news.ashwasurya.in
CRIME NEWS
ಸುಖದುಲ್ ಸಿಂಗ್ ಅಲಿಯಾಸ್ ಸುಖ ದುನೆಕೆ
ಕೆನಡಾದ ಮೊಗಾ ಜಿಲ್ಲೆಯಲ್ಲಿ ದವೀಂದರ್ ಬಾಂಬಿಹಾ ಗ್ಯಾಂಗ್‌ನ ಸುಖದುಲ್ ಸಿಂಗ್ ಅಲಿಯಾಸ್ ಸುಖ ದುನೆಕೆಯನ್ನು ಬುಧವಾರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಈ ಘಟನೆಯು ಜೂನ್ 19 ರಂದು ಸರ್ರೆಯಲ್ಲಿ ನಡೆದ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತೆಯೇ ನೆಡೆದಿರಬಹುದೆಂದು ಶಂಕಿಸಲಾಗಿದೆ!? ಆರೋಪಿಗಳು ಸುಖದುಲ್ ಸಿಂಗ್ ಅಲಿಯಾಸ್ ಸುಖ ದುನೆಕೆ ಮೇಲೆ ಸುಮಾರು ಹದಿನೈದು ಸುತ್ತು ಗುಂಡಿನ ಮಳೆಗೆರೆದಿದ್ದಾರೆ ಎನ್ನಲಾಗಿದೆ. 2017ರಲ್ಲಿ ನಕಲಿ ದಾಖಲೆಗಳ ಸಹಾಯದಿಂದ ದುನೆಕೆ ಭಾರತದಿಂದ ಕೆನಡಾಕ್ಕೆ ಪರಾರಿಯಾಗಿದ್ದ, ಸುಖದುಲ್ ಸಿಂಗ್ ವಿರುದ್ಧ ಏಳು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಪಂಜಾಬ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಕನಿಷ್ಠ 18 ಮಂದಿ ಗ್ಯಾಂಗ್ಸ್ಟರ್ಗಳಿದ್ದಾರೆ ಎನ್ನಲಾಗಿದೆ.
ಅವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಭಾರತ ದೇಶದಿಂದ ಹೊರಗೆ ಆಶ್ರಯ ಪಡೆಯುತ್ತಿದ್ದಾರೆ. ಅವರು ಹಲವು ವರ್ಷಗಳ ಹಿಂದೆಯೇ ಭಾರತದ ಪಾಸ್‌ಪೋರ್ಟ್‌ನಲ್ಲಿ ಅಥವಾ ನಕಲಿ ಪ್ರಯಾಣ ದಾಖಲೆಗಳ ಸಹಾಯದಿಂದ ನೇಪಾಳದ ಮೂಲಕ ಬೇರೆ ಬೇರೆ ದೇಶಕ್ಕೆ ಹೋಗಿದ್ದಾರೆ. ಸುಖದುಲ್ ಸಿಂಗ್ ದುನೆಕೆ ಮೋಸ್ಟ್ ವಾಂಟೆಡ್ ಆಗಿದ್ದು ಅರ್ಶ್ ದಲ್ಲಾ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದಾನೆಂದು ತಿಳಿದು ಬಂದಿದೆ.
ಸುಖದುಲ್ ಸಿಂಗ್ ದುನೆಕೆ ಟಾರ್ಗೆಟ್ ಕಿಲ್ಲಿಂಗ್ನಲ್ಲಿ ಕುಖ್ಯಾತಿ ಪಡೆದಿದ್ದ. ಖಾಲಿಸ್ತಾನಿ ಭಯೋತ್ಪಾದಕರ ವಿರುದ್ಧದ ಕ್ರಮವನ್ನು ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅರ್ಶ್ ದಲ್ಲಾ ಗ್ಯಾಂಗ್ ಹಿಡಿದುಕೊಟ್ಟವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿತ್ತು. ಹರಿಯಾಣ, ದೆಹಲಿ ಮತ್ತು ರಾಜಸ್ಥಾನದಲ್ಲಿ ದವಿಂದರ್ ಬಾಂಬಿಹಾ ಗ್ಯಾಂಗ್‌ಗೆ ಬೆಂಬಲ ಮತ್ತು ಧನಸಹಾಯ ಮಾಡುವ ಮೂಲಕ, ದುನೆಕೆ ಸಂಘಟನೆಯನ್ನು ಬಲಪಡಿಸುತ್ತಿದ್ದ.
ದುನೆಕೆ ಕೂಡ ಖಲಿಸ್ತಾನಿ ಪರ ಸಂಘಟನೆಗಳತ್ತ ಒಲವು ತೋರಿದ್ದ. ತನ್ನ ಸಹಚರರ ಸಹಾಯದಿಂದ ದುನೆಕೆ ಪಂಜಾಬ್ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಅಪರಾಧಗಳನ್ನು ಮಾಡುತ್ತಿದ್ದ. ಕಳೆದ ವರ್ಷ ಮಾರ್ಚ್ 14 ರಂದು ಜಲಂಧರ್‌ನ ಮಲ್ಲಿಯನ್ ಗ್ರಾಮದಲ್ಲಿ ಕಬಡ್ಡಿ ಪಂದ್ಯದ ವೇಳೆ ದುನಿಕೆ ತನ್ನ ಸಹಚರರ ಸಹಾಯದಿಂದ ಕಬಡ್ಡಿ ಆಟಗಾರ ಸಂದೀಪ್ ಸಿಂಗ್ ನಂಗಲ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ.
ಈತನ ವಿರುದ್ಧ ಪಂಜಾಬ್ ಮತ್ತು ನೆರೆಯ ರಾಜ್ಯಗಳಲ್ಲಿ 25ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ಕೊಲೆ ಮತ್ತು ಇತರ ಗಂಭೀರ ಅಪರಾಧಗಳು ದಾಖಲಾಗಿವೆಯಂತೆ . ಇತ್ತೀಚೆಗಷ್ಟೇ ಕೆನಡಾ ಖಲಿಸ್ತಾನ್ ಟೈಗರ್ ಫೋರ್ಸ್‌ನ (ಕೆಟಿಎಫ್) ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಯಾವುದೇ ಖಚಿತವಾದ ಸಾಕ್ಷ್ಯಗಳಿಲ್ಲದೆ ಕೊಂದಿದೆ ಎಂದು ಕೆನಡಾ ಭಾರತದ ಮೇಲೆ ಆರೋಪ ಮಾಡಿತ್ತು. ಅದರ ಬೆನ್ನಿಗೆ ಸುಖದುಲ್ ಸಿಂಗ್ ಅನಾಮಿಕರ ಗುಂಡಿನ ದಾಳಿಗೆ ಉಸಿರು ಚೆಲ್ಲಿದ್ದಾನೆ
ಪಂಜಾಬ್ ಮೂಲದ ಗ್ಯಾಂಗ್‌ಸ್ಟರ್ ಸುಖ ದುನೆಕೆ ಕೆನಡಾದಲ್ಲಿ ಗುಂಡಿಕ್ಕಿ ಹತ್ಯೆ!!
ಹಲವು ಪ್ರಕರಣಗಳಲ್ಲಿ ಬೇಕಾಗಿರುವ ಪಂಜಾಬ್ ಮೂಲದ ಗ್ಯಾಂಗ್‌ಸ್ಟರ್ ಸುಖದುಲ್ ಸಿಂಗ್ ಅಲಿಯಾಸ್ ಸುಖ ದುನೆಕೆನನ್ನು ಬುಧವಾರ ರಾತ್ರಿ ಕೆನಡಾದ ವಿನ್ನಿಪೆಗ್ ನಗರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಖಲಿಸ್ತಾನಿ ಭಯೋತ್ಪಾದಕ ಹರ್ದಿಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿಂತೆ ಭಾರತದ ಸಂಭಾವ್ಯ ಕೈವಾಡವಿದೆ ಎಂದು ಕೆನಡಾ ಆರೋಪಿಸಿದ್ದು, ಈ ವಿಚಾರವಾಗಿ ಉಭಯ ದೇಶಗಳ ಸಂಬಂಧದಲ್ಲಿ ಬಿರುಕುಂಟಾಗಿದೆ. ಈ ಬೆಳವಣಿಗೆಯ ನಡುವೆಯೆ ಹತ್ಯೆ ನಡೆದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಎರಡು ಗ್ಯಾಂಗ್‌ಗಳ ನಡುವಿನ ವೈಷಮ್ಯ ದುನೆಕೆ ಹತ್ಯೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.
ಸುಖದುಲ್ ಸಿಂಗ್ ವಿರುದ್ಧ ಕೊಲೆ, ಬೆದರಿಕೆ, ದರೋಡೆ ಸೇರಿಸುಮಾರು 18 ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.
ಪಂಜಾಬ್‌ನ ಮೋಗಾ ಜಿಲ್ಲೆಯ ಕಲಾನ್ ಗ್ರಾಮದಲ್ಲಿ ಜನಿಸಿದ್ದ ಸುಖ ದುನೆಕೆ, 2017ರಲ್ಲಿ ಕೆನಡಾಕ್ಕೆ ಪಲಾಯನ ಮಾಡಿದ್ದನು. ದೇವಿಂದರ್ ಬಾಂಬಿಹಾ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ಸುಖದುಲ್, ಕೆನಡಾ ಮೂಲದ ಗ್ಯಾಂಗ್‌ಸ್ಟರ್‌ಗಳಾದ ಅರ್ಶ್ ದಲ್ಲಾ, ಲಕ್ಕಿ ಪಟಿಯಾಲಾ, ಮಲೇಷ್ಯಾ ಮೂಲದ ಗ್ಯಾಂಗ್‌ಸ್ಟರ್ ಜಕ್‌ಪಾಲ್ ಸಿಂಗ್ ಅಲಿಯಾಸ್ ಲಾಲಿ ಸೇರಿದಂತೆ ಹಲವರೊಂದಿಗೆ ನಿಕಟ ಸಂಬಂಧ ಹೊಂದಿದ್ದನು ಎನ್ನಲಾಗಿದೆ.
ಕೆನಡಾದಲ್ಲಿದ್ದುಕೊಂಡೇ ಸುಖ ದುನೆಕೆ ಪಂಜಾಬ್ ಮತ್ತು ಇತರ ಸ್ಥಳಗಳಲ್ಲಿ ಹತ್ಯೆ, ಸುಲಿಗೆಯಂತಹ ಕೃತ್ಯಗಳಲ್ಲಿ ತೊಡಗಿದ್ದನು ಎಂದು ಹೇಳಲಾಗಿದೆ. ತನ್ನ ಪ್ರತಿಸ್ಪರ್ಧಿ ಗ್ಯಾಂಗ್‌ಗಳ ಸದಸ್ಯರ ಹತ್ಯೆಗಳಲ್ಲಿಯೂ ಈತನ ಕೈವಾಡವಿತ್ತು ಎನ್ನಲಾಗಿದೆ.
ಸುಧೀರ್ ವಿಧಾತ ,ಶಿವಮೊಗ್ಗ