Headlines

ರಾಜಸ್ಥಾನ : ಅಕ್ರಮ ಸಂಬಂಧಕ್ಕೆ ಮಗು ಅಡ್ಡಿ.! ಹೆತ್ತ ಮಗುವನ್ನೆ ಸರೋವರಕ್ಕೆ ಎಸೆದು ಕೊಂದ ತಾಯಿ.!

ಉತ್ತರ ಪ್ರದೇಶ ಮೂಲದವಳಾದ ಅಂಜಲಿ ಈ ಹಿಂದೆ ಓರ್ವನನ್ನು ಮದುವೆಯಾಗಿದ್ದು ಮೂರು ವರ್ಷದ ಹೆಣ್ಣು ಮಗಳಿದ್ದಾಳೆ. ಈ ನಡುವೆ ದಾಂಪತ್ಯದಲ್ಲಿ ಬಿರುಕು ಮೂಡಿ ಬೇರ್ಪಟ್ಟಿದ್ದಾರಂತೆ.! ಇದಾದ ಬಳಿಕ ಅಂಜಲಿ ರಾಜಸ್ಥಾನದ ಅಜ್ಮೀರ್‌ನಲ್ಲಿರುವ ಗೆಳೆಯ ಅಖಿಲೇಶ್ ಜೊತೆಗೆ ಲೀವ್ ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದಳು. ಆದರೆ ಅಖಿಲೇಶ್ ಗೆ ಮಗುವನ್ನು ತನ್ನ ಜೊತೆ ಇರಿಸಿಕೊಳ್ಳುವುದಕ್ಕೆ ಇಷ್ಟವಿರಲಿಲ್ಲ. ಈ ವಿಚಾರವನ್ನು ಅಂಜಲಿ ಬಳಿ ಅಖಿಲೇಶ್ ಹೇಳಿಕೊಂಡಿದ್ದನಂತೆ.

ಸರೋವರದ ಬಳಿ ಆರೋಪಿ ಅಂಜಲಿ ಪೊಲೀಸರಿಗೆ ಕಾಣಿಕೊಂಡಿದ್ದಾಳೆ. ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಮಹಿಳೆಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುವುದನ್ನು ಕಂಡು ವಿಚಾರಿಸಿದ್ದಾರೆ. ಬಳಿಕ ಸರೋವರದ ಬಳಿ ಸಿಸಿ ಕ್ಯಾಮರಾ ಪರಿಶೀಲಿಸಿದ್ದು, ಕೃತ್ಯ ಬಯಲಿಗೆ ಬಂದಿದೆ. ಬಳಿಕ ಮಹಿಳೆಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮಗುವಿನ ಹತ್ಯೆಯ ಹಿಂದಿನ ಅಸಲಿ ಸತ್ಯ ಬಯಲಾಗಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!