Headlines

8 ಜನರನ್ನು ಮದುವೆಯಾಗಿ ಲಕ್ಷ ಲಕ್ಷ ಸುಲಿಗೆ ಮಾಡಿದ ಶಿಕ್ಷಕಿ ಅಂದರ್.!

8 ಜನರನ್ನು ಮದುವೆಯಾಗಿ ಲಕ್ಷ ಲಕ್ಷ ಸುಲಿಗೆ ಮಾಡಿದ ಶಿಕ್ಷಕಿ ಅಂದರ್.!

news.ashwasurya.in

ಅಶ್ವಸೂರ್ಯ/ನಾಗ್ಪುರ: ಶಿಕ್ಷಕಿಯೊಬ್ಬಳು ಎಂಟು ಜನ ಗಂಡಸರನ್ನು ಮದುವೆಯಾಗಿ ಅವರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾಳೆ. ಸಾಲದಕ್ಕೆ ಒಂಬತ್ತನೇ ಮದುವೆಗೆ ತಯಾರಿ ನಡೆಸುತ್ತಿದ್ದ ಸಂಧರ್ಭದಲ್ಲಿಯೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ ಶಿಕ್ಷಕಿ.
ಹೌದು, ಈಕೆ ಒಂದಲ್ಲ, ಎರಡಲ್ಲ ಬರೋಬ್ಬರಿ 8 ಜನ ಗಂಡಸರನ್ನು ಮದುವೆಯಾಗಿದ್ದಳಂತೆ.!? ಇದೀಗ 9ನೇ ಮದುವೆಯಾಗಲು ಹೊರಟವಳು ಪೊಲೀಸರ ಕೈಗೆ ಸೆರೆಸಿಕ್ಕಿದ್ದಾಳೆ.! 35 ವರ್ಷ ಪ್ರಾಯದ ಸಮೀರಾ ಫಾತಿಮಾ ಎಂಟು ಮಂದಿಯನ್ನು ಮದುವೆಯಾಗಿ ಒಂಬತ್ತನೆಯ ಮದುವೆಗೆ ರೆಡಿಯಾಗಿ ಕೃತ್ಯ ಎಸಗಲು ಮುಂದಾಗಿದ್ದ ವಂಚಕಿ.!

ಸಮೀರಾ ವೃತ್ತಿಯಲ್ಲಿ ಶಿಕ್ಷಕಿ. ಕಟ್ಟುಕತೆಗಳ ಮೂಲಕ ಭಾವನಾತ್ಮಕವಾಗಿ ಪುರುಷರನ್ನು ಒಲಿಸಿಕೊಂಡು ಪ್ರೀತಿಯಿಂದ ತನ್ನ ತೆಕ್ಕೆಗೆ ಕೆಡವಿ ಕೊಂಡು ಅವರನ್ನು ರಿಜಿಸ್ಟ್ರರ್ ಮದುವೆಯಾಗುತ್ತಿದ್ದಳಂತೆ. ಬಳಿಕ ಅವರಿಗೆ ನಿತ್ಯ ಕಿರುಕುಳ ನೀಡಿ ಅವರೊಂದಿಗಿನ ತನ್ನ ಸಂಭಾಷಣೆ ರೆಕಾರ್ಡ್ ಮಾಡಿಕೊಂಡು ತನಗೆ ಬೇಕಾದ ಹಾಗೆ ತಿರುಚಿ ಹಣಕ್ಕಾಗಿ ಮದುವೆಯಾಗಿದ್ದ ಗಂಡಸರನ್ನೆ ಬ್ಲಾಕ್ಮೇಲ್ ಮಾಡುತ್ತಿದ್ದಳಂತೆ. ವ್ಯಭಿಚಾರ ಹಾಗೂ ಕಿರುಕುಳದ ಆರೋಪದ ಮೇಲೆ ತಾನು ಮದುವೆಯಾದ ಪುರುಷರ ವಿರುದ್ದ ಪ್ರಕರಣಗಳನ್ನು ದಾಖಲಿಸುತ್ತಿದ್ದಳು ಎಂದು ತಿಳಿದುಬಂದಿದೆ.
ಕೊನೆಗೆ ಆ ಕೇಸ್ ಹಿಂಪಡೆಯಲು ಗಂಡನಿಂದಲೇ ಹಣ ವಸೂಲಿ ಮಾಡುತ್ತಿದ್ದಳು ಎಂಬ ಗಂಭೀರ ಆರೋಪ ಸಮೀರಾ ವಿರುದ್ಧ ಕೇಳಿ ಬಂದಿದೆ. ಈಕೆಯನ್ನು ಮದುವೆಯಾದವರಲ್ಲಿ ಒಬ್ಬ ವ್ಯಕ್ತಿ ಸಮೀರಾ ನಕಲಿ ದೂರು ದಾಖಲಿಸಿ ನನ್ನಿಂದ 10 ಲಕ್ಷ ರೂ. ಚೆಕ್ ಪಡೆದಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ್ದ. ಈ ವೇಳೆ, ತಾನು ಗರ್ಭಿಣಿ ಎಂದು ಸುಳ್ಳು ಹೇಳಿ ಸಮೀರಾ ತಪ್ಪಿಸಿಕೊಂಡಿದ್ದಳು ಎನ್ನಲಾಗಿದೆ.

ಇದೀಗ ಕೊನೆಗೂ ನಾಗ್ಪುರದ ಟೀ ಅಂಗಡಿಯೊಂದರಲ್ಲಿ ಪೊಲೀಸರು ಸಮೀರಾಳನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಆಕೆ ಸದ್ಯದಲ್ಲೇ 9 ನೇ ಮದುವೆಯಾಗಲು ತಯಾರಿ ನಡೆಸಿದ್ದಳು ಎಂಬ ಶಾಕಿಂಗ್ ವಿಚಾರ ಕೂಡ ಬೆಳಕಿಗೆ ಬಂದಿದೆ. ನಾಗ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.ಒಟ್ಟಿನಲ್ಲಿ ಮದುವೆ ಹೆಸರಿನಲ್ಲಿ ದೂಖಾ ಮಾಡುತ್ತಿದ್ದ ಖತರ್ನಾಕ್ ಲೇಡಿ ಸಮೀರಾ ಫಾತಿಮಾ ಪೋಲಿಸರ ಅತಿಥಿಯಾಗಿದ್ದಾಳೆ

Leave a Reply

Your email address will not be published. Required fields are marked *

Optimized by Optimole
error: Content is protected !!