ಫೇಸ್ಬುಕ್ ಪ್ರೇಮಿಗಾಗಿ ಕಾರಿನಲ್ಲಿ 600 KM ದೂರ ಕ್ರಮಿಸಿದ ಪ್ರಿಯತಮೆ.! ಭೇಟಿಯ ನಂತರ ಕಂಡಿದ್ದು ಮಾತ್ರ ಶವವಾಗಿ.!
ಫೇಸ್ಬುಕ್ ತೆರದು ಹುಡುಕಾಟದಲ್ಲಿದ್ದ ಮುಕೇಶ್ ಕುಮಾರಿಗೆ ಅದ್ಯಾವ ಯ್ಯಾಂಗಲ್ ನಿಂದ ಪ್ರೇಮಿಸುವಂತೆ ಕಂಡನೊ ಶಿಕ್ಷಕ ಮನರಾಮ್ ಕಂಡೊಡನೆ ಪ್ರೇಮದ ಸುಳಿಗೆ ಬಿದ್ದಿದ್ದಾಳೆ.ಒಂದಷ್ಟು ದಿನ ಕಾಲ್,ಚಾಟ್ ಎಂದು ಪ್ರೇಮ ನಿವೇದನೆ ಹಂಚಿಕೊಂಡು ಇನ್ನೇನು ಪ್ರಿಯತನನನ್ನು ನೋಡದೆ ಇರಲು ಸಾಧ್ಯವಿಲ್ಲ ಎನ್ನುವಂತೆ ಪ್ರಿಯಕರ ಮನರಾಮ್ ನ ಭೇಟಿಗಾಗಿ ಸುಮಾರು 600 ಕಿ.ಲೋ ಮೀಟರ್ ಕ್ರಮಿಸಿದ ಪ್ರಿಯತಮೆ.! ಕೊನೆಗೂ ಆತನನ್ನು ಭೇಟಿಯಾಗಿ ನಂತರ ಕಂಡಿದ್ದು ಶವವಾಗಿ…..ಹಾಗಾದರೆ ಇಬ್ಬರ ನಡುವೆ ನೆಡೆದದ್ದಾದರು ಏನು.? ಎನ್ನುವುದು ಮಾತ್ರ ನಿಗೂಢವಾಗಿದೆ.. ಪೊಲೀಸರ ತನಿಖೆಯಿಂದ ಇನ್ನಷ್ಟೇ ಬಯಲಾಗಬೇಕಿದೆ…
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ರಾಜಸ್ಥಾನದ ಬಾರ್ಮರ್ ನಗರದ ಸಮೀಪವಿದ ಸದರ್ ಪ್ರದೇಶದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದು ಹೋಗಿದೆ.? ಜುನ್ಜುನುವಿನ 37 ವರ್ಷದ ಮುಖೇಶ್ ಕುಮಾರಿ ಎಂಬಾಕೆಯನ್ನು ಹತ್ಯೆ ಮಾಡಲಾಗಿದೆ.! ಅಲ್ಲದೆ ಮುಖೇಶ್ ಕುಮಾರಿ ಮೃತದೇಹ ಆಕೆಯ ಕಾರಿನ ಡ್ರೈವಿಂಗ್ ಸೀಟಿನಲ್ಲಿ ಪತ್ತೆಯಾಗಿದ್ದು ಮುಖೇಶ್ ಕುಮಾರಿ
ರಾಜಸ್ಥಾನದ ಬಾರ್ಮರ್ ನಗರದ ಸಮೀಪವಿದ ಸದರ್ ಪ್ರದೇಶದಲ್ಲಿ ಈ ಪ್ರಕರಣ ಪತ್ತೆಯಾಗಿದೆ. ಜುನ್ಜುನುವಿನ 37 ವರ್ಷದ ಮುಖೇಶ್ ಕುಮಾರಿ ಎಂಬಾಕೆಯನ್ನು ಹತ್ಯೆ ಮಾಡಲಾಗಿದ್ದು ಅಲ್ಲದೆ ಮುಖೇಶ್ ಕುಮಾರಿ ಮೃತದೇಹ ಆಕೆಯ ಕಾರಿನ ಡ್ರೈವಿಂಗ್ ಸೀಟಿನಲ್ಲಿ ಪತ್ತೆಯಾಗಿದ್ದು ಇದೊಂದು ಕೊಲೆ ಎಂದು ಪೋಲಿಸರು ಶಂಕೆ ವ್ಯಕ್ತಪಡಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಸರ್ಕಾರಿ ಶಿಕ್ಷಕ ಮನರಾಮ್ (38) ಎಂಬಾತನನ್ನು ಬಂಧಿಸಿ ನಿವಾರಣೆಗೆ ಒಳಪಡಿಸಿದ್ದಾರೆ.

ಮುಖೇಶ್ ಕುಮಾರಿ ಫೇಸ್ಬುಕ್ ನಲ್ಲಿ ಪರಿಚಯವಾಗಿ ಪ್ರೀತಿಯಾದ ಹಿನ್ನೆಲೆಯಲ್ಲಿ ಪ್ರಿಯತಮನನ್ನು ಹರಸಿ ತನ್ನೂರಿನಿಂದ ಸುಮಾರು 600 ಕಿ.ಮೀ ದೂರ ಕ್ರಮಿಸಿದ ನಂತರ ಮನರಾಮ್ ಅವರನ್ನು ಭೇಟಿ ಮಾಡಲು ಅವರ ಮನೆಗೆ ಬಂದಿದ್ದರು ಎಂದು ಎಸ್ಪಿ ನರೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ, ಇಬ್ಬರೂ ಅಕ್ಟೋಬರ್ 2024ರಲ್ಲಿ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದರು. ಇದಾದ ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಸೆಪ್ಟೆಂಬರ್ 10ರಂದು ಮುಖೇಶ್ ಕುಮಾರಿ ಬಾರ್ಮರ್ ತಲುಪಿ ಮನರಾಮ್ ಅವರ ಮನೆಯಲ್ಲಿಯೇ ಇದ್ದರು. ಮನರಾಮ್ ತನ್ನ ಮನೆಯಲ್ಲಿ ಮಹಿಳೆಯನ್ನು ಕೊಂದು, ಶವವನ್ನು ಮಹಿಳೆಯ ಕಾರಿನಲ್ಲಿ ಇರಿಸುವ ಮೂಲಕ ಅದನ್ನು ಅಪಘಾತದಂತೆ ಬಿಂಬಿಸಲು ಪ್ರಯತ್ನಿಸಿದ್ದಾನೆ ಎಂದು ಮೀನಾ ಹೇಳಿದ್ದಾರೆ.


