ಥೈಲ್ಯಾಂಡ್ : ಹನಿ ಲೇಡಿಯಾ ಕೈಯಲ್ಲಿತ್ತು 80,000 ನಗ್ನ ಫೋಟೋಸ್.! ಸೆಕ್ಸ್. ದೋಖಾ. ಬೌದ್ಧ ಬಿಕ್ಕುಗಳ ಟ್ರ್ಯಾಪ್.! ಕೋಟಿ ಕೋಟಿ ಸುಲಿಗೆ ಮಾಡಿದ್ದ ಹನಿ ಲೇಡಿ ಅಂದರ್.
news.ashwasurya. in
ಹಿರಿಯ ಸನ್ಯಾಸಿಯೊಬ್ಬರಿಂದ ( ಭೌದ್ಧ ಬಿಕ್ಕು ) ಮಗು ಹುಟ್ಟಿದೆ ಅಂತ ಹೇಳಿದ ಥೈಲ್ಯಾಂಡ್ ಬ್ಯೂಟಿ.!
ಅಶ್ವಸೂರ್ಯ/ಬ್ಯಾಂಕಾಕ್: ಲೈಂಗಿಕ ಸಂಪರ್ಕ ಸಾಧಿಸುವ ಮೂಲಕ ಬೌದ್ಧ ಬಿಕ್ಕುಗಳಿಗೆ ಹನಿಟ್ರ್ಯಾಪ್ ಮಾಡಿ, ಅವರಿಂದ ಮಹಿಳೆಯೊಬ್ಬಳು ದೇಗುಲಗಳಿಗೆ ಸೇರಿದ ಸುಮಾರು ಕೋಟಿ ಕೋಟಿ ರೂಪಾಯಿ ಹಣ ಸುಲಿಗೆ ಮಾಡಿರುವ ಘಟನೆ ಉತ್ತರ ಬ್ಯಾಂಕಾಕ್‌ನಲ್ಲಿ ನಡೆದಿದೆ.
ಈ ಹಿನ್ನೆಲೆ ವಿಲಾವನ್ ಎಮ್ಹಾವತ್ (30) ಎನ್ನುವ ಥೈಲ್ಯಾಂಡ್ ಬ್ಯೂಟಿಯೊಬ್ಬಳನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಅಲ್ಲದೇ ಈ ಪ್ರಕರಣದಿಂದ ಕೇಲವು ಬೌದ್ಧ ಸನ್ಯಾಸಿಗಳು ತಮ್ಮ ಬ್ರಹ್ಮಚರ್ಯ ಪ್ರತಿಜ್ಞೆ ಮುರಿದಿರೋದು ಗಮನ ಸೆಳೆದಿದೆ. ಇದು ಬೆಳಕಿಗೆ ಬಂದ ನಂತರ ಹಗರಣದಲ್ಲಿ ಸಿಲುಕಿದ್ದ ಕನಿಷ್ಠ 9 ಹಿರಿಯ ಸನ್ಯಾಸಿಗಳನ್ನ ಸನ್ಯಾಸಿತ್ವದಿಂದ ಹೊರಹಾಕಲಾಗಿದೆ ಎಂದು ರಾಯಲ್ ಥಾಯ್ ಪೊಲೀಸ್ (THAILAND POLICE) ಕೇಂದ್ರ ತನಿಖಾ ಬ್ಯೂರೋ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದೆ.
ಥೈಲ್ಯಾಂಡ್ “ಹನಿ” ಬ್ಯೂಟಿ ಯಾರು.?

30ರ ಹರೆಯದ “ವಿಲಾವನ್ ಎಮ್ಸಾವತ್” ಎಂಬಾಕೆಯನ್ನು ಉತ್ತರ ಬ್ಯಾಂಕಾಕ್‌ನಲ್ಲಿರುವ ನೋಂಥಬುರಿಯಲ್ಲಿ ಅರೆಸ್ಟ್ ಮಾಡಲಾಗಿದೆ. “ಮಿಸ್ಡ್ ಗಾಲ್ಫ್” ಫೇಮಸ್ ಆಗಿದ್ದ ವಿಲಾವತ್ 9 ಸನ್ಯಾಸಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಳಂತೆ.! ಆಕೆಯ ಫೋನ್ ಪರಿಶೀಲನೆ ನಡೆಸಿದ ಬಳಿಕ ಬೌದ್ಧ ಬಿಕ್ಕುಗಳೊಂದಿಗೆ ಸಂಪರ್ಕ ಹೊಂದಿದ್ದ ವಿಡಿಯೋಗಳು ಲಭ್ಯವಾಗಿದೆ. ಅವರಿಂದ ಬ್ಲ್ಯಾಕ್ ಮೇಲ್ ಮಾಡಿ ಪಡೆದ ಹಣವನ್ನ ಜೂಜಾಟಕ್ಕೆ ( gambling )
ಬಳಸಿದ್ದಾಳೆ ಎನ್ನುವುದು ತಿಳಿದುಬಂದಿದೆ.
ಲೈಂಗಿಕ ಸಂಪರ್ಕ ಸಾಧಿಸಿ ಬ್ಲ್ಯಾಕ್‌ಮೇಲ್ :
ಮೊದಲು ಹಿರಿಯ ಬೌದ್ಧಬಿಕ್ಕುಗಳನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದ ವಿಲಾವನ್ ಲೈಂಗಿಕ ಸಂಪರ್ಕ ಸಾಧಿಸುತ್ತಿದ್ದಳಂತೆ.! ನಂತರ ವಿಷಯ ಬಹಿರಂಗಗೊಳಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಳಂತೆ.! ಬೆದರಿಕೆಗೆ ಅಂಜಿ ಬಿಕ್ಕುಗಳು ದೇಗುಲಗಳ ಬ್ಯಾಂಕ್ ಖಾತೆಯಿಂದ ಕೋಟ್ಯಂತರ ರೂಪಾಯಿ ಹಣವನ್ನು ಈಕೆಯ ಖಾತೆಗೆ ವರ್ಗಾಯಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಥೈಲ್ಯಾಂಡ್ ಬ್ಯೂಟಿ 80,000 ನಗ್ನ ಫೋಟೋಗಳು 100 ಕೋಟಿ ಸುಲಿಗೆ.!?

ಮೂಲಗಳ ಪ್ರಕಾರ, ವಿಲಾವನ್ ಕಳೆದ ಮೂರು ವರ್ಷಗಳಲ್ಲಿ ಸುಮಾರು 385 ಮಿಲಿಯನ್ ಬಹ್ತ್ ಅಂದ್ರೆ 100 ಕೋಟಿಗೂ ಹೆಚ್ಚು.!? ಸುಲಿಗೆ ಮಾಡಿದ್ದಾಳೆ. ಈ ಹಣವನ್ನು ಆಕೆ ಆನ್‌ಲೈನ್ ಜೂಜಿನಲ್ಲಿ ಕಳೆದುಕೊಂಡಿದ್ದಾಳೆ ಎಂಬ ಮಾಹಿತಿಯೂ ಸಿಕ್ಕಿದೆ. ಜೊತೆಗೆ ಆಕೆಯ ಫೋನ್‌ನಲ್ಲಿ ಸನ್ಯಾಸಿಗಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ 80,000ಕ್ಕೂ ಅಧಿಕ ಫೋಟೋಗಳು ಮತ್ತು ವಿಡಿಯೋಗಳನ್ನು ಪತ್ತೆಹಚ್ಚಲಾಗಿದೆ ಎಂದ ಥೈಲ್ಯಾಂಡ್ ಪೊಲೀಸರು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಗು ಕೊಟ್ಟ ಸನ್ಯಾಸಿ.!?

ಮತ್ತೊಂದು ವರದಿಯ ಪ್ರಕಾರ, ವಿಲಾವನ್ ಎಮ್ಸಾವತ್ ಲೈಂಗಿಕ ಕ್ರಿಯೆ ನಡೆಸಿದ ಸನ್ಯಾಸಿಗಳಲ್ಲಿ ಒಬ್ಬರಿಂದ ತನಗೆ ಮಗು ಜನಿಸಿದೆ ಎಂಬುದಾಗಿಯೂ ಹೇಳಿಕೊಂಡಿದ್ದಾಳೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ.?
ಕಳೆದ ಜೂನ್ ತಿಂಗಳ ಮಧ್ಯದಲ್ಲಿ ಹಿರಿಯ ಸನ್ಯಾಸಿಯೊಬ್ಬರು ಮಹಿಳೆಯಿಂದ ಬ್ಲ್ಯಾಕ್ ಮೇಲ್‌ಗೆ ಒಳಗಾಗಿ ಇದ್ದಕ್ಕಿದ್ದಂತೆ ಸನ್ಯಾಸತ್ವ ತೊರೆದಿದ್ದರು. ಇದಾದ ಕೆಲವೇ ದಿನಗಳಲ್ಲಿ ಅವರು ನಾಪತ್ತೆಯಾಗಿದ್ದರು. ಈ ಬೆಳವಣಿಗೆ ನಂತರ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.!
ಥೈಲ್ಯಾಂಡ್‌ನಲ್ಲಿ ಶೇ.90ಕ್ಕಿಂತ ಹೆಚ್ಚು ಬೌದ್ಧ ಸಮುದಾಯದ ಜನರಿದ್ದಾರೆ. ಸುಮಾರು 2,00,000 ಸನ್ಯಾಸಿಗಳಿದ್ದು, 85 ಸಾವಿರ ಬೌದ್ಧ ಬಿಕ್ಕುಗಳ ಶಿಷ್ಯರಿದ್ದಾರೆ. ಸದ್ಯ ಸನ್ಯಾಸಿಗಳನ್ನೇ ಗುರಿಯಾಗಿಸಿದ್ದ ಈ ಪ್ರಕರಣ ಬೌದ್ಧ ಸಮುದಾಯದವನ್ನ ಬೆಚ್ಚಿ ಬೀಳಿಸಿದೆ.



