
ಶಿವಮೊಗ್ಗ : ಆನವಟ್ಟಿಯ ” ಕರ್ನಾಟಕ ಪಬ್ಲಿಕ್ ಸ್ಕೂಲ್ “ಸರ್ಕಾರಿ ಪ್ರೌಡಶಾಲೆಯಲ್ಲಿ ಧನದಾಹಿ ಮಹಾದೇವಪ್ಪ.

news ashwasurya.in
ಅಶ್ವಸೂರ್ಯ/ಶಿವಮೊಗ್ಗ: ಸೊರಬ ತಾಲ್ಲೂಕಿನ ಪ್ರತಿಷ್ಠಿತ ಸರ್ಕಾರಿ ಪ್ರೌಢಶಾಲೆಗಳಲ್ಲೊಂದಾದ ಆನವಟ್ಟಿಯ ” ಕರ್ನಾಟಕ ಪಬ್ಲಿಕ್ ಸ್ಕೂಲ್ “( ಕೆಪಿಎಸ್ ) ಸರ್ಕಾರಿ ಪ್ರೌಢಶಾಲೆಯ ಧನದಾಹಿ ಉಪ ಪ್ರಾಂಶುಪಾಲನ ಹಣದಾಹದ ಅಷ್ಟು ಕರ್ಮಕಾಂಡ ಬಯಲಾಗಿದ್ದು,ಅದರಲ್ಲೂ ವಿಧ್ಯಾರ್ಥಿಗಳು ಮತ್ತು ಪೋಷಕರ ವರ್ಗದವರಿಂದ ಯಾವ ಮುಲಾಜಿಲ್ಲದೆ ಹಣ ಪಡೆದಿರುವ ಉಪ ಪ್ರಾಂಶುಪಾಲ ಮಹಾದೇವಪ್ಪನ ಹಣದಾಹದ ವಿಷಯ ಶಿಕ್ಷಣ ಸಚಿವರಿಗೂ ಇಲಾಖೆಯ ಅಧಿಕಾರಿಗಳಿಗೂ ಶಾಲೆಯ SDMC ಅವರಿಗೂ ಗೊತ್ತಿದ್ದು ಗೊತ್ತಿಲ್ಲದವರಂತೆ ಮೌನಕ್ಕೆ ಶರಣಾಗಿರಲು ಕಾರಣವೇನು.? ಪ್ರೌಢಶಾಲೆಯ ಹಾಲಿ ಉಪ ಪ್ರಾಂಶುಪಾಲರ ಹಣ ವಸೂಲಿ ದಂಧೆ ನಿರ್ಭಯವಾಗಿ ನೆಡೆಯುತ್ತಿದ್ದರು.ಇತನ ಹಣದಾಹದ ತೆವಲಿನಿಂದ ಇದು ಸರ್ಕಾರಿ ಪ್ರೌಢಶಾಲೆಯೋ..ಖಾಸಗಿ ಪ್ರೌಢಶಾಲೆಯೋ ಎನ್ನುವ ಮಟ್ಟಕ್ಕೆ ತಿಳಿಯದಾಗಿದೆ. ನಿಜಕ್ಕೂ ಇವರ ಎದೆಗಾರಿಕೆಗೆ ಖುಷಿ ಪಡಬೇಕು. ಮುಲಾಜಿಲ್ಲದೆ ವಿಧ್ಯಾರ್ಥಿಗಳ ಪೋಷಕರಿಂದ ಹಣ ಕೇಳುವ ಇವರ ಧೈರ್ಯವನ್ನು ಮೆಚ್ಚಲೆ ಬೇಕು.! ಧನದಾಹ, ದರ್ಪ, ವಂಚನೆಗಳಿಂದ ಪ್ರೌಡಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು,ಕೆಲವು ಶಿಕ್ಷಕರು, ಸಿಬ್ಬಂದಿಗಳು, ಇವನ ಆಜ್ಞೆಯನ್ನು ಮನಸ್ಸಿಲ್ಲದೆ ಪರಿಪಾಲಿಸುವಂತಾಗಿದೆ.! ಇವರು ಮುಲಾಜಿಲ್ಲದೆ ಹಣ ಕೇಳುವ ಪರಿಯ ಅಡೀಯೊ ಕೂಡ ಇಲ್ಲಿ ಹಾಕಲಾಗಿದೆ. ನೀವು ಒಮ್ಮೆ ಕೇಳಿ ಉಪ ಪ್ರಾಂಶುಪಾಲನ ಹಣದಾಹಕ್ಕೆ ಎಷ್ಟು ಸ್ಟಾರ್ ಕೊಡ್ತೀರಾ ನೀವೆ ಹೇಳಿ.?
ಈ ವಿಡಿಯೋ ಗಮನಿಸಿ….
ಇಷ್ಟೋತ್ತಿಗಾಗಲೇ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಿದ್ದ ಬಿಇಒ ಮತ್ತು ಡಿಡಿಪಿಐ ಯಾಕೆ ಮೌನಕ್ಕೆ ಶರಣಾಗಿದ್ದಾರೆ.ಇವನ ಮೇಲೆ ಅದೆಂತಹ ಒಲವು ಅ ದೇವರಿಗೆ ಗೊತ್ತು.! ಇನ್ನೂ SDMC ಯವರಲ್ಲಿ ಕೆಲವರಿಗೆ ಇವನ ಮೇಲೆ ಅಗಾಧವಾದ ಪ್ರೀತಿ ಇದೆ ಆತನಿಂದ ತೀರ್ಥಪ್ರಸಾದ ಸರಿಯಾದ ಸಮಯದಲ್ಲಿ ತಲುಪಿರಬಹುದಾ.? ಮಹಾದೇವಪ್ಪನವರೆ ಎನು ಆಗೋಲ್ಲ ಬಿಡಿ ನಾವಿದ್ದೇವೆ ಅನ್ನೊ ಮಟ್ಟದಲ್ಲಿ ಅವನ ಬೆನ್ನಿಗೆ ನಿಂತಿದ್ದಾರಂತೆ.? ಅದೇನೆ ಇರಲಿ ಕಳೆದ ನಾಲ್ಕು ವರ್ಷದಲ್ಲಿ ಧನದಾಹಿ ಮಹಾದೇವಪ್ಪ ವಿಧ್ಯಾರ್ಥಿಗಳ ಪೋಷಕರ ವರ್ಗದಿಂದ ಹಣ ಪಡೆದಿರುವುದು ಬಯಲಾಗಿದ್ದರು ಮತ್ತೆದೆ ವರಸೆ ಮುಂದುವರೆಸಿದ್ದಾರಂತೆ.? ಇನ್ನೂ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರೌಢಶಾಲಾ ಮಕ್ಕಳ ಪೋಷಕರು ಇನ್ನೂ ಏನೇನು ನೋಡಬೇಕೊ..? ಸರ್ಕಾರದಿಂದ ಮಕ್ಕಳಿಗೆ ಕೊಡುವ ಸಮವಸ್ತ್ರ, ಚಪ್ಪಲಿ,ಶೂ ಮಧ್ಯಾಹ್ನದ ಬಿಸಿಯೂಟ ಇನ್ನೂ ಅಮೃತದಂತಹ ಹಾಲಿನಲ್ಲೂ ಹಣಮಾಡುವ ಧನದಾಹಿ ಮಹಾದೇವಪ್ಪನ ದುರಾಡಳಿತಕ್ಕೆ ಕೊನೆ ಎಂದು .? “ದೀಪದ ಬುಡದಲ್ಲಿ ಕತ್ತಲು” ಎನ್ನುವಂತೆ ಶಿಕ್ಷಣ ಸಚಿವರು,ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅವರದೇ ಸ್ವ ಕ್ಷೇತ್ರದಲ್ಲಿ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ.. ತನ್ನದೆ ನಿಯಮಗಳನ್ನು ಪಾಲಿಸಿಕೊಂಡು ಯಾರ ಭಯವಿಲ್ಲದೆ ಸರ್ಕಾರಿ ಶಾಲೆಗೆ ಓದಲು ಬರುವ ಬಡ ಮಕ್ಕಳ ಪೋಷಕರಿಂದ ಮನಬಂದಂತೆ ಹಣ ಸುಲಿಯುತ್ತಿದ್ದಾರೆ ಉಪ ಪ್ರಾಂಶುಪಾಲ ಮಹಾದೇವಪ್ಪ .ಈತನಿಂದ ಹಣ ವಸೂಲಿಗೆ ಒಳಗಾದ ನೊಂದ ಪೋಷಕರ ವರ್ಗವೆ ಆತಕ ಹಣದಾಹದವನ್ನು ಬಯಲು ಮಾಡಿದ್ದರು. ಮಾನ್ಯ ಶಿಕ್ಷಣ ಸಚಿವರು, ಜಿಲ್ಲಾ ಶಿಕ್ಷಣ ಅಧಿಕಾರಿಗಳು ಮತ್ತು ತಾಲ್ಲೂಕು ಶಿಕ್ಷಣ ಅಧಿಕಾರಿಗಳು ಜೊತೆಗೆ ಸ್ಥಳೀಯ ಎಸ್‌ಡಿಎಮ್‌ಸಿ ಮೌನಕ್ಕೆ ಶರಣಾಗಲು ಕಾರಣವೇನು..? ಎನ್ನುವ ಪ್ರಶ್ನೆ ಪೊಷಕರ ವಲಯದಲ್ಲಿ ಮೂಡಿದೆ.ಸಚಿವರ ಸ್ವ ಕ್ಷೇತ್ರದಲ್ಲೆ ಹೀಗಾದರೆ.!? ಬೇರೆ ಕ್ಷೇತ್ರದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿನ ಕಥೆ ಏನು.? ಎನ್ನುವ ಪ್ರಶ್ನೆ ಉದ್ಭವಿಸಿದೆ.

ಈ ಸರ್ಕಾರಿ ಶಾಲೆಗೆ ಸರ್ಕಾರದಿಂದ ಒಂದು ರೂಪಾಯಿ ಬರೋಲ್ಲ ಅನ್ಸೋತ್ತೆ.? ಅತಿಥಿ ಶಿಕ್ಷಕರ ವಿಷಯದಲ್ಲೂ ಇನ್ನೊಬ್ಬ ಉಂಡೆದ್ದು ತೆಗಿದ್ದಾನೆ ಮುಂದಿನ ದಿನಗಳಲ್ಲಿ ಅವನ ಭ್ರಷ್ಟಾಚಾರವನ್ನು ಬಯಲು ಮಾಡೋಣ. ಈಗ ಉಪ ಪ್ರಾಂಶುಪಾಲರ ಹಣದಾಹದ ಕಥೆ ಏನು ನೋಡಿ…
ಸರ್ಕಾರದಿಂದ ಸಮವಸ್ತ್ರ ಬಂದರು ಸಹ ಸಮವಸ್ತ್ರದ ಹೇಸರು ಹೇಳಿ ಸುಮಾರು 850 ರೂಪಾಯಿ ವಸೂಲಿ ಮಾಡುತ್ತಿದ್ದಾರಂತೆ.!ಈ ವರ್ಷ ಸಮವಸ್ತ್ರದ ಹೋಲಿಗೆಗೂ ಸಹ ಸುಮಾರು ರೂ 350 ರೂಪಾಯಿ ವಸೂಲಿ ಮಾಡುತ್ತಿದ್ದಾರಂತೆ.! ಮಕ್ಕಳ ಶೂ..ಅಥವಾ ಚಪ್ಪಲಿಯಲ್ಲಿಯ ಕಥೆ ಬೇರೆಯದೆ ಇದೆ.?
ಇನ್ನೂ ಮಕ್ಕಳಿಗೆ ಕೋಡುವ ಹಾಲು ಸುಮಾರು 1200 ವಿದ್ಯಾರ್ಥಿಗಳಿಗೆ ಬಂದರೆ, ಸುಮಾರು 300 ರಿಂ 400 ವಿದ್ಯಾರ್ಥಿಗಳು ಮಾತ್ರ ಹಾಲು ಕುಡಿಯುತ್ತಿದ್ದಾರೆ.ಇಲ್ಲು ಕೂಡ ಮಹಾದೇವಪ್ಪ ನಾಲಿಗೆ ಹಾಕಿದ್ದಾನೆ ಹಾಲಿನ ಪುಡಿ ಹಾಗೂ ಸಕ್ಕರೆ ಜೋತೆಗೆ ಮಧ್ಯಾಹ್ನ ಊಟದಲ್ಲೂ ತಿಂಗಳಿಗೆ ಸುಮಾರು ರೂ 50,000 ದ ವರೆಗೂ ಉಳಿಸಿಕೊಳ್ಳುವರೆನ್ನುವ ಅನುಮಾನವಿದೆ.?

ಮಕ್ಕಳ ಭವಿಷ್ಯ ರೂಪಿಸಬೇಕಾದ ದೇವಾಲಯದಂತ ” ಕರ್ನಾಟಕ ಪಬ್ಲಿಕ್ ಸ್ಕೂಲ್ “ನ ಪ್ರೌಢಶಾಲೆಯಲ್ಲಿ ಮಹಾದೇವಪ್ಪನಂತಹ ಹಣಬಾಕತನದ ದುಷ್ಟನಿದ್ದರೆ ಇನ್ನೂ ರಾಜ್ಯದಲ್ಲೇ ಪ್ರತಿಷ್ಠಿತ ಸರ್ಕಾರಿ ಪ್ರೌಡಶಾಲೆ ಎಂದು ಹೆಗ್ಗಳಿಕೆ ಗಳಿಸಿದ್ದ ಶಿಕ್ಷಣ ಸಚಿವರ ತವರು ಕ್ಷೇತ್ರ ಆನವಟ್ಟಿ ಈ ಶಾಲೆ ದುಸ್ಥಿತಿಯ ಹಾದಿ ಹಿಡಿಯಲಿದೆ.
ಉಪ ಪ್ರಾಂಶುಪಾಲ ಮಹಾದೇವಪ್ಪ ಮತ್ತು ಪೋಷಕರ ನಡುವಿನ ಆಡಿಯೋ ಕೇಳಿ…👇
ಆನವಟ್ಟಿಯ ” ಕರ್ನಾಟಕ ಪಬ್ಲಿಕ್ ಸ್ಕೂಲ್ “( ಕೆಪಿಎಸ್ )ನ ಪ್ರೌಢಶಾಲೆಯು ರಾಜ್ಯದ ಪ್ರತಿಷ್ಟಿತ ಶಾಲೆಯಲ್ಲಿ ಒಂದಾಗಿತ್ತು. ಈ ಶಾಲೆಯಲ್ಲಿ ಸುಮಾರು 1300 ರಿಂದ 1400 ರಕ್ಕೂ ಅಧಿಕ ಮಕ್ಕಳು ಓದುತ್ತಿದ್ದಾರೆ. ಕೆಪಿಎಸ್ ಶಾಲೆ ಈ ಹಿಂದಿನ ಬೋಧಕ ವರ್ಗಗಳ ಶ್ರಮದಿಂದ ಉನ್ನತ ಶಿಕ್ಷಣ ಪಡೆದ ವಿಧ್ಯಾರ್ಥಿಗಳು ಉನ್ನತ ಅಂಕಗಳಿಸಿ ರಾಜ್ಯದಲ್ಲಿ ಒಳ್ಳೆಯ ಹೆಸರು ಮಾಡಿದ್ದರೆ, ಸರ್ಕಾರಿ ಶಾಲೆಯಾಗಿದ್ದರು ಶಿಕ್ಷಕ ವೃಂದದ ಪರಿಶ್ರಮದಿಂದ ಖಾಸಾಗಿ ಶಾಲೆಗಿಂತ ಉನ್ನತ ಶಿಕ್ಷಣ ಈ ಶಾಲೆಯಲ್ಲಿ ಸಿಗುತ್ತಿತ್ತು. ಶಿವಮೊಗ್ಗ ಜಿಲ್ಲೆ ಗಡಿ ಭಾಗ ಅಂದರೆ ಹಾವೇರಿ ಗಡಿ ಭಾಗದಲ್ಲಿರುವುದರಿಂದ ಹಾವೇರಿ ಜಿಲ್ಲೆಯ ನೂರಾರು ವಿಧ್ಯಾರ್ಥಿಗಳು ಇಲ್ಲಿಗೆ ಬಂದು ಒದುತ್ತಿದ್ದಾರೆ. ಇಲ್ಲಿನ ಎಲ್ಲಾ ಸರ್ಕಾರಿ ಹಾಸ್ಟೆಲ್ ಗಳು ತುಂಬಿವೆ.ಆದರೆ ಇತ್ತೀಚೆಗೆ ಉತ್ತಮ ಶಿಕ್ಷಕರ ವೃಂದವಿದ್ದು ಸಾವಿರಾರು ವಿಧ್ಯಾರ್ಥಿಗಳು ಓದುತ್ತಿದ್ದರು ಶಾಲೆ ಸುಮಾರು ನಾಲ್ಕು ವರ್ಷದಿಂದ ಹಣ ಮಾಡುವ ಕೇಂದ್ರವಾಗಿ ಬದಲಾಗಿದೆ. ಪ್ರತಿ ವರ್ಷ ಸುಮಾರು 400 ರಿಂದ 450 ವಿದ್ಯಾರ್ಥಿಗಳು 8ನೇ ತರಗತಿಗೆ ಪ್ರವೇಶ ಪಡೆಯುತ್ತಿದ್ದಾರೆ.ಪ್ರತಿ ವಿಧ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆಯಲು ಒಬ್ಬ ವಿದ್ಯಾರ್ಥಿ ಸುಮಾರು ರೂ 800 ರಿಂದ 1000 ರೂಪಾಯಿ ಉಪ ಪ್ರಾಂಶುಪಾಲ ಮಹಾದೇವಪ್ಪನ ಕೈಗಿಡಬೇಕು.!? 8ನೇ ತರಗತಿಗೆ ಪ್ರವೇಶ ಪಡೆಯುವ ಪ್ರತಿ ವಿಧ್ಯಾರ್ಥಿಗೆ ಪ್ರವೇಶಾತಿ ಶುಲ್ಕಾ ಒಟ್ಟು 70 ( ಸರ್ಕಾರಿ ಪ್ರೌಢಶಾಲೆಗೆ ) ರೂಪಾಯಿ ಇದ್ದರೆ, 9-10ನೇ ತರಗತಿಗೆ ಪ್ರವೇಶ ಶುಲ್ಕ ಒಟ್ಟು 240 ರೂಪಾಯಿ, ಆದರೆ ಆನವಟ್ಟಿಯ ಕೆಪಿಎಸ್ ಪ್ರೌಢಶಾಲೆಯಲ್ಲಿ ಪ್ರವೇಶ ಶುಲ್ಕವನ್ನು 800 ರಿಂದ 1000 ರೂಪಾಯಿ ಹಣ ಕೊಡಲೆ ಬೇಕು.!( ಒಟ್ಟು 10 ಲಕ್ಷದಿಂದ 12 ಲಕ್ಷ ರೂಪಾಯಿ ) ಇನ್ನೂ ವರ್ಗಾವಣೆ ಪತ್ರ ( TC ) ತೆಗೆದುಕೊಂಡು ಹೋಗಲು 200 ರಿಂದ 400 ರೂಪಾಯಿ, ಇದರಲ್ಲಿ ಶಾಲೆಯಲ್ಲಿ ಹಾಳದ ವಸ್ತುಗಳ ರೀಪೆರಿಗೆ 200 ರೂಪಾಯಿ.! ಇಷ್ಟು ಯಾಕೆ ಎಂದು ಪ್ರಶ್ನಿಸಿದರೆ. ಮಹಾದೇವಪ್ಪರ ಬಾಯಲ್ಲಿ ಸಾಲು ಸಾಲು ಎತ್ತುವಳಿಯ ಲೀಸ್ಟ್ ಬಾಯಿಂದ ಬರುತ್ತದೆ.
ಅತಿಥಿ ಶಿಕ್ಷಕರಿಗೆ ನಾವು ಸಂಬಳ ಕೊಡಬೇಕು, ಬ್ಯಾನರ್ ಮಾಡಿಸಬೇಕು ಮತ್ತೆ ಕಂಪ್ಯೂಟರ್ ಮತ್ತು ಶಾಲೆಯಲ್ಲಿ ಹಾಳದ ವಸ್ತುಗಳ ರೀಪೆರಿಯ ಖರ್ಚ್ ಇರೋತ್ತೆ.! ಎಂದು ಸೈಲೆಂಟಾಗಿ ಹೇಳ್ತಾರೆ.!
ಪಾಪ ಈ ಸರ್ಕಾರಿ ಶಾಲೆಗೆ ಸರ್ಕಾರದಿಂದ ಒಂದು ರೂಪಾಯಿ ಬರೋಲ್ಲ ಅನ್ಸೋತ್ತೆ.?
ಅತಿಥಿ ಶಿಕ್ಷಕರ ವಿಷಯದಲ್ಲೂ ಉಪ ಪ್ರಾಂಶುಪಾಲರು ಮತ್ತೊಬ್ಬನ ಜೋತೆಗೆ ಸೇರಿಕೊಂಡು ಇನ್ನೊಂದು ಡೀಲ್
ನೆಡೆಯುತ್ತದೆ. ಈ ಶಾಲೆಗೆ ಸುಮಾರು 10 ರಿಂದ 12 ಶಿಕ್ಷಕರು ಸರ್ಕಾರದಿಂದಲೇ
ಅತಿಥಿ ಶಿಕ್ಷಕರನ್ನಾಗಿ ನೇಮಿಸಿ ಕೊಳ್ಳಲಾಗಿದ್ದು ಇಲ್ಲೂ ಜಾಣ ಕುರುಡು ಆಟ ನೆಡೆಯುತ್ತಿದೆ.

ಪ್ರೌಢ ಶಾಲಾ ವಿಭಾಗ: 8ನೇ ತರಗತಿ ಒಟ್ಟು 70 ರೂ., 9-10ನೇ ತರಗತಿ ಒಟ್ಟು 220 ರೂ.ಗಳು. ಇವುಗಳಲ್ಲಿ ದಾಖಲಾತಿ ಶುಲ್ಕ 8ನೇ ತರಗತಿ 0, 9-10ನೇ ತರಗತಿ 10 ರೂ.ಗಳು. ಕ್ರೀಡಾ ಶುಲ್ಕ 8ನೇ ತಗರತಿ 0, 9-10ನೇ ತರಗತಿ 25 ರೂ.ಗಳು. ರೀಡಿಂಗ್ ಶುಲ್ಕ 8ನೇ ತರಗತಿ, 9-10ನೇ ತರಗತಿ 20 ರೂ.ಗಳು., ಪ್ರಯೋಗಾಲಯ ಶುಲ್ಕ 8ನೇ ತರಗತಿ 0, 9-10 20 ರೂ.ಗಳು. ದೃಕ್ ಶ್ರವಣ ಶುಲ್ಕ (ಎ. ವಿ. ಇ) 8ನೇ ತರಗತಿ 0, 9-10ನೇ ತರಗತಿ 10 ರೂ., ಡ್ರಾಯಿಂಗ್/ ವೃತ್ತಿ ಶಿಕ್ಷಣ ಶುಲ್ಕ 8ನೇ ತರಗತಿ 0, 9-10ನೇ ತರಗತಿ 25 ರೂ., ವೈದ್ಯಕೀಯ ಶುಲ್ಕ 8ನೇ ತರಗತಿ 0, 9-10ನೇ ತರಗತಿ 5 ರೂ.ಗಳು. ಶಾಲಾ ಸ್ವಚ್ಛತಾ ಶುಲ್ಕ 8ನೇ ತರಗತಿ 0, 9-10 15 ರೂ.ಗಳು. ವಿದ್ಯಾರ್ಥಿ ಕ್ರೀಡಾ ನಿಧಿ 8ನೇ ತರಗತಿ 20 ರೂ., 9-102 33 20 ರೂ.ಗಳು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ 8ನೇ ತರಗತಿ 15, 9-10 15 ರೂ. ಗಳು. ಶಿಕ್ಷಕರ ಕಲ್ಯಾಣ ನಿಧಿ 8ನೇ ತರಗತಿ 15 ರೂ., 9-1015 ರೂ.ಗಳು. ಶಿಕ್ಷಕರ ದಿನಾಚರಣೆಯ ಬಾವುಟ 8ನೇ ತರಗತಿ 10 ರೂ., 9-1010 ರೂ.ಗಳು. ಶಾಲಾಭಿವೃದ್ಧಿ ಶುಲ್ಕ 8ನೇ ತರಗತಿ 0, 9-10 20 ರೂ.ಗಳು. ರೆಡ್ ಕ್ರಾಸ್ ಸದಸ್ಯತ್ವ/ ಚಟುವಟಿಕೆ ಶುಲ್ಕ 8ನೇ 383 10, 9-10 10 ರೂಗಳು

ಆನವಟ್ಟಿ “ಕರ್ನಾಟಕ ಪಬ್ಲಿಕ್ ಸ್ಕೂಲ್” ನ ಉಪ ಪ್ರಾಂಶುಪಾಲರ ಅಷ್ಟು ಧನದಾಹದ ಕರ್ಮಕಾಂಡ ಬಯಲಾಗಿದೆ. ಇನ್ನಾದರು ಶಿಕ್ಷಣ ಸಚಿವರು,ಜಿಲ್ಲಾ ಪಂಚಾಯತ್ CEO,ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಶಿಕ್ಷಣ ಅಧಿಕಾರಿಗಳು ಇಂತಹ ಭ್ರಷ್ಟನ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಂಡು ಬಡ ವಿಧ್ಯಾರ್ಥಿಗಳ ಮತ್ತು ಪೋಷಕರ ವರ್ಗಾದವರನ್ನ ಪ್ರತಿಷ್ಠಿತ “ಕರ್ನಾಟಕ ಪಬ್ಲಿಕ್ ಸ್ಕೂಲ್” ಮತ್ತೆ ಕೈಬೀಸಿ ಕರೆಯುವಂತಾಗಲಿ. ಬಡ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಂತ ಪ್ರತಿಷ್ಠಿತ ಶಾಲೆಯಾಗಿ ರಾಜ್ಯಮಟ್ಟದಲ್ಲಿ ಗುರುತಿಸುವಂತಾಗಲಿ….



