Headlines

ಬೆಂಗಳೂರು: ಬೆಳಗ್ಗೆ ಗಂಡನ ಪಾದ ಪೂಜೆ ಸಂಜೆ ಶಿವನಪಾದ (ಆತ್ಮಹತ್ಯೆಗೆ ಶರಣಾಗಿ) ಸೇರಿದ ಎಂಬಿಎ ವಿದ್ಯಾರ್ಥಿನಿ.! ಕಾರ್ ಡ್ರೈವರ್ ಮೇಲೆ ಪ್ರೀತಿ-ಪ್ರೇಮ-ಪ್ರಣಯ ಮದುವೆಯಾಗಿ ಒಂದೇ ವರ್ಷದಲ್ಲಿ ಸಾವಿನ ಮನೆ ಸೇರಿಸಿತ್ತು.!?

news.ashwasurya.in

ಅಶ್ವಸೂರ್ಯ/ಬೆಂಗಳೂರು: ಸುಂದರವಾಗಿದ್ದ ಎಂಬಿಎ ವಿದ್ಯಾರ್ಥಿನಿಗೆ ಇನ್‌ಸ್ಟಾಗ್ರಾಂ ಮೂಲಕ ಕಾರ್ ಡ್ರೈವರ್ ಮೇಲೆ ಪ್ರೀತಿ-ಪ್ರಣಯವಾಗಿದೆ ನಂತರ ಮದುವೆಯು ಆಗಿದೆ ಎಲ್ಲವೂ ಒಂದೇ ವರ್ಷದಲ್ಲಿ ಅಂತ್ಯವಾಗುದೆ.!ಪ್ರೀತಿಸಿ ಮದುವೆಯಾದ ಎಂಬಿಎ ವಿಧ್ಯಾರ್ಥಿನಿ ಗಂಡನ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಹೋಗಿದ್ದಾಳೆ.!ಇದು ಆತ್ಮಹತ್ಯೆಯೊ…ಕೊಲೆಯೊ..? ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.?

ಒಂದು ವರ್ಷದ ಹಿಂದೆಷ್ಟೇ ಪ್ರೀತಿಸಿ ಮದುವೆಯಾಗಿದ್ದ ಈ ಮುದ್ದಾದ ಜೋಡಿಗೆ ಅದೇನಾಯಿತೊ ಗೊತ್ತಿಲ್ಲ, ಆಕೆ ಮಾತ್ರ ಭೀಮನ ಅಮಾವಾಸ್ಯೆಯ ಮರುದಿನ ನೇಣಿಗೆ ಶರಣಾಗಿದ್ದಾಳೆ.? ಇದೀಗ ಆಕೆಯ ಪತಿ ಮತ್ತು ಅತ್ತೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಈ ಘಟನೆ ನಡೆದಿರುವುದು‌ ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ. ಆತ್ಮಹತ್ಯೆಗೆ ಶರಣಾದ ಸ್ಪಂದನಾ (24) ಮೃತಪಟ್ಟ ಯುವತಿ. ಯಲಹಂಕದ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಕನಕಪುರದ ನಿವಾಸಿ ಸ್ಪಂದನಾಗೆ ಇನ್‌ಸ್ಟಾಗ್ರಾಂನಲ್ಲಿ ಅಭಿಷೇಕ್ ಪರಿಚಯವಾಗಿದ್ದ. ಆತ ವೃತ್ತಿಯಲ್ಲಿ ಕಾರ್ ಡ್ರೈವರ್. ಇಬ್ಬರ ನಡುವಿನ ಪ್ರೀತಿ ಮದುವೆಯ ಹಂತಕ್ಕೆ ತಂದು ನಿಲ್ಲಿಸಿದೆ. ಬಳಿಕ ಕಾಡಿಬೇಡಿ ಮನೆಯವರ ವಿರೋಧದ ನಡುವೆಯೂ ಸ್ಪಂದನಾಳನ್ನು ವಿವಾಹವಾಗಿದ್ದ ಅಭಿಷೇಕ್. ಮಾದನಾಯಕನಹಳ್ಳಿಯ ಅಂಚೆ ಪಾಳ್ಯದಲ್ಲಿ ಅಭಿಷೇಕ್ – ಸ್ಪಂದನಾ ವಾಸವಾಗಿದ್ದರು. ಆದರೆ ವಿವಾಹವಾದ ಒಂದೂವರೆ ವರ್ಷಕ್ಕೇ ಮುದ್ದಾದ ಯುವತಿ ಸ್ಪಂದನಾ ದುರಂತ ಅಂತ್ಯ ಕಂಡಿದ್ದಾಳೆ. ಭೀಮನ ಅಮವಾಸ್ಯೆಯ ದಿನ ಬೆಳಗ್ಗೆ 10 ಗಂಟೆಗೆ ಪತಿಗೆ ಖುಷಿಯಿಂದಲೇ ಪೂಜೆ ಮಾಡಿದ್ದಳಂತೆ ಸ್ಪಂದನಾ. ಆದರೆ ಸ್ಪಂದನಾಗೆ ಇದು ಕ್ಷಣಮಾತ್ರದ ಖುಷಿಯಾಗಿತ್ತು. ರಾತ್ರಿ 11ಗಂಟೆಗೆ ಅಭಿಷೇಕ್‌ಗೆ ಆತನ ಆಫೀಸ್‌ನಲ್ಲಿದ್ದ ಯುವತಿಯೊಬ್ಬಳು ಫೋನ್ ಮಾಡಿದ್ದಳಂತೆ.ಈ ಕರೆಯಿಂದ ಇಬ್ಬರ ನಡುವೆ ಜಗಳವಾಗಿದೆ ಮೊದಲೇ ಪತಿಯ ಮೇಲೆ ಅನುಮಾನವಿದ್ದ ಸ್ಪಂದನಾ ಮಾನಸಿಕವಾಗಿ ಕುಗ್ಗಿದ್ದಳಂತೆ.ಈ ಕಾರಣದಿಂದಲೇ ರಾತ್ರಿ 12:45ರ ಸುಮಾರಿಗೆ ಸ್ಪಂದನಾ ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.!?
ಆತ್ಮಹತ್ಯೆಗೂ ಮುನ್ನ ಸ್ಪಂದನಾ, ತನ್ನ ತಂಗಿಗೆ ಮೆಸೇಜ್ ಮಾಡಿದ್ದು,

ನನ್ನ ಸಾವಿಗೆ ಅಭಿಷೇಕ್, ಅವರ ತಾಯಿ ಹಾಗೂ ಅವರ ಕಚೇರಿಯಲ್ಲಿದ್ದವರು ಕಾರಣ ಎಂದು ಮೆಸೇಜ್ ಮಾಡಿ ನೇಣಿಗೆ ಶರಣಾಗಿದ್ದಾಳೆ.

ಈ ಹಿಂದೆ ಕೂಡ ಮದುವೆಯಾದ ಬಳಿಕ ಸ್ಪಂದನಾಳಿಗೆ ಅಭಿಷೇಕ್​ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎನ್ನುವ ಆರೋಪವಿದೆ. ಅಭಿಷೇಕ್​ ಕುಟುಂಬ ಕಿರುಕುಳ ನೀಡುತ್ತಿದ್ದರ ಬಗ್ಗೆ ಸ್ಪಂದನಾ ತಂದೆಗೆ ಹೇಳಿದ್ದರಿಂದ ಹೆತ್ತವರು 5ಲಕ್ಷ ಹಣವನ್ನು ಕೊಟ್ಟು ರಾಜಿ ಸಂಧಾನ ಮಾಡಿಸಿದ್ದರಂತೆ. ಮತ್ತೆ ನಿನ್ನೆ ತಂದೆಗೆ ಕರೆ ಮಾಡಿ ಅತ್ತೆ ಮಾತನ್ನು ಕೇಳಿ ನನ್ನ ಪತಿ ಕಿರುಕುಳ ಕೊಡ್ತಿದ್ದಾನೆಂದು ಕಣ್ಣೀರಿಟ್ಟಿದ್ದಳಂತೆ ಸ್ಪಂದನಾ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಕರೆ ಮಾಡಿ ಸ್ಪಂದನಾ ಸಾವನ್ನಪ್ಪಿದ್ದಾಳೆ ಎಂಬ ವಿಚಾರ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಆಸ್ಪತ್ರೆಗೆ ಹೋಗಿ ನೋಡಿದಾಗ ಮುದ್ದಾದ ಮಗಳು ಸಾವಿನ ಮನೆ ಸೇರಿದ್ದಾಳು.!
ನೇಣು ಬಿಗಿದ ಸ್ಥಿತಿಯಲ್ಲಿದ್ದ ಸ್ಪಂದನಾ ಮೃತದೇಹವನ್ನು ಯಾರಿಗೂ ಮಾಹಿತಿ ಕೊಡದೇ ತಾವೇ ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಿದ್ದರು ಅಭಿಷೇಕ್ ಕುಟುಂಬ. ಸ್ಪಂದನಾ ಮೈಮೇಲೆ ಗಾಯದ ಗುರುತುಗಳಿವೆ ಅನ್ನುವ ಆರೋಪವೂ ಇದೆ. ಹೀಗಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು ಬಳಿಕ ಸ್ಪಂದನಾ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಪತಿ ಅಭಿಷೇಕ್ ಮತ್ತು ಅತ್ತೆ ಲಕ್ಷ್ಮಮ್ಮ ವಿರುದ್ಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು postmortem ರಿಪೋರ್ಟ್ ಮತ್ತು ತನಿಖೆ ಬಳಿಕ ಸ್ಪಂದನಾ ಸಾವಿನ ಅಸಲಿ ಕಾರಣ ಬಯಲಾಗಲಿದೆ.
ಹೆತ್ತು ಹೊತ್ತ ಪೋಷಕರನ್ನು ವಿರೋಧಿಸಿ ಪ್ರೀತಿ ಪ್ರೇಮದ ಹೆಸರಿನಲ್ಲಿ ಕುರುಡು ಪ್ರೀತಿಗೆ ಕೊರಳೊಡ್ಡಿ ಪ್ರೇಮ ವಿವಾಹವಾದ ಎಂಬಿಎ ವಿದ್ಯಾರ್ಥಿನಿ ಸ್ಪಂದಾನ ಪ್ರೀತಿಸಿ ಮದುವೆಯಾಗಿ ಗಂಡನ ಮನೆ ಸೇರಿದ ಒಂದೇ ವರ್ಷದಲ್ಲಿ ಹೆತ್ತವರ ಕನಸನ್ನು ನುಚ್ಚುನೂರುಮಾಡಿ ತನ್ನ ನೂರಾರು ಸುಂದರ ಕನಸುಗಳನ್ನು ಒಡಲಲ್ಲೆ ಇಟ್ಟುಕೊಂಡು ಸಾವಿಗೆ ಶರಣಾಗಿ ದುರಂತ ಅಂತ್ಯಕಂಡಿದ್ದಾಳೆ….

Leave a Reply

Your email address will not be published. Required fields are marked *

Optimized by Optimole
error: Content is protected !!