ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ “ಶಿವಮೊಗ್ಗ ನಗರದ ಆರ್.ಎಸ್ ಪಾರ್ಕ್” ನಲ್ಲಿ “ಮನೆ-ಮನೆಗೆ ಪೊಲೀಸ್” ಕಾರ್ಯಕ್ರಮದ ಉದ್ಘಾಟನೆ.

news.ashwasurya.in
ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ “ಶಿವಮೊಗ್ಗ ನಗರದ ಆರ್.ಎಸ್ ಪಾರ್ಕ್” ಬಡಾವಣೆಯಲ್ಲಿ “ಮನೆ-ಮನೆಗೆ ಪೊಲೀಸ್” ಕಾರ್ಯಕ್ರಮದ ಉದ್ಘಾಟನೆಯನ್ನು ಗೌರವಾನ್ವಿತ ಮಾನ್ಯ ನ್ಯಾಯಾಧಿಶರಾದ ಶ್ರೀ ಮಂಜುನಾಥ್ ನಾಯಕ್, ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ ಮತ್ತು ಮಾನ್ಯ ನ್ಯಾಯಾಧಿಶರಾದ ಶ್ರೀ ಸಂತೋಷ್ ಎಂ. ಎಸ್, ಡಿ.ಎಲ್.ಎಸ್.ಎ, ಶಿವಮೊಗ್ಗ ರವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.

ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು. ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಈ ಸಂದರ್ಭದಲ್ಲಿ ಮನೆ ಮನೆಗೆ ಪೊಲೀಸ್ ಬಿತ್ತಿ ಪತ್ರ ಹಾಗೂ ಮನೆಗಳಿಗೆ ಅಂಟಿಸಲಾಗುವ ಸ್ಟಿಕ್ಕರ್ಗಳನ್ನು ಬಿಡುಗಡೆ ಮಾಡಲಾಯಿತು.
ಮಾನ್ಯ ನ್ಯಾಯಾಧಿಶರಾದ ಶ್ರೀ ಮಂಜುನಾಥ್ ನಾಯಕ್, ರವರು ಕಾರ್ಯಕ್ರಮದ ಕುರಿತು ಈ ಕೆಳಕಂಡಂತೆ ಮಾತನಾಡಿರುತ್ತಾರೆ.

🔹ಮನೆ ಮನೆಗೆ ಪೊಲೀಸ್ ಯೋಜನೆಯು ಜನ ಸ್ನೇಹಿಯಾಗಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸಲಿ ಎಂದು ಆಶಿಸೋಣ.
🔹ಸದರಿ ಕಾರ್ಯಕ್ರಮದ ಭಾಗವಾಗಿ ಬೀಟ್ ಪೊಲೀಸರು ಆಯಾ ಬೀಟ್ ವ್ಯಾಪ್ತಿಯ ಕ್ಲಸ್ಟರ್ ಮನೆಗಳಿಗೆ ತೆರಳಿ ಜನ ಸಾಮಾನ್ಯರನ್ನು ಮಾತನಾಡಿಸಿ, ಅವರುಗಳ ಅಹವಾಲು ಹಾಗೂ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತದೆ.

🔹 ಮನೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ದೊಡ್ಡವರ ಜೊತೆಗೆ ಮಕ್ಕಳು ಹಾಗೂ ಯುವಜನೆತೆಯ ಮೇಲೆ ಗಮನ ನೀಡುವುದು ಸಹಾ ಸೂಕ್ತ ಇರುತ್ತದೆ.
🔹 ಸಾರ್ಜನಿಕರೊಂದಿಗೆ ಬೆರೆಯುವಾಗ ಸಾರ್ವಜನಿಕರಲ್ಲಿ ಒಬ್ಬರಾಗಿ ಬೆರೆತು, ಅವರ ಮಾತನ್ನು ಸಂಪೂರ್ಣವಾಗಿ ಆಲಿಸಿದಾಗ, ಅವರಿಗೆ ನ್ಯಾಯ ಒದಗಿಸಲು ಸಾಧ್ಯವಿರುತ್ತದೆ.
🔹ಪೊಲೀಸ್ ಇಲಾಖೆಗೆ ಸಾರ್ವಜನಿಕರು ಸಂಪೂರ್ಣವಾಗಿ ಸಹಕಾರ ನೀಡಿದರೆ ಮಾತ್ರ ಯಾವುದೇ ಕಾರ್ಯಕ್ರಮವು ಯಶಸ್ವಿಯಾಗಲು ಸಾಧ್ಯವಿರುತ್ತದೆ.

🔹ಮಕ್ಕಳು, ಮಹಿಳೆಯರು, ರಸ್ತೆ ಸುರಕ್ಷತೆ ಮತ್ತು ಸೈಬರ್ ಕ್ರೈಂ ಕುರಿತು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಪೊಲೀಸ್ ಇಲಾಖೆಯು ನೀಡಲಿದ್ದು, ಸಾರ್ವಜನಿಕರು ತಮ್ಮ ನೈಜ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ. ಈಮೂಲಕ ವಿನೂತನವಾದ ಪ್ರಯತ್ನವು ಯಶಸ್ವಿಯಾಗಲಿ ಎಂದು ಆಶಿಸುತ್ತೇವೆ ಎಂದು ಹೇಳಿದರು.

ಶ್ರೀ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ರವರು ಕಾರ್ಯಕ್ರಮದ ಕುರಿತು ಈ ಕೆಳಕಂಡಂತೆ ಮಾತನಾಡಿರುತ್ತಾರೆ.

🔹ಶಿವಮೊಗ್ಗ ನಗರದ ಆರ್. ಎಸ್ ಪಾರ್ಕ್ ಗೆ ಮಹಾತ್ಮ ಗಾಂಧೀಜಿ, ಬಾಲಗಂಗಾಧರನಾಥ ತಿಲಕ್, ಹಾಗೂ ಶಂಕು ಸ್ಥಾಪನೆಗೆ ಪೂರ್ವ ಉಪ ರಾಷ್ಟ್ರಪತಿಗಳಾದ ಮಾನ್ಯ ಬಿಡಿ ಜತ್ತಿ ರವರುಗಳು ಬಂದಿರುವ ಹಿನ್ನೆಲೆ ಇರುವಂತಹ ಹೆಮ್ಮೆಯ ಸ್ಥಳವಾಗಿರುತ್ತದೆ. ಆದ್ದರಿಂದ ಈ ವಿಶೇಷ ಸ್ಥಳದಿಂದಲೇ ಮನೆ ಮನೆಗೆ ಪೊಲೀಸ್ ಎಂಬ ಸಮುದಾಯ ಸ್ನೇಹಿ ಪೊಲೀಸ್ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗುತ್ತಿದೆ.
🔹ಜನ ಸಾಮಾನ್ಯರಲ್ಲಿ ಪ್ರಸ್ತುತವಾಗಿಯೂ ಸಹಾ ಪೊಲೀಸ್ ಇಲಾಖೆಯ ಮೇಲೆ ಒಂದು ರೀತಿಯ ಭಯ ಇರುತ್ತದೆ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಬ್ರೀಟೀಷರು ಪೊಲೀಸ್ ವ್ಯವಸ್ಥೆಯನ್ನು ಉಪ ಯೋಗಿಸಿಕೊಂಡು, ಸಾರ್ವಜನಿಕರ ಹಕ್ಕುಗಳನ್ನು ಮತ್ತು ಹೋರಾಟವನ್ನು ಹಾಗೂ ಅವರುಗಳ ಬೇಡಿಕೆಯನ್ನು ನಿಯಂತ್ರಿಸುತ್ತಿದ್ದರು. ಆದ್ದರಿಂದ ಈಗಲೂ ಸಹಾ ಜನ ಸಾಮಾನ್ಯರಲ್ಲಿ ಮನಸ್ಸಿನಲ್ಲಿ ಈ ಭಾವನೆಯು ಉಳಿದುಕೊಂಡು ಬಂದಿರುತ್ತದೆ.
🔹 ಸಿನೆಮಾ ನೋಡಿ, ಇತರರ ಮಾತುಗಳು ಹಾಗೂ ಬೇರೆಯವರ ಪ್ರಭಾವಕ್ಕೆ ಒಳಗಾದ ವ್ಯಕ್ತಿಗಳು ಪೊಲೀಸ್ ಇಲಾಖೆಯ ಮೇಲೆ ನಕಾರಾತ್ಮಕವಾದ ಭಾವನೆಯನ್ನು ಹೊಂದಿರುತ್ತಾರೆ. ಇದರಿಂದ ಹೊರಬಂದು ಸಮದಾಯ ಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ತರುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿರುತ್ತದೆ.
🔹 ಬೀಟ್ ವ್ಯವಸ್ಥೆ ಹಾಗೂ ಸಬ್ ಬೀಟ್ ವ್ಯವಸ್ಥೆಯು ಪೊಲೀಸ್ ಇಲಾಖೆಯಲ್ಲಿ ಹಾಲೀ ಪ್ರಚಲಿತದಲ್ಲಿರುತ್ತದೆ. ಬೀಟ್, ಮೊಹಲ್ಲಾಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಭೆ ನಡೆಸಿ, ಅವರುಗಳ ಅಹವಾಲು ಹಾಗೂ ಸಮಸ್ಯೆಗಳನ್ನು ಆಲಿಸಿ, ಆನಂತರ ಕಾನೂನು ಚೌಕಟ್ಟಿನ ಒಳಗೆ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತದೆ.
🔹ಇದರ ಮುಂದುವರೆದ ಭಾಗವಾಗಿ ಪ್ರತೀ ಮನೆಯನ್ನು ಸಹಾ ತಲುಪುವ ಉದ್ದೇಶದಿಂದ ಮನೆ ಮನೆಗೆ ಪೊಲೀಸ್ ಕಾರ್ಯ ಕ್ರಮ ನಡೆಸುತ್ತಿದ್ದು, ಮನೆಯಲ್ಲಿನ ಸಮಸ್ಯೆಗಳು, ಸುತ್ತಮುತ್ತಲಿನ ಸಮಸ್ಯೆಗಳು, ಗಲಾಟೆಗಳು, ಹೆಣ್ಣು ಮಕ್ಕಳ ಸುರಕ್ಷತೆ, ಮಾದಕ ವಸ್ತು, ಸಿಸಿ ಟಿವಿ, ಸೈಬರ್ ಕ್ರೈಂ ಹಾಗೂ ಸಾರ್ವಜನಿಕರ ಅರಿವು ಕಾರ್ಯಕ್ರಮವನ್ನು ನಡೆಸಿ, ಅರಿವು ಮೂಡಿಸಲಾಗುತ್ತದೆ.
🔹 ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಒಳ್ಳೆಯ ಭಾವನೆ ಮೂಡಿಸುವ ಸಂಬಂಧವಾಗಿ ನಡೆಸಲಾಗುವ ಕಾರ್ಯಕ್ರಮಗಳಿಂದ ಸಾರ್ವಜನಿಕರಿಗೆ ಅನುಕೂಲವಾಗುವ ಜೊತೆಗೆ ಯಾರು ಕಿಡಿಗೇಡಿಗಳು ಹಾಗೂ ಕಾನೂನು ಬಾಹೀರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೋ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮಾಹಿತಿ ಸಂಗ್ರಹಿಸಲು ಕೂಡ ಅನುಕೂಲವಾಗುತ್ತದೆ.

🔹ಮನೆ ಮನೆಗೆ ಕಾರ್ಯಕ್ರಮದ ಮೂಲಕ ಸಾರ್ವಜನಿಕರಲ್ಲಿ ನಾವು ಸುರಕ್ಷಿತರು ಎಂಭ ಭಾವನೆಯನ್ನು ಮೂಡಿಸಲು ಸಾಧ್ಯವಾಗುತ್ತದೆ.
🔹ಯಾವುದೇ ಸಣ್ಣ ಪುಟ್ಟ ಘಟನೆಗಳು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಲು ಸಾಧ್ಯವಾಗುವುದರ ಜೊತೆಗೆ, ಜನ ಸಾಮಾನ್ಯರಿಗೆ ನ್ಯಾಯಾ ಒದಗಿಸಲು ಕೂಡ ಸಾಧ್ಯವಿರುತ್ತದೆ.
🔹ಸಾರ್ವಜನಿಕರಲ್ಲಿ ನಮ್ಮ ಮನವಿ ಏನೆಂದರೆ, ಪೊಲೀಸರು ತಮ್ಮ ಮನೆಯ ಬಳಿ ಬಂದಾಗ ನಿಮ್ಮ ಯಾವುದೇ ಸಮಸ್ಯೆಗಳಿದ್ದರೆ ಮುಕ್ತವಾಗಿ ಮಾತನಾಡಿ, ಆಗ ಮಾತ್ರ ನಮ್ಮ ಹಂತದಲ್ಲಿ ಆಗ ಬಹುದಾದ ಸಹಾಯ ಮಾಡಲು ಪ್ರಾಮಾಣಿಕವಾದ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.
ನಂತರ ಮಾನ್ಯ ಪೊಲೀಸ್ ಅಧೀಕ್ಷಕರು, ಮನೆಗಳಿಗೆ ತೆರಳಿ ಮನೆ ಮನೆಗೆ ಪೊಲೀಸ್ ಸ್ಟಿಕ್ಕರ್ ಅನ್ನು ಅಂಟಿಸಿ ಮನೆಯ ಸದಸ್ಯರಿಗೆ ಮಾಹಿತಿಯನ್ನು ತಿಳಿಸಿಕೊಟ್ಟು ಅವರಲ್ಲಿ ಅರಿವು ಮೂಡಿಸಿ, ಕಾರ್ಯಕ್ರಮದ ಉದ್ದೇಶದ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಅನಿಲ್ ಕುಮಾರ್ ಭುಮರಡ್ಡಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು-1, ಶಿವಮೊಗ್ಗ ಜಿಲ್ಲೆ ಹಾಗೂ ಕಾರಿಯಪ್ಪ ಎ ಜಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು-2, ಶಿವಮೊಗ್ಗ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ನಿರೀಕ್ಷಕರು ಮತ್ತು ಪೊಲೀಸ್ ಉಪ ನಿರೀಕ್ಷಕರು ಹಾಗೂ ಸಿಬ್ಬಂಧಿಗಳು ಮತ್ತು ಸಾರ್ವಜನಿಕರು ಹಾಗೂ ಮಾದ್ಯಮ ಮಿತ್ರರು ಉಪಸ್ಥಿತರಿದ್ದರು.


