
ಪಂಜಾಬ್ :ಪಂಜಾಬ್ನ ಹಿರಿಯ ಪೊಲೀಸ್ ಅಧಿಕಾರಿಯ ಮನೆಯಲ್ಲಿ 5 ಕೋಟಿ ರೂಪಾಯಿ ನಗದು.! ಒಂದುವರೆ ಕೆಜಿ ಚಿನ್ನ.! ವಿದೇಶಿ ವಾಚು, ಎಣ್ಣೆ.! ಶಸ್ತ್ರಾಸ್ತ್ರಗಳು ಅಪಾರ ಸಂಪತ್ತು.! ಎಣಿಸಿ ಎಣಿಸಿ ಸುಸ್ತಾದ ಅಧಿಕಾರಿಗಳು.!

news.ashwasurya.in
ಅಶ್ವಸೂರ್ಯ/ಪಂಜಾಬ್ : ಈ ರಾಶಿ ರಾಶಿ ನೋಟುಗಳ ಬಂಡಲ್ ನ ಒಡೆಯ ಬೇರಾರೂ ಅಲ್ಲ… ಪಂಜಾಬ್ ಪೊಲೀಸ್ ಇಲಾಖೆಯು ಹಿರಿಯ ಅಧಿಕಾರಿ ರೋಪರ್ ರೇಂಜ್ನ ಡಿಐಜಿ ಹರ್ಚರಣ್ ಸಿಂಗ್ ಭುಲ್ಲರ್.! ಪವಿತ್ರವಾದ ಖಾಕೀಗೆ ತನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಸಿ ಬಳಿದು ಕುಳಿತಿದ್ದಾನೆ.? ಕಾನೂನು ಕಾಪಾಡಬೇಕಾದ ಹಿರಿಯ ಅಧಿಕಾರಿಯೇ ಇಂತಹ ಅಕ್ರಮ ಸಂಪತ್ತಿನ ಬೆನ್ನಿಗೆ ಬಿದ್ದು ಕುಬೇರನಾಗಿದ್ದನ್ನು ನೋಡಿ ರೈಡು ಬಿದ್ದ ಸಿಬಿಐ ಅಧಿಕಾರಿಗಳೇ ಗಾಬರಿಯಾಗಿದ್ದಾರೆ.!ಹರ್ಚರಣ್ ಸಿಂಗ್ ಮನೆಯನ್ನು ರೈಡ್ ಮಾಡಿದ ಅಧಿಕಾರಿಗಳು
ಆತನ ಮನೆಯಲ್ಲಿದ್ದ ಒಂದೊಂದೇ ಬ್ಯಾಗ್ಗಳನ್ನು ಇಟ್ಟ ಜಾಗದಿಂದ ಹೊರತಂದು ತೆರೆಯುತ್ತಿದ್ದಂತೆ, ಅವರ ಎದೆಯ ಬಡಿತ ಜೋರಾಗಿದೆ.ಕಾರಣ ತೆರೆದ ಪ್ರತಿ ಬ್ಯಾಗ್ ಮತ್ತು ಸೂಟ್ಕೇಸ್ ನಲ್ಲೂ ಇದ್ದಿದ್ದು ಬಟ್ಟೆಗಳಲ್ಲ.? ಬದಲಾಗಿ 500 ರೂಪಾಯಿ ನೋಟುಗಳ ಕಂತೆ ಕಂತೆ ಹಣ.! ಒಂದು, ಎರಡು, ಮೂರು…ಸ್ವಾಮಿ ಲೆಕ್ಕವಿಲ್ಲದಷ್ಟು ಬ್ಯಾಗ್ಗಳು.

ಬ್ಯಾಗಿನಿಂದ ಆ ಹಣದ ಹೊರತೆಗೆದು ಹಾಕಿದ ನಂತರ ರಾಶಿಯನ್ನು ನೋಡಿ ಅಧಿಕಾರಿಗಳ ಕಣ್ಣುಗಳೇ ಮಂಜಾಗಿ ಹೋಗಿವೆ.! ಇದೆಲ್ಲಾ ಎಣಿಸೋದು ಹೇಗೆ? ಎನ್ನುವ ಚಿಂತೆಯ ಜೋತೆಗೆ ಒಬ್ಬೊರನೊಬ್ಬರು ನೋಡಿಕೊಳ್ಳುತ್ತಿದ್ದರಙತೆ.!?ನಂತರ ಹಣ ಎಣಿಸುವ ಯಂತ್ರಗಳನ್ನೇ ತರಿಸಲಾಯಿತು, ಆದರೆ ಅವು ಕೂಡಾ ನಿರಂತರವಾಗಿ ನೋಟುಗಳನ್ನು ಏಣಿಸಿ ಏಣಿಸಿ ಕೆಲಸ ಮಾಡಿ ಬಿಸಿಯಾಗಿ ನಿಂತು ಹೋಗಿದ್ದವಂತೆ.! ಆದರೂ ನೋಟುಗಳ ರಾಶಿ ಮಾತ್ರ ಕರಗಲೇ ಇಲ್ಲವಂತೆ!

ಈ ಕಂತೆ ಕಂತೆ ಹಣದ ಪೆಂಡಿಗಳ ಒಡೆಯ ಬೇರಾರೂ ಅಲ್ಲ ಸ್ವಾಮಿ ಪಂಜಾಬ್ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ರೋಪರ್ ರೇಂಜ್ನ ಡಿಐಜಿ ಹರ್ಚರಣ್ ಸಿಂಗ್ ಭುಲ್ಲರ್. ಕಾನೂನು ಕಾಪಾಡಬೇಕಾದ ದೊಡ್ಡ ಅಧಿಕಾರಿಯೇ ಹಡಬೆ ಹಣಕ್ಕೆ ಕೈಯೊಡ್ಡಿ ಅಕ್ರಮ ಸಂಪತ್ತಿನ ಕುಬೇರನಾಗಿದ್ದನ್ನು ನೋಡಿದ ಸಿಬಿಐ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಈ ಭ್ರಷ್ಟ ಅಧಿಕಾರಿಯ ತಂದೆ ಮಹಲ್ ಸಿಂಗ್ ಭುಲ್ಲರ್ ಕೂಡ ಪಂಜಾಬ್ ಪೊಲೀಸ್ನ ಡಿಜಿಪಿ ಆಗಿ ನಿವೃತ್ತರಾಗಿದ್ದವರು. ತಂದೆಯ ಹಾದಿಯಲ್ಲಿ ಸಾಗಬೇಕಿದ್ದ ಮಗ,ಅಪ್ಪನ ಖಡಕ್ ತನವನ್ನು ಮೈಗೂಡಿಸಿಕೊಳ್ಳದೆ ಅಡ್ಡದಾರಿಯಲ್ಲಿ ಅಕ್ರಮ ಲಂಚದ ಹಣಕ್ಕೆ ಕೈಯೊಡ್ಡಿ ಕೋಟಿ ಕೋಟಿ ಹಣವನ್ನು ಗುಡ್ಡೆಹಾಕಿಕೊಂಡು ಈಗ ಸಿಬಿಐ ಅಧಿಕಾರಿಗಳ ಖೆಡ್ಡಕ್ಕೆ ಬಿದ್ದು ಮಾನ ಕಳೆದುಕೊಂಡಿದ್ದಾರೆ.

ಇವರನ್ನು ಸಿಬಿಐ ಅಧಿಕಾರಿಗಳು ಖೆಡ್ಡಕ್ಕೆ ಕೆಡವಿಕೊಳ್ಳುವ ಮುನ್ನ ಅಸಲಿ ಕಥೆ ಶುರುವಾಗಿದ್ದು ಫತೇಘರ್ ಸಾಹಿಬ್ನ ಒಬ್ಬ ಗುಜುರಿ ವ್ಯಾಪರಿಯಿಂದ.! ಆತನ ಮೇಲೆ ದಾಖಲಾಗಿದ್ದ ಕೇಸನ್ನು ಮುಚ್ಚಿಹಾಕಲು, ಡಿಐಜಿ ಭುಲ್ಲರ್ ತನ್ನ ಬ್ರೋಕರ್ ಕೃಷ್ಣನ ಮೂಲಕ ಪ್ರತಿ ತಿಂಗಳು ‘ಮಾಮೂಲಿ’ ವಸೂಲಿ ಮಾಡುತ್ತಿದ್ದರಂತೆ. ಈ ಬಾರಿ ಇದ್ದಕ್ಕಿದ್ದಂತೆ 8 ಲಕ್ಷ ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದೇ ಆವರಿಗೆ ಮುಳುವಾಯಿತು. ಈ ವಿಷಯ ಸಿಬಿಐ ಇಲಾಖೆಯ ಕದತಟ್ಟಿದ ಮೇಲೆ ಖತರ್ನಾಕ್ ಅಧಿಕಾರಿಯನ್ನು ರೆಡ್ ಹ್ಯಾಂಡಾಗಿ ಹಿಡಿಯಲು ಭರ್ಜರಿ ಪ್ಲಾನ್ ಸಿದ್ಧವಾಗಿತ್ತು.?
ಚಂಡೀಗಢದ ಸೆಕ್ಟರ್-21 ರಲ್ಲಿ, ಬ್ರೋಕರ್ ಕೃಷ್ಣ ಮೂಲಕ 8 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಬಿಐ ತಂಡ ಡಿಐಜಿ ಭುಲ್ಲರ್ ಮೇಲೆ ಮುಗಿಬಿದ್ದಿತು. ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಡಿಐಜಿ ಮತ್ತು ಬ್ರೋಕರ್ನ ಆಟ ಅಲ್ಲಿಗೆ ಕೊನೆಯಾಗಿತ್ತು.! ಇಬ್ಬರನ್ನೂ ಬಂಧಿಸಿದ ಸಿಬಿಐ ಅಧಿಕಾರಿಗಳ ತಂಡ ಅವರ ಅಕ್ರಮ ಸಾಮ್ರಾಜ್ಯದ ಸಂಪೂರ್ಣ ಆಸ್ತಿ ಪಾಸ್ತಿ ಮನೆಗಳ ಮೇಲೆ ತಂಡ ತಂಡವಾಗಿ ಏಕಕಾಲದಲ್ಲಿ ದಾಳಿ ನೆಡೆಸಲು ಸಿಬಿಐ ಅಧಿಕಾರಿಗಳು ಮುಂದಾದರು.

ಕೇವಲ ಚಂಡೀಗಢ ಮಾತ್ರವಲ್ಲ, ಅಂಬಾಲ, ಮೊಹಾಲಿ, ರೋಪರ್ ಸೇರಿದಂತೆ ಏಳೆಂಟು ಕಡೆಗಳಲ್ಲಿ ಸಿಬಿಐನ ಬೇರೆ ಬೇರೆ ತಂಡಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು.! ಡಿಐಜಿ ಭುಲ್ಲರ್ನ ಆಫೀಸ್, ಐಷಾರಾಮಿ ಮನೆ, ಫಾರ್ಮ್ಹೌಸ್, ಬ್ರೋಕರ್ನ ಮನೆ… ಹೀಗೆ ಪ್ರತಿಯೊಂದು ಜಾಗವನ್ನೂ ಜಾಲಾಡಲಾಯಿತು. ಈ ದಾಳಿಯ ವೇಳೆ ಸಿಕ್ಕಿದ್ದನ್ನು ನೋಡಿದ ಕೂಡಲೆ ಸಿಬಿಐ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಬೆಚ್ಚಿ ಬಿದ್ದು ಹೋಗಿದ್ದಾರೆ.
ಡಿಐಜಿ ಮನೆಯಲ್ಲಿ ಸಿಕ್ಕ ಸಂಪತ್ತಿನ ಪಟ್ಟಿ ಇಲ್ಲಿದೆ ನೋಡಿ.! :

ಬರೋಬ್ಬರಿ 5 ಕೋಟಿ ರೂಪಾಯಿ ನಗದು, ಒಂದೂವರೆ ಕೆಜಿ ಬಂಗಾರ ಮತ್ತು ಬೆಲೆಬಾಳುವ ಆಭರಣಗಳು, ಮರ್ಸಿಡಿಸ್, ಆಡಿಯಂತಹ ಐಷಾರಾಮಿ ಕಾರುಗಳು, 22 ದುಬಾರಿ ವಾಚುಗಳು, 40 ಲೀಟರ್ ವಿದೇಶಿ ಮದ್ಯ, ಮತ್ತು ಪಂಜಾಬ್ನಾದ್ಯಂತ ಇರುವ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ರಗಳು. ಇದಿಷ್ಟೇ ಅಲ್ಲ, ಡಬಲ್ ಬ್ಯಾರೆಲ್ ಗನ್, ಪಿಸ್ತೂಲ್, ರಿವಾಲ್ವರ್ ಸೇರಿದಂತೆ ಶಸ್ತ್ರಾಸ್ತ್ರಗಳ ಸಂಗ್ರಹವೇ ಡಿಐಜಿ ಮನೆಯಲ್ಲಿ ಪತ್ತೆಯಾಗಿದೆಯಂತೆ.!?
ಸಿಬಿಐ ಅಧಿಕಾರಿಗಳ ನಿರಂತರ ವಿಚಾರಣೆಯ ನಂತರ, ಡಿಐಜಿ ಭುಲ್ಲರ್ ಮತ್ತು ಬ್ರೋಕರ್ ಕೃಷ್ಣ ಇಬ್ಬರೂ ಲಂಚ ಪಡೆದಿದ್ದನ್ನು ಒಪ್ಪಿಕೊಂಡಿದ್ದಾರೆ. ಇಷ್ಟು ದಿನ ಜನರ ರಕ್ಷಕನ ಮುಖವಾಡ ಹಾಕಿಕೊಂಡು ಸಾರ್ವಜನಿಕರಿಗೆ ರಕ್ಷಣೆ ಕೊಡಬೇಕಾದ ಅಧಿಕಾರಿಯೆ ಅಕ್ರಮ ಲಂಚದ ಹಣಕ್ಕೆ ಕೈಯೊಡ್ಡಿ ತನ್ನ ಭ್ರಷ್ಟ ಸಾಮ್ರಾಜ್ಯವನ್ನೇ ಕಟ್ಟಿಕೊಂಡಿದ್ದ ಅಧಿಕಾರಿಯ ಬಂಧನವಾಗಿದೆ.! ಇಡೀ ಪಂಜಾಬ್ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸಿದೆ.ಜೋತೆಗೆ ಇನ್ನೂಳಿದ ಭ್ರಷ್ಟ ಅಧಿಕಾರಿಗಳಿಗೆ ಈಗಾಗಲೇ ನಡುಕ ಶುರುವಾಗಿದೆ.

ಸಮಾಜವನ್ನು ರಕ್ಷಿಸ ಬೇಕಾದ ರಕ್ಷಕರೇ ಭಕ್ಷಕರಾದರೆ ಸಾಮಾನ್ಯ ಜನರ ಗತಿ ಏನು? ಅನ್ನೋ ಪ್ರಶ್ನೆಯನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳ ನಡುವೆ, ಇಂತಹ ಲಂಚಬಾಕರು ಹಣಕ್ಕಾಗಿ ಮೂರುಬಿಟ್ಟು ನಿಂತು ಇಲಾಖೆಯ ಹೆಸರನ್ನೇ ಹಾಳುಮಾಡಿ ಮಸಿ ಬಳಿಯುತ್ತಿದ್ದಾರೆ. ಈ ಪ್ರಕರಣವು ಭ್ರಷ್ಟ ಅಧಿಕಾರಿಗಳಿಗೆ ಒಂದು ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ ಎನ್ನುವುದು ಮಾತ್ರ ಸತ್ಯ.


