Headlines

ಶಿವಮೊಗ್ಗ:ಮುದ್ದಿನಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಹಣಬಾಕ ಕುಮಾರ್ ನಾಯ್ಕನನ್ನು ಭಲೇಗೆ ಕೆಡವಿಕೊಂಡ ಲೋಕಾಯುಕ್ತರು.

news.ashwasurya.in

ಅಶ್ವಸೂರ್ಯ/ಶಿವಮೊಗ್ಗ : ಫಿರ್ಯಾದುದಾರರು
ವಿನೋದ ಬಿ. ಬಿನ್ ಬಾಲಕೃಷ್ಣ ವಾಸ 1ನೇ ಕ್ರಾಸ್, ಶ್ರೀರಾಮಪುರ ಗ್ರಾಮ, ಶಿವಮೊಗ್ಗ ತಾಲ್ಲೂಕ್, ಶಿವಮೊಗ್ಗ ಜಿಲ್ಲೆ ರವರು ದಿನಾಂಕ:17-07-2025 ರಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ಗಣಕೀಕೃತ ದೂರನ್ನು ನೀಡಿದ್ದು, ಸದರಿ ದೂರಿನಲ್ಲಿ ಶಿವಮೊಗ್ಗ ತಾಲ್ಲೂಕು ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶ್ರೀರಾಮಪುರ ಗ್ರಾಮದ 1ನೇ ಕ್ರಾಸ್‌ನಲ್ಲಿ ತನ್ನ ತಾಯಿಯಾದ ಶ್ರೀಮತಿ ಶಂಕರಿರವರ ಹೆಸರಿನಲ್ಲಿನ 30X50 ಅಳತೆಯ ಸೈಟಿನಲ್ಲಿ 23X38 ಅಡಿ ಅಳತೆಯಲ್ಲಿ ಆ‌ರ್.ಸಿ.ಸಿ.ಮನೆಯನ್ನು ಕಟ್ಟಿದ್ದು, ಸದರಿ ಮನೆಯ ಇ-ಸ್ವತ್ತು ಮಾಡಿಸಲು ಪಿರ್ಯಾದಿ ತಾಯಿಯವರು ದಿನಾಂಕ:-28-11-2024 ರಂದು ಶಿವಮೊಗ್ಗ ತಾಲ್ಲೂಕು ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ಕಛೇರಿಗೆ ಹೋಗಿ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಈ ಬಗ್ಗೆ ಫಿರ್ಯಾದುದಾರರು
ಇ-ಸ್ವತ್ತು ಮಾಡಿಕೊಡುವಂತೆ ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಕುಮಾರನಾಯ್ಕನ ಬಳಿ ಹಲವು ಬಾರಿ ಹೋದಾಗ ಕುಮಾರನಾಯ್ಕ ಇ-ಸ್ವತ್ತು ಮಾಡಿಕೊಡದೆ ಓಡಾಡಿಸುತ್ತಿದ್ದು ನಂತರ ರೂ 3000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು ಸಂಭಾಷಣೆಯನ್ನು ಫಿರ್ಯಾದುದಾರರು ವಾಯ್ಸ್ ರೆಕಾರ್ಡ್ ಅನ್ನು ಮಾಡಿಕೊಂಡಿರುತ್ತಾರೆ ಮತ್ತು ಫಿರ್ಯಾದುದಾರರು ಲಂಚದ ಹಣವನ್ನು ಕೊಡಲು ಇಷ್ಟವಿಲ್ಲದೆ ಇರುವುದರಿಂದ ಸದರಿ ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯವರಾದ ಕುಮಾರನಾಯ್ಕ ರವರ ವಿರುದ್ದ ಕಾನೂನು ಕ್ರಮಕ್ಕೆ ದೂರು ನೀಡಿದ ಮೇರೆಗೆ ಕಲಂ 7(೩) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯ್ದೆ-2018) ರೀತ್ಯಾ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 17-07-2025 ರಂದು ಗುರುವಾರ ಮದ್ಯಾಹ್ನ 02-10 ಗಂಟೆ ಸಮಯದಲ್ಲಿ ಅಪಾದಿತರಾದ ಶ್ರೀ ಕುಮಾರನಾಯ್ಕ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ, ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ರವರು ಪಿರಾದಿಯವರಿಂದ ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯವರ ಕೊಠಡಿಯಲ್ಲಿ ಫಿರ್ಯಾದುದಾರರಿಂದ ರೂ 3000/- ಲಂಚದ ಹಣವನ್ನು ತೆಗೆದಕೊಂಡಿದ್ದು, ಈ ಸಮಯದಲ್ಲಿ ಲೋಕಾಯುಕ್ತರ ಭಲೇಗೆ ಬಿದ್ದಿರುತ್ತಾರೆ.

ಮತ್ತು ಲಂಚದ ಹಣವನ್ನು ಜಪ್ತಿ ಮಾಡಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾದಿತ ಸರ್ಕಾರಿ ನೌಕರನಾದ ಕುಮಾರನಾಯ್ಕ, ಗ್ರಾಮ ಪಂಚಾಯ್ತಿ ಕಾರ್ಯದರ್ಶಿ, ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ರವರನ್ನು ವಶಕ್ಕೆ ಪಡೆದು ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಶ್ರೀ ಗುರುರಾಜ್ ಎನ್ ಮೈಲಾರ ಪೊಲೀಸ್ ನಿರೀಕ್ಷಕರು ಕೈಗೊಂಡಿರುತ್ತಾರೆ.
ಸದರಿ ಲೋಕಾಯುಕ್ತ ದಾಳಿಯ ಕಾರ್ಯಚರಣೆಯನ್ನು ಶ್ರೀ ಮಂಜುನಾಥ ಚೌದರಿ ಎಂ.ಹೆಚ್. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ ಶ್ರೀ ಬಿ.ಪಿ ಚಂದ್ರಶೇಖರ್, ಪೊಲೀಸ್ ಉಪಾಧೀಕ್ಷಕರು, ಶ್ರೀ ಗುರುರಾಜ್ ಎನ್ ಮೈಲಾರ್ ಪೊಲೀಸ್ ನಿರೀಕ್ಷಕರು ಕಾರ್ಯಚರಣೆಯನ್ನು ನಡೆಸಿದ್ದು. ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಶ್ರೀ ರುದ್ರೇಶ್ ಕೆ.ಪಿ ಪೊಲೀಸ್ ಇನ್ಸ್‌ಪೆಕ್ಟ‌ರ್, ಪೊಲೀಸ್ ಸಿಬ್ಬಂದಿಯವರಾದ ಶ್ರೀ ಯೋಗೇಶ್. ಸಿ.ಹೆಚ್.ಸಿ, ಶ್ರೀ ಟೀಕಪ್ಪ ಸಿ.ಹೆಚ್.ಸಿ ಶ್ರೀ.ಸುರೇಂದ್ರ ಸಿ.ಹೆಚ್.ಸಿ. ಶ್ರೀ ಮಂಜುನಾಥ್ ಸಿ.ಹೆಚ್.ಸಿ. ಶ್ರೀ ಬಿ.ಟಿ ಚನ್ನೇಶ್, ಸಿ.ಪಿ.ಸಿ. ಶ್ರೀ ದೇವರಾಜ್, ಸಿ.ಪಿ.ಸಿ ಶ್ರೀ ಪ್ರಕಾಶ್ ಬಾರಿದಮರ, ಸಿ.ಪಿ.ಸಿ. ಶ್ರೀ ಅರುಣ್ ಕುಮಾರ್ ಯು.ಬಿ ಸಿ.ಪಿ.ಬಿ ಶ್ರೀಮತಿ ಅಂಜಲಿ ಮ.ಪಿ.ಸಿ, ಶ್ರೀಮತಿ ಚಂದ್ರಿಬಾಯಿ ಮ.ಪಿ.ಸಿ ಶ್ರೀ ಗೋಪಿ ಎ.ಪಿ.ಸಿ ಶ್ರೀ ಪ್ರದೀಪ್ ಎ.ಹೆಚ್.ಸಿ ಶ್ರೀ ಜಯಂತ್ ಎ.ಪಿ.ಸಿ ರವರುಗಳು ಹಾಜರಿರುತ್ತಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!