ಇನ್ನು ಮುಂದೆ ರಾಜಕಾರಣವನ್ನು ಮಾಡಬಾರದು ಎಂದು ತೀರ್ಮಾನಿಸಿದ್ದೆ. ಆದರೆ, ಬಣ್ಣ ಹಚ್ಚಿದ ಮೇಲೆ ಪಾತ್ರ ಮಾಡಲೇಬೇಕು. ಬಿಡಲು ಮನಸಾಗುವುದಿಲ್ಲ. ಬದಲಾವಣೆ ಬಯಸಿದ್ದೇನೆ. ನನ್ನ ಬೆಂಬಲಿಗರು ಹಿತೈಷಿಗಳ ಜೊತೆಗೆ ಚರ್ಚಿಸಿದ್ದೇನೆ ಎಲ್ಲರ ಒಮ್ಮತದ ತಿರ್ಮಾನದಂತೆ ಇನ್ನೂ ಹದಿನೈದು ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದೇನೆ ಎಂದು ಘೋಷಿಸಿದರು.
ಶಿವಮೊಗ್ಗ: ಪ್ರತಿದಿನ ಬೆಳಗ್ಗೆ ನಗರದ ಪ್ರತಿ ಮನೆಯ ಸೇವೆ ಮಾಡುವ ಪೌರ ಕಾರ್ಮಿಕರ ಶ್ರಮಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದು ಸಮಾಜಸೇವಕರಾದ ಎಂ. ಶ್ರೀಕಾಂತ್ ಹೇಳಿದ್ದಾರೆ.
ಅವರು ಇಂದು ನಗರದ ವೀರಶೈವ ಕಲ್ಯಾಣ ಮಂದಿರಲ್ಲಿ ಸದ್ಭಾವನಾ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಶಿವಮೊಗ್ಗ ವತಿಯಿಂದ ಎಂ. ಶ್ರೀಕಾಂತ್ ನೇತೃತ್ವದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಿಳಾ ಪೌರ ಕಾರ್ಮಿಕರಿಗೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಬಾಗಿನ ವಿತರಿಸಿ ಮಾತನಾಡಿದರು.
ಕಳೆದ ಎರಡು ವರ್ಷಗಳಿಂದ ನಿಮ್ಮೆಲ್ಲರ ಸಹೋದರನಾಗಿ ಈ ಕಾರ್ಯಕ್ರಮ ನಡೆಸುತ್ತಾ ಬಂದಿದ್ದೇನೆ.ನಗರದ ಪ್ರತಿ ರಸ್ತೆಯ ನಿತ್ಯ ಸ್ವಚ್ಛತೆಯನ್ನು ಮಾಡುವ ನಿಮ್ಮ ಶ್ರಮಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ನೀವು ಎಷ್ಟೇ ಕಷ್ಟ ಬರಲಿ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರೂ ನಿಮ್ಮಂತೆ ಪೌರ ಕಾರ್ಮಿಕರಾಗುವುದು ಬೇಡ ಎಂದರು.
ನನಗೆ ಪೌರ ಕಾರ್ಮಿಕರ ಒಡನಾಟ ಇದೆ. ಮತ್ತು ಅವಕ ಕಷ್ಟದ ಅರಿವಿದೆ. ನನಗೆ ಯಾವುದೇ ಅಧಿಕಾರ ಇಲ್ಲದಿದ್ದರೂ ಬಡವರ ಸೇವೆ ಮಾಡುತ್ತಾ ಬಂದಿದ್ದೇನೆ. ಯಾವುದೇ ರಾಜಕಾರಣಿ ರಾಜಕಾರಣವನ್ನು
ತನ್ನ ಸ್ವಾರ್ಥಕ್ಕಾಗಿ ಮಾಡಬಾರದು. ಬಡವರ ಹಿತಕ್ಕಾಗಿ ರಾಜಕಾರಣ ಮಾಡಬೇಕು. ನಾನು ಮೊದಲ ಚುನಾವಣೆಯಲ್ಲಿ ಸ್ಫರ್ಧಸಿದಾಗಲೇ ಇಪ್ಪತ್ತು ಸಾವಿರ ಮತವನ್ನು ನೀಡಿ ಹರಿಸಿದ ನೀವು ಎರಡನೇ ಚುನಾವಣೆಯಲ್ಲಿ ಇಪ್ಪತ್ತಾರು ಸಾವಿರ ಮತವನ್ನು ನೀಡಿ ರಾಜಕಾರಣವನ್ನು ಬಿಡದಂತೆ ಕೈಹಿಡಿದು ನೆಡೆಸಿದ್ದೀರಾ.ಆದರೆ ಕಳೆದ ವಿಧಾನಸಭೆಯಲ್ಲಿ ನಾವು ಬೆಂಬಲಿಸಿದಂತ ಆಯನೂರು ಮಂಜುನಾಥ್ ಅವರಿಗೆ 8643 ಮತವನ್ನು ಪಡೆದು ಸೋತಾಗ ಇನ್ನು ಮುಂದೆ ರಾಜಕಾರಣವನ್ನು ಮಾಡಬಾರದು ಎಂದು ತೀರ್ಮಾನಿಸಿದ್ದೆ. ಆದರೆ, ಬಣ್ಣ ಹಚ್ಚಿದ ಮೇಲೆ ಪಾತ್ರ ಮಾಡಲೇಬೇಕು. ಬಿಡಲು ಮನಸಾಗುವುದಿಲ್ಲ. ಬದಲಾವಣೆ ಬಯಸಿದ್ದೇನೆ. ನನ್ನ ಬೆಂಬಲಿಗರು ಹಿತೈಷಿಗಳ ಜೊತೆಗೆ ಚರ್ಚಿಸಿದ್ದೇನೆ ಎಲ್ಲರ ಒಮ್ಮತದ ತಿರ್ಮಾನದಂತೆ ಇನ್ನೂ ಹದಿನೈದು ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದೇನೆ ಎಂದು ಘೋಷಿಸಿದರು.
ಪ್ರತಿನಿತ್ಯ ಜನ ನನ್ನ ಬಳಿ ಅವರ ಕೆಲಸ ಮಾಡಿಸಿಕೊಳ್ಳಲು ಬರುತ್ತಾರೆ. ಅದಕ್ಕಾಗಿಯಾದರೂ ಅಧಿಕಾರ ಬೇಕಾಗುತ್ತದೆ. ನನ್ನ ಜೊತೆಗಾರರಿಗೂ
ಒಳ್ಳೆಯದಾಗಬೇಕು ಎಂಬ ದೃಷ್ಟಿಯಿಂದ ಈ ತೀರ್ಮಾನಕ್ಕೆ ಬಂದಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರ . ಸಂಘದ ಅಧ್ಯಕ್ಷ ಗೋವಿಂದಪ್ಪ ಮಾತನಾಡಿ, ಶ್ರೀಕಾಂತ್ ಅವರು ಕೊಡುಗೈ ದಾನಿ. ಮಾನವೀಯ ಹೃದಯವುಳ್ಳ ವ್ಯಕ್ತಿ, ಸದ್ಭಾವನಾ ಅಂದರೆ ಎಲ್ಲರೂ ಸಮಾನತೆಯಿಂದ ಕೊಂಡೊಯ್ಯುವುದು ಎಂದರ್ಥ. ಆ ಅರ್ಥಕ್ಕೆ ಸರಿಯಾಗಿ ಅವರು ನಡೆದುಕೊಳ್ಳುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ಕಿಟ್ ಮತ್ತು ಆಹಾರ ಧಾನ್ಯಗಳನ್ನು ಅವರು ವಿತರಿಸಿದ್ದರು. ಯಾವಾಗಲೂ ಪೌರ
ಕಾರ್ಮಿಕರ ಜೊತೆಗೆ ಸ್ಪಂದಿಸುವಂತ ವ್ಯಕ್ತಿ. ಅವರಿಗೆ ದೇವರು ಆರೋಗ್ಯ, ಆಯಸ್ಸು ಕೊಡಲಿ ಎಂದು ಹಾರೈಸಿದರು ಎಂದರು.
ಕಾರ್ಯಕ್ರಮದಲ್ಲಿ 35 ವಾರ್ಡ್‌ಗಳ ಮಹಿಳಾ ಪೌರ ಕಾರ್ಮಿಕರಿಗೆ ಬಾಗಿನ ನೀಡಲಾಯಿತು. ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಪೌರ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಮಾರಪ್ಪ, ಪೆಂಚಾಲಯ್ಯ, ರವೀಶ್, ಹಾಗೂ ಪ್ರಮುಖರಾದ ನಾಗರಾಜ್ ಕಂಕಾರಿ, ರಾಜಣ್ಣ , ಭಾಸ್ಕರ್, ಗೀತಾ ಸತೀಶ್, ಆನಂದ್, ಗಂಧದಮನೆ ನರಸಿಂಹ, ಭವಾನಿ ನರಸಿಂಹ, ವಿನಯ್ ಮೊದಲಾದವರಿದ್ದರು.
ಸುಧೀರ್ ವಿಧಾತ ,ಶಿವಮೊಗ್ಗ