Headlines

ಧರ್ಮಸ್ಥಳ: ಸ್ಥಳ ಮಹಜರು ವೇಳೆ SITಗೆ ಹದಿನೈದು ಗುಪ್ತ ಜಾಗಗಳನ್ನು ತೋರಿಸಿದ ಅನಾಮಿಕ.

ಧರ್ಮಸ್ಥಳ: ಸ್ಥಳ ಮಹಜರು ವೇಳೆ SITಗೆ ಹದಿನೈದು ಗುಪ್ತ ಜಾಗಗಳನ್ನು ತೋರಿಸಿದ ಅನಾಮಿಕ.

ಅಶ್ವಸೂರ್ಯ/ಧರ್ಮಸ್ಥಳ : ಜುಲೈ 28 ರಂದು ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆ ಚುರುಕು ಗೊಂಡಿದೆ. ಇಡೀ ದಿನ ಎಸ್​ಐಟಿ ಅಧಿಕಾರಿಗಳು ಅನಾಮಿಕನ ಜೊತೆಗೆ ಸ್ಥಳ ಮಹಜರು ನಡೆಸಿದ್ದು, ಆತ ಸುಮಾರು 15 ಗುಪ್ತ ಸ್ಥಳಗಳನ್ನು ಎಸ್‌ಐಟಿ ತಂಡಕ್ಕೆ ತೋರಿಸಿದ್ದಾನೆ ಎಂದು ತಿಳಿದುಬಂದಿದೆ.?
ಧರ್ಮಸ್ಥಳದಲ್ಲಿ ಎಸ್‌ಐಟಿ ಎಎನ್ಎಫ್ ಸಿಬ್ಬಂದಿಗಳು ಹೈ ಅಲರ್ಟ್ ಆಗಿದ್ದಾರೆ.

ದಿನವಿಡೀ ಅನಾಮಿಕ ವ್ಯಕ್ತಿಯಿಂದ ಸ್ಥಳ ಮಹಜರು ಮಾಡಿದ ಎಸ್‌ಐಟಿ ಅಧಿಕಾರಿಗಳು ಬರೋಬ್ಬರಿ 15 ಜಾಗಗಳನ್ನು ಗುರುತಿಸಿದ್ದಾರೆ. ಸಾಕ್ಷಿನಾಶವಾಗುವ ಸಂಭವ ಕೂಡ ಇರುವುದರಿಂದ ಈ ಸ್ಥಳಗಳಲ್ಲಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಏರ್ಪಡಿಸಲಾಗಿದೆ. ಮಾಸ್ಕ್ ಧರಿಸಿದ್ದ ಅನಾಮಿಕ ವ್ಯಕ್ತಿ ಗುರುತು ಮಾಡಿದ ಸ್ಥಳದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದು, ಶಸ್ತ್ರ ಸಜ್ಜಿತ ಎಎನ್ಎಫ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ತಲಾ ಇಬ್ಬರಂತೆ ಪಹರೆ ಕಾಯಲಿದ್ದಾರೆ ಸಿಬ್ಬಂದಿ
ಒಟ್ಟು 15 ಪಾಯಿಂಟ್‌ಗಳಿದ್ದು,

ಒಂದೊಂದು ಪಾಯಿಂಟ್‌ಗೆ ತಲಾ ಇಬ್ಬರಂತೆ ಎಎನ್‌ಎಫ್ ಸಿಬ್ಬಂದಿ ರಕ್ಷಣೆಗೆ ಇರಿಸಲಾಗಿದೆ. ಈ ಸಿಬ್ಬಂದಿ ರಾತ್ರಿ ಪೂರ್ತಿ ಪಹರೆಯಲ್ಲಿರಲಿದ್ದಾರೆ. 15 ಸ್ಥಳಗಳಿಗೆ ತಲಾ ಇಬ್ಬರಂತೆ ಒಟ್ಟು 30 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಕಾಡಿನಲ್ಲಿ ರಾತ್ರಿಯಿಡೀ ಪಹರೆ ಕಾಯಲಿದ್ದಾರೆ ಎಎನ್‌ಎಫ್ ಸಿಬ್ಬಂದಿ. ಅನಾಮಿಕ ವ್ಯಕ್ತಿ ನೇತ್ರಾವತಿ ನದಿ ತಟದ ಕಾಡಿನ ವ್ಯಾಪ್ತಿಯಲ್ಲೇ ಗುರುತು ಮಾಡಿದ್ದಾನೆ ಎಂದು ತಿಳಿದುಬಂದಿದೆ.!

ಯಾರು ಈ ಮುಸುಕುಧಾರಿ ಅನಾಮಿಕ ಯಾರು.?
ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಢೀರ್ ಪ್ರತ್ಯಕ್ಷನಾಗಿರುವ ರಾಷ್ಟ್ರವ್ಯಾಪ್ತಿ ಸಂಚಲನ ಮೂಡಿಸಿರುವ ವ್ಯಕ್ತಿಯ ಹಿನ್ನೆಲೆ ಇನ್ನೂ ನಿಗೂಢವಾಗಿದೆ. ಈತ ಕೇರಳದಿಂದ ತನ್ನ ವಕೀಲರ ಜೊತೆ ಮಂಗಳೂರಿಗೆ ಬಂದು ವಿಚಾರಣೆಗೆ ಹಾಜರಾಗಿದ್ದ. ಯಾರ ಕಣ್ಣಿಗೂ ಬೀಳಬಾರದು ಎಂಬ ಕಾರಣಕ್ಕೆ, ಈತನ ಮುಖಕ್ಕೆ ಸಂಪೂರ್ಣವಾಗಿ ಮುಸುಕು ಹಾಕಿ ಎಸ್ಐಟಿ ಕಚೇರಿಗೆ ಕರೆತರಲಾಗಿತ್ತು. ಇಂದಿನ ಕಾರ್ಯಾಚರಣೆಯ ವೇಳೆ ಕೂಡ ಮಹಜರು ಮಾಡುವಾಗ ಆತನ ಮುಖಕ್ಕೆ ಮಾಸ್ಕ್‌ ಹಾಕಲಾಗಿದೆ. ಆದರೆ ಆ ಮಾಸ್ಕ್‌ ಮೇಲೆ ಬಿಳಿ ಹಾಗೂ ಕೇಸರಿ ಗೆರೆಗಳನ್ನು ಬರೆಯಲಾಗಿದೆ. ಇದು ಯಾಕೆ ಅನ್ನೋ ಪ್ರಶ್ನೆ ಸಹಜವಾಗಿ ಮೂಡಿದೆ.!?

ಮಾಸ್ಕ್ ಮೇಲಿನ ಅ ಎರಡು ಗೆರೆಗಳ ಹಿಂದಿನ ಸೀಕ್ರೇಟ್‌ ಏನು.?

{“remix_data”:[],”remix_entry_point”:”challenges”,”source_tags”:[],”origin”:”unknown”,”total_draw_time”:0,”total_draw_actions”:0,”layers_used”:0,”brushes_used”:0,”photos_added”:0,”total_editor_actions”:{},”tools_used”:{“cutout_group”:1,”transform”:2,”square_fit”:1,”adjust”:1},”is_sticker”:true,”last_sticker_id”:”562953d2-ab1d-4e2b-8af8-d4756d8d9254″,”edited_since_last_sticker_save”:true,”containsFTESticker”:false}

ಮಾಸ್ಕ್‌ ಮೇಲೆ ಕೇವಲ ಕಾಣಿಸೋಕಷ್ಟೇ ಬಿಳಿ ಹಾಗೂ ಕೇಸರಿ ಬಣ್ಣ ಇರೋದಲ್ಲ. ಇದರ ಹಿಂದೆ ಒಂದು ನಿಗೂಢತೆ ಇದೆ. ಈ ರೀತಿ ಬಿಳಿ ಹಾಗೂ ಕೇಸರಿ ಬಣ್ಣ ಇರೋ ಗೆರೆಗಳನ್ನು ಕೆಲವು ಎಐಗಳು ರೀಡ್ ಮಾಡೋದಿಲ್ಲ. ನಾರ್ಮಲ್ ಮಾಸ್ಕ್‌ ಹಾಕಿದ್ರೆ, ಎಐ ಸಹಾಯದಿಂದ ಮಾಸ್ಕ್‌ ಹಿಂದೆ ಇರೋ ಮುಖದ ಚಿತ್ರವನ್ನು ಗುರುತಿಸಬಹುದು. ಕೆಲವೊಂದು ಎಐಗಳು ಮಾಸ್ಕ್‌ ಹಾಕಿರೋ ಹಿಂದಿನ ವ್ಯಕ್ತಿ ಹೇಗಿದ್ದಾನೆ ತೋರಿಸಿ ಅಂದ್ರೆ 100 ಪರ್ಸೆಂಟ್‌ ಅಲ್ಲದಿದ್ರು ಆತನ ಮುಖವನ್ನು ಕೊಂಚ ಮಟ್ಟಕ್ಕಾದರೂ ಹೋಲಿಕೆ ಮಾಡಿ ತೋರಿಸಬಲ್ಲವು.ಈ ಕಾರಣದಿಂದಲೇ ಮಾಸ್ಕ್ ಮೇಲೆ ಇದೆ ಅ ಎರಡು ಗೆರೆಗಳು.!

Leave a Reply

Your email address will not be published. Required fields are marked *

Optimized by Optimole
error: Content is protected !!