆರೋಪಿಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಇಬ್ಬರು ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ನ.13ರ ಗುರುವಾರ ರಾತ್ರಿ ಮಹಮ್ಮದ್ ಮಲ್ಲಿಕ್ ಜಾನ್ನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದು ಎಸ್ಕೇಪ್ ಆಗಿದ್ದರು ಈ ಇಬ್ಬರು ಆರೋಪಿಗಳು ಸೆಟಲ್ಮೆಂಟ್ನ ಶ್ಯಾಮ್ ಜಾಧವ್ ಗ್ಯಾಂಗ್ನ ಸಹಚರರಂತೆ.!
ಎಂಡಿ ದಾವೂದ್ ಮತ್ತು ಶ್ಯಾಮ್ ಜಾಧವ್ ಗುಂಪಿನ ನಡುವೆ ಆಗಾಗ ತಿಕ್ಕಾಟ ನಡೆಯುತ್ತಲೇ ಇತ್ತು ಅದರ ಮುಂದುವರಿದ ಭಾಗವಾಗಿ ಮಹಮ್ಮದ್ ಮಲಿಕ್ ಜಾನ್ ನನ್ನು ಹತ್ಯೆ ಮಾಡಲಾಗಿತ್ತು.

ಪ್ರಕರಣದಲ್ಲಿ ಭಾಗಿಯಾದ ಇನ್ನುಳಿದ ಆರೋಪಿಗಳು ಇರುವ ಜಾಗ ತೋರಿಸುವುದಾಗಿ ಪೊಲೀಸರನ್ನೇ ಯಾಮಾರಿಸಲು ಹೋಗಿದ್ದಲ್ಲದೆ, ಪೊಲೀಸರ ಮೇಲೆಯೇ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ತಮ್ಮ ಸರ್ವಿಸ್ ರಿವಲ್ವಾರ್ನಿಂದ ಗುಂಡು ಹಾರಿಸಿ ಆರೋಪಿಗಳ ಕಾಲನ್ನು ಸೀಳಿದ್ದಾರೆ.
ಈ ಘಟನೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಆರ್ ನಾಯಕ್, ಪೇದಗಳಾದ ನೂರ್ ಅಹ್ಮದ್ ನೀಲಗಾರ, ಚಲವಾದಿ, ಸೇರಿ ಮೂವರು ಸಿಬ್ಬಂದಿಗೆ ಗಾಯವಾಗಿದೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.


