
ಬೆಂಗಳೂರಿನ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ವಿಚ್ಛೇದಿತ ಮಹಿಳೆಯನ್ನು ಆಕೆಯ ಪ್ರಿಯಕರ ಚಾಕುವಿನಿಂದ ಇರಿದು ಕೊಂದಿದ್ದಾನೆ. ಕೊಂದವನು ಕುಟ್ಟಿ ಎಂದು ಗುರುತಿಸಲಾಗಿದೆ ಮತ್ತು ಅವನನ್ನು ಪೊಲೀಸರು ಬಂಧಿಸಿದ್ದಾರೆ. ಮೃತರನ್ನು ರೇಣುಕಾ ಎಂದು ಗುರುತಿಸಲಾಗಿದೆ.
ಘಟನೆ: ಕೆ.ಜಿ.ಹಳ್ಳಿಯ ಪಿಳ್ಳಣ್ಣ ಗಾರ್ಡನ್ ಬಳಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ರೇಣುಕಾಳನ್ನು ಕುಟ್ಟಿ ಅಲ್ಲಿಯೇ ಮಾತನಾಡುವ ನೆಪದಲ್ಲಿ ಕರೆದುಕೊಂಡು ಹೋಗಿ, ಜಗಳದ ನಂತರ ಚಾಕುವಿನಿಂದ ಆರು ಬಾರಿ ಇರಿದು ಕೊಲೆ ಮಾಡಿದ್ದಾನೆ.
ಆರೋಪಿ: ಕುಟ್ಟಿ ಎಂಬುವನು ಆರೋಪಿಯಾಗಿದ್ದು, ಪೊಲೀಸರು ಅವನನ್ನು ಬಂಧಿಸಿದ್ದಾರೆ.
ಮೃತರ ರೇಣುಕಾ ಅವರು ಪತಿಯನ್ನು ತೊರೆದು ಮಗನೊಂದಿಗೆ ವಾಸಿಸುತ್ತಿದ್ದಾಗ, ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕುಟ್ಟಿ ಅವರ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತ್ತು ಎಂದು ತಿಳಿದು ಬಂದಿದೆ.
ಬಂಧನ ಮತ್ತು ತನಿಖೆ: ಘಟನೆಯ ನಂತರ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು : ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ವಿಚ್ಛೇದಿತ ಮಹಿಳೆಯನ್ನು 6 ಬಾರಿ ಚಾಕುವಿನಿಂದ ಇರಿದು ಕೊಂದ ಪ್ರಿಯಕರ
BANGALORE KJ HALLI CRIME
ಅಶ್ವಸೂರ್ಯ/ಬೆಂಗಳೂರು : ತಾಳಿ ಕಟ್ಟುವಂತೆ ಒತ್ತಾಯಿಸುತ್ತಿದ್ದ ವಿಚ್ಛೇದಿತ ಮಹಿಳೆಯನ್ನು ಪ್ರಿಯಕರನೊಬ್ಬ 6 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಕೆಜಿ ಹಳ್ಳಿಯಲ್ಲಿ ನಡೆದಿದೆ.
ಹತ್ಯೆಗೀಡಾದ ಮಹಿಳೆಯನ್ನು ರೇಣುಕಾ ಎಂದು ತಿಳಿದುಬಂದಿದೆ, ಆರೋಪಿಯನ್ನು
ಕುಟ್ಟಿ ಎಂದು ಗುರುತಿಸಲಾಗಿದೆ. ಫೈನಾನ್ಸ್ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಮೃತ ಮಹಿಳೆಗೆ ಮದುವೆಯಾಗಿ ಒಂದು ಮಗುವಿತ್ತು. ಆದರೆ ಗಂಡನೊಂದಿಗೆ ವಿಚ್ಛೇದನ ಪಡೆದಿದ್ದರು. ಕೆಜಿ ಹಳ್ಳಿಯ ಪಿಳ್ಳಣ್ಣ ಗಾರ್ಡನ್ನಲ್ಲಿ ಮಗುವಿನೊಂದಿಗೆ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಈ ನಡುವೆ ಮೃತ ರೇಣುಕಾಗೆ ಅದೇ ಏರಿಯಾದಲ್ಲಿದ್ದ ಆರೋಪಿ ಕುಟ್ಟಿ ಪರಿಚಯವಾಗಿತ್ತು. ಬಳಿಕ ಇಬ್ಬರ ನಡುವೆ ಪ್ರೀತಿಯಾಗಿತ್ತು.!

ಕೆಲ ದಿನಗಳ ಬಳಿಕ ಮೃತ ರೇಣುಕಾ ಕುಟ್ಟಿಯನ್ನು ಮದುವೆಯಾಗು ಎಂದು ಬೆನ್ನಿಗೆ ಬಿದ್ದಿದ್ದಾಳೆ. ನೀನು ತೀಟೆಗಾಗಿ ಪ್ರೀತಿ ಮಾಡುವುದೆಲ್ಲ ಬೇಡ ನನ್ನನ್ನು ಮದುವೆಯಾಗು ಎಂದು ಪಿಡಿಸುತ್ತಿದ್ದಳಂತೆ.! ಇದರಿಂದ ಕುಟ್ಟಿ ತಲೆಕೆಡಿಸಿಕೊಂಡು ಆಕೆಯನ್ನು ಮುಗಿಸುವ ಪ್ಲಾನ್ ಮಾಡಿಕೊಂಡಿದ್ದಾನೆ. ಘಟನೆಯಾದ ದಿನ ರೇಣುಕಾ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಳಂತೆ ಈ ವೇಳೆ ಕುಟ್ಟಿ ರೇಣುಕಾಳನ್ನು ತಡೆದು, ನಿನ್ನ ಜೊತೆ ಮಾತಾಡಬೇಕು ಬಾ ಎಂದು ಪಿಳ್ಳಣ್ಣ ಗಾರ್ಡನ್ನ ಸರ್ಕಾರಿ ಶಾಲೆಯ ಬಳಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಏಕಾಏಕಿ ಆಕೆಯ ಮೇಲೆ 6 ಬಾರಿ ಚಾಕುವಿನಿಂದ ಇರಿದು ಸಾರ್ವಜನಿಕವಾಗಿ ಹತ್ಯೆ ಮಾಡಿ, ಪರಾರಿಯಾಗಿದ್ದಾನೆ.
ಕೂಡಲೇ ಸ್ಥಳೀಯರು ರೇಣುಕಾಳನ್ನು ಆಸ್ಪತ್ರೆಗೆ ದಾಳಲಿಸಿದ್ದರೂ ಕೂಡ ಚಿಕಿತ್ಸೆ ಫಲಿಸದೇ ರೇಣುಕಾ ಸಾವನ್ನಪ್ಪಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಕೆಜೆ ಹಳ್ಳಿ ಪೊಲೀಸರು ಆರೋಪಿ ಕುಟ್ಟಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸ್ತಿದ್ದಾರೆ. ರೇಣುಕಾಳ ಹಿಂದೆ ಬಿದ್ದಿದ್ದ ಕುಟ್ಟಿಯನ್ನು, ಮದುವೆಯಾಗುವಂತೆ ಪಿಡಿಸಿದ್ದಾಳೆ,ಕುಟ್ಟಿ ಟೈಮ್ ಪಾಸಿಗೆ ಆಕೆಯ ಹಿಂದೆ ಬಿದ್ದಿರಬೇಕು.? ಮದುವೆಯಾಗುವಂತೆ ಕುಟ್ಟಿಯ ಹಿಂದೆ ಬಿದ್ದ ಕಾರಣಕ್ಕೆ ಕುಟ್ಟಿ ಆಕೆಯನ್ನು ಕೊಲೆ ಮಾಡಿರಬಹುದು ಎಂದು ಮೃತಳ ಕುಟುಂಬದವರು ಆರೋಪಿಸಿದ್ದಾರೆ.


