ಧರ್ಮಸ್ಥಳ: ಶವಗಳ ಹೂತಿಟ್ಟ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಕೈವಾಡ.!?

news.ashwasurya.in
ಅಶ್ವಸೂರ್ಯ/ಧರ್ಮಸ್ಥಳ : ಧರ್ಮಸ್ಥಳದಲ್ಲಿ ಸಾಕಷ್ಟು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಹೆಸರು ಕೂಡ ತಳುಕು ಹಾಕಿಕೊಂಡಿದೆ.! ಎಸ್‌ಐಟಿ ಎರಡನೇ ದಿನದ ಉತ್ಖನನ ಕಾರ್ಯಾಚರಣೆಯನ್ನು ಮೂರು ತಂಡಗಳೊಂದಿಗೆ ತೀವ್ರಗೊಳಿಸಿ ಪೌರ ಕಾರ್ಮಿಕರ ಜೋತೆಗೆ ಹಿಟಾಚಿ ಯಂತ್ರವನ್ನು ಬಳಸಿ ದೂರುದಾರ ಗುರುತು ಮಾಡಿರುವ ಜಾಗದಲ್ಲಿ ಗುಂಡಿ ಅಗೆದಿದ್ದು 6ನೇ ಸ್ಥಳದಲ್ಲಿ ಶವದ ಅಸ್ಥಿಪಂಜರದ ತಲೆಬುರುಡೆ ಮತ್ತು ದೇಹದ ಒಂದಷ್ಟು ಮೂಳೆಗಳು ದೊರೆತಿದ್ದು ಪ್ರಕರಣ ರಾಷ್ಟ್ರಾದ್ಯಂತ ತೀವ್ರ ಕೂತುಹಲ ಮೂಡಿಸಿದೆ ಸಾಕಷ್ಟು ಚರ್ಚೆಯು ನಡೆಯುತ್ತಿದೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣವು ರಾಷ್ಟ್ರಾದ್ಯಂತ ತೀವ್ರ ಕುತೂಹಲ ಮೂಡಿಸಿರುವುದರ ಜೊತೆ ಜೊತೆಗೆ ಸಾಕಷ್ಟು ತಿರುವುಗಳನ್ನು ಪಡೆದುಕೊಳ್ಳುತ್ತಿದೆ.ಈ ಸಂದರ್ಭದಲ್ಲಿ ಎಸ್‌ಐಟಿ (ವಿಶೇಷ ತನಿಖಾ ತಂಡ) ಮೂರನೇ ದಿನದ ಉತ್ಖನನ ಕಾರ್ಯಾಚರಣೆಗೆ ಮುಂದಾಗಿದೆ.

ಈ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯರೊಬ್ಬರ ಹೆಸರು ಕೂಡ ತನಿಖೆಯಲ್ಲಿ ತಳುಕು ಹಾಕಿಕೊಂಡಿದೆ, ಅನಾಮಿಕ ದೂರುದಾರ ವಿಚಾರಣೆಗಯ ವೇಳೆ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರನ್ನು ತನಿಖಾ ತಂಡದ ಮುಂದೆ ಹೇಳಿದ್ದೇನೆ ಎನ್ನುವುದು ತಿಳಿದುಬಂದಿದ್ದು. ಎಸ್‌ಐಟಿ ವಿಚಾರಣೆಯಲ್ಲಿ ಈ ದೂರುದಾರ ನೀಡಿದ ಮಾಹಿತಿಯ ಪ್ರಕಾರ, ಶವಗಳನ್ನು ಹೂತಿಟ್ಟ ಕಾರ್ಯದಲ್ಲಿ ಅಂದು ಪೊಲೀಸ್ ಅಧಿಕಾರಿಯೂ ಸಾಥ್ ನೀಡಿದ್ದರು. ಪ್ರಕರಣ ಸಂಬಂಧ ಈಗ ಆ ಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ವಿಷಯ ಬಹಿರಂಗವಾಗುತ್ತಿದ್ದಂತೆ, ಸಂಬಂಧಿತ ಅಧಿಕಾರಿ ಈ ವಿಚಾರ ತಿಳಿದು ವಿಚಾರಣೆ ಭಯದಲ್ಲಿದ್ದು, ದೂರ ಉಳಿದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಉತ್ಖನನ ಕಾರ್ಯಾಚರಣೆ ಚುರುಕು ಗೊಂಡಿದೆ.



