Headlines

ಉಡುಪಿ : ಅಪ್ರಾಪ್ತ ಬಾಲಕಿ ಜೊತೆ ಲಾಡ್ಜ್ ನಲ್ಲಿ ಇದ್ದ ಯುವಕ.! ಪೋಕ್ಸೊ ಕೇಸ್ ದಾಖಲು.

ಅಶ್ವಸೂರ್ಯ/ಉಡುಪಿ : ಅಪ್ರಾಪ್ತ ಬಾಲಕಿಯೊಬ್ಬಳ ಜೊತೆ ಮಣಿಪಾಲಿನ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.
ಲಾಡ್ಜ್ ನಲ್ಲಿ ಸಿಕ್ಕಿ ಬಿದ್ದ ಯುವಕನನ್ನು ಕಟಪಾಡಿ ಮಣಿಪುರದ ನಿವಾಸಿ ಶ್ರೀಶಾಂತ್ ಪೂಜಾರಿ (20) ಎಂದು ಗುರುತಿಸಲಾಗಿದ್ದು ಈತ ಸ್ಥಳೀಯ ಬಿಜೆಪಿ ನಾಯಕರೋರ್ವರ ಪುತ್ರ ಎಂದು ತಿಳಿದುಬಂದಿದೆ.
ಶ್ರೀಶಾಂತ್ ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುವುದಾಗಿ ನಂಬಿಸಿ ಮಣಿಪಾಲದ ವಸತಿಗೃಹಕ್ಕೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಇದರ ಮಾಹಿತಿ ತಿಳಿದು ಬಾಲಕಿಯ ಪೋಷಕರು ನೇರವಾಗಿ ಲಾಡ್ಜ್ ‌ಗೆ ಪೊಲೀಸರೊಂದಿಗೆ ದಾಳಿ ಮಾಡಿದ್ದಾರೆ. ಬಾಲಕಿಯ ನಕಲಿ ಆಧಾರ್ ಕಾರ್ಡ್ ನೀಡಿ ಕರೆದುಕೊಂಡು ಹೋಗಿದ್ದು, ಆತನ ವಿರುದ್ಧ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಇನ್ನೋರ್ವ ಬಾಲಕಿ ಕೂಡ ಆತನ ವಿರುದ್ಧ ದೂರು ದಾಖಲಿಸಿದ್ದಾಳೆ ಎಂದು ತಿಳಿದುಬಂದಿದೆ. ನನಗೂ ಶ್ರೀಶಾಂತ್ ಮದುವೆ ಆಗುವುದಾಗಿ ನಂಬಿಸಿ ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದನು ಎಂದು ದೂರಿನಲ್ಲಿ ತಿಳಿಸಿದ್ದಾಳೆ.!
ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!