BREAKING: ಧರ್ಮಸ್ಥಳ ಬುರುಡೆ ಪ್ರಕರಣ ಸ್ಪೋಟಕ ಮಾಹಿತಿ ಬಹಿರಂಗ: ಚಿನ್ನಯ್ಯನಿಗೆ ಬುರುಡೆ ತಂದುಕೊಟ್ಟ ಸೌಜನ್ಯಾ ಮಾವನ ಬಂಧನವಾಗತ್ತ.?
news.ashwasurya.in
ಅಶ್ವಸೂರ್ಯ/ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದ ಸ್ಪೋಟಕ ಸುದ್ದಿ ಬಯಲಾಗಿದೆ, ಚಿನ್ನಯ್ಯನಿಗೆ ಬುರುಡೆ ತಂದು ಕೊಟ್ಟಿದ್ದೆ ಸೌಜನ್ಯ ಮಾವ ವಿಠಲ್ ಗೌಡ ಎನ್ನುವುದು ಗೊತ್ತಾಗಿದ್ದು, ಯಾವುದೇ ಕ್ಷಣದಲ್ಲಿ ಎಸ್ಐಟಿಯಿಂದ ವಿಠಲ್ ಗೌಡ ಬಂಧನವಾಗುವ ಸಾಧ್ಯತೆ ಇದೆ.

ಚಿನ್ನಯ್ಯ ಹಾಗೂ ವಿಠಲ್ ಗೌಡ ಅವರಿಗೆ ಹಳೆಯ ಸ್ನೇಹ ಸಂಬಂಧವಿತ್ತು. ನೇತ್ರಾವತಿ ನದಿ ತೀರದಲ್ಲಿ ಚಿಕ್ಕ ಹೋಟೆಲ್ ನಡೆಸುತ್ತಿದ್ದ ವಿಠಲ್ ಗೌಡ ಅವರ ಅಂಗಡಿಯಲ್ಲಿ ಚಿನ್ನಯ್ಯ ತಂಗುತ್ತಿದ್ದನಂತೆ.! ನದಿ ತೀರದಲ್ಲಿ ಭಕ್ತರು ಮರೆತು ಹೋಗಿದ್ದ ವಸ್ತುಗಳನ್ನು ನೀಡುತ್ತಿದ್ದ. ಮೃತದೇಹಗಳ ಬಳಿ ಸಿಗುತ್ತಿದ್ದ ಬೆಲೆ ಬಾಳುವ ವಸ್ತುಗಳನ್ನು ಸೌಜನ್ಯ ಮಾವ ವಿಠಲ್ ಗೌಡನಿಗೆ ಚಿನ್ನಯ್ಯ ತಂದುಕೊಡುತ್ತಿದ್ದನಂತೆ.? ಚಿನ್ನಯ್ಯನಿಗೆ ಬುರುಡೆ ತಂದು ಕೊಟ್ಟಿದ್ದೆ ವಿಠಲ್ ಗೌಡ ಎನ್ನುವುದು ಗೊತ್ತಾಗಿದ್ದು, ಯಾವುದೇ ಕ್ಷಣದಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.


