ತೀರ್ಥಹಳ್ಳಿ: ಭತ್ತದ ಗದ್ದೆಗೆ ಕಾಡುಕೋಣ ದಾಳಿ.! ಲಕ್ಷಾಂತರ ರೂಪಾಯಿ ನಷ್ಟ. ದಿಕ್ಕೆಟ್ಟು ಕುಳಿತ ರೈತ.ಅರಣ್ಯ ಇಲಾಖೆ ಮೌನ.?
news.ashwasurya.in
ರಾತ್ರೊ ರಾತ್ರಿ ಕಾಡುಕೋಣಗಳ ಹಿಂಡು ದಾಳಿ ಬೆಳೆದು ನಿಂತ ಭತ್ತದ ಪೈರು ನೆಲಸಮ ದಿಕ್ಕೆಟ್ಟು ಕುಳಿತ ರೈತ.?ಸಾವಿರಾರು ರೂಪಾಯಿ ಹಾನಿ.ಅರಣ್ಯ ಅಧಿಕಾರಿಗಳ ಮೌನ.! ಮುಂದೆನು…?
ಅಶ್ವಸೂರ್ಯ/ ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿ ಒಂದು ಕಡೆ ವರುಣನ ಆರ್ಭಟ ಮತ್ತೊಂದು ಕಡೆ ಕಾಡು ಪ್ರಾಣಿಗಳ ಹಾವಳಿಯಿಂದ ಬಡ ರೈತರ ಬದುಕು ದಿಕ್ಕು ತೋಚದಂತಾಗಿದೆ. ಸಾಲ-ಸೂಲ ಮಾಡಿ ಬೆಳೆಂದಂತ ಬೆಳೆಗಳು ಪ್ರಕೃತಿಯ ವಿಕೋಪಕ್ಕೆ..ಕಾಡು ಪ್ರಾಣಿಗಳ ದಾಳಿಗೆ ಕೈಗೆ ಸಿಗದಂತಾಗಿದೆ..ಇದಕ್ಕೆ ಸಾಕ್ಷಿ ಎಂಬಂತೆ ತೀರ್ಥಹಳ್ಳಿ ತಾಲ್ಲೂಕಿನ ಅರೇಹಳ್ಳಿ ಗ್ರಾಮ
ಪಂಚಾಯತ್ ವ್ಯಾಪ್ತಿಯ ಕಮ್ಮರಡಿ ಸಮೀಪದ ಕೆಸಲೂರು ಗ್ರಾಮ ಹಡ್ಲೆಯ ಕೃಷ್ಣಪ್ಪ ಹೆಚ್ ಸಿ ಮತ್ತು ಸುಂದ್ರೇಶ್ ಹೆಚ್ ಡಿ ಎಂಬುವವರ ಗದ್ದೆಯಲ್ಲಿ ಬೆಳೆದು ನಿಂತ ಭತ್ತದ ಪೈರುಗಳನ್ನು ರಾತ್ರೊ ರಾತ್ರಿ ಕಾಡುಕೋಣಗಳ ಹಿಂಡು ದಾಳಿಮಾಡಿ ಸಂಪೂರ್ಣ ನಾಶ ಮಾಡಿದೆ.
ರಾತ್ರಿ ಬೆಳಗಾಗುವುದರೊಳಗೆ ದಿನನಿತ್ಯ ಮಗುವಂತೆ ಪೋಷಿಸಿ ಬೆಳೆದ ಭತ್ತದ ಪೈರು ಕಾಡುಕೋಣಗಳ ದಾಳಿಗೆ ನೆಲಸಮ ಆಗಿರುವುದನ್ನು ಕಂಡು ರೈತರಿಗೆ ದಿಕ್ಕು ತೋಚದಂತಾಗಿದೆ.ಸಂಭಂದಪಟ್ಟ ಅಧಿಕಾರಿಗಳ ವರ್ಗಾ ಈ ಕೂಡಲೇ ಸ್ಥಳಕ್ಕೆ ದಾವಿಸಿ ಸೂಕ್ತ ಪರಿಹಾರ ನೀಡುವ ಮೂಲಕ ಭತ್ತದ ಪೈರು ಕಳೆದುಕೊಂಡ ರೈತರ ಬದುಕಿಗೆ ಆಸರೆಯಾಗಬೇಕಿದೆ.
ಈ ಘಟನೆ ನೆಡೆದು ದಿನ ಕಳೆದರು ಸಂಬಂದಪಟ್ಟ ಅರಣ್ಯ ಇಲಾಖೆಯವರು ರೈತನ ಜಮೀನಿಗೆ ಹೋಗಿ ಸ್ಥಳ ಮಹಜರು ಮಾಡಿ ಸೂಕ್ತ ಪರಿಹಾರದ ಕೊಡಿಸುವ ನಿಟ್ಟಿನಲ್ಲಿ ರೈತರಿಗೆ ಸಾಂತ್ವನ ಹೇಳಬೇಕಾದವರು ಇನ್ನೂ ಮೌನಕ್ಕೆ ಜಾರಿದ್ದಾರೆ. ಈ ಹಿನ್ನೆಲೆಯಲ್ಲಿ ಭತ್ತದ ಪೈರು ಕಳೆದುಕೊಂಡ ರೈತರು ಮತ್ತು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈಗಾಗಲೇ ಮೇಗರವಳ್ಳಿ ವಲಯ ಅರಣ್ಯ ಅಧಿಕಾರಿಗಳಿಗೆ ಸೂಕ್ತ ಪರಿಹಾರಕ್ಕಾಗಿ ಮನವಿ ನೀಡಲಾಗಿದೆ. ಈ ಕೂಡಲೇ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ದಾವಿಸಿ ಕಾಡುಕೋಣಗಳ ದಾಳಿಗೆ ಬೆಳೆದ ಬೆಳೆ ಕಳೆದುಕೊಂಡ ರೈತರಿಗೆ ಆಸರೆಯಾಗಬೇಕಿದೆ…