ಶಿವಮೊಗ್ಗ : ಶಿವಮೊಗ್ಗದಲ್ಲಿ ಗಮನ ಸೆಳೆದ ಮಹಿಳಾ ದಸರಾದ “ನಾರಿ ಶಕ್ತಿ ಮಹಾ ಶಕ್ತಿ” ಜಾಥಾ

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಮಹಾನಗರ ಪಾಲಿಕೆಯ ಮಹಿಳಾ ದಸರಾ ಅಂಗವಾಗಿ ನಾರಿ ಶಕ್ತಿ ಮಹಾ ಶಕ್ತಿ ಜಾಥಾ ಶಿವಮೊಗ್ಗದ ಪ್ರಮುಖ ಬೀದಿಗಳಲ್ಲಿ ಗಮನ ಸೆಳೆಯಿತು.

300ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆ ಮಣಿಗಳು ಸೇರಿದ್ದ ಈ ಕಾರ್ಯಕ್ರಮ ನಿಜಕ್ಕೂ ನಾರಿಶಕ್ತಿಯನ್ನು ಪ್ರತಿಬಿಂಬಿಸುವಂತಿತ್ತು.
ಶಾಸಕರಾದ ಎಸ್.ಎನ್. ಚನ್ನಬಸಪ್ಪ ಮತ್ತು ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಬಲ್ಕಿಷ್ ಬಾನು ರವರು “ನಾರಿ ಶಕ್ತಿ ಮಹಾ ಶಕ್ತಿ” ಜಾಥಾ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಪಾಲಿಕೆ ವ್ಯಾಪ್ತಿಯ ಮಹಿಳೆಯರು ವಿವಿಧ ವೇಷ ಭೂಷಣಗಳನ್ನು ತೊಟ್ಟು ಜಾಥಾದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು ಜೋತೆಗೆ ಸಾರ್ವಜನಿಕರ ಗಮನ ಸೆಳೆಯಿತು.
ಮಹಿಳಾ ದಸರಾ ಸಮಿತಿಯ ಕಾರ್ಯದರ್ಶಿ ಅನುಪಮಾ ಮತ್ತು ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿ “ನಾರಿ ಶಕ್ತಿ ಮಹಾ ಶಕ್ತಿ” ಜಾಥವನ್ನು ಯಶಸ್ವಿಯಾಗಿಸಿದರು.


