
ಸಾಗರ: ನಾವೇ ಸಿಗಂದೂರು ಸೇತುವೆ ಕಟ್ಟಿದ್ದು ಅಂತಿದ್ದಾರೆ ಸಂಸದ ರಾಘವೇಂದ್ರ.! ರಾಘವೇಂದ್ರ ವಿರುದ್ಧ ಸಚಿವ ಮಧು ಬಂಗಾರಪ್ಪ ಗುಡುಗು.
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಜುಲೈ 14 ರಂದು ಸಿಗಂಧೂರು ಸೇತುವೆಯ ಉದ್ಘಾಟನೆ ಕೂಡ ನಡೆಯಲಿದ್ದು, ಸದ್ಯ ರಾಜಕೀಯ ಪಕ್ಷಗಳ ನಡುವೆ ವಾರ್ ಜೋರಾಗಿದೆ.ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರನ್ನು ಆಹ್ವಾನಿಸಿಲ್ಲ ಎಂದು ಆರೋಪಿಸಿದ್ದಾರೆ.
ಮಧು ಬಂಗಾರಪ್ಪ ಸ್ಥಳೀಯ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರನ್ನು ಆಹ್ವಾನಿಸಿಲ್ಲ ಎಂದು ಇಬ್ಬರು ಸಿಡಿದೇದ್ದಿದ್ದಾರೆ.
ಇದೇ ಜುಲೈ 14 ರಂದು ಐತಿಹಾಸಿಕ ಸಿಗಂದೂರು ಸೇತುವೆ ಉದ್ಘಾಟನೆ ನಡೆಯಲಿದ್ದು. ಸಿಗಂದೂರು ಸೇತುವೆ ಉದ್ಘಾಟನೆಗೂ ಮುನ್ನ ರಾಜಕೀಯ ಜಾಟಪಟಿ ಜೋರಾಗಿದೆ. ಇಷ್ಟು ದಿನ ಸೇತುವೆ ನಾಮಕರಣದ ವಿವಾದ ಉಂಟಾಗಿತ್ತು. ಈಗ ಆಹ್ವಾನ ವಿಚಾರದಲ್ಲೂ ರಾಜಕರಣ ಆರಂಭವಾಗಿದೆ.

ಸಂಸದ ಬಿವೈ ರಾಘವೇಂದ್ರ ನಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹಾಗೂ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಗರಂ ಆಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಮಧು ಬಂಗಾರಪ್ಪ, ನನಗೆ ಇನ್ನೂ ಆಹ್ವಾನ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಸಂಸದ ರಾಘವೇಂದ್ರಗೆ ಇದೇ ಸಂದರ್ಭದಲ್ಲಿ ಎಚ್ಚರಿಕೆ ಕೂಡ ನೀಡಿದ್ದಾರೆ. ಕೆಲವು ಗೊಂದಲಗಳು ಇರಬಹುದು ಎಂದುಕೊಂಡಿದ್ದೇನೆ. ಮುಖ್ಯಮಂತ್ರಿಗಳನ್ನು ಬಹಳ ಅಗೌರವವಾಗಿ ಕೇಂದ್ರ ಸರ್ಕಾರ ನಡೆಸಿಕೊಂಡಿದೆ. ಅವರಿಗೂ ಸರಿಯಾದ ಆಹ್ವಾನ ನೀಡಿಲ್ಲ. ದುರಹಂಕಾರದಿಂದ ನಾವು ಮಾಡಬೇಕು ಎನ್ನುವುದು ಇದ್ದರೆ ನೀವು ಏನು ಮಾಡುವುದಕ್ಕೆ ಆಗುವುದಿಲ್ಲ.

ಅಗೌರವ ನೀಡುವುದು ಬಹಳ ತಪ್ಪು ಎಂದು ಕಿಡಿಕಾರಿದರು.
ಸಿಗಂದೂರನ್ನೇ ಮುಳುಗಿಸುವುದಕ್ಕೆ ಹೋದವರು, ಈಗ ಸೇತುವೆ ಕಟ್ಟಿ ಉಳಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಮೊದಲು ಸೇತುವೆ ಕಟ್ಟಿರುವ ಆ ಜಾಗ ಯಾರದ್ದು ಎನ್ನುವುದನ್ನು ನೆನಪಿಸಿಕೊಳ್ಳಬೇಕು. ಈ ರೀತಿ ಅವರು ಮಾಡಿದರೆ ಮುಂದಿನ ದಿನಗಳಲ್ಲಿ ನಾವು ಸರಿಯಾಗಿ ಉತ್ತರ ನೀಡಬೇಕಾಗುತ್ತದೆ. ಸಿಗಂದೂರು ಸೇತುವೆ ಸಾರ್ವಜನಿಕರಿಗೆ ಅನುಕೂಲವಾಗಬೇಕು ಅಷ್ಟೇ ಎಂದು ಸಚಿವ ಮಧುಬಂಗಾರಪ್ಪ ಕಿಡಿಕಾರಿದರು.
ಇನ್ನೂ ಇದೇ ಸಂದರ್ಭದಲ್ಲಿ ಸ್ಥಳೀಯ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿಕ್ರಿಯೆ ನೀಡಿ, ನನಗೂ ಸೇತುವೆ ಉದ್ಘಾಟನೆಗೆ ಆಹ್ವಾನ ಬಂದಿಲ್ಲ ಎಂದು ರಾಘವೇಂದ್ರ ವಿರುದ್ಧ ಕಿಡಿಕಾರಿದ್ದಾರೆ. ಸಿಗಂದೂರು ದೇವಸ್ಥಾನದ ಧರ್ಮದರ್ಶಿ ರಾಮಪ್ಪನವರಿಗೆ ಕರೆ ಬಂದಿಲ್ಲ. ಆದರೂ ನಾನು ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗಲಿದ್ದೇನೆ. ಕಳಸವಳ್ಳಿಯಲ್ಲಿ ಘರ್ ಘರ್ ಸೇತುವೆ ಎಂದು ಮನೆ ಮನೆಗೆ ಹೋಗಿ ಬಿಜೆಪಿಯವರು ಹೇಳುತ್ತಿರುವುದಾಗಿ ಸುದ್ದಿಯಿದೆ ಎಂದರು.
ನನಗೆ ಅಭ್ಯಂತರವಿಲ್ಲ, ಯಡಿಯೂರಪ್ಪನವರು ಅಪೇಕ್ಷೆಯಂತೆ ನಿರ್ಮಾಣ ಮಾಡಲಾಗಿದೆ. ನಮಗೆ ರಾಜಕೀಯ ಬೇಡ ಅವರು ಬೇಕಾದರೆ ಮಾಡಿಕೊಳ್ಳಲಿ. ಹಸಿರುಮಕ್ಕಿ ಸೇತುವೆ ಉದ್ಘಾಟನೆ ಮಾಡಿ ತೋರಿಸುತ್ತೇವೆ, ಹೆಸರು ನಾಮಕರಣದಲ್ಲೂ ರಾಜಕಾರಣ ನಡೆಯುತ್ತಿದೆ. ಸಿಗಂದೂರು ಚೌಡೇಶ್ವರಿ ಹೆಸರು ಇಡಬೇಕು, ನಾವು ಸಿಗಂದೂರು ಹೆಸರು ಬಿಟ್ಟು ಬೇರೆ ಹೆಸರು ಇಡಲು ಬಿಡಲ್ಲ ಎಂದು ಸಿಗಂದೂರು ದೇವರ ಮುಂದೆ ಬಿಎಸ್‌ವೈ ಅವರೆ ಹೇಳಿದ್ದರು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ನೆನೆಪಿಸಿದ್ದಾರೆ.


