
ತಿರುಪತಿ : ತಿರುಪತಿ ವೆಂಕಟೇಶ್ವರನಿಗೆ 140 ಕೋಟಿ ಮೌಲ್ಯದ 121KG ಚಿನ್ನ ಕೊಟ್ಟ ಭಕ್ತ.!!

news.ashwasurya. in
ಅಶ್ವಸೂರ್ಯ/ತಿರುಪತಿ : ಚಂದ್ರಬಾಬು ನಾಯ್ಡು ಮಂಗಳಗಿರಿಯಲ್ಲಿ ಪಿ4 ಕಾರ್ಯಕ್ರಮ ಉದ್ಘಾಟಿಸಿ, ತಿರುಮಲ ವೆಂಕಟೇಶ್ವರ ಸ್ವಾಮಿಗೆ ಅನಾಮಧೇಯ ಭಕ್ತರು 121 ಕೆಜಿ ಚಿನ್ನ ದೇಣಿಗೆಯಾಗಿ ನೀಡಿದ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬಹಿರಂಗಪಡಿಸಿದ್ದಾರೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಂಗಳಗಿರಿಯಲ್ಲಿ ಮಂಗಳವಾರದಂದು ಪಿ4 ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಬಂಗಾರದ (ಉದ್ಯಮಿಗಳು) ಕುಟುಂಬಗಳು ಮತ್ತು ಮಾರ್ಗದರ್ಶಕರೊಂದಿಗೆ ಮುಖಾಮುಖಿ ಸಂವಾದ ನಡೆಸಿದರು. ಏಪಿ ಸರ್ಕಾರವು ಈ ಪಿ4 ಕಾರ್ಯಕ್ರಮವನ್ನು ಉಗಾದಿ ದಿನದಂದು ಔಪಚಾರಿಕವಾಗಿ ಪ್ರಾರಂಭಿಸಿತು. ಈ ಕಾರ್ಯಕ್ರಮದ ಅನುಷ್ಠಾನದ ಭಾಗವಾಗಿ, ಇದುವರೆಗೆ ಸುಮಾರು 13 ಲಕ್ಷ ಬಂಗಾರದ ಕುಟುಂಬಗಳನ್ನು ಮತ್ತು 1.40 ಲಕ್ಷ ಮಾರ್ಗದರ್ಶಕರನ್ನು ಗುರುತಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜನಪ್ರಿಯ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಿರುಮಲ ಶ್ರೀವಾರಿಗೆ ಅನಾಮಧೇಯ ಭಕ್ತರೊಬ್ಬರು ನೀಡಿದ ದೊಡ್ಡ ಮೊತ್ತದ ದಾನದ ಬಗ್ಗೆ ಬಹಿರಂಗಪಡಿಸಿದರು. ಒಬ್ಬ ಭಕ್ತರು ತಿರುಮಲದ ವೆಂಕಟೇಶ್ವರ ಸ್ವಾಮಿಗೆ 121 ಕೆಜಿ ಚಿನ್ನವನ್ನು ದಾನವಾಗಿ ನೀಡುತ್ತಿರುವುದಾಗಿ ಚಂದ್ರಬಾಬು ತಿಳಿಸಿದರು.ನನಗೆ ತಿಳಿದಿರುವ ತಿಮ್ಮಪ್ಪನ ಭಕ್ತರೊಬ್ಬರು ಒಂದು ಕಂಪನಿ ಪ್ರಾರಂಭ ಮಾಡಬೇಕು ಎಂದು ಪ್ರಾರ್ಥನೆ ಮಾಡಿಕೊಂಡಿದ್ದರಂತೆ.

ಇದರಂತೆ ತಿಮ್ಮಪ್ಪನ ಆರ್ಶೀವಾದ ಪಡೆದುಕೊಂಡು ಕಂಪನಿ ನೆಡೆಸಿ ಗೆಲುವು ಸಾಧಿಸಿ ಕೋಟ್ಯಾಂತರ ರೂಪಾಯಿ ಲಾಭಗಳಿಸಿದ್ದರಂತೆ. ಆ ಕಂಪನಿಯ ಶೇಕಡಾ 60 ರಷ್ಟು ಮಾರಾಟ ಮಾಡಿದ್ದರು. 60ರಷ್ಟು ಮಾರಾಟ ಮಾಡಿದ್ದಕ್ಕೆ 1.5 ಬಿಲಿಯನ್ ಅಂದರೆ ಸುಮಾರು 6-7 ಸಾವಿರ ಕೋಟಿ ರೂಪಾಯಿ ಆಗುತ್ತೆ. ಇದರೊಂದಿಗೆ ಸ್ವಲ್ಪ ಸಂಪತ್ತನ್ನು ಶ್ರೀ ವೆಂಕಟೇಶ್ವರ ಸ್ವಾಮಿಗೆ ನೀಡಲು ನಿರ್ಧರಿಸಿದ್ದರು.
ಇದರಂತೆ ಸುಮಾರು 121 ಕೆಜಿ ಬಂಗಾರವನ್ನು ವೆಂಕಟೇಶ್ವರನಿಗೆ ನೀಡಿದ್ದು, ಸುಮಾರು 140 ಕೋಟಿ ರೂಪಾಯಿ ಆಗುತ್ತೆ. ಇಷ್ಟು ಬಂಗಾರ ಕೊಟ್ಟ ವ್ಯಕ್ತಿ ನಮಗೆ ಹೆಸರು ಬಹಿರಂಗ ಮಾಡದಂತೆ ಮನವಿ ಮಾಡಿದ್ದಾರೆ. ನಿತ್ಯ ಶ್ರೀ ವೆಂಕಟೇಶ್ವರ ಸಾಮಿಗೆ 120 ಕೋಟಿ ಬೆಲೆಯ ಆಭರಣಗಳಿಂದ ಅಲಂಕಾರ ಮಾಡಲಾಗುತ್ತದೆ. ಇಲ್ಲಿ ಭಕ್ತ ಕೂಡ 121 ಕೆಜಿ ಬಂಗಾರವನ್ನು ದೇಣಿಗೆಯಾಗಿ ನೀಡದ್ದಾರೆ. ಆದರೆ ಶ್ರಿವಾರಿಗೆ ಸ್ವಾಮಿಗೆ ಎಷ್ಟು ಬಂಗಾರ ಹಾಕುತ್ತಾರೆ ಅಂತ ಭಕ್ತನಿಗೆ ತಿಳಿದಿರಲಿಲ್ಲ, ಆದರೂ ಸ್ವಾಮಿಗೆ ದಿನನಿತ್ಯ ಹಾಕುವ ಮೊತ್ತದಷ್ಟೇ ಬಂಗಾರವನ್ನು ನೀಡಿದ್ದಾರೆ. ಓರ್ವ ಭಕ್ತ 140 ಕೋಟಿ ಮೌಲ್ಯದ ಚಿನ್ನ ನೀಡುತ್ತಾರೆ ಎಂದರೆ ಅದು ಅವರಿಗೆ ದೇವರ ಮೇಲೆ ಇರುವ ನಂಬಿಕೆ ಎಂದು ಚಂದ್ರಬಾಬು ಹೇಳಿದ್ದಾರೆ.



