ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ ಅದ್ದೂರಿ ರಾಜಬೀದಿ ಉತ್ಸವದೊಂದಿಗೆ ತುಂಗಾ ನದಿಯ ಭೀಮನ ಮಡುವಿನಲ್ಲಿ ವಿಸರ್ಜಿಸಲಾಯಿತು.

ಹಿಂದೂ ಕೇಸರಿ ಅಲಂಕಾರ ಸಮಿತಿಯಿಂದ ಗಣಪತಿ ಸಾಗುವ ಮಾರ್ಗಗಳಲ್ಲಿ ಮಾತ್ರವಲ್ಲದೇ ಇಡೀ ನಗರದ ಪ್ರಮುಖ ವೃತ್ತ, ರಸ್ತೆಗಳನ್ನು ಕಲಾ ಕೃತಿಗಳ ಮೂಲಕ ಅಲಂಕರಿಸಲಾಗಿತ್ತು, ಕೇಸರಿ ಬಂಟಿಂಗ್ ಕಟ್ಟಲಾಗಿದ್ದು, ಶಿವಮೊಗ್ಗ ನಗರವೆ ಕೇಸರಿಮಯವಾಗಿತ್ತು. ನೆಹರು ರಸ್ತೆಯ ಪ್ರವೇಶದಲ್ಲಿ ಆಪರೇಷನ್ ಸಿಂಧೂರ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಹೆಸರಿನ ಮಹಾದ್ವಾರ ನಿರ್ಮಿಸಲಾಗಿತ್ತು ರಾಜಬೀದಿ ಉತ್ಸವಕ್ಕೆ ಶುಭ ಕೋರಿ ಫ್ಲೆಕ್ಸ್ಗಳು ರಸ್ತೆ ಉದ್ದಕ್ಕೂ ರಾರಾಜಿಸುತ್ತಿದ್ದವು, ಮೆರವಣಿಗೆ ಆರಂಭವಾದ ಕ್ಣಣದಿಂದಲೂ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ಮೆರವಣಿಗೆಯನ್ನು ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಸಾಗುವಂತೆ ಮಾಡಿದರು, ಗಣಪತಿ ಮೂರ್ತಿಗೆ ಬೃಹತ್ ಹೂವಿನ ಹಾರ ಹಾಗೂ ಹಣ್ಣಿನ ಹಾರಗಳನ್ನು ಹಾಕಲು ಕ್ರೇನ್ಗಳನ್ನು ತರಲಾಗಿತ್ತು….

HINDU MAHASABHA GANESHA
ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಎಂದಿನಂತೆ ಈ ಬಾರಿಯು ಹಿಂದೂ ಮಹಾಸಭಾ ಗಣಪನ ನಿಮಜ್ಜನ ಪೂರ್ವ ಮೆರವಣಿಗೆ ಅದ್ದೂರಿಯಾಗಿ ನೆಡೆಯಿತು.
ನಗರದ ಹಿಂದೂ ಮಹಾಮಂಡಳದ ಗಣೇಶನ ನಿಮಜ್ಜನ ಪೂರ್ವ ಮೆರವಣಿಗೆಯು (ಸೆ,6) ನಗರದ ಭೀಮೇಶ್ವರ ದೇವಾಲಯದಿಂದ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಶಿವಮೊಗ್ಗ ಕ್ಷೇತ್ರದ ಶಾಸಕರು ಹಿಂದೂ ಮುಖಂಡರಾದ ಎಸ್.ಎನ್. ಚನ್ನಬಸಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್, ಎಂ.ಶ್ರೀಕಾಂತ್,ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್, ಎಚ್.ಸಿ.ಯೋಗೀಶ್ ನೇತೃತ್ವದಲ್ಲಿ ಪೂಜೆ ನೆರವೇರಿಸಿ ಗಣಪತಿಯ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಮೆರವಣಿಗೆಯಲ್ಲಿ ವಿಶೇಷ ಅಲಂಕಾರದಿಂದ ಸಿಂಗರಿಸಲಾಗಿದ್ದ ಟ್ಯಾಕ್ಟರ್ ನಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಭೀಮೇಶ್ವರ ದೇವಾಲಯದಿಂದ ಹೊರಟ ಗಣಪನ ಮೆರವಣಿಗೆ ಎಸ್ಪಿಎಂ ರಸ್ತೆಯ ಕಡೆ ಸಾಗುತ್ತಿದ್ದಂತೆ ಲಕ್ಷಾಂತರ ಮಂದಿ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು,

ಮೆರವಣಿಗೆ ಪ್ರಾರಂಭ ಕ್ಷಣದಿಂದಲೂ ದಾರಿ ಉದ್ದಕ್ಜೂ ಅನ್ನದಾಸೋಹ ಕಾರ್ಯಕ್ರಮವನ್ನು ಸಾಕಷ್ಟು ಸಂಘ ಸಂಸ್ಥೆಗಳು ಕೆಲವು ಮುಖಂಡರು ಹಮ್ಮಿಕೊಂಡಿದ್ದರು.
ಮೆರವಣಿಗೆಯಲ್ಲಿ ಜಾನಪದ ಕಲಾ ಮೇಳ, ಹುಲಿವೇಷಧಾರಿಗಳು,ಡೊಳ್ಳು ನೃತ್ಯ, ಕೀಲುಗೊಂಬೆ ಹಾಗೂ ಮಂಗಳವಾದ್ಯ ಗಣೇಶನ ಮೆರವಣಿಗೆ ಮೆರಗು ನೀಡಿದವು.
ವಿವಿಧ ಕಲಾತಂಡಗಳು ಭಾಗಿಯಾಗಿತ್ತು. ಯುವಕರು – ಯುವತಿಯರು ಹಾಗೂ ಮಹಿಳೆಯರು ಸಹ ಭರ್ಜರಿ ಡ್ಯಾನ್ಸ್ ಮಾಡುತ್ತಾ ಮೆರವಣಿಗೆಯಲ್ಲಿ ಸಾಗಿ ಮತ್ತಷ್ಟು ಮೆರುಗು ನೀಡುವ ಮೂಲಕ ಗಣೇಶನ ಅದ್ದೂರಿ ರಾಜಬೀದಿ ಉತ್ಸವ ಸಾಗಿತು. ಗಣೇಶನ ಮೆರವಣಿಗೆ ಉದ್ದಕ್ಕೂ ವಿವಿಧ ಸಂಘ – ಸಂಸ್ಥೆಗಳು, ಸಾರ್ವಜನಿಕರು ಪ್ರಸಾದ, ಅನ್ನ ದಾಸೋಹ, ಕುಡಿಯಲು ನೀರಿನ ವ್ಯವಸ್ಥೆ ಮಾಡಿದ್ದರು.

ಅಲ್ಲದೇ, ಪೊಲೀಸ್ ಇಲಾಖೆಯು ನಗರದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು. ಬಂದೋ ಬಸ್ತ್ಗಾಗಿ ಸುಮಾರು 5 ಸಾವಿರ ಪೊಲೀಸರನ್ನು ನೇಮಕ ಮಾಡಲಾಗಿತ್ತು. ನಗರವಲ್ಲದೇ, ನಗರದ ಹೊರ ಭಾಗದಲ್ಲೂ ಸಹ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಹಿಂದೂ ಮಹಾಮಂಡಳದ ಗಣೇಶನ ಮೆರವಣಿಗೆ ಸಾಗುವ ಪ್ರತಿ ಭಾಗದಲ್ಲೂ ಸಹ ವಿವಿಧ ಗಾತ್ರದ, ವಿವಿಧ ಬಣ್ಣದ ಹೂವಿನ ಹಾರ ಹಾಕಲಾಗುತ್ತಿತ್ತು. ಒಂದೇರಡು ನೋಟಿನ ಹಾರವು ಗಣೇಶನ ಮುಡಿಗೇರಿತ್ತು, ಆದರೆ ಈ ಬಾರಿ ಗಣೇಶನ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಎಲ್ಲಾ ಕಡೆಯಿಂದಲೂ ಜನಸಾಗರವೆ ಹರಿದು ಬಂದಿತ್ತು. ಅಲ್ಲದೇ ಎಲ್ಲೆಲ್ಲೂ ಕೇಸರಿ ಶಾಲು, ಪೇಟಗಳು, ಕೇಸರಿ ಬಾವುಟದೊಂದಿ ಮೆರವಣಿಗೆಯ ಉದ್ದಕ್ಕೂ ಕೇಸರಿಮಯವಾಗಿತ್ತು ,
ಸಮುದ್ರ ಮಂಥನದ ಅಲಂಕಾರ:
ಹಿಂದೂ ಕೇಸರಿ ಅಲಂಕಾರ ಸಮಿತಿಯವರು ಪ್ರತಿ ವರ್ಷ ಭಾರತೀಯ ಸನಾತನ ಧರ್ಮದ ವಿವಿಧ ಅಲಂಕಾರಗಳನ್ನು ಮಾಡಿಕೊಂಡು ಬಂದಿದ್ದು ಈ ಬಾರಿ ಗಾಂಧಿ ಬಜಾರ್ನ ಹೆಬ್ಬಾಗಿಲಿಗೆ ಸಮುದ್ರ ಮಂಥನದ ವಿಶೇಷ ಅಲಂಕಾರ ಮಾಡಲಾಗಿದ್ದು ಇದನ್ನು ನೋಡಲು ಕಳೆದ ಹತ್ತು ದಿನಗಳಿಂದ ಜನ ಸಾಗರವೆ ಹರಿದು ಬಂದಿದೆ, ಅಲ್ಲದೇ ಇಲ್ಲಿಗೆ ಬಂದ ಭಕ್ತರು ಫೋಟೋ, ಸೆಲ್ಫಿ ಕ್ಲಿಕ್ಕಿಸಿ ಕೊಂಡು ಸಂಭ್ರಮ ಪಟ್ಟಿದ್ದಾರೆ.
ಜೋತೆಗೆ ನೆಹರು ರಸ್ತೆಯ ಪ್ರವೇಶದಲ್ಲಿ ಆಪರೇಷನ್ ಸಿಂಧೂರ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಮಹಾದ್ವಾರ ನಿರ್ಮಿಸಲಾಗಿತ್ತು, ರಾಜಬೀದಿ ಉತ್ಸವಕ್ಕೆ ದಾರಿ ಉದ್ದಕ್ಕೂ ಶುಭ ಕೋರುವ ಫ್ಲೆಕ್ಸ್ಗಳು ರಾರಾಜಿಸಿದ್ದವು.
ಗಣಪತಿ ಮೂರ್ತಿಗೆ ಬೃಹತ್ ಹೂವಿನ ಹಾರ ಹಾಗೂ ಹಣ್ಣಿನ ಹಾರಗಳನ್ನು ಹಾಕಲು ಕ್ರೇನ್ಗಳನ್ನು ತರಲಾಗಿತ್ತು,
ಹಿಂದೂ ಕೇಸರಿ ಅಲಂಕಾರ ಸಮಿತಿಯಿಂದ ಗಣಪತಿ ಸಾಗುವ ಮಾರ್ಗಗಳಲ್ಲಿ ಮಾತ್ರವಲ್ಲದೇ ಸಂಪೂರ್ಣ ಶಿವಮೊಗ್ಗ ನಗರದ ಪ್ರಮುಖ ವೃತ್ತ, ರಸ್ತೆಗಳನ್ನು ಕಲಾ ಕೃತಿಗಳ ಮೂಲಕ ಅಲಂಕರಿಸಲಾಗಿದೆ.
ಗಣೇಶ ಸಾಗುವ ರಸ್ತೆಗಳ ಉದ್ದಕ್ಕೂ ಕೇಸರಿ ಬಂಟಿಂಗ್ ಕಟ್ಟಲಾಗಿತ್ತು ಶಿವಮೊಗ್ಗ ನಗರವೆ ಕೇಸರಿ ಮಯವಾಗಿದೆ.
ನಗರದ ಹೃದಯ ಭಾಗವಾದ ಗೋಪಿ ವೃತ್ತಕ್ಕೆ ಗಣೇಶನ ಆಗಮನ ವಾಗುತ್ತಿದ್ದಂತೆ ಡಿಜೆ ಸದ್ದಿಗೆ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಹಜ್ಜೆಹಾಕಿ ಸಾವಿರಾರು ಮಂದಿ ಸಂಭ್ರಮಿಸಿದರು.
ಟ್ಯಾಕ್ಟರ್ ನಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಭೀಮೇಶ್ವರ ದೇವಾಲಯದಿಂದ ಹೊರಟ ಗಣಪನ ಮೆರವಣಿಗೆ ಎಸ್ಪಿಎಂ ರಸ್ತೆಯ ಕಡೆ ಸಾಗಿ
ಅಲ್ಲಿಂದ ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ , ಅಮೀರ್ ಅಹಮದ್ ವೃತ್ತ, ನೆಹರು ರಸ್ತೆ,ಗೋಪಿ ವೃತ್ತ, ಟಿ. ಶೀನಪ್ಪ ಶೆಟ್ಟಿ ವೃತ್ತ, ದುರ್ಗಿಗುಡಿ ಮುಖ್ಯರಸ್ತೆ, ಡಾ. ಬಿ. ಆರ್. ಅಂಬೇಡ್ಕರ್ ವೃತ್ತ, ಕುವೆಂಪು ರಸ್ತೆ, ಶಿವಮೂರ್ತಿ ವೃತ್ತ, ಸರ್. ಎಂ. ವಿಶ್ವೇಶ್ವರಯ್ಯ ರಸ್ತೆ, ಬಸವೇಶ್ವರ ವೃತ್ತ, ಕಾನ್ವೆಂಟ್ ರಸ್ತೆ, ಬಿ. ಹೆಚ್. ರಸ್ತೆಯ ಮೂಲಕ ಸಾಗಿ ಕೋಟೆ ಪೊಲೀಸ್ ಠಾಣೆ ರಸ್ತೆಯ ಮೂಲಕ
ಪುನಃ ಭೀಮೇಶ್ವರ ದೇವಾಲಯದ ಬಳಿ ತೆರಳಿ ಪಕ್ಕದ ತುಂಗಾ ನದಿಯ ಭೀಮನ ಮಡುವಿನಲ್ಲಿ ಗಣೇಶನ ನಿಮಜ್ಜನ ನಡೆಯಿತು.

ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರ ನೇತ್ರತ್ವದಲ್ಲಿ ಸುಮಾರು 10,000 ಭಕ್ತಾದಿಗಳಿಗೆ ಪ್ರಸಾದ ಅನ್ನ ದಾಸೋಹ.
ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಕಳೆದ 6 ವರ್ಷದಿಂದ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಹೆಚ್.ಎಸ್.ಸುಂದರೇಶ್ ರವರು ಭಕ್ತರಿಗಾಗಿ ಅನ್ನ ದಾಸೋಹ ಪ್ರಸಾದ ಕಾರ್ಯಕ್ರಮವನ್ನು ಗಾಂಧಿ ಬಜಾರ್ ನ ಬಸವಣ್ಣ ದೇವಸ್ಥಾನದ ಮುಂಭಾಗದಲ್ಲಿ ಏರ್ಪಡಿಸಿದರು,

ಈ ಪ್ರಸಾದ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಬಂದು ಪ್ರಸಾದ ಮತ್ತು ಕುಡಿಯುವ ನೀರನ್ನು ಸ್ವೀಕರಿಸಿದರು, ಈ ಸಂದರ್ಭದಲ್ಲಿ ಹೆಚ್. ಎಸ್.ಸುಂದರೇಶ್ ಅಭಿಮಾನಿ ಬಳಗವು ಉಪಸ್ಥಿತರಿದ್ದರು..


