ಮುಂಬೈ ಭೂಗತ ಜಗತ್ತಿನ ಡಾನ್ ವರದರಾಜನ್ ಮುದಲಿಯಾರ್ ಪುತ್ರ ಮೋಹನ್ ಭಾಯ್ ಇನ್ನಿಲ್ಲ.!

news.ashwasurya.in
ಅಶ್ವಸೂರ್ಯ/ಮುಂಬೈ: ಮುಂಬೈಯನ್ನು ಆಳಿದ ದಿವಂಗತ ಡಾನ್ ವರದರಾಜನ್ ಮುದಲಿಯಾರ್ ಅಲಿಯಾಸ್ ವರದಭಾಯ್ ಅವರ ಹಿರಿಯ ಪುತ್ರ ಮೋಹನ್ ಮುದಲಿಯಾರ್ ಅಲಿಯಾಸ್ ಮೋಹನ್ ಬಾಯ್ ಗಣೇಶ ಚತುರ್ಥಿಯ ದಿನ ಬುಧವಾರ ಸಂಜೆ ಇಹಲೋಕ ತ್ಯಜಿಸಿದರು .
ಅವರಿಗೆ ಸುಮಾರು 72 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮೋಹನ್ ಬಾಯ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಮಧ್ಯಾಹ್ನ ( ಆ,28 )ರಂದು 3 ಗಂಟೆಗೆ ಮಾತುಂಗಾ(ಸಿ.ಆರ್.ಎಲ್.) ನ ಮಹೇಶ್ವರಿ ಉದ್ಯಾನ್ ಬಳಿಯ “ವಸುಧಾ” ಕಟ್ಟಡದಲ್ಲಿರುವ ಅವರ ನಿವಾಸದಿಂದ ಅಂತ್ಯಕ್ರಿಯೆಯ ಮೆರವಣಿಗೆ ಹೊರಡಲಿದೆ ಎಂದು ತಿಳಿದುಬಂದಿದೆ.
ಮೋಹನ್ ಬಾಯ್

ಅತ್ಯಂತ ಮೃದುಭಾಷಿಯಾಗಿದ್ದ ಮೋಹನ್ ಭಾಯ್( ಮೋಹನ್ ಬಾಯ್ ಎಂದೆ ಜನಪ್ರಿಯರಾಗಿದ್ದರು ) ಅವರು ಒಂದು ಕಾಲದಲ್ಲಿ ಮುಂಬೈನ ಭಯಾನಕ ಭೂಗತ ಜಗತ್ತಿನ ಕಿರೀಟವಿಲ್ಲದ ರಾಜನಾಗಿದ್ದ ತಮ್ಮ ತಂದೆಯನ್ನು ಎಂದಿಗೂ ಅನುಸರಿಸಲಿಲ್ಲ. ಹಾಜಿ ಮಸ್ತಾನ್, ಯೂಸುಫ್ ಪಟೇಲ್, ಕರೀಮ್ ಲಾಲಾ, ಬಡಾ ರಾಜನ್, ದಾವೂದ್ ಇಬ್ರಾಹಿಂ ಮತ್ತು ಛೋಟಾ ರಾಜನ್ ಸೇರಿದಂತೆ ಗ್ಯಾಂಗ್ ಭೂಮಿಯ ಹಿಂದಿನ ಉನ್ನತ ನಾಯಕರು ವರದಾಭಾಯಿ ಅವರನ್ನು ಅವರ ಮಾತುಂಗಾ ನಿವಾಸದಲ್ಲಿ ಭೇಟಿಯಾಗುತ್ತಿದ್ದಾಗಲೆಲ್ಲಾ ಮೋಹನ್ ಭಾಯ್ ಅವರ ತಂದೆಯ ನೆರಳಿನಂತೆ ಇರುತ್ತಿದ್ದರು.

ಆದರೆ ವರದಾಭಾಯ್ ಗ್ಯಾಂಗ್ನ ಸಾವಿರಾರು ಸದಸ್ಯರ ಒತ್ತಡದ ಹೊರತಾಗಿಯೂ ಅವರು ತಮ್ಮ ತಂದೆಯ ಹೆಜ್ಜೆಗಳನ್ನು ಎಂದಿಗೂ ಅನುಸರಿಸಲಿಲ್ಲ.ಮೋಹನ್ ಬಾಯ್ ಭೂಗತ ಜಗತ್ತಿನಿಂದ ದೂರವಾಗೆ ಉಳಿದಿದ್ದರು.
ಗುಜರಾತ್ ಪೊಲೀಸರು ದಾಖಲಿಸಿದ ನಕಲಿ ನೋಟು ಪ್ರಕರಣವನ್ನು ಹೊರತುಪಡಿಸಿ ಅವರ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ದಾಖಲಗಿರಲಿಲ್ಲ. ಅವರನ್ನು ಸಬರಮತಿ ಜೈಲಿನಲ್ಲಿ ಇರಿಸಲಾಗಿತ್ತು, ಆದರೆ ಪ್ರಕರಣದಿಂದ ಅಂತಿಮವಾಗಿ ಏನೂ ಇವರ ಮೇಲೆ ಯಾವುದೇ ಆರೋಪ ಸಾಭಿತಾಗಲಿಲ್ಲ. ಸುಲಿಗೆ ದಂಧೆಯ ಭಾಗವಾಗಿ ಪ್ರಕರಣದಲ್ಲಿ ತಮ್ಮನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಅವರು ಹೇಳಿಕೊಂಡಿದ್ದರು.
ಚೆನ್ನೈನಲ್ಲಿ ಹೃದಯಾಘಾತದಿಂದ ತಂದೆ ಮುಂಬೈ ಭೂಗತ ಜಗತ್ತಿನ ಡಾನ್ ವರದಾಭಾಯ್ ನಿಧನರಾದ ನಂತರ ಮಗ ಮೋಹನ್ ಭಾಯ್ ಇಂಡಿಯನ್ ಏರ್ಲೈನ್ಸ್ ವಿಮಾನವನ್ನು ಬಾಡಿಗೆಗೆ ಪಡೆದು ಅಂತ್ಯಕ್ರಿಯೆಗಾಗಿ ಮುಂಬೈಗೆ ಶವ ತಂದರು.ಮುಂಬೈ ತನ್ನ ತಂದೆಯ “ಕರ್ಮಭೂಮಿ” ಮತ್ತು ಆದ್ದರಿಂದ ಅಂತ್ಯಕ್ರಿಯೆಯನ್ನು ಮುಂಬೈ ನಗರದಲ್ಲಿಯೇ ನಡೆಸಬೇಕೆಂಬುದು ಅವರ ಇಚ್ಚೆ ಯಾಗಿತ್ತು.
ಮಾತುಂಗಾ ರೈಲ್ವೆ ನಿಲ್ದಾಣದ ಮುಂದೆ ಅವರ ತಂದೆ ಅದ್ಧೂರಿಯಾಗಿ ಆಯೋಜಿಸುತ್ತಿದ್ದ ಗಣೇಶ ಚತುರ್ಥಿ ಆಚರಣೆಯ ಉಸ್ತುವಾರಿಯನ್ನು ಮೋಹನ್ ಬಾಯ್ ವಹಿಸಿಕೊಂಡರು ಅದ್ದೂರಿಯಾಗಿ ಆಚರಿಸಿಕೊಂಡು ಬಂದಿದ್ದರು. ವಿಪರ್ಯಾಸವೆಂದರೆ, ಮೋಹನ್ಭಾಯ್ 2025 ರ ಗಣೇಶೋತ್ಸವದ ಮೊದಲ ದಿನದಂದೆ ನಿಧನರಾಗಿದ್ದಾರೆ…..

ವರದರಾಜನ್ ಮುದಲಿಯಾರ್ ಯಾರು.?
1960 ರ ದಶಕದ ಆರಂಭದಿಂದ 1980 ರ ದಶಕದವರೆಗ ಮುಂಬೈ ಅಂಡರ್ ವರ್ಲ್ಡ್ ನ ಡಾನ್ ಗಳಾದ ಕರೀಮ್ ಲಾಲಾ ಮತ್ತು ಹಾಜಿ ಮಸ್ತಾನ್ ಅವರೊಂದಿಗೆ ವರದರಾಜನ್ ಕೂಡಾ ಒಬ್ಬರಾಗಿದ್ದರು.! ಮುಂಬೈನ ಅತ್ಯಂತ ಶಕ್ತಿಶಾಲಿ ಭೂಗತ ಗ್ಯಾಂಗಿನ ನಾಯಕರಲ್ಲಿ ವರದರಾಜನ್ ಕೂಡ ಒಬ್ಬರಾಗಿದ್ದರು. ಅವರ ಮೂಲ ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯ ವೆಲ್ಲೂರಿನ ಸತುವಾಚಾರಿ, ಅಲ್ಲಿಂದ ಅವರ ತಂದೆ ಹಡಗು ವ್ಯವಹಾರ ದಿಲ್ಲಿ ಕೆಲಸ ಮಾಡಲು ಟುಟಿಕೋರಿನ್ಗೆ ವಲಸೆ ಬಂದರು. ಅವರು ತಮಿಳುನಾಡಿನ ಟುಟಿಕೋರಿನ್ನಲ್ಲಿ ಜನಿಸಿದರು.
ಮುಂಬೈ ಭೂಗತ ಜಗತ್ತಿನಲ್ಲಿ ತನ್ನದೆ ಅಧಿಪತ್ಯ ಸಾಧಿ ಮೆರೆದವರಲ್ಲಿ ಡಾನ್ ವರದರಾಜನ್ ಮುದಲಿಯಾರ್ ಕೂಡ ಒಬ್ಬರಾಗಿದ್ದರು.


