
ಅಮೆರಿಕದಲ್ಲಿ ಗುಜರಾತಿ ಮಹಿಳೆಯ ಗುಂಡಿಕ್ಕಿ ಹತ್ಯೆ,
news.ashwasurya.in
ಅಶ್ವಸೂರ್ಯ/ದೆಹಲಿ : ಅಮೆರಿಕಾದ ದಕ್ಷಿಣ ಕೆರೊಲಿನಾದ ಯೂನಿಯನ್ ಕೌಂಟಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ.ಭಾರತೀಯ ಮೂಲದ ಗುಜರಾತಿ ಮಹಿಳೆ ಕಿರಣ್ ಪಟೇಲ್ ಅವರನ್ನು ಮಾಸ್ಕ್ ದಾರನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಸೌತ್ ಕ್ಯಾರೊಲೈನಾ ರಾಜ್ಯದ ಯೂನಿಯನ್ ಕೌಂಟಿಯಲ್ಲಿ ಈ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 49 ವರ್ಷದ ಗುಜರಾತಿ ಮಹಿಳೆ ಕಿರಣ್ ಪಟೇಲ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಹತ್ಯೆ ಘಟನೆಯಿಂದ ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಸೆಪ್ಟೆಂಬರ್ 16ರ ರಾತ್ರಿ 10:30ರ ಸುಮಾರಿಗೆ ಸೌತ್ ಪಿಂಕ್ನಿ ಸ್ಟ್ರೀಟ್ನಲ್ಲಿರುವ ಡಿಡಿಯ ಫುಡ್ ಮಾರ್ಟ್ ನಲ್ಲಿ ಈ ದಾಳಿ ನಡೆದಿದೆ.
ಸೌತ್ ಪಿಂಕ್ನಿ ಸ್ಟ್ರೀಟ್ನಲ್ಲಿರುವ ಡಿಡಿಯ ಫುಡ್ ಮಾರ್ಟ್ ನಲ್ಲಿ ಕಿರಣ್ ಪಟೇಲ್ ಹತ್ಯೆ ಮಾಡಲಾಗಿದೆ. ಕಿರಣ್ ಅವರು ಅಂಗಡಿಯನ್ನು ನಿರ್ವಹಿಸುತ್ತಿದ್ದರು. ಒಬ್ಬಂಟಿಯಾಗಿ ಕೆಲಸ ಮಾಡುತ್ತಿದ್ದಾಗ, ದಾಳಿಕೋರರು ದರೋಡೆ ಮಾಡಲು ಬಂದು ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.
ಕಿರಣ್ ಅಂಗಡಿಯಲ್ಲಿ ಒಬ್ಬರೇ ಇದ್ದಾಗ ದರೋಡೆಕೋರನೊಬ್ಬ ಮಾಸ್ಕ್ ಧರಿಸಿ ಬಂದಿದ್ದಾನೆ. ದರೋಡೆ ಮಾಡಲು ಬಂದು, ಹಣ ನೀಡುವ ಮೊದಲೇ ಅಕೆಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆಯು ಯೂನಿಯನ್ ಕೌಂಟಿಯಲ್ಲಿ 24 ಗಂಟೆಗಳಲ್ಲಿ ನಡೆದ ಎರಡನೇ ಕೊಲೆಯಾಗಿದ್ದು, ಸ್ಥಳೀಯ ಪೊಲೀಸರು ಈ ಎರಡು ಕೊಲೆಗೆ ಸಂಬಂಧವಿದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ವಿಷಯ ತಿಳಿದು ಸ್ಥಳಕ್ಕೆ ಬಂದಾಗ ಅಂಗಡಿಯ ಪಾರ್ಕಿಂಗ್ ಲಾಟ್ನಲ್ಲಿ ಕಿರಣ್ ಅವರ ಮೃತದೇಹ ಸಿಕ್ಕಿತು ಎಂದು ತಿಳಿಸಿದ್ದಾರೆ.
ಅಂಗಡಿಯ ಮುಂಭಾಗದ ಕಿಟಕಿಯಲ್ಲಿ ಗುಂಡುಗಳು ಹಾರಿಸಿದ್ದ ರಂಧ್ರಗಳು ಮತ್ತು ಶೆಲ್ ಕವಚಗಳು ಕಂಡುಬಂದಿವೆ. ಯೂನಿಯನ್ ಕೌಂಟಿ ಕರೋನರ್ ಕಚೇರಿ ಹತ್ಯೆಯಾದವರನ್ನು 49 ವರ್ಷದ ಕಿರಣ್ ಪಟೇಲ್ ಎಂದು ಗುರುತಿಸಿದೆ. ದಾಳಿಕೋರ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯು ದರೋಡೆಯ ಉದ್ದೇಶವನ್ನು ಸೂಚಿಸುತ್ತದೆ, ಆದರೆ ಹಣ ಸಿಗದೇ ಗುಂಡಿನ ದಾಳಿ ನಡೆದಿದೆ. ಕಿರಣ್ ಅವರಿಗೆ ತಕ್ಷಣ ಸಹಾಯ ಸಿಗಲಿಲ್ಲ, ಇದರಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅಮೆರಿಕದಲ್ಲಿ ಹಿಂಸಾತ್ಮಕ ಘಟನೆಗಳು ಮಿತಿ ಮೀರಿದೆ.
ಸ್ಥಳೀಯ ನಿವಾಸಿಗಳು ಈ ಹಿಂಸಾಚಾರದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. “ಅಮೆರಿಕಾದಲ್ಲಿ ಹಿಂಸೆ ಹೆಚ್ಚುತ್ತಿದೆ” ಎಂದು ಒಬ್ಬ ನಿವಾಸಿ ಹೇಳಿದ್ದಾರೆ. ಇನ್ನೊಬ್ಬರು, “ಈ ಗನ್ಗಳನ್ನು ಬಿಟ್ಟು ದೇವರನ್ನು ಸ್ಮರಿಸಬೇಕು” ಎಂದು ಕರೆ ನೀಡಿದ್ದಾರೆ. ಯೂನಿಯನ್ ಪಬ್ಲಿಕ್ ಸೇಫ್ಟಿ ಡಿಪಾರ್ಟ್ಮೆಂಟ್, ಕೌಂಟಿ ಶೆರಿಫ್ ಕಚೇರಿ, ಕೆ-9 ಡಾಗ್ ತಂಡ ಮತ್ತು ಡ್ರೋನ್ಗಳನ್ನು ಬಳಸಿ ತನಿಖೆ ನಡೆಸಲಾಗುತ್ತಿದೆ. ಸೌತ್ ಕ್ಯಾರೊಲೈನಾ ಲಾ ಎನ್ಫೋರ್ಸ್ಮೆಂಟ್ ಡಿವಿಜನ್ (SLED) ಸಹ ಸಹಾಯ ಮಾಡುತ್ತಿದೆ. ಇನ್ನೂ ಯಾವುದೇ ಶಂಕಿತರನ್ನು ಬಂಧಿಸಲಾಗಿಲ್ಲ, ಆದರೆ ವೀಡಿಯೊ ದೃಶ್ಯಗಳು ಮತ್ತು ಪುರಾವೆಗಳನ್ನು ಸಂಗ್ರಹಿಸಲಾಗಿದೆ.
ಕಿರಣ್ ಪಟೇಲ್ ಅವರು ಗುಜರಾತ್ ಮೂಲದವರು, ಅಮೆರಿಕದಲ್ಲಿ ಕೆಲವು ವರ್ಷಗಳಿಂದ ವ್ಯವಹಾರ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಈ ಕೊಲೆ ಗುಜರಾತಿ ಸಮುದಾಯದಲ್ಲಿ ಆಘಾತ ಮೂಡಿಸಿದ್ದು, ತ್ವರಿತ ನ್ಯಾಯಕ್ಕಾಗಿ ಪೊಲೀಸರಿಗೆ ಮನವಿ ಮಾಡಿದ್ದಾರೆ. “ಇಂತಹ ಘಟನೆಗಳು ನಮ್ಮ ಸಮುದಾಯದಲ್ಲಿ ಭಯಹರಡುತ್ತವೆ. ಸುರಕ್ಷತೆಯಿಗಾಗಿ ಹೆಚ್ಚಿನ ಕ್ರಮಗಳು ಬೇಕು” ಎಂದು ಮನವಿ ಮಾಡಿದ್ದಾರೆ. ಈ ಘಟನೆ ಸೇರಿದಂತೆ ಅಮೆರಿಕದಲ್ಲಿ ಶೂಟೌಟ್ ಪ್ರಕರಣಗಳು ಮಿತಿ ಮೀರಿದೆ.ದಿನ ನಿತ್ಯ ಹಿಂಸಾ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತಿದೆ. ಪೊಲೀಸ್ ತನಿಖೆಯಲ್ಲಿ ಹತ್ಯೆ ಹಿಂದಿನ ಅಸಲಿ ಸತ್ಯ ಬಹಿರಂಗವಾಗುವ ನಿರೀಕ್ಷೆಯಿದೆ.


